ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ-ಎನ್ ಬಿಡುಗಡೆಯ ನಂತರ ಇದೀಗ ಹಳೆಯ ತಲೆಮಾರಿನ ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

Recommended Video

Mahindra Scorpio Classic Unveil Walkaround | ಹೊಸ ಅವತಾರದಲ್ಲಿ ಹಳೆಯ ಎಸ್‌ಯುವಿ | ಹೊಸ ಡೀಸೆಲ್ ಎಂಜಿನ್

ಹೊಸ ಕಾರಿನ ಬೆಲೆ ಇದೇ ತಿಂಗಳು ಅಗಸ್ಟ್ 20ರಂದು ಬಹಿರಂಗವಾಗಲಿದ್ದು, ನವೀಕೃತ ಮಾದರಿಯ ಕೆಲವೇ ಕೆಲವು ಫೀಚರ್ಸ್ ಹೊರತುಪಡಿಸಿ ಈ ಹಿಂದಿನ ಮಾದರಿಯೆಂತೆಯೇ ಮಾರಾಟಗೊಳ್ಳಲಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಅನಾವರಣದೊಂದಿಗೆ ಈಗಾಗಲೇ ಬುಕಿಂಗ್ ಆರಂಭಿಸಿರುವ ಮಹೀಂದ್ರಾ ಕಂಪನಿಯು ನಾಳೆ ಬೆಲೆ ಮಾಹಿತಿ ಹಂಚಿಕೊಳ್ಳಲಿದ್ದು, ಹೊಸ ಕಾರಿನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ನವೀಕೃತ ಸ್ಕಾರ್ಪಿಯೋ ಕ್ಲಾಸಿಕ್ ಕಾರು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಎಸ್ ಮತ್ತು ಎಸ್11 ಎನ್ನುವ ಎರಡು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿರಲಿವೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹಳೆಯ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ವಿನ್ಯಾಸದಲ್ಲಿ ತುಸು ಹೊಸ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯ ಮುಂಭಾಗದ ಡಿಸೈನ್ ಮತ್ತು ಕ್ಯಾಬಿನ್ ಒಳಾಂಗಣದಲ್ಲಿ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಸ್ಕಾರ್ಪಿಯೋ-ಎನ್ ಮಾದರಿಯ ಸಂಪೂರ್ಣ ಹೊಸ ತಲೆಮಾರಿನ ಆವೃತ್ತಿಯಾಗಿದ್ದರೆ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹಳೆಯ ತಲೆಮಾರಿನ ಆವೃತ್ತಿಯಾಗಿದ್ದು, ಸ್ಕಾರ್ಪಿಯೋ-ಎನ್ ಬಿಡುಗಡೆಯ ನಂತರ ಹಳೆಯ ಮಾದರಿಯಲ್ಲಿ ಹೊಸ ಬದಲಾವಣೆಗಾಗಿ ಸ್ಕಾರ್ಪಿಯೋ ಕ್ಲಾಸಿಕ್ ಪರಿಚಯಿಸುತ್ತಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಹೊಸ ಮಾದರಿಯಲ್ಲಿ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, 132 ಬಿಎಚ್‌ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಹಳೆಯ ಮಾದರಿಯಲ್ಲಿನ ಎಂಜಿನ್‌ಗಿಂತಲೂ 55 ಕೆ.ಜಿ ಕಡಿಮೆ ತೂಕದೊಂದಿಗೆ ಶೇ.14 ರಷ್ಟು ಉತ್ತಮ ಇಂಧನ ದಕ್ಷತೆ ಹೊಂದಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಇದರೊಂದಿಗೆ ಹೊಸ ಮಾದರಿಯು ಈ ಹಿಂದಿನಂತೆ ಹೊರನೋಟ ಹೊಂದಿದ್ದರು ಕೆಲವು ಹೊಸ ಫೀಚರ್ಸ್‌ಗಳು ಕಾರಿನ ನೋಟಕ್ಕೆ ಮತ್ತಷ್ಟು ಮೆರಗು ನೀಡಲಿದ್ದು, ಮರುವಿನ್ಯಾಸಗೊಳಿಸಲಾದ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಮತ್ತು ಬಂಪರ್ ಜೊತೆ ಹೊಸ ಲೊಗೊ ಸಾಕಷ್ಟು ಆಕರ್ಷಕವಾಗಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಮುಖ್ಯವಾಗಿ ಹೊಸ ಕಾರಿನಲ್ಲಿ ಈ ಬಾರಿ ಎಲ್ಇಡಿ ಐಬೋ ಜೊತೆಗೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ನೀಡಲಾಗಿದ್ದು, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ನೀಡಲಾಗಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಇದರೊಂದಿಗೆ ಹೊಸ ಕಾರಿನ ಮುಂಭಾಗದಲ್ಲಿ ಮತ್ತಷ್ಟು ಬದಲಾವಣೆಗಾಗಿ ಫಾಗ್ ಲ್ಯಾಂಪ್ ಹೌಸಿಂಗ್ ಸಹ ಬದಲಾವಣೆಗೊಳಿಸಲಾಗಿದ್ದು, ಡೈಮಂಡ್ ಕಟ್ ಹೊಂದಿರುವ 17 ಇಂಚಿನ ಅಲಾಯ್ ವ್ಹೀಲ್, ಡ್ಯುಯಲ್ ಟೋನ್ ಕ್ಲಾಡಿಂಗ್, ಹಿಂಬದಿಯಲ್ಲಿ ಸಿಗ್ನಿಚೆರ್ ಟವರ್ ವಿನ್ಯಾಸದ ಎಲ್‌ಇಡಿ ಟೈಲ್ ಲ್ಯಾಂಪ್ ನೀಡಲಾಗಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಹೊಸ ಕಾರು ಮಾದರಿಯ ಇಂಟಿರಿಯರ್ ವಿನ್ಯಾಸದ ಕುರಿತಾಗಿ ಮಾತನಾಡುವುದಾದರೇ ಸ್ಕಾರ್ಪಿಯೋ ಕ್ಲಾಸಿಕ್ ಹಳೆಯ ಮಾದರಿಗಿಂತ ಕೆಲವೇ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ವುಡ್ ಟ್ರಿಮ್ ಹೊಂದಿರುವ ಸುಧಾರಿತ ಡ್ಯಾಶ್‌ಬೋರ್ಡ್‌, 9 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟೀರಿಂಗ್ ವ್ಹೀಲ್, ಬ್ಲ್ಯಾಕ್ ಮತ್ತು ಬ್ರಿಝ್ ಇಂಟಿರಿಯರ್ ಹೊಂದಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಹೊಸ ಕಾರಿನಲ್ಲಿ ಕಂಪನಿಯು 7 ಸೀಟರ್ ಮತ್ತು 9 ಸೀಟರ್ ಸೌಲಭ್ಯದ ಆಯ್ಕೆ ನೀಡಲಾಗಿದ್ದು, ಮೂರನೇ ಸಾಲಿನಲ್ಲಿ ಬೆಂಚ್ ಆಸನ ಸೌಲಭ್ಯದೊಂದಿಗೆ 7 ಸೀಟರ್ ಮಾದರಿಯ ತುಸು ಹೆಚ್ಚಿನ ಸ್ಥಳವಾಕಾಶ ಹೊಂದಿದ್ದರೆ 9 ಸೀಟರ್ ಮಾದರಿಯ ಆಸನ ಸೌಲಭ್ಯವು ತುಸು ಇಕ್ಕಟ್ಟಾದ ಸ್ಥಳಾವಕಾಶ ಹೊಂದಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಹೊಸ ಮಾದರಿಯಲ್ಲಿ ಈ ಹಿಂದಿನ ಮಾದರಿಯಲ್ಲಿ ಕೆಲವು ಫೀಚರ್ಸ್‌ಗಳೊಂದಿಗೆ ಕ್ರೂಸ್ ಕಂಟ್ರೋಲ್, ಎರಡನೇ ಸಾಲಿನ ಆಸನಗಳಿಗೆ ರಿಯರ್ ಎಸಿ ವೆಂಟ್ಸ್ ಮತ್ತು ಸುರಕ್ಷತೆಗಾಗಿ ಎರಡು ಮಾದರಿಯಲ್ಲೂ ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯವನ್ನು ಸೇರಿಸಲಾಗಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಹಾಗೆಯೇ ಹೊಸ ಕಾರಿನಲ್ಲಿ ಡ್ಯುಯಲ್ ವಿಶ್ ಬೋನ್ ಸಸ್ಷೆಂಷನ್ ಹೊಂದಿರುವ ಹೊಸ ಲ್ಯಾಡರ್ ಫ್ರೇಮ್ ಚಾಸಿಸ್ ನೀಡಿರುವ ಕೂಡಾ ಕಾರಿನ ಬಾಡಿ ರೋಲ್ ಸಾಕಷ್ಟು ಸುಧಾರಿಸಿದ್ದು, ಹೈ ಸ್ಪೀಡ್‌ನಲ್ಲೂ ಕಾರನ್ನು ಅರಾಮವಾಗಿ ಹ್ಯಾಂಡಲ್ ಮಾಡಬಹುದಾಗಿದೆ.

ನಾಳೆ ಬಿಡುಗಡೆಯಾಗಲಿದೆ ಹೊಸ ಫೀಚರ್ಸ್ ಹೊಂದಿರುವ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಹೊಸ ಸ್ಕಾರ್ಪಿಯೋ-ಎನ್ ಕಾರು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದ್ದು, ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಸ್ಕಾರ್ಪಿಯೋ-ಎನ್ ‌ಗಿಂತ ತುಸು ಕಡಿಮೆ ಬೆಲೆ ಹೊಂದಿರಲಿದೆ.

Most Read Articles

Kannada
English summary
Mahindra scorpio classic prices to be announced tomorrow details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X