ಮಹೀಂದ್ರಾ ಬಹುನೀರಿಕ್ಷಿತ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಎಸ್‌ಯುವಿ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಕಂಪನಿಯು ತನ್ನ ಹೊಸ ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಹಲವಾರು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಳಿಸಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ವಿಶೇಷ ಆಸಕ್ತಿ ವಹಿಸಿರುವ ಮಹೀಂದ್ರಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಯೋಜನೆಯ ಮೊದಲ ಮಾದರಿಯಾಗಿ ಎಕ್ಸ್‌ಯುವಿ400 ಇವಿ ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

2020ರಲ್ಲಿ ಮೊದಲ ಬಾರಿಗೆ ಇಎಕ್ಸ್‌ಯುವಿ300 ಹೆಸರಿನಲ್ಲಿ ಹೊಸ ಕಾರನ್ನು ಪ್ರದರ್ಶನಗೊಳಿಸಿದ್ದ ಮಹೀಂದ್ರಾ ಕಂಪನಿಯು ಅದೇ ಮಾದರಿಯನ್ನು ಇದೀಗ ಹಲವಾರು ಹೊಸ ಬದಲಾವಣೆಗಳೊಂದಿಗೆ ಇದೀಗ ಎಕ್ಸ್‌ಯುವಿ400 ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಮಹೀಂದ್ರಾ ಕಂಪನಿಯು ಸದ್ಯಕ್ಕೆ ಹೊಸ ಎಕ್ಸ್‌ಯುವಿ400 ಮಾದರಿಯ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರನ್ನು ಕಂಪನಿಯು 2023ರ ಜನವರಿಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿ ಅದೇ ತಿಂಗಳು ವಿತರಣೆ ಆರಂಭಿಸಲಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹೊಸ ಕಾರು ಖರೀದಿಸುವ ಆಸಕ್ತ ಗ್ರಾಹಕರಿಗೆ ಮುಂಬರುವ ಡಿಸೆಂಬರ್‌ನಲ್ಲಿ ಟೆಸ್ಟ್ ಡ್ರೈವ್ ಲಭ್ಯವಿರಲಿದ್ದು, ಮೊದಲ ಹಂತವಾಗಿ ಕಂಪನಿಯು ದೇಶದ ಪ್ರಮುಖ 16 ನಗರಗಳಲ್ಲಿ ಹೊಸ ಕಾರನ್ನು ಮಾರಾಟ ಮಾಡಲಿದೆ. ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಹೆಚ್ಚಿದಂತೆ ಇವಿ ಕಾರು ಮಾರಾಟವು ಇತರೆ ನಗರಗಳಿಗೂ ವಿಸ್ತರಣೆಯಾಗಲಿದ್ದು, ಹೊಸ ಕಾರಿನ ಮೂಲಕ ಕಂಪನಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಎಕ್ಸ್‌ಯುವಿ400 ಮಾದರಿಯು 39.4 kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 100kW ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿದ್ದು, ಇದು ಅತ್ಯುತ್ತಮ ಪರ್ಫಾಮೆನ್ಸ್‌ ಜೊತೆಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 456 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹೊಸ ಕಾರಿನಲ್ಲಿರುವ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ IP67 ಮಾನದಂಡ ಪೂರೈಸಿದ್ದು, ಇದು ಧೂಳು ಮತ್ತು ನೀರಿನಿಂದ ಸಂಪೂರ್ಣ ಸುರಕ್ಷತೆ ಹೊಂದಿದ್ದು, ಮಧ್ಯಮ ಕ್ರಮಾಂಕದ ಇವಿ ಕಾರುಗಳಲ್ಲಿಯೇ ಅತಿ ಹೆಚ್ಚು ವೇಗವರ್ಧನೆ(acceleration) ಹೊಂದಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಇದು 147.5 ಬಿಎಚ್‌ಪಿ ಮತ್ತು 310ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 8.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಸಾಧಿಸುವುದರ ಜೊತೆಗೆ ಪ್ರತಿ ಗಂಟೆಗೆ ಗರಿಷ್ಠ 150 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಳ್ಳುತ್ತದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹೊಸ ಕಾರಿನಲ್ಲಿ 39.4 kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಸ್ವದೇಶಿ ನಿರ್ಮಿತ ಲೀ ಅಯಾನ್ ಬ್ಯಾಟರಿ ಸೆಲ್ಸ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, 50kW ಡಿಸಿ ಫಾಸ್ಟ್ ಚಾರ್ಜ್ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಆಗಲಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಒಂದು ವೇಳೆ 7.2 kW ಸ್ಟ್ಯಾಂಡರ್ಡ್ ಚಾರ್ಜರ್ ಮೂಲಕ ಚಾರ್ಜ್ ಮಾಡಿದ್ದಲ್ಲಿ ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಆಗಲು 6 ಗಂಟೆ 30 ನಿಮಿಷ ಸಮಯ ತೆಗೆದುಕೊಳ್ಳಲಿದ್ದರೆ 3.3 kW ಹೋಂ ಚಾರ್ಜ್‌ನಲ್ಲಿ ಸೊನ್ನೆಯಿಂದ ನೂರರಷ್ಟು ಚಾರ್ಜ್ ಮಾಡಲು ಗರಿಷ್ಠ 13 ಗಂಟೆ ತಗೆದುಕೊಳ್ಳುತ್ತದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹೊಸ ಇವಿ ಕಾರಿನಲ್ಲಿ ಮಹೀಂದ್ರಾ ಕಂಪನಿಯು ತನ್ನ ಸಾಂಪ್ರಾದಾಯಿಕ ಎಸ್‌ಯುವಿ ವಿನ್ಯಾಸ ಭಾಷೆಯನ್ನು ಉಳಿಸಿಕೊಳ್ಳಲು ಯತ್ನಿಸಿದ್ದು, ಅತ್ಯುತ್ತಮ ಡ್ರೈವ್‌ಟ್ರೇನ್‌ ಮತ್ತು ಡೈನಾಮಿಕ್ಸ್ ಶೈಲಿಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಸಿ-ಸೆಗ್ಮೆಂಟ್ ಇ-ಎಸ್‌ಯುವಿ ಮಾದರಿಗಳಲ್ಲಿಯೇ ಹೆಚ್ಚಿನ ಗಾತ್ರ ಹೊಂದಿರುವ ಹೊಸ ಕಾರು ಮಾದರಿಯು 4,200 ಎಂಎಂ ಉದ್ದಳತೆ, 1,634 ಎಂಎಂ ಎತ್ತರ, 1,821 ಎಂಎಂ ಅಗಲ, 370 ಲೀಟರ್‌ನಷ್ಟು ಬೂಟ್‌ಸ್ಪೆಸ್‌ನೊಂದಿಗೆ 2,600 ಎಂಎಂ ವ್ಹೀಲ್‌ಬೆಸ್ ಮೂಲಕ ಆರಾಮದಾಯಕ ಕಾರು ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹೊಸ ಕಾರಿನ ವಿನ್ಯಾಸವು ಸಾಮಾನ್ಯ ಎಕ್ಸ್‌ಯುವಿ300 ಶೈಲಿಯನ್ನು ಹೊಂದಿದ್ದರೂ ಎಲೆಕ್ಟ್ರಿಕ್ ಮಾದರಿಯಾಗಿ ಸಾಕಷ್ಟು ವಿಭಿನ್ನತೆ ನೀಡಲಾಗಿದ್ದು, ಆಕರ್ಷಕವಾಗಿರುವ ಗ್ರಿಲ್ ಮತ್ತು ಮುಂಭಾಗದ ಬಂಪರ್, ತಾಮ್ರ-ಬಣ್ಣದ ಮಹೀಂದ್ರಾ ಎಲೆಕ್ಟ್ರಿಫೈಡ್ ಟ್ವಿನ್ ಪೀಕ್ ಬ್ಯಾಡ್ಜ್, ಹೈ ಗ್ಲಾಸ್ ಮಿಶ್ರಲೋಹದ ಚಕ್ರಗಳು, ಡೈಮಂಡ್-ಕಟ್ ಹೈ-ಕಾಂಟ್ರಾಸ್ಟ್ ಹೊಂದಿರುವ 16 ಇಂಚಿನ ಟೈರ್ ನೀಡಲಾಗಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹಾಗೆಯೇ ಹೊಸ ಎಕ್ಸ್‌ಯುವಿ400 ಮಾದರಿಯ ಒಳಾಂಗಣ ವೈಶಿಷ್ಟ್ಯಗಳು ಗಮನಸೆಳೆಯಲಿದ್ದು, ದೊಡ್ಡದಾದ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆ 60 ಕ್ಕೂ ಹೆಚ್ಚು ಕನೆಕ್ಟಿವಿಟಿ ಸೌಲಭ್ಯಗಳಿರಲಿವೆ. ಇವುಗಳಲ್ಲಿ ಕೆಲವು ಹೊಸ ಸೌಲಭ್ಯಗಳು ಚಾಲನೆ ಸಂದರ್ಭ ಚಾರ್ಜಿಂಗ್ ನಿಲ್ದಾಣಗಳು ಮತ್ತು ಇತರೆ ಸೌಕರ್ಯಗಳ ಕುರಿತಾದ ನಿಖರ ಮಾಹಿತಿ ನೀಡಲಿದ್ದು, ಸಂಪರ್ಕಿತ ಕಾರ್ ಸೂಟ್ ಸೌಲಭ್ಯವು ಕಾರಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಯನ್ನು ಸುಲಭವಾಗಿಸುತ್ತದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹೊಸ ಕಾರನ್ನು ಮಹೀಂದ್ರಾ ಕಂಪನಿಯು ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಪರಿಚಯಿಸುತ್ತಿದ್ದು, ಗ್ರಾಹಕರು ಆರ್ಕ್ಟಿಕ್ ಬ್ಲೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನಪೋಲಿ ಬ್ಲಾಕ್ ಮತ್ತು ಇನ್ಫಿನಿಟಿ ಬ್ಲೂ ಸ್ಯಾಟಿನ್ ಕಾಪರ್ ಫಿನಿಶ್‌ನಲ್ಲಿ ಡ್ಯುಯಲ್-ಟೋನ್ ರೂಫ್ ನೀಡಲಾಗಿದೆ.

ಎಕ್ಸ್‌ಯುವಿ400 ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ನೀರಿಕ್ಷಿತ ಬೆಲೆ

ಮಹೀಂದ್ರಾ ಕಂಪನಿಯು ಹೊಸ ಎಕ್ಸ್‌ಯುವಿ400 ಮಾದರಿಯನ್ನು ಹಲವಾರು ಮಾರುಕಟ್ಟೆ ಅಧ್ಯಯನದೊಂದಿಗೆ ಅಭಿವೃದ್ದಿಪಡಿಸಿದ್ದು, ಹೊಸ ಮಾದರಿಯೊಂದಿಗೆ ಕಂಪನಿಯು ಟಾಟಾ ನೆಕ್ಸಾನ್ ಇವಿ ಮತ್ತು ಎಂಜಿ ಜೆಡ್ಎಸ್ ಇವಿ ಮಾದರಿಗಳಿಗೆ ಪೈಪೋಟಿಯಾಗಿ ಬಿಡುಗಡೆ ಮಾಡುತ್ತಿದೆ. ಬೆಲೆ, ಮೈಲೇಜ್ ಮತ್ತು ತಾಂತ್ರಿಕ ಸೌಲಭ್ಯಗಳ ವಿಚಾರದಲ್ಲಿ ಹೊಸ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ವಿವಿಧ ವೆರಿಯೆಂಟ್‌ಗಳೊಂದಿಗೆ ರೂ. 16 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

Most Read Articles

Kannada
English summary
Mahindra xuv400 electric suv unveiled with 456km range specs features details
Story first published: Thursday, September 8, 2022, 22:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X