YouTube

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ದೇಶದ ಅತಿ ದೊಡ್ಡ ಎಸ್‌ಯುವಿ ಕಾರುಗಳ ಉತ್ಪಾದನಾ ಕಂಪನಿಯಾಗಿರುವ ಮಹೀಂದ್ರಾ(Mahindra) ಭವಿಷ್ಯದ ಕಾರು ಮಾದರಿಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೊಸ ತಲೆಮಾರಿನ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಕಂಪನಿಯು ಇಂದು 75ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ತನ್ನ ಹೊಸ ಮಾದರಿಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮಹೀಂದ್ರಾ ಕಂಪನಿಯು ಬಾರ್ನ್ ಇವಿ ಕಾನ್ಸೆಪ್ಟ್ ಆಧರಿಸಿ ಒಟ್ಟು ಐದು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅನಾವರಣಗೊಳಿಸಿದೆ. ಹೊಸ ಇವಿ ಕಾರು ಮಾದರಿಗಳನ್ನು ಕಂಪನಿಯು ಎಕ್ಸ್‌ಯುವಿ.ಇ(XUV.e) ಮತ್ತು ಬಿಇ (BE) ಎನ್ನುವ ಎರಡು ಬ್ರಾಂಡ್‌ಗಳ ಅಡಿಯಲ್ಲಿ ಮಾರಾಟ ಮಾಡಲಿದ್ದು, ಹೊಸ ಇವಿ ಕಾರುಗಳಲ್ಲಿ ಮೂರು ಎಸ್‌ಯುವಿ ಮಾದರಿಗಳಾಗಿದ್ದರೆ ಎರಡು ಎಸ್‌ಯುವಿ ಕೂಪೆ ಶೈಲಿಯಲ್ಲಿ ಆಧರಿಸಿರಲಿವೆ.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಎಕ್ಸ್‌ಯುವಿ.ಇ(XUV.e) ಬ್ರಾಂಡ್ ಅಡಿಯಲ್ಲಿ ಎಕ್ಸ್‌ಯುವಿ.ಇ8(XUV.E8) ಮತ್ತು ಎಕ್ಸ್‌ಯುವಿ.ಇ9(XUV.E9) ಮಾರಾಟಗೊಳ್ಳಲಿದ್ದರೆ ಬಿಇ(BE) ಬ್ರಾಂಡ್ ಅಡಿಯಲ್ಲಿ ಬಿಇ.05(BE.05). ಬಿಇ.07(BE.07) ಮತ್ತು ಬಿಇ.09(BE.09) ಕಾರುಗಳು ಮಾರಾಟಗೊಳ್ಳಲಿವೆ.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಮೊದಲ ಹಂತದಲ್ಲಿ ಎಕ್ಸ್‌ಯುವಿ.ಇ ಬ್ರಾಂಡ್ ಕಾರುಗಳನ್ನು ಮಾರಾಟಗೊಳಿಸಲಿದ್ದು, ತದನಂತರವಷ್ಟೇ ಬಿಇ ಬ್ರಾಂಡ್ ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ. 2024ರ ಕೊನೆಯಲ್ಲಿ ಎಕ್ಸ್‌ಯುವಿ.ಇ ಕಾರುಗಳ ಮಾರಾಟ ಆರಂಭವಾಗಲಿದ್ದು, ಬಿಇ ಬ್ರಾಂಡ್ ಕಾರುಗಳ ಮಾರಾಟವು 2025ರ ಕೊನೆಯಲ್ಲಿ ಆರಂಭವಾಗಲಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಹೊಸ ಇವಿ ಕಾರುಗಳು ಅತ್ಯಾಧುನಿಕ ಸೌಲಭ್ಯದೊಂದಿಗೆ ಅತ್ಯಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಇವಿ ಕಾರು ಮಾದರಿಗಳು ಅಡ್ವಾನ್ಸ್ ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿವೆ.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಹೊಸ ಕಾರು ಮಾದರಿಗಳ ನಿರ್ಮಾಣಕ್ಕಾಗಿ ಕಂಪನಿಯು ಇನ್‌ಗ್ಲೊ(INGLO) ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಇವಿ ಕಾರುಗಳು 60 ರಿಂದ 80 kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿವೆ. ಹಾಗೆಯೇ ಹೊಸ ಕಾರುಗಳು 175kW ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 30 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.80ರಷ್ಟು ರೀಚಾರ್ಜ್ ವೈಶಿಷ್ಟ್ಯತೆ ಹೊಂದಿವೆ.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಇದರೊಂದಿಗೆ ಮಹೀಂದ್ರಾ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ನಿರ್ಮಾಣಗೊಳಿಸಿದ ಐದು ಇವಿ ಕಾರು ಮಾದರಿಗಳಿಗೂ ಸುರಕ್ಷತೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಒದಗಿಸುವ ಭರವಸೆ ವ್ಯಕ್ತಪಡಿಸಿದ್ದು, ಇವುಗಳಲ್ಲಿ ರಿಯರ್ ವ್ಹೀಲ್ ಡ್ರೈವ್ ಮತ್ತು ಆಲ್ ವೀಲ್ ಡ್ರೈವ್ ಮಾದರಿಗಳನ್ನು ಒಳಗೊಂಡಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಈ ಮೂಲಕ ಹೊಸ ಮಾದರಿಗಳು ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದ್ದು, ರಿಯಲ್ ವ್ಹೀಲ್ ಮಾದರಿಗಳು 231 ಬಿಎಚ್‌ಪಿಯಿಂದ 285 ಬಿಎಚ್‌ಪಿ ಉತ್ಪಾದಿಸಲಿದ್ದರೆ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಕಾರು ಮಾದರಿಗಳು 340 ಬಿಎಚ್‌ಪಿಯಿಂದ 394 ಬಿಎಚ್‌ಪಿ ಉತ್ಪಾದಿಸಬಲ್ಲವು.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ವೈಶಿಷ್ಟ್ಯತೆಗಳ ವಿಷಯದಲ್ಲಿ ಹೊಸ ಇವಿ ಕಾರು ಮಾದರಿಗಳು ಐಷಾರಾಮಿ ಕಾರುಗಳಲ್ಲೂ ಇಲ್ಲದ ಹಲವು ಹೊಸ ಫೀಚರ್ಸ್‌ಗಳೊಂದಿಗೆ ಲೆವಲ್ 2 ಎಡಿಎಎಸ್ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿರಲಿದ್ದು, ಎಲ್ಲಾ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಉತ್ಪನ್ನಗಳನ್ನು ಸಿದ್ದಪಡಿಸಲಾಗುತ್ತಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಮಹೀಂದ್ರಾ ಎಕ್ಸ್‌ಯುವಿ.ಇ8

2024ರ ಡಿಸೆಂಬರ್ ವೇಳೆಗೆ ಬಿಡುಗಡೆಯಾಗಲಿರುವ ಹೊಸ ಇವಿ ಕಾರುಗಳ ಶ್ರೇಣಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿ ಇದಾಗಿದೆ. ಹೊಸ ಕಾರಿನ ಗಾತ್ರದ ಕುರಿತು ಹೇಳುವುದಾದರೆ ಇದು 4740 ಎಂಎಂ ಉದ್ದ, 1900 ಎಂಎಂ ಅಗಲ, 1760 ಎಂಎಂ ಎತ್ತರ ಮತ್ತು 2762 ಎಂಎಂ ವ್ಹೀಲ್‌ಬೆಸ್ ಹೊಂದಿರಲಿದ್ದು, ಎಕ್ಸ್‌ಯುವಿ700 ವಿನ್ಯಾಸ ಆಧರಿಸಿರು ಈ ಹೊಸ ಕಾರು ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಮಹೀಂದ್ರಾ ಎಕ್ಸ್‌ಯುವಿ.ಇ9

ಹೊಸ ಶ್ರೇಣಿಯ ಎಲೆಕ್ಟ್ರಿಕ್ ಎಸ್‌ಯುವಿಗಳ ಎರಡನೇ ಕಾರು ಮಾದರಿ ಇದಾಗಿದ್ದು, ಇದು 2025ರ ಏಪ್ರಿಲ್ ವೇಳೆಗೆ ಬಿಡುಗಡೆಯಾಗಲಿದೆ. ಹೊಸ ಕಾರು ಮಾದರಿಯು 4790 ಎಂಎಂ ಉದ್ದ, 1905 ಎಂಎಂ ಅಗಲ, 1690 ಎಂಎಂ ಅಗಲ ಮತ್ತು 2775 ಎಂಎಂ ವ್ಹೀಲ್‌ಬೆಸ್ ಇರಲಿದೆ. ಇದು ಕಂಪನಿಯ ಕೂಪೆ ಎಸ್‌ಯುವಿ ಆಗಿರುತ್ತದೆ, ಅದರ ಪರಿಕಲ್ಪನೆಯನ್ನು ಕಳೆದ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಗಿತ್ತು.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಮಹೀಂದ್ರಾ ಬಿಇ.05

ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಇದು ಮೂರನೇ ಕಾರು ಮಾದರಿಯಾಗಿದ್ದು, ಇದು 2025ರ ಅಕ್ಟೋಬರ್ ವೇಳೆಗೆ ಬಿಡುಗಡೆಯಾಗಲಿದೆ. ಇದು 4370 ಎಂಎಂ ಉದ್ದ, 1900 ಎಂಎಂ ಅಗಲ, 1635 ಎಂಎಂ ಎತ್ತರ ಮತ್ತು 2775 ಎಂಎಂ ವ್ಹೀಲ್‌ಬೆಸ್ ಇರಲಿದೆ. ಇದು ಕಂಪನಿಯ ಬಿಇ ಶ್ರೇಣಿಯ ಮೊದಲ ಮಾದರಿಯಾಗಿರಲಿದ್ದು, ಇದು ಸಂಪೂರ್ಣವಾಗಿ ಪರಿಷ್ಕೃತ ಮಾದರಿಯಾಗಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಮಹೀಂದ್ರಾ ಬಿಇ.07

ಮಹೀಂದ್ರಾ ಹೊಸ ಇವಿ ಬ್ರಾಂಡ್ ಅಡಿಯಲ್ಲಿ ಬಿಇ.07 ನಾಲ್ಕನೇ ಕಾರು ಮಾದರಿಯಾಗಿರುತ್ತದೆ. ಇದು 2026ರ ಅಕ್ಟೋಬರ್ ವೇಳೆಗೆ ಬಿಡುಗಡೆಯಾಗಲಿದ್ದು, ಹೊಸ ಕಾರು 4565 ಎಂಎಂ ಉದ್ದ, 1900 ಎಂಎಂ ಅಗಲ, 1660 ಎಂಎಂ ಎತ್ತರ ಮತ್ತು 2775 ಎಂಎಂ ವ್ಹೀಲ್‌ಬೆಸ್ ಹೊಂದಿರಲಿದ್ದು, ಇದು ಬಿಇ ಶ್ರೇಣಿಯ ಅಡಿ ದೊಡ್ಡ ಮತ್ತು ಶಕ್ತಿಯುತವಾದ ಎಲೆಕ್ಟ್ರಿಕ್ ಎಸ್‌ಯುವಿ ಆಗಿರಲಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಐದು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸಿದ ಮಹೀಂದ್ರಾ

ಮಹೀಂದ್ರಾ ಬಿಇ.09

ಹೊಸ ಇವಿ ಶ್ರೇಣಿಯಲ್ಲಿನ ಎರಡನೇ ಮಾದರಿಯಾದ ಬಿಇ.09 ಹೆಚ್ಚಿನ ಮಟ್ಟದ ವೈಶಿಷ್ಟ್ಯತೆ ಹೊಂದಿರಲಿದ್ದು, ಇದು 2027ರ ಹೊತ್ತಿಗೆ ಬಿಡುಗಡೆಯಾಗಬಹುದಾಗಿದೆ. ಇದು ವಿಭಿನ್ಯವಾದ ವಿನ್ಯಾಸ ಮತ್ತು ತಂತ್ರಜ್ಞಾನದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಮುಂಬರುವ ದಿನಗಳಲ್ಲಿ ಈ ಕಾರಿನ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

Most Read Articles

Kannada
English summary
Mahindra unveiled new 5 electric cars e8 e9 be05 be07 be09 charging details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X