ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಇತ್ತೀಚಿನ ವರ್ಷಗಳಲ್ಲಿ ತೈಲ ಬೆಲೆ ಏರಿಕೆ ಹಾಗೂ ಪೆಟ್ರೋಲ್ ಚಾಲಿತ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಜನರು ಇವಿ ವಾಹನಗಳ ಬಳಕೆಗೆ ಆಸಕ್ತಿ ತೋರುತ್ತಿದ್ದಾರೆ. ವಾಹನ ತಯಾರಕರು ಕೂಡ ಮುಂದಿನ ದಿನಗಳಲ್ಲಿ ಇವಿ, ಹೈಬ್ರಿಡ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುವುದನ್ನು ಮನಗಂಡು ಆಧುನಿಕ ತಂತ್ರಜ್ಞಾನದೊಂದಿಗೆ ಹೆಚ್ಚು ಮೈಲೇಜ್ ನೀಡುವ ಇವಿ, ಹೈಬ್ರಿಡ್ ವಾಹನಗಳ ತಯಾರಿಯಲ್ಲಿ ತೊಡಗಿದ್ದಾರೆ.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಮೊನ್ನೆಯವರೆಗೂ ಯಾವುದೇ ಹೈಬ್ರಿಡ್ ಅಥವಾ ಇವಿ ವಾಹನಗಳನ್ನು ತಯಾರಿಸುವ ಆಲೋಚನೆ ಇಲ್ಲ್ ಎಂದಿದ್ದ ದೇಶದ ಜನಪ್ರಿಯ ವಾಹನ ತಯಾರಿಕ ಕಂಪನಿಯಾದ ಮಾರುತಿ ಸುಜುಕಿ, ಇದೀಗ ಭಾರತದಲ್ಲಿ ಹೈಬ್ರಿಡ್ ವಾಹನಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಮುಂದಿನ 5-6 ವರ್ಷಗಳಲ್ಲಿ ಕಂಪನಿಯು ಕೆಲವು ಬಲಿಷ್ಟ ಹೈಬ್ರಿಡ್ ಮಾದರಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ಮಾರುತಿ ತನ್ನ ಪ್ರತಿಯೊಂದು ಮಾದರಿಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಬಳಸುವ ಗುರಿಯನ್ನು ಹೊಂದಿದೆ ಎಂದು ಹೇಳಿಕೊಂಡಿದೆ.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಇದಕ್ಕಾಗಿ ಕಂಪನಿಯು ಪ್ರಬಲವಾದ ಹೈಬ್ರಿಡ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದು, ವಾಹನದ ಮೈಲೇಜ್ ಹೆಚ್ಚಿಸುವುದರ ಜೊತೆಗೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಕಂಪನಿಯು ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು, ಸಿಎನ್‌ಜಿ, ಎಥೆನಾಲ್ ಮತ್ತು ಬಯೋ-ಸಿಎನ್‌ಜಿ ಕಂಪ್ಲೈಂಟ್ ಎಂಜಿನ್‌ಗಳ ಮೇಲೆ ಕೇಂದ್ರೀಕರಿಸಲು ಆದ್ಯತೆ ನೀಡುತ್ತಿದೆ.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಎಂಎಸ್‌ಐ ಮುಖ್ಯ ತಾಂತ್ರಿಕ ಅಧಿಕಾರಿ ಸಿ.ವಿ ರಾಮನ್ ಮಾತನಾಡಿ, "ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಪ್ರತಿ ಮಾದರಿಯು ಕೆಲವು ಗ್ರೀನ್ ಟೆಕ್ನಾಲಜಿ (ಹಸಿರು ತಂತ್ರಜ್ಞಾನದ) ಅಂಶಗಳನ್ನು ಹೊಂದಿರುತ್ತವೆ. ಸಂಪೂರ್ಣ ಶ್ರೇಣಿಯಲ್ಲಿ ಯಾವುದೇ ಶುದ್ಧ ಪೆಟ್ರೋಲ್ ಪವರ್‌ಟ್ರೇನ್ ಇರುವುದಿಲ್ಲ ಎಂದು ಹೇಳಿದರು."

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಕಂಪನಿಯು ಮುಂದೆ ಹಲವಾರು ಮಾದರಿಗಳಲ್ಲಿ ದೃಢವಾದ ಹೈಬ್ರಿಡ್ ತಂತ್ರಜ್ಞಾನವನ್ನು ಸಜ್ಜುಗೊಳಿಸಬಹುದು ಎಂದ ಅವರು, ಕಂಪನಿಯ ಮುಂಬರುವ ಮಧ್ಯಮ ಗಾತ್ರದ SUV ಬಲವಾದ ಹೈಬ್ರಿಡ್ ವ್ಯವಸ್ಥೆಯನ್ನು ಹೊಂದಿರಲಿದೆ. MSI ಈ ತಿಂಗಳ ಕೊನೆಯಲ್ಲಿ ಮಾದರಿಯನ್ನು ಬಹಿರಂಗಪಡಿಸಲು ಸಿದ್ಧವಾಗಿದೆ ಎಂದರು.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಮಾರುತಿ ಈಗಾಗಲೇ ತನ್ನ ಪೋರ್ಟ್‌ಫೋಲಿಯೊದಲ್ಲಿ ವಿವಿಧ ಮಾದರಿಗಳಲ್ಲಿ ಸೌಮ್ಯ-ಹೈಬ್ರಿಡ್ ತಂತ್ರಜ್ಞಾನವನ್ನು ನೀಡುತ್ತಿದೆ. ಹೈಬ್ರಿಡ್ ಕಾರುಗಳು ಗ್ಯಾಸೋಲಿನ್ ಎಂಜಿನ್ ಮತ್ತು ವಿದ್ಯುತ್ ಮೋಟರ್‌ನ ಅನುಕೂಲಗಳನ್ನು ಸಂಯೋಜಿಸುತ್ತವೆ. ಒಂದು ಸೌಮ್ಯವಾದ ಹೈಬ್ರಿಡ್ ವ್ಯವಸ್ಥೆಯು ಅತ್ಯಲ್ಪ ಪ್ರಯೋಜನಗಳನ್ನು ಮಾತ್ರ ನೀಡುತ್ತದೆ.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಆದರೆ ಪ್ರಬಲವಾದ ಹೈಬ್ರಿಡ್ ಎಂಜಿನ್, ದೊಡ್ಡ ಬ್ಯಾಟರಿ ಮತ್ತು ಮೋಟರ್ ಅನ್ನು ಎಂಜಿನ್‌ನೊಂದಿಗೆ ಸಂಯೋಜಿಸುತ್ತದೆ, ಇಂಧನ ದಕ್ಷತೆಯಲ್ಲಿ ಗಮನಾರ್ಹ ಜಿಗಿತವನ್ನು ಒದಗಿಸುತ್ತದೆ. ಇದರಿಂದಾಗಿ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ, ದೇಶದಲ್ಲಿ ಸಾಕಷ್ಟು ಚಾರ್ಜಿಂಗ್ ಮೂಲಸೌಕರ್ಯಗಳ ಅನುಪಸ್ಥಿತಿಯಲ್ಲಿ, ಶುದ್ಧ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳತ್ತ ಸಾಗಲು ಹೈಬ್ರಿಡ್ ತಂತ್ರಜ್ಞಾನವು ಉತ್ತಮ ಮಾರ್ಗವಾಗಿದೆ ಎಂದು ರಾಮನ್ ಹೇಳಿದರು.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಸ್ವಯಂ ಚಾರ್ಜಿಂಗ್ ಹೈಬ್ರಿಡ್ ಕಾರ್ಯವಿಧಾನವು CO2 ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ, ಜೊತೆಗೆ ಖರೀದಿದಾರರಿಗೆ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತದೆ. ಎಲೆಕ್ಟ್ರಿಕ್ ಕಾರುಗಳಂತೆ ಹೈಬ್ರಿಡ್ ವಾಹನಗಳಿಗೂ ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿ ಸಿಗಬೇಕು ಇದರಿಂದ ಜನರಲ್ಲಿ ಹೆಚ್ಚು ಜನಪ್ರಿಯತೆ ಗಳಿಸಬಹುದು ಎಂದು ರಾಮನ್ ಹೇಳಿದರು.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ದೇಶದಲ್ಲಿ ಹೈಬ್ರಿಡ್ ವಾಹನಗಳು ಒಟ್ಟಾರೆಯಾಗಿ ಶೇಕಡಾ 43 ರಷ್ಟು ತೆರಿಗೆಯನ್ನು ಹೊಂದಿದ್ದು, ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು ಸುಮಾರು 5 ಶೇಕಡಾ ತೆರಿಗೆಯನ್ನು ಆಕರ್ಷಿಸುತ್ತವೆ. COP26 ಹವಾಮಾನ ಬದಲಾವಣೆಯ ಒಪ್ಪಂದದ ಅಡಿಯಲ್ಲಿ ನಿಗದಿಪಡಿಸಿದ ಗುರಿಗಳನ್ನು ಸಾಧಿಸಲು ಎಲ್ಲಾ ರೀತಿಯ ಕ್ರಮಗಳ ಅಗತ್ಯವಿದೆ ಎಂದು ರಾಮನ್ ಹೇಳಿದರು.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಇವಿ ಸನ್ನಿವೇಶವನ್ನು ವಿವರಿಸಿದ ರಾಮನ್, 2030 ರ ವೇಳೆಗೆ ಸರ್ಕಾರದ ಗುರಿಗಳನ್ನು ಸಾಧಿಸಲು, ಮುಂದಿನ ಐದು ವರ್ಷಗಳಲ್ಲಿ ಇಡೀ ಪರಿಸರ ವ್ಯವಸ್ಥೆಯು ರೂಪಾಂತರಗೊಳ್ಳಬೇಕಾಗುತ್ತದೆ, ಇದು ಉದ್ಯಮಕ್ಕೆ ಮತ್ತು ವಾಹನ ತಯಾರಕರಿಗೆ ದೊಡ್ಡ ಸವಾಲಾಗಿದೆ.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಕೇಂದ್ರ ಸರ್ಕಾರವು 2030 ರ ವೇಳೆಗೆ ಖಾಸಗಿ ಕಾರುಗಳಿಗೆ ಶೇ30 ರಷ್ಟು ವಾಣಿಜ್ಯ ವಾಹನಗಳಿಗೆ ಶೇ70ರಷ್ಟು, ಬಸ್‌ಗಳಿಗೆ ಶೇ 40ರಷ್ಟು ಮತ್ತು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಶೇ80 ರಷ್ಟು ಇವಿ ಮಾರಾಟವನ್ನು ತಲುಪುವ ಗುರಿಯನ್ನು ಹೊಂದಿದೆ. ಪ್ರಸ್ತುತ ಅಂತಹ ದೊಡ್ಡ ಬದಲಾವಣೆ ಮಾಡಲು ದೇಶ ಸಿದ್ಧವಿಲ್ಲ ಎಂದು ರಾಮನ್ ಹೇಳಿದ್ದಾರೆ.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಇಂದಿನ ದಿನಗಳಲ್ಲಿ ಎಲ್ಲವೂ ಎಲೆಕ್ಟ್ರಾನಿಕ್ ಆಗುತ್ತಿದೆ. ನಮ್ಮಲ್ಲಿ ಪರಿಸರ ವ್ಯವಸ್ಥೆ ಇಲ್ಲ. PLI (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್) ಯೋಜನೆಯನ್ನು ವಾಸ್ತವವಾಗಿ ಪ್ರಾರಂಭಿಸುವವರೆಗೆ ಮತ್ತು ಪೂರೈಕೆ ಸರಪಳಿಯನ್ನು ಸಮಯಕ್ಕೆ ಸ್ಥಳೀಕರಿಸುವವರೆಗೆ ಎಲ್ಲವನ್ನೂ ಆಮದು ಮಾಡಿಕೊಳ್ಳಬೇಕು ಎಂದರು.

ಪ್ರಬಲ ಹೈಬ್ರಿಡ್ ಕಾರಿನ ತಯಾರಿಗೆ ಸಜ್ಜಾದ ಮಾರುತಿ: ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಲಗ್ಗೆ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ಇವಿ ವಾಹನಗಳ ಮೇಲೆ ನಂಬಿಕೆ ಬಂದಿಲ್ಲ. ಜನರು ನಿಧಾನವಾಗಿ ಇವಿಗಳನ್ನು ಬಳಸಲು ಮುಂದಾಗಿತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ಗುರಿ ತಲುಪಲು ಈ ವೇಗ ಸಾಲುವುದಿಲ್ಲ. ಹಾಗಾಗಿ ಸರ್ಕಾರ ಇನ್ನಷ್ಟು ಉತ್ತೇಜನ ನೀಡಬೇಕಿದೆ. ಕೆಲವು ವಾಹನ ಕಂಪನಿಗಳ ಬ್ಯಾಟರಿ ದೋಷಗಳನ್ನು ಸರಿಪಡಿಸಿ ಪ್ರಮಾಣಿತ ವಾಹನಗಳನ್ನು ಬಿಡುಗಡೆ ಮಾಡಬೇಕಿದೆ.

Most Read Articles

Kannada
English summary
Maruthi all set to prepare a powerful hybrid car to hit the market in the next five to six years
Story first published: Monday, July 4, 2022, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X