ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

ಮಾರುತಿ ಸುಜುಕಿ ಕಂಪನಿಯು ನಿನ್ನೆಯಷ್ಟೇ ಹೊಸ ಆಲ್ಟೊ ಕೆ10 ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

Recommended Video

Maruti Alto K10 Launched At Rs 3.99 Lakh | What’s New On The Hatchback? Dual-Jet VVT & AMT

ಕಂಪನಿಯು ಶೀಘ್ರದಲ್ಲಿಯೇ ಹೊಸ ಕಾರಿನಲ್ಲಿ ಸಿಎನ್‌ಜಿ ಮಾದರಿಯನ್ನು ಸಹ ಸುಧಾರಿತ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

ಆಲ್ಟೋ ಹ್ಯಾಚ್‌ಬ್ಯಾಕ್ ಮಾದರಿಯು ಕಳೆದ 22 ವರ್ಷಗಳಿಂದ ಭಾರತದಲ್ಲಿ ಅತಿಹೆಚ್ಚು ಬೇಡಿಕೆಯಲ್ಲಿರುವ ಕಾರು ಮಾದರಿಯಾಗಿದ್ದು 43.2 ಲಕ್ಷ ಗ್ರಾಹಕರೊಂದಿಗೆ ನೆಚ್ಚಿನ ಕಾರು ಮಾದರಿಯಾಗಿ ಹೊರಹೊಮ್ಮಿದೆ. ಹೊಸ ನವೀಕರಣಗಳೊಂದಿಗೆ ಇದೀಗ ಮತ್ತೊಮ್ಮೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಮಾದರಿಯಲ್ಲಿ ಸದ್ಯ ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಯನ್ನು ಮಾತ್ರ ಪರಿಚಯಿಸಲಾಗಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

ಆಲ್ಟೊ ಕೆ10 ಮಾದರಿಯು ಮುಂದಿನ ಕೆಲವೇ ವಾರಗಳಲ್ಲಿ ಸಿಎನ್‌ಜಿ ಮಾದರಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ತಂತ್ರಜ್ಞಾನ ಅಳವಡಿಕೆ ಹೊಂದಿರುವ ಹೊಸ ಮಾದರಿಯು ಅತ್ಯುತ್ತಮ ಮೈಲೇಜ್ ಖಾತ್ರಿಪಡಿಸಲಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

ಹೊಸ ಆಲ್ಟ ಕೆ10 ಕಾರು ಮಾದರಿಯಲ್ಲಿ ಕಂಪನಿಯು 1.0-ಲೀಟರ್ ಕೆ10ಸಿ ಮೂರು-ಸಿಲಿಂಡರ್ ಡ್ಯುಯಲ್ ಜೆಟ್ ಡ್ಯುಯಲ್ ವಿವಿಟಿ ಪೆಟ್ರೋಲ್ ಎಂಜಿನ್ ಅನ್ನು ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನದೊಂದಿಗೆ ಜೋಡಣೆ ಮಾಡಿದ್ದು, ಈ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

ಹೊಸ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್‌ನಿಂದ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 24.90 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

ಸಿಎನ್‌ಜಿ ಮಾದರಿಯು ಪೆಟ್ರೋಲ್ ಜೊತೆಗೆ ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಉತ್ತಮ ಮೈಲೇಜ್ ಖಾತ್ರಿಪಡಿಸಲಿದ್ದು, ಇದು 5 ಸ್ಪೀಡ್ ಮ್ಯಾನುವಲ್ ‌ಗೇ‌ರ್‌ಬಾಕ್ಸ್‌ನೊಂದಿಗೆ ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 37 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

ಇನ್ನುಳಿದಂತೆ ಹೊಸ ಆಲ್ಟೊ ಕೆ10 ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಕಪ್ಪು ಬಣ್ಣದ ಹನಿಕೊಬ್ ಮೆಷ್ ಮಾದರಿಯೊಂದಿಗೆ ಮರುವಿನ್ಯಾಸಗೊಳಿಸಲಾದ ಸಿಂಗಲ್-ಪೀಸ್ ಫ್ರಂಟ್ ಗ್ರಿಲ್ ಅನ್ನು ಒಳಗೊಂಡಿದ್ದು, ಸಿ-ಆಕಾರದ ಬಂಪರ್ ಫಿನಿಶ್, ಕಡಿಮೆ ಸೆಂಟ್ರಲ್ ಏರ್ ಇನ್‌ಟೆಕ್, ಸ್ವೆಪ್‌ಬ್ಯಾಕ್ ಹೆಡ್‌ಲ್ಯಾಂಪ್‌ಗಳು, ಹೊಸ ಬಾನೆಟ್ ಮತ್ತು ಮರುವಿನ್ಯಾಸಗೊಳಿಸಲಾದ ವಿಂಡ್‌ಶೀಲ್ಡ್ ಹೊಂದಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

2022ರ ಆಲ್ಟೊ ಕೆ10 ನಲ್ಲಿನ ಕೆಲವು ಪ್ರಮುಖ ವೈಶಿಷ್ಟ್ಯಗಳೆಂದರೆ ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸಂಪರ್ಕದೊಂದಿಗೆ ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಹೊಸ ಅಪ್ಹೋಲ್ಸ್ಟರಿ, ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್, ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಮಲ್ಟಿಫಂಕ್ಷನಲ್ ಸ್ಟೀರಿಂಗ್ ವೀಲ್ ಹೊಂದಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

ಇದರೊಂದಿಗೆ ನವೀಕರಿಸಿದ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಡ್ಯುಯಲ್. ಮುಂಭಾಗದ ಏರ್ ಬ್ಯಾಗ್ ಗಳು, ಇಬಿಡಿ ಜೊತೆಗೆ ಎಬಿಎಸ್, ಎಲೆಕ್ಟ್ರಿಕ್ ಚಾಲಿತ ರಿಯಲ್ ವ್ಯೂ ಮಿರರ್ ಗಳು ಹಾಗೂ ಪವರ್ ವಿಂಡೋ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

ಪೆಟ್ರೋಲ್ ಮಾದರಿಯಲ್ಲಿ ಸದ್ಯ ಸ್ಟ್ಯಾಂಡರ್ಡ್ ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ವಿಎಕ್ಸ್ಐ ಪ್ಲಸ್ ವೆರಿಯೆಂಟ್‌ಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 3.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.84 ಲಕ್ಷ ಬೆಲೆ ಹೊಂದಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

ಸಿಎನ್‌ಜಿ ಮಾದರಿಯು ಎಲ್ಎಕ್ಸ್ಐ ಇಲ್ಲವೇ ವಿಎಕ್ಸ್ಐ ಮಾದರಿಯನ್ನು ಆಧರಿಸಿ ಸಿಎನ್‌ಜಿ ವೆರಿಯೆಂಟ್ ಹೊಂದಿರಲಿದ್ದು, ಸಿಎನ್‌ಜಿ ಮಾದರಿಯು ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಗಳಿಂತ ರೂ. 80 ಸಾವಿರದಿಂದ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್‌ಜಿ

ಇನ್ನು ಹೊಸ ಆಲ್ಟೊ ಕೆ10 ಕಾರು ಈ ಬಾರಿ 3,530 ಎಂಎಂ ಉದ್ದ, 1,490 ಎಂಎಂ ಅಗಲ ಮತ್ತು 1,520 ಎಂಎಂ ಎತ್ತರ ಮತ್ತು 2,380 ಎಂಎಂ ವ್ಹೀಲ್‌ಬೇಸ್ ಹೊಂದಿದ್ದು, ಈ ಕಾರಿನ ಒಟ್ಟು ತೂಕವು 1,150 ಕೆಜಿಯಾಗಿದೆ. ಹೊಸ ಹ್ಯಾಚ್‌ಬ್ಯಾಕ್‌ 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 177-ಲೀಟರ್ ಬೂಟ್ ಸ್ಪೇಸ್‌ನೊಂದಿಗೆ ಉತ್ತಮ ಕ್ಯಾಬಿನ್ ಹೊಂದಿದ್ದು, ಸಾಕಷ್ಟು ಸ್ಥಳಾವಕಾಶ ಒದಗಿಸುತ್ತದೆ.

Most Read Articles

Kannada
English summary
Maruti suzuki alto k10 cng variant launch soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X