ಜನಪ್ರಿಯ ಮಾನ್ಸೋರಿಯಿಂದ ಬರೋಬ್ಬರಿ 868 Bhp ಟ್ಯೂನಿಂಗ್‌ನೊಂದಿಗೆ ಹೊರಹೊಮ್ಮಿದ ಫೆರಾರಿ ಕಾರು!

ಫೆರಾರಿ ಕಾರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಜಗತ್ತಿನ ಅತ್ಯಂತ ದುಬಾರಿ ಕಾರು ತಯಾರಿಕಾ ಕಂಪೆನಿಯಲ್ಲಿ, ಮತ್ತು ಲಕ್ಷುರಿ ಸೂಪರ್‌ ಕಾರುಗಳ ತಯಾರಿಕೆಯಲ್ಲಿ ಫೆರಾರಿ ಮುಂಚೂಣಿಯಲ್ಲಿದೆ. ಈಗ ಇದರ ಇನ್ನೊಂದು ಕಾರು ಸದ್ಯಕ್ಕೆ ಸುದ್ದಿ ಮಾಡುತ್ತಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜನಪ್ರಿಯ ಮಾನ್ಸೋರಿಯಿಂದ ಬರೋಬ್ಬರಿ 868 Bhp ಟ್ಯೂನಿಂಗ್‌ನೊಂದಿಗೆ ಹೊರಹೊಮ್ಮಿದ ಫೆರಾರಿ ಕಾರು!

ಮಾನ್ಸೋರಿ ಎಂಬ ಜರ್ಮನಿಯ ಕಾರ್‌ ಪರ್ಫಾಮೆನಸ್‌ ಟ್ಯೂನಿಂಗ್‌ ಕಂಪೆನಿಯು ತಯಾರಿಸಿದ ಈ ಫೆರಾರಿ F8XX ಈ ಸೂಪರ್‌ಕಾರ್‌ ಎಲ್ಲರ ಗಮನ ಸೆಳೆಯುತ್ತಿದೆ. ವಿಶ್ವದ ಅತ್ಯಂತ ದುಬಾರಿ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾದ ಫೆರಾರಿಯ ಎಫ್೮ ಟ್ರಿಬ್ಯೂಟೋ ಆವೃತ್ತಿಯಂತೆ F8XX ಅನ್ನು ವಿನ್ಯಾಸಗೊಳೀಸಲಾಗಿದೆ. ಇದು ಫೆರಾರಿ F8 ನ ಟಾಪ್‌ಲೆಸ್‌ ಆವೃತ್ತಿಯದ್ದಾಗಿದೆ.

ಜನಪ್ರಿಯ ಮಾನ್ಸೋರಿಯಿಂದ ಬರೋಬ್ಬರಿ 868 Bhp ಟ್ಯೂನಿಂಗ್‌ನೊಂದಿಗೆ ಹೊರಹೊಮ್ಮಿದ ಫೆರಾರಿ ಕಾರು!

ಮಾನ್ಸೋರಿಯು ಈ ಹೊಸ F8XX ಅನ್ನು ಗ್ರಾಹಕರ ಮುಂದೆ ಇಟ್ಟಿದ್ದು. ಇದು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಈ ಕಾರು ಕಡು ಹಸಿರು ಅಥವಾ ಕಂಪನಿ ಹೆಸರಿಸುವಂತೆ ಬ್ರಿಟೀಷ್‌ ಗ್ರೀನ್‌ ಕಲರ್‌ನಲ್ಲಿ ಕಂಗೊಳಿಸುತ್ತಿದ್ದು, ಇದರಲ್ಲಿ ಅಲ್ಲಲ್ಲಿ ಹಳದಿ ಬಣ್ಣವನ್ನೂ ಸಹ ಬಳಸಲಾಗಿದೆ. ಅಲ್ಲಲ್ಲಿ ಬಳಸಲಾದ ಈ ಹಳದಿ ಬಣ್ಣ ಕಾರಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

ಜನಪ್ರಿಯ ಮಾನ್ಸೋರಿಯಿಂದ ಬರೋಬ್ಬರಿ 868 Bhp ಟ್ಯೂನಿಂಗ್‌ನೊಂದಿಗೆ ಹೊರಹೊಮ್ಮಿದ ಫೆರಾರಿ ಕಾರು!

ಇನ್ನು ಈ ಕಾರನ್ನು ಮಾನ್ಸೋರಿಯು ಕಸ್ಟಮೈಝ್‌ ಮಾಡಲಾಗಿದ್ದು, ಇದರಲ್ಲಿ ಕಸ್ಟಮೈಝ್‌ ಮಾಡಿದ ಭಾಗಗಳಲ್ಲಿ ಹೇರಳವಾಗಿ ಕಾರ್ಬನ್‌ ಫೈಬರನ್ನು ಬಳಸಲಾಗಿದೆ. ಕಾರ್ಬನ್‌ ಫೈಬರನ್ನು ಹೆಡ್‌ಲೈಟ್‌ನ ಭಾಗಗಳಲ್ಲಿ, ಮುಂದಿರುವ ಬಂಪರರ್‌ನಲ್ಲಿ, ಮುಂಭಾಗದಲ್ಲಿ ಮುಂದುವರಿಸಿರುವ ಸ್ಪಾಯಿಲರ್‌ನಲ್ಲಿ, ವುಂಗ್‌ ಮಿರರ್‌ನಲ್ಲಿ, ಡೋರ್‌ ಹ್ಯಾಂಡಲ್‌ನಲ್ಲಿ, ಗಾಳಿಯನ್ನು ಒಳತೆಗೆದುಕೊಳ್ಳಲು ಇರುವ ಏರ್‌ ಇನ್‌ಟೇಕರ್‌ನಲ್ಲಿ ಹಾಗೂ ಈ ಕಾರಿನ ಹಿಂಭಾಗದಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬನ್‌ ಫೈಬರನ್ನು ಸೇರಿಸಲಾಗಿದೆ.

ಜನಪ್ರಿಯ ಮಾನ್ಸೋರಿಯಿಂದ ಬರೋಬ್ಬರಿ 868 Bhp ಟ್ಯೂನಿಂಗ್‌ನೊಂದಿಗೆ ಹೊರಹೊಮ್ಮಿದ ಫೆರಾರಿ ಕಾರು!

ಕಾರ್ಬನ್‌ ಫೈಬರ್‌ ಅಂದರೆ ಪ್ಲಾಸ್ಟಿಕ್‌ ಬದಲಿಗೆ ಬಳಸುವ ಒಂದು ಸಾಧನ. ಆದರೆ ಇದು ಪ್ಲಾಸ್ಟಿಕ್‌ಗಿಂತಲೂ ತುಂಬಾ ಬಲಶಾಲಿಯಾಗಿದೆ ಮತ್ತು ಅಷ್ಟೇ ದುಬಾರಿಯೂ ಸಹ. ಹಾಗಾಗಿಯೇ ಇದನ್ನು ಸಾಮಾನ್ಯವಾಗಿ ಎಲ್ಲರೂ ಬಳಸುವುದು ತೀರಾ ಕಡಿಮೆ. ದುಬಾರಿ ಕಾರು ಮತ್ತು ಬೈಕ್‌ಗಳಲ್ಲಿ ಇದನ್ನು ಬಳಸಲಾಗುತ್ತದೆ. ಇನ್ನು ಈ ಫೆರಾರಿ F8XX ಕಾರಿನ ಟೈರ್‌ಗಳ ಸುತ್ತಳತೆ ಮುಂಭಾಗದಲ್ಲಿ 20 ಇಂಚು ಹಾಗೂ ಹಿಂಭಾಗದಲ್ಲಿ 21 ಇಂಚುಗಳಿಂದ ಕೂಡಿದೆ. ಬಹುತೇಕ ಎಲ್ಲಾ ಲಕ್ಷುರಿ ಸೂಪರ್‌ ಕಾರುಗಳ ಟೈರ್‌ಗಳ ಸುತ್ತಳತೆಯೂ ಸಹ ಇದೇ ಆಗಿದ್ದು, ಇದು ಚಲಾಯಿಸುವಾಗ ಉತ್ತಮ ರೋಡ್‌ಗ್ರಿಪ್‌ ಹೊಂದಲು ಸಹಕಾರಿಯಾಗಿದೆ.

ಜನಪ್ರಿಯ ಮಾನ್ಸೋರಿಯಿಂದ ಬರೋಬ್ಬರಿ 868 Bhp ಟ್ಯೂನಿಂಗ್‌ನೊಂದಿಗೆ ಹೊರಹೊಮ್ಮಿದ ಫೆರಾರಿ ಕಾರು!

ಇನ್ನು ಈ ಫೆರಾರಿ F8XX ನ ಮಿರರ್‌ಗಳನ್ನೂ ಸಹ ಮಾನ್ಸೋರಿಯು ಕಸ್ಟಮೈಝ್‌ ಮಾಡಿದ್ದು ನೋಡುಗರ ಗಮನ ಸೆಳೆಯುತ್ತದೆ. ಹೊರಾಂಗಣದಂತೆ ಒಳಾಂಗಣವೂ ಸಹ ಕಡು ಹಸಿರು ಬಣ್ಣವನ್ನು ಬಳಸಲಾಗಿದೆ. ಇದರ ಒಳಗೆ ತೀರಾ ಕಡಿಮೆ ಪ್ರಮಾಣದಲ್ಲಿ ಹಳದಿ ಬಣ್ಣವನ್ನು ಬಳಸಲಾಗಿದ್ದು, ಈ ಕಾರಿನ ಒಳಾಂಗಣದ ಪ್ರೀಮಿಯಂ ಲುಕ್‌ ಅನ್ನು ಇನ್ನಷ್ಟು ಹೆಚ್ಚುಗೊಳಿಸಿದೆ. ಕಾರಿನ ಒಳಗೆ ಲೆದರ್ ಮೆಟೀರಿಯಲ್‌ ಕೂಡ ಬಳಸಲಾಗಿದ್ದು, ಸ್ಟೀಯರಿಂಗ್‌, ಡ್ಯಾಶ್‌ಬೋರ್ಡ್ ಮತ್ತು ಡೋರ್‌ ಕಾರ್ಡ್‌ಗಳಲ್ಲಿ ಇದನ್ನು ಹೆಚ್ಚು ಬಳಸಲಾಗಿದೆ.

ಜನಪ್ರಿಯ ಮಾನ್ಸೋರಿಯಿಂದ ಬರೋಬ್ಬರಿ 868 Bhp ಟ್ಯೂನಿಂಗ್‌ನೊಂದಿಗೆ ಹೊರಹೊಮ್ಮಿದ ಫೆರಾರಿ ಕಾರು!

ಇನ್ನು ಹಳದಿ ಬಣ್ಣದ ಬಳಕೆಯು ಏರ್ ವೆಂಟ್‌ನ ಸುತ್ತಮುತ್ತ ಇದ್ದು, ಸೀಟ್‌ಗಳಲ್ಲಿ ಮತ್ತು ಕಾರ್ಪೆಟ್‌ನಲ್ಲಿ ಈ ಹಳದಿ ಬಣ್ಣವನ್ನು ಬಳಸಿಕೊಂಡು ಕ್ರಾಸ್‌ ಸ್ಟಿಚ್ಚಿಂಗನ್ನು ಮಾಡಲಾಗಿದೆ. ಇನ್ನು ಪ್ಯಾಡಲ್‌ ಶಿಫ್ಟೆರ್ಸ್‌, ಸ್ಟೀರಿಂಗ್‌ ವ್ಹೀಲ್‌ ಮತ್ತು ಕಾರಿನ ಹೊರಭಾಗವನ್ನು ಸೇರಿಕೊಂಡಂತೆ ಹಳದಿ ಬಣ್ಣ ಸ್ಟಿಚ್ಚಿಂಗ್‌ನಲ್ಲಿ ರೇಸ್‌ ಫ್ಲ್ಯಾಗ್‌ ಲೈನನ್ನು ಬಿಡಿಸಲಾಗಿದೆ.

ಜನಪ್ರಿಯ ಮಾನ್ಸೋರಿಯಿಂದ ಬರೋಬ್ಬರಿ 868 Bhp ಟ್ಯೂನಿಂಗ್‌ನೊಂದಿಗೆ ಹೊರಹೊಮ್ಮಿದ ಫೆರಾರಿ ಕಾರು!

ಇನ್ನು ಮಾನ್ಸೋರಿಯು ಗ್ರಾಹಕರಿಗೆ ಇಷ್ಟಬಂದ ಕಲರ್‌ನಲ್ಲಿ ಈ ಕಾರನ್ನು ಕಸ್ಟಮೈಝ್‌ ಮಾಡುವ ಸೌಲಭ್ಯವನ್ನು ಒದಗಿಸಿದ್ದು, ಇದರಿಂದ ಗ್ರಾಹಕರಿಗೆ ಈ ಕಾರನ್ನು ತಮಗೆ ಇಷ್ಟಬಂದ ಬಣ್ಣಗಳನ್ನು ಬಳಸಿಕೊಂಢು ಕಾರನ್ನು ವಿನ್ಯಾಸಗೊಳಿಸಬಹುದಾಗಿದೆ. ಆದರೆ ಕಾರು ಮಾಲೀಕರ ಸಮ್ಮತಿಯಿಲ್ಲದೆ ಒಂದು ಕಾರಿಗೆ ಬಳಸಲಾದ ವಿನ್ಯಾಸವನ್ನು ಇನ್ನೊಂದು ಕಾರಿಗೆ ಬಳಸುವುದಿಲ್ಲ. ಹಾಗಾಗಿ ಪ್ರತೀ ಕಾರು ಸಹ ವಿಭಿನ್ನವಾಗಿರುತ್ತದೆ.

ಜನಪ್ರಿಯ ಮಾನ್ಸೋರಿಯಿಂದ ಬರೋಬ್ಬರಿ 868 Bhp ಟ್ಯೂನಿಂಗ್‌ನೊಂದಿಗೆ ಹೊರಹೊಮ್ಮಿದ ಫೆರಾರಿ ಕಾರು!

ಬಹುತೇಕ ಎಲ್ಲಾ ಕಾರು ಮಾಲೀಕರು ಇದರ ಹೊರವಿನ್ಯಾಸದಲ್ಲಿ ಬದಲಾವಣೆಗಳನ್ನು ತಂದರೆ, ಇನ್ನು ಕೆಲವರು ಅದರ ಪರ್ಫಾಮೆನ್ಸ್‌ಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಇಂತಹ ಮಾಲೀಕರನ್ನೂ ಸಹ ಮಾನ್ಸೋರಿ ಗಮನದಲ್ಲಿಟ್ಟು ಅವರಿಗೆ ಬೇಕಾದ ರೀತಿಯಲ್ಲಿ ಸಿದ್ದಗೊಳಿಸುತ್ತಾರೆ. ಈ ಫೆರಾರಿ F8XX ನಲ್ಲಿ 3.9 ಲೀಟರ್‌ನ ಟರ್ಬೋಚಾರ್ಜ್‌ V8 ಇಂಜಿನನ್ನು ಹೊಂದಿದೆ. ಇದರಲ್ಲಿ ಸುಮಾರು 868 ಬಿಹೆಚ್‌ಪಿ ಪವರ್‌ ಮತ್ತು ೯೮೦ ನ್ಯೂಟನ್‌ ಮೀಟರ್‌ಪೀಕ್‌ ಟಾರ್ಕನ್ನು ಉತ್ಪಾದಿಸುವ ಸಾಮರ್ಥ್ಯ ಈ ಕಾರಿಗಿದೆ. ಇನ್ನು ಇದು 7 ಸ್ಪೀಡ್‌ ಡ್ಯುಯಲ್ ಕ್ಲಚ್‌ ಆಟೋಮ್ಯಾಟಿಕ್‌ ಗೇರ್ ಬಾಕ್ಸ್‌ ನ ವ್ಯವಸ್ಥೆಯೊಂದಿಗೆ ಬಂದಿದೆ. ಇದರ ಮೂಲ ಆವೃತ್ತಿಯಾದ ಫೆರಾರಿ F8 ಗಿಂತ ಸುಮಾರು 158 ಬಿಹೆಚ್‌ಪಿ ಹಾಗೂ 130 ನ್ಯೂಟನ್‌ ಮೀಟರ್ ಅಧಿಕ ಪವರನ್ನು ಈ ಮಾನ್ಸೋರ್‌ ಫೆರಾರಿ F8XX ಉತ್ಪಾದಿಸುತ್ತದೆ.

ಜನಪ್ರಿಯ ಮಾನ್ಸೋರಿಯಿಂದ ಬರೋಬ್ಬರಿ 868 Bhp ಟ್ಯೂನಿಂಗ್‌ನೊಂದಿಗೆ ಹೊರಹೊಮ್ಮಿದ ಫೆರಾರಿ ಕಾರು!

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ಜರ್ಮನಿಯ ಮಾನ್ಸೋರ್‌ ಕಾರ್‌ ಪರ್ಫಾಮೆನ್ಸ್ ಟ್ಯೂನಿಂಗ್‌ ಕಂಪನಿಯು ಮತ್ತೊಮ್ಮೆ ಈ ಫೆರಾರಿ F8XX ಕಾರನ್ನು ಒಂದು ಹೊಸ ಲೆವೆಲ್‌ ಗೆ ತಂದಿದೆ. ಇವರ ಈ ವಿಶಿಷ್ಟ ಟ್ಯೂನಿಂಗ್‌ನಿಂದಾಗಿಯೇ ಈ ಕಾರು ಇತರ ಸೂಪರ್‌ ಕಾರುಗಳಿಗಿಂದ ಹೆಚ್ಚು ಭಿನ್ನವಾಗಿ ಕಾಣುತ್ತದೆ.

Most Read Articles

Kannada
English summary
Mansori designed power mechine ferrari F8XX
Story first published: Monday, July 11, 2022, 16:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X