ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಹೊಸ ಕಾರು ಮಾದರಿಗಳೊಂದಿಗೆ ಮಾರಾಟದಲ್ಲಿ ಮತ್ತೊಮ್ಮೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿರುವ ಮಾರುತಿ ಸುಜುಕಿ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರುಗಳ ಪಟ್ಟಿಯಲ್ಲಿ ಬಲೆನೊ ಕಾರಿನ ಎಸ್‌ಯುವಿ ಆವೃತ್ತಿಯು ಕೂಡಾ ಭಾರೀ ಕುತೂಹಲ ಹುಟ್ಟುಹಾಕಿದೆ.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಬಲೆನೊ ಮಾದರಿಯಲ್ಲಿ ಕಂಪನಿಯು ಕ್ರಾಸ್‌ಓವರ್ ವೈಶಿಷ್ಟ್ಯತೆಯ ಹೊಸ ಎಸ್‌ಯುವಿ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ಹೊಸ ಕಾರು ಮಾದರಿಯ ಕಾರ್ಯಕ್ಷಮತೆ ಕುರಿತಂತೆ ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಹೊಸ ಕಾರು ಮಾದರಿಯ ಕುರಿತಾಗಿ ಮಾರುತಿ ಸುಜುಕಿ ಕಂಪನಿಯು ಯಾವುದೇ ಮಾಹಿತಿ ಹಂಚಿಕೊಂಡಿಲ್ಲವಾದರೂ ಹೊಸ ಕಾರು ಹ್ಯಾಚ್‌ಬ್ಯಾಕ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಉದ್ದಳತೆ ಮತ್ತು ಎತ್ತರದೊಂದಿಗೆ ಅತ್ಯುತ್ತಮ ಒಳಾಂಗಣ ಪಡೆದುಕೊಳ್ಳಲಿದೆ.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಹೊಸ ಕಾರು ಮಾದರಿಯಲ್ಲಿ ಕಂಪನಿಯು ಎರ್ಟಿಗಾ ಮತ್ತು ಎಕ್ಸ್‌ಎಲ್6 ನಲ್ಲಿರುವ 1.5 -ಲೀಟರ್ ಎಂಜಿನ್‌ನೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಲೊನೊ ಮತ್ತು ಬ್ರೆಝಾ ಕಾರು ಮಾದರಿಯಲ್ಲಿರುವ ವಿವಿಧ ಫೀಚರ್ಸ‌ಗಳನ್ನು ಜೋಡಣೆ ಮಾಡಲಿದೆ.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಈ ಮೂಲಕ ಮಾರುತಿ ಸುಜುಕಿ ಕಂಪನಿಯು ಸ್ಥಗಿತಗೊಂಡಿರುವ ಎಸ್-ಕ್ರಾಸ್ ಎಸ್‌ಯುವಿ ಮಾದರಿಗಾಗಿ ಹೊಸ ಮಾದರಿಯನ್ನು ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಯಾಗುತ್ತಿರುವ ಹೊಸ ಎಂ‌ಜಿನ್ ಮಾದರಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಪೆಟ್ರೋಲ್ ಮಾದರಿಯೊಂದಿಗೆ ಹೈಬ್ರಿಡ್ ತಂತಜ್ಞಾನವನ್ನು ಸಹ ಬಳಸಿಕೊಳ್ಳಲಿದೆ.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಬಲೆನೊ ಹ್ಯಾಚ್‌ಬ್ಯಾಕ್ ಹೊಸ ಕಾರು ಮಾದರಿಯು ಇತ್ತೀಚಗೆ ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಬಲೆನೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಸಿಗ್ಮಾ, ಡೆಲ್ಟಾ, ಜೆಟಾ ಮತ್ತು ಅಲ್ಫಾ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಕ್ರಾಸ್‌ಓವರ್ ಎಸ್‌ಯುವಿ ಕೂಡಾ ಸಾಮಾನ್ಯ ಬಲೆನೊದಂತೆಯೇ ವಿವಿಧ ವೆರಿಯೆಂಟ್ ಹೊಂದಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8,50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.50 ಲಕ್ಷ ಬೆಲೆ ಹೊಂದಿಲಿದೆ.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಉಳಿಂಂತೆ ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಬಲೆನೊಂದಿಗೆ 16 ಇಂಚಿನ ಅಲಾಯ್ ವ್ಹೀಲ್, ಅರ್ಕಾಮಿಸ್ ಸರೌಂಡ್ ಸೌಂಡ್ ಸಿಸ್ಟಂ ಸೌಲಭ್ಯವು ಕಾರು ಚಾಲನೆಯನ್ನು ಮತ್ತಷ್ಟು ಅರಾಮದಾಯಕಗೊಳಿಸಲಿದ್ದು, ನೆಕ್ಸಾವೆವ್ ಹನಿಕೊಂಬ್ ಗ್ರಿಲ್, ಫ್ಲಾಟರ್ ಕ್ಲಾಮ್‌ಶೆಲ್ ಬಾನೆಟ್ ಮತ್ತು ಪರಿಷ್ಕೃತ ಮುಂಭಾಗದ ಬಂಪರ್ ಜೊತೆಗೆ ದೊಡ್ಡ ಫಾಗ್ ಲ್ಯಾಂಪ್ ಹೌಸಿಂಗ್‌ಗಳನ್ನು ನೀಡಲಾಗಿದೆ. ಸೈಡ್ ಪ್ರೊಫೈಲ್ ಹಿಂದಿನ ಮಾದರಿಯಂತೆಯೇ ಕಂಡರೂ ಕ್ರೋಮ್ ಸ್ಟ್ರಿಪ್ ಅನ್ನು ಹೊರತುಪಡಿಸಿ ಈಗ ಕೆಳಗಿನ ವಿಂಡೋ ಲೈನ್‌ನಿಂದ ಹಿಂದಿನ ಕ್ವಾರ್ಟರ್ ಗ್ಲಾಸ್‌ಗೆ ಚಲಿಸುವಂತೆ ವಿನ್ಯಾಸಗೊಳಿಸುತ್ತದೆ.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಹೊಸ ಬಲೆನೊ ಹಿಂಬದಿಯಲ್ಲಿ ಹೊಸ ಟೈಲ್‌ಗೇಟ್ ವಿನ್ಯಾಸ, ಹೊಸ ಸಿ-ಆಕಾರದ ಎಲ್‌ಇಡಿ ಟೈಲ್-ಲೈಟ್‌ಗಳು ಮತ್ತು ರಿಪ್ರೊಫೈಲ್ಡ್ ರಿಯರ್ ಬಂಪರ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ 9.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹಿಂದಿನ ಮಾದರಿಗಳಿಂತೆ ಎಸಿ ವೆಂಟ್‌ಗಳು, ಫಾಸ್ಟ್ ಚಾರ್ಜಿಂಗ್ ಯುಎಸ್‌ಬಿ ಪೋರ್ಟ್‌, ಹೆಡ್ ಅಪ್ ಡಿಸ್ಪ್ಲೇ(ಎಚ್‌ಯುಡಿ) ಅನ್ನು ಒಳಗೊಂಡಿದೆ.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಹೊಸ ಹ್ಯಾಚ್‌ಬ್ಯಾಕ್‌ ಮಾದರಿಯಲ್ಲಿ ಮಾರುತಿ ಸುಜುಕಿಯು ಈ ಬಾರಿ ಹೆಚ್ಚಿನ ಸುರಕ್ಷತೆಗೆ ಒತ್ತು ನೀಡಿದ್ದು, ಹೊಸ ಸುರಕ್ಷತಾ ವೈಶಿಷ್ಟ್ಯಗಳಲ್ಲಿ 6 ಏರ್‌ಬ್ಯಾಗ್, ಹಿಲ್ ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಎಬಿಎಸ್, ಕೀ ಲೆಸ್ ಎಂಟ್ರಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಇಎಸ್‌ಪಿ ಮತ್ತು ಇಬಿಡಿ ಸಹ ಸೇರ್ಪಡೆಯಾಗಲಿದ್ದು, ಸುಜುಕಿ ಕಾರ್ ಕನೆಕ್ಟ್ ತಂತ್ರಜ್ಞಾನದಲ್ಲೂ ಸಹ ಸುಧಾರಿತ ವೈಶಿಷ್ಟ್ಯತೆಗಳನ್ನು ಸೇರ್ಪಡೆಗೊಳಿಸಿದೆ.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಹಾಗೆಯೇ ಮಾರುತಿ ಸುಜುಕಿ ಕಂಪನಿಯ ಹೊಸ ಕಾರಿನಲ್ಲಿ ಸುಜುಕಿ ಕನೆಕ್ಟ್ ಟೆಕ್ನಾಲಜಿ ಮೂಲಕ ಒಂದೇ ಸೂರಿನಡಿ 40ಕ್ಕೂ ಹೆಚ್ಚು ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವ ಕನೆಕ್ಟೆಡ್ ಫೀಚರ್ಸ್ ನೀಡಿದ್ದು, ಸ್ಮಾರ್ಟ್‌ಫೋನ್ ಮೂಲಕವೇ ನಿರ್ವಹಣೆ ಮಾಡಬಹುದಲ್ಲದೆ ಅಮೆಜಾನ್ ಅಲೆಕ್ಸಾ ವಾಯ್ಸ್ ಕಮಾಂಡ್ ಮೂಲತ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದು.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಜೊತೆಗೆ ತುರ್ತುಸೇವೆಗಳಿಗಾಗಿ ಸುಧಾರಿತ ಟೆಲಿಮ್ಯಾಟಿಕ್ಸ್ ಪರಿಹಾರಗಳನ್ನು ಒಳಗೊಂಡಿರಲಿದ್ದು, ಸುಜುಕಿ ಕಾರ್ ಕನೆಕ್ಟ್ ಫೀಚರ್ಸ್‍ಗಳನ್ನು ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಮೂಲಕ ಇಂಧನ ಲಭ್ಯತೆ, ಸಾಗಬಹುದಾದ ದೂರ, ಓಡೋಮೀಟರ್, ಕಾರ್ ಡಯಾಗ್ನೋಸಿಸ್, ಒಳಗೊಂಡಂತೆ ವಿವಿಧ ಮಾಹಿತಿಗಳ ಸಂಪೂರ್ಣ ಡೇಟಾ ಪಡೆದುಕೊಳ್ಳಬಹುದು.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಕನೆಕ್ಟೆಡ್ ಕಾರ್ ಟೆಕ್ ವೈಶಿಷ್ಟ್ಯದ ಜೊತೆಗೆ ಮಾರುತಿ ಕಂಪನಿಯು ಹೊಸ ಬಲೆನೊದಲ್ಲಿ 9-ಇಂಚಿನ ಡಿಜಿಟಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಈ ವಿಭಾಗದ ಮೊದಲ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.

ಬಲೆನೊ ಕ್ರಾಸ್‌ಓವರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಹೊಸ ಕಾರು ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರಾಂಡ್ಯೂರ್ ಗ್ರೇ, ಸೆಲೆಸ್ಟಿಯಲ್ ಬ್ಲೂ, ಓಪ್ಯುಲೆಂಟ್ ರೆಡ್ ಮತ್ತು ಲಕ್ಸ್ ಬೀಜ್ ಎನ್ನುವ ಆರು ಬಣ್ಣಗಳ ಆಯ್ಕೆ ಹೊಂದಿದ್ದು, ಮಾರುತಿ ಸುಜುಕಿ ಕಂಪನಿಯು ಈ ಬಾರಿ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಗೆ ಒತ್ತು ನೀಡಿರುವ ಮಹತ್ವದ ಬದಲಾಣೆಯಾಗಿದೆ.

Most Read Articles

Kannada
English summary
Maruti suzuki baleno suv spied details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X