Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಮಹೀಂದ್ರಾ ಉತ್ಪನ್ನಗಳಿಗಾಗಿ ಪೋಸ್ ಕೊಟ್ಟ ತೆಲಂಗಾಣ ಮಂತ್ರಿ: ಹೀರೊ ಎಂದು ಕಾಲೆಳೆದ ಆನಂದ್ ಮಹೀಂದ್ರಾ
ದೇಶದ ಹಲವು ರಾಜ್ಯಗಳು ತಮ್ಮ ಅಭಿವೃದ್ಧಿಗಾಗಿ ಕಾರ್ಪೋರೇಟ್ ಕಂಪನಿಗಳನ್ನು ತಮ್ಮ ನೆಲೆಯಲ್ಲಿ ಸ್ಥಾಪಿಸಲು ಉತ್ತೇಜಿಸುತ್ತಿವೆ. ಉತ್ತರ ಭಾರತದ ಯುಪಿ, ದೆಹಲಿ, ಬಿಹಾರ ಸೇರಿದಂತೆ ದಕ್ಷಿಣದಲ್ಲಿ ಕರ್ನಾಟಕ, ತೆಲಂಗಾಣ, ತಮಿಳಿನಾಡು ಕೂಡ ಇದಕ್ಕಾಗಿ ಹೆಚ್ಚು ಶ್ರಮಿಸುತ್ತಿವೆ.

ಹೆಚ್ಚಿನ ಉದ್ಯಮಗಳು ಸ್ಥಾಪನೆಯಾದಲ್ಲಿ ಆಯಾ ರಾಜ್ಯಗಳಿಗೆ ಆದಾಯದ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಹ ಹೆಚ್ಚಾಗಲಿವೆ. ಆಂಧ್ರ ಪ್ರದೇಶದಲ್ಲೂ ಈ ಹಿಂದೆ ಮಾಜಿ ಸಿಎಂ ಚಂದ್ರಬಾಬು ನಾಯುಡು ಕಿಯಾ ಕಂಪನಿಯನ್ನು ಯಶಸ್ವಿಯಾಗಿ ಕೊಂಡುಬಂದಿದ್ದರು. ಅದೇ ರೀತಿ ಇದೀಗ ತೆಲಂಗಾಣದ ಐಟಿ ಮಂತ್ರಿಯಾದ ಕೆಟಿಆರ್ ಅವರು ಕೂಡ ಹೆಚ್ಚು ಉದ್ಯಮಗಳನ್ನು ತರಲು ಶ್ರಮಿಸುತ್ತಿದ್ದಾರೆ.

ಇದರ ಭಾಗವಾಗಿ ತೆಲಂಗಾಣದಲ್ಲಿ ಹೊಸ ಕಂಪನಿಗಳೂ ಸ್ಥಾಪನೆಯಾಗುತ್ತಿವೆ. ಕೈಗಾರಿಕೆಗಳೂ ವೇಗವಾಗಿ ಬೆಳೆಯುತ್ತಿವೆ. ತೆಲಂಗಾಣದ ಮಹೀಂದ್ರಾ ಫಾರ್ಮ್ ಎಕ್ವಿಪ್ಮೆಂಟ್ ವಲಯದ ಭಾಗವಾಗಿರುವ ಮಹೀಂದ್ರಾ ಟ್ರಾಕ್ಟರ್ಸ್ ಇತ್ತೀಚೆಗೆ ತನ್ನ ಜಹೀರಾಬಾದ್ ಕಂಪನಿಯ ಟ್ರಾಕ್ಟರ್ ಉತ್ಪಾದನಾ ಸೌಲಭ್ಯದಿಂದ 3,00,001 ನೇ ಟ್ರಾಕ್ಟರ್ ಅನ್ನು ಬಿಡುಗಡೆ ಮಾಡಿದೆ.

ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯ ಜಹೀರಾಬಾದ್ ಕಂಪನಿ ಟ್ರ್ಯಾಕ್ಟರ್ ಉತ್ಪಾದನಾ ಘಟಕವು ಈಗ ಹೆಮ್ಮೆಯಿಂದ ತನ್ನ 3,00,001 ನೇ ಟ್ರ್ಯಾಕ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಕಾರ್ಯಕ್ರಮದಲ್ಲಿ ತೆಲಂಗಾಣ ಸರ್ಕಾರದ ಐಟಿ ಮತ್ತು ಕೈಗಾರಿಕಾ ಸಚಿವ ಕೆಟಿ ರಾಮರಾವ್ (ಕೆಟಿಆರ್) ಅವರು ಕೂಡ ಭಾಗವಹಿಸಿದ್ದರು.

ಟ್ರ್ಯಾಕ್ಟರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೆಟಿಆರ್, ''ಜಹೀರಾಬಾದ್ನಲ್ಲಿರುವ ಮಹೀಂದ್ರಾ ಉತ್ಪಾದನಾ ಘಟಕವು ಭಾರತದ ಮಾರುಕಟ್ಟೆಗೆ ಮಾತ್ರವಲ್ಲದೆ ರಫ್ತು ಮಾಡುವ ಜಾಗತಿಕ ಮಾರುಕಟ್ಟೆಗೂ ಸೇವೆ ಸಲ್ಲಿಸುತ್ತಿದೆ. ಇದು ನಿಜಕ್ಕೂ ಹೆಮ್ಮೆಯ ವಿಷಯ. ಒಟ್ಟಾರೆಯಾಗಿ, ತೆಲಂಗಾಣವು ಟ್ರ್ಯಾಕ್ಟರ್ ರಫ್ತಿನ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿರುವುದು ನಮಗೆ ತುಂಬಾ ಸಂತೋಷವಾಗಿದೆ.

ಇದೇ ಈ ಸಂದರ್ಭದಲ್ಲಿ ಮಹೀಂದ್ರಾ ಚೇರ್ಮನ್ ಆನಂದ್ ಮಹೀಂದ್ರಾ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ನೋಡಿ ಆನಂದ್ ಮಹೀಂದ್ರಾ ಅವರೇ... ನಾನು ನಿಮ್ಮ ಉತ್ಪನ್ನಗಳ ಮಾರ್ಕೆಟಿಂಗ್ಗಾಗಿ ಹೇಗೆ ಪ್ರಚಾರ ಮಾಡುತ್ತಿದ್ದೇನೆ, ಹಾಗಾಗಿ ನಮ್ಮ ರಾಜ್ಯಕ್ಕೆ ಹೆಚ್ಚಿನ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಕೆಟಿಆರ್ ಟ್ವೀಟ್ ಗೆ ಉತ್ತರಿಸಿದ ಆನಂದ್ ಮಹೀಂದ್ರಾ.. ನೀವು ಅದ್ಭುತ ಬ್ರಾಂಡ್ ಅಂಬಾಸಿಡರ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಫೋಟೋಗಳನ್ನು ನೋಡಿದರೆ ಟಾಲಿವುಡ್ ಜಗತ್ತು ನಿಮ್ಮನ್ನು ಹೊತ್ತೊಯುತ್ತದೆಯೇ ಎಂಬ ಭಯ ನನ್ನದು ಎಂದು ತಮಾಷೆ ಮಾಡಿದ್ದಾರೆ.

ಮಹೀಂದ್ರಾ ಮತ್ತು ಮಹೀಂದ್ರಾ ಫಾರ್ಮ್ ಎಕ್ವಿಪ್ಮೆಂಟ್ ವಲಯದ ಅಧ್ಯಕ್ಷ ಹೇಮಂತ್ ಸಿಕ್ಕಾ ಮಾತನಾಡಿ, ನಮ್ಮ ಜಹೀರಾಬಾದ್ ಕೇಂದ್ರ ಕಚೇರಿಯಿಂದ 300,001 ನೇ ಟ್ರ್ಯಾಕ್ಟರ್ ಅನ್ನು ಬಿಡುಗಡೆ ಮಾಡಿರುವುದು ಕಂಪನಿಯ ದೊಡ್ಡ ಸಾಧನೆಯಾಗಿದೆ. ಟ್ರ್ಯಾಕ್ಟರ್ ತಯಾರಿಕೆಯಲ್ಲಿ ಕಂಪನಿಗೆ ಇದು ಹೊಸ ಮೈಲಿಗಲ್ಲು ಎಂದು ಅವರು ಹೇಳಿದರು.

ಕಂಪನಿಯ ಉತ್ಪನ್ನಗಳನ್ನು ಭಾರತದಾದ್ಯಂತ ಒದಗಿಸುವುದರ ಜೊತೆಗೆ, ಕಂಪನಿಯು US, ಜಪಾನ್ ಮತ್ತು ಯುರೋಪ್ ಸೇರಿದಂತೆ 60 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ. ತೆಲಂಗಾಣದ ಜಹೀರಾಬಾದ್ ಉತ್ಪಾದನಾ ಕಾರ್ಖಾನೆಯನ್ನು 2012 ರಲ್ಲಿ ಸ್ಥಾಪಿಸಲಾಯಿತು. ಕಂಪನಿಯು ಜಹೀರಾಬಾದ್ನಲ್ಲಿರುವ ತನ್ನ ಸೌಲಭ್ಯದಲ್ಲಿ ಸುಮಾರು ₹ 1,087 ಕೋಟಿ ಹೂಡಿಕೆ ಮಾಡಿದೆ.

ಈ ಸ್ಥಾವರವು ಅತಿ ಕಡಿಮೆ ಅವಧಿಯಲ್ಲಿ ಅತಿ ದೊಡ್ಡ ಟ್ರಾಕ್ಟರ್ ಉತ್ಪಾದನಾ ಘಟಕವಾಯಿತು. ಕಾರ್ಖಾನೆಯು 1,500 ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿದೆ. ಇದು ವರ್ಷಕ್ಕೆ 100,000 ಯುನಿಟ್ ಟ್ರಾಕ್ಟರುಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

2013 ರಲ್ಲಿ ಜಹೀರಾಬಾದ್ ಹಬ್ನಿಂದ ತನ್ನ ಮೊದಲ ಟ್ರಾಕ್ಟರ್ ಅನ್ನು ಬಿಡುಗಡೆ ಮಾಡಿದ ಮಹೀಂದ್ರಾ, ರಫ್ತು ಸೇರಿದಂತೆ 2017 ರ ವೇಳೆಗೆ 100,000 ಯುನಿಟ್ಗಳ ಉತ್ಪಾದನಾ ಮಾರ್ಕ್ ಅನ್ನು ತಲುಪಿದೆ. 2019 ರ ಹೊತ್ತಿಗೆ ಕಂಪನಿಯು ಉತ್ಪಾದನೆಯಲ್ಲಿ 2,00,000 ಘಟಕಗಳನ್ನು ತಲುಪಿದೆ. ಆದಾಗ್ಯೂ, ಇದುವರೆಗೆ 3,00,000 ಯುನಿಟ್ಗಳ ಉತ್ಪಾದನೆಯನ್ನು ಪೂರ್ಣಗೊಳಿಸಿದೆ.

ತೆಲಂಗಾಣದ ಜಹೀರಾಬಾದ್ ಕೇಂದ್ರದಿಂದ 3,00,001ನೇ ಮಹೀಂದ್ರಾ ಟ್ರ್ಯಾಕ್ಟರ್ ಬಿಡುಗಡೆ ಮಾಡಿರುವುದು ಸಂತಸದ ವಿಷಯ. ಏಕೆಂದರೆ ತೆಲುಗು ರಾಜ್ಯ ತೆಲಂಗಾಣ ಈ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಕಂಪನಿಯು ಹೆಚ್ಚು ಉತ್ಪಾದಿಸುತ್ತದೆ ಮತ್ತು ಪ್ರಪಂಚದ ಇತರ ದೇಶಗಳಿಗೂ ರಫ್ತು ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ಕಳೆದ 30 ವರ್ಷಗಳಿಂದ ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ರಾಜ್ಯಗಳಿಗೆ ಹೇರಳವಾಗಿ ಉದ್ಯಮಗಳು ಬಂದು ಪ್ರತಿಯೊಬ್ಬರು ಉದ್ಯೋಗವನ್ನು ಪಡೆದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ. ಇದನ್ನು ಮನಗಂಡಿರುವ ಈಗಿನ ದೇಶದ ಯುವ ರಾಜಕೀಯ ಮುಖಂಡರು ತಮ್ಮ ರಾಜ್ಯಗಳಿಗೆ ಉದ್ಯಮಗಳನ್ನು ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶವು ಖಂಡಿತವಾಗಿಯೂ ಸಂಪೂರ್ಣ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ.