ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಕೇಂದ್ರ ಸರ್ಕಾರವು ಪ್ರಯಾಣಿಕ ಕಾರುಗಳ ಸುರಕ್ಷತೆಗಾಗಿ ಮುಂದಿನ ತಿಂಗಳು ಅಕ್ಟೋಬರ್ 1ರಿಂದ ಕಡ್ಡಾಯವಾಗಿ 6 ಏರ್‌ಬ್ಯಾಗ್ ಜಾರಿಗೆ ಮುಂದಾಗಿತ್ತು. ಆದರೆ ಕಾರಣಾಂತರಗಳಿಂದ ಹೊಸ ಸುರಕ್ಷಾ ನಿಯಮ ಜಾರಿಯಲ್ಲಿ ಮತ್ತಷ್ಟು ತಡವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ದೇಶಾದ್ಯಂತ ಹೆಚ್ಚುತ್ತಿರುವ ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆಯನ್ನು ತಗ್ಗಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಹಲವಾರು ಕಠಿಣ ಸಾರಿಗೆ ಸಂಚಾರ ನಿಯಮ ಜಾರಿಯೊಂದಿಗೆ ವಾಹನಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಹೀಗಾಗಿ ಸರ್ಕಾರವು ಪ್ರಮುಖ ಕಾರು ಉತ್ಪಾದನಾ ಕಂಪನಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಂತರ ಅಕ್ಟೋಬರ್ 1ರಿಂದ ಪ್ರತಿ ಕಾರು ಮಾದರಿಯಲ್ಲೂ ಕನಿಷ್ಠ 6 ಏರ್‌ಬ್ಯಾಗ್ ಅಳವಡಿಕೆ ಮಾಡುವಂತೆ ಸೂಚನೆ ನೀಡಿದೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಹೊಸ ನಿಯಮ ಜಾರಿಗಾಗಿ ಹಲವು ಸುತ್ತಿನ ಮಾತುಕತೆಯ ನಂತರ ಅಕ್ಟೋಬರ್ 1ರಿಂದ ಕಡ್ಡಾಯವಾಗಿ 6 ಏರ್‌ಬ್ಯಾಗ್ ಜಾರಿಗೆ ತರುವುದಾಗಿ ಘೋಷಣೆ ಮಾಡಿತ್ತು. ಆದರೆ ಕೇಂದ್ರ ಸಾರಿಗೆ ಸಚಿವಾಲಯದ ಹೊಸ ಆದೇಶವು ನಿಗದಿತ ದಿನಾಂಕದಂದು ಜಾರಿಯಾಗುವುದು ಅನುಮಾನ ಎನ್ನಲಾಗಿದೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಮಾಹಿತಿಗಳ ಪ್ರಕಾರ, ಕೇಂದ್ರ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ಆರು ಏರ್‌ಬ್ಯಾಗ್ ಕಡ್ಡಾಯ ನಿಯಮ ಜಾರಿಗೆ ಕನಿಷ್ಠ ಇನ್ನು ಒಂದರಿಂದ ಒಂದೂವರೆ ವರ್ಷಗಳ ಕಾಲ ಸಮಯಾವಕಾಶ ಬೇಕಾಗಬಹುದು ಎನ್ನಲಾಗಿದ್ದು, ಬೇಡಿಕೆಗೆ ತಕ್ಕಂತೆ ಭಾರತದಲ್ಲಿ ಏರ್‌ಬ್ಯಾಗ್ ಪೂರೈಕೆ ಇಲ್ಲದಿರುವುದು ಹೊಸ ನಿಯಮ ಜಾರಿಗೆ ಹಿನ್ನಡೆಯಾಗುತ್ತಿದೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಸದ್ಯ ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಹೊಸ ಕಾರುಗಳಿಗೆ ಕಡ್ಡಾಯ 6 ಏರ್‌ಬ್ಯಾಗ್ ನಿಯಮ ಜಾರಿಗೆ ತಂದಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಏರ್‌ಬ್ಯಾಗ್ ಉತ್ಪಾದನೆ ಹೆಚ್ಚಳ ನಂತರವಷ್ಟೇ ಹೊಸ ನಿಯಮ ಜಾರಿಗೆ ತರುವಂತೆ ಕಾರು ಉತ್ಪಾದನಾ ಕಂಪನಿಗಳು ಪಟ್ಟುಹಿಡಿದಿವೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಭಾರತದಲ್ಲಿ ಸದ್ಯ ವಾರ್ಷಿಕವಾಗಿ ವಿವಿಧ ಬಿಡಿಭಾಗಗಳ ಉತ್ಪಾದನಾ ಕಂಪನಿಗಳು 6 ಮಿಲಿಯನ್(60 ಲಕ್ಷ) ಏರ್‌ಬ್ಯಾಗ್‌ಗಳನ್ನು ಉತ್ಪಾದನೆ ಮಾಡುತ್ತಿದ್ದು, ಹೊಸ ನಿಯಮ ಜಾರಿಗೆ ಬಂದಲ್ಲಿ ವಾರ್ಷಿಕವಾಗಿ ಕನಿಷ್ಠ 18 ಮಿಲಿಯನ್(1.80 ಕೋಟಿ) ಏರ್‌ಬ್ಯಾಗ್‌ಗಳು ಬೇಕಾಗುತ್ತದೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಉತ್ಪಾದನೆ ಸಾಮರ್ಥ್ಯ ಮತ್ತು ಹೊಸ ನಿಯಮ ಜಾರಿಗೆ ಬೇಕಿರುವ ಲಭ್ಯತೆಗೂ ಹೆಚ್ಚಿನ ವ್ಯತ್ಯಾಸ ಇರುವುದರಿಂದ ಇದು ನೇರವಾಗಿ ಕಾರು ಉತ್ಪಾದನೆಯನ್ನು ಕುಂಠಿತಗೊಳಿಸುವುದಾಗಿ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಆತಂಕ ವ್ಯಕ್ತಪಡಿಸಿದ್ದು, ಈ ಹಿನ್ನಲೆ ಹೊಸ ನಿಯಮ ಕಡ್ಡಾಯವಾಗುವುದನ್ನು ಇನ್ನು ಕೆಲವು ತಿಂಗಳು ಕಾಲ ಮುಂದೂಡುವ ಸ್ಪಷ್ಟವಾಗಿದೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಹೊಸ ನಿಯಮ ಜಾರಿಗೆ ಕೇವಲ ಏರ್‌ಬ್ಯಾಗ್ ಉತ್ಪಾದನೆ ಹೆಚ್ಚಳ ಮಾತ್ರವಲ್ಲ ಕಾರುಗಳಲ್ಲಿ ಏರ್‌ಬ್ಯಾಗ್ ಕಾರ್ಯನಿರ್ವಹಣೆಗೆ ಪೂರಕವಾದ ಹಲವು ತಾಂತ್ರಿಕ ಸೌಲಭ್ಯಗಳ ಉತ್ಪಾದನೆ ಕೂಡಾ ಹೆಚ್ಚಳವಾಗಬೇಕಿದ್ದು, ಹೀಗಾಗಿ ಹೊಸ ನಿಯಮ ಜಾರಿಯಾಗುವುದು ಸದ್ಯಕ್ಕೆ ಅನುಮಾನ ಎನ್ನಲಾಗಿದೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಕಾರು ಕಂಪನಿಗಳು ತಮ್ಮ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಎರಡು ಏರ್‌ಬ್ಯಾಗ್ ಜೋಡಣೆ ಮಾಡುತ್ತಿದ್ದು, ಇನ್ನು ಕೆಲವು ಕಾರು ಉತ್ಪಾದನಾ ಕಂಪನಿಗಳು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಾಲ್ಕು ಏರ್‌ಬ್ಯಾಗ್‌ಗಳನ್ನು, ಆರು ಏರ್‌ಬ್ಯಾಗ್‌ಗಳನ್ನು ಮತ್ತು ಒಂಬತ್ತು ಏರ್‌ಬ್ಯಾಗ್ ಸೌಲಭ್ಯವನ್ನು ಒದಗಿಸುತ್ತಿವೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಆದರೆ ಎರಡು ಮತ್ತು ನಾಲ್ಕು ಏರ್‌ಬ್ಯಾಗ್ ಹೊಂದಿರುವ ಕಾರುಗಳಿಂತಲೂ ಆರಕ್ಕಿಂತ ಹೆಚ್ಚು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಕಾರುಗಳು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಖಾತ್ರಿಪಡಿಸಲಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಎಂಟ್ರಿ ಲೆವಲ್ ಕಾರುಗಳಿಗೂ ಅನ್ವಯಿಸುವಂತೆ ಆರು ಏರ್‌ಬ್ಯಾಗ್ ನಿಯಮ ಜಾರಿಗೆ ತರುತ್ತಿದೆ.

ಹೊಸ ಯೋಜನೆಗೆ ಆರಂಭದಲ್ಲಿ ಪ್ರಮುಖ ಎಂಟ್ರಿ ಲೆವಲ್ ಕಾರು ಉತ್ಪಾದನಾ ಕಂಪನಿಗಳು ಉತ್ಪಾದನಾ ವೆಚ್ಚ ಹೆಚ್ಚಳ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದರೂ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು 6 ಏರ್‌ಬ್ಯಾಗ್ ಕಡ್ಡಾಯಕ್ಕೆ ಒಪ್ಪಿಗೆ ಸೂಚಿಸಿವೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಆದರೆ ಏರ್‌ಬ್ಯಾಗ್ ಉತ್ಪಾದನಾ ಪ್ರಮಾಣವು ಕಡಿಮೆಯಿರುವುದರಿಂದ ಹೊಸ ನಿಯಮವು 2024ರ ಏಪ್ರಿಲ್ 1ರಿಂದ ಕಡ್ಡಾಯವಾಗುವ ಸಾಧ್ಯತೆಗಳಿದ್ದು, ಹೊಸ ನಿಯಮದಿಂದಾಗಿ ಕಾರುಗಳ ಬೆಲೆ ಕೂಡಾ ಹೆಚ್ಚಳವಾಗಲಿದೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಈಗಾಗಲೇ ಆರು ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲವಾದರೂ ಎಂಟ್ರಿ ಕಾರುಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಲಿದೆ. ಆರು ಏರ್‌ಬ್ಯಾಗ್ ಹೊಂದುವಂತೆ ಕಾರಿನ ವಿನ್ಯಾಸ ಬದಲಾವಣೆ ಜೊತೆಗೆ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಉನ್ನತೀಕರಿಸಬೇಕಾಗುತ್ತದೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಎಂಟ್ರಿ ಲೆವಲ್ ಕಾರುಗಳಲ್ಲಿ ಆರು ಏರ್‌ಬ್ಯಾಗ್ ಜೋಡಣೆಗಾಗಿ ಮೊದಲು ಏರ್‌ಬ್ಯಾಗ್ ಕಾರ್ಯನಿರ್ವಹಣೆಯಾಗುವಂತೆ ಮಾಡಲು ಅವುಗಳ ವಿನ್ಯಾಸದಲ್ಲಿ ಬದಲಾವಣೆ ಮುಖ್ಯವಾಗಿದ್ದು, ಜೊತೆಗೆ ಅಪಘಾತದ ವೇಳೆ ಏರ್‌ಬ್ಯಾಗ್ ಸರಿಯಾಗಿ ಕಾರ್ಯನಿರ್ವಹಿಸಲು ಸೆನ್ಸಾರ್ ಮತ್ತು ಸೀಟ್ ಬೆಲ್ಟ್ ಸೌಲಭ್ಯವನ್ನು ಉನ್ನತೀಕರಿಸಬೇಕಾಗುತ್ತದೆ.

ಹೊಸ ಕಾರುಗಳಲ್ಲಿ ಜಾರಿಯಾಗಬೇಕಿದ್ದ 6 ಏರ್‌ಬ್ಯಾಗ್ ಕಡ್ಡಾಯ ನಿಯಮ ಮತ್ತೆ ಮುಂದೂಡಿಕೆ!

ಇದಕ್ಕಾಗಿ ಹೊಸ ಕಾರುಗಳಲ್ಲಿ ಸೀಟ್ ಬೇಲ್ಟ್ ಅಲಾರಾಂ ಸೌಲಭ್ಯವನ್ನು ಅಳವಡಿಸಿಕೊಳ್ಳಬೇಕಿದ್ದು, ಈ ಎಲ್ಲಾ ಕಾರಣಗಳಿಂದ ಹೊಸ ಏರ್‌ಬ್ಯಾಗ್ ಕಡ್ಡಾಯ ನಿಯಮ ಜಾರಿಗೆ ಇನ್ನು ಕೆಲವು ದಿನಗಳನ್ನು ತೆಗೆದುಕೊಳ್ಳಲಿದೆ ಎನ್ನಬಹುದು.

Most Read Articles

Kannada
English summary
Mandatory six airbags rule could delay by up to 18 months
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X