ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಮಾರುತಿ ಸುಜುಕಿ ಕಂಪನಿಯು ತನ್ನ ನ್ಯೂ ಜನರೇಷನ್ ಸೆಲೆರಿಯೊ ಮಾದರಿಯಲ್ಲಿ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಸಿಎನ್‌ಜಿ ಮಾದರಿಗಳಲ್ಲಿಯೇ ಅತಿ ಮೈಲೇಜ್ ಹೊಂದಿರುವ ಸೆಲೆರಿಯೊ ಸಿಎನ್‌ಜಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.58 ಲಕ್ಷ ಬೆಲೆ ಹೊಂದಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ನ್ಯೂ ಜನರೇಷನ್ ಸೆಲೆರಿಯೊ ಕಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮಧ್ಯಂತರದಲ್ಲಿರುವ ವಿಎಕ್ಸ್ಐ ವೆರಿಯೆಂಟ್‌ನಲ್ಲಿ ಸಿಎನ್‌ಜಿ ಮಾದರಿಯು ಖರೀದಿಗೆ ಲಭ್ಯವಿದೆ. ಇದು ಸ್ಟ್ಯಾಂಡರ್ಡ್ ವಿಎಕ್ಸ್ಐ ಪೆಟ್ರೋಲ್ ಮಾದರಿಗಿಂತಲೂ ರೂ. 95 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಸೆಲೆರಿಯೊ ಸಿಎನ್‌ಜಿ ಹೆಚ್ಚು ಮೈಲೇಜ್ ಹಿಂದಿರುಗಿಸುತ್ತದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಹೊಸ ಸೆಲೆರಿಯೊ ಸಿಎನ್‌ಜಿ ಅತ್ಯಂತ ಇಂಧನ ದಕ್ಷತೆಯ ಕಾರು ಎಂದು ಮಾರುತಿ ಸುಜುಕಿ ಹೇಳಿಕೊಂಡಿದ್ದು, ಸೆಲೆರಿಯೊ ಸಿಎನ್‌ಜಿ ಕಾರು ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 35.60 ಕಿಮೀ ಮೈಲೇಜ್ ನೀಡುತ್ತದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಪೆಟ್ರೋಲ್ ಎಂಜಿನ್ ಹೊಂದಿರುವ ನ್ಯೂ ಜನರೇಷನ್ ಸೆಲೆರಿಯೊ ಕಾರು ಮಾದರಿಯು ಪ್ರತಿ ಲೀಟರ್‌ಗೆ 26.68 ಮೈಲೇಜ್ ಹೊಂದಿದ್ದು, ಸಿಎನ್‌ಜಿ ಮಾದರಿಯು ದೀರ್ಘಾವಧಿಯಲ್ಲಿ ಪೆಟ್ರೋಲ್ ಮಾದರಿಗಿಂತ ಹೆಚ್ಚು ಮಿತವ್ಯಯಕಾರಿಯಾಗಿದೆ. ಸೆಲೆರಿಯೊ ಸಿಎನ‌ಜಿ ಮಾದರಿಯಲ್ಲಿ ಪೆಟ್ರೋಲ್ ಮಾದರಿಯಂತೆಯೇ 1.0-ಲೀಟರ್ ಕೆ10ಸಿ ಡ್ಯುಯಲ್ ಜೆಟ್ ಎಂಜಿನ್ ಹೊಂದಿದ್ದು, ಈ ಎಂಜಿನ್ 57 ಬಿಎಚ್‌ಪಿ ಮತ್ತು 82.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಸಿಎನ್‌ಜಿ ಮಾದರಿಯು ಪೆಟ್ರೋಲ್ ಚಾಲಿತ ಸೆಲೆರಿಯೊಗಿಂತಲೂ 10 ಬಿಎಚ್‌ಪಿ ಮತ್ತು 6.9 ಎನ್ಎಂ ಕಡಿಮೆ ಟಾರ್ಕ್ ಸಾಮಾರ್ಥ್ಯ ಹೊಂದಿದ್ದು, ಸಿಎನ್‌ಜಿ ಮಾದರಿಯನ್ನು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಆದರೆ ಸೆಲೆರಿಯೊ ಪೆಟ್ರೋಲ್ ಮಾದರಿಯಲ್ಲಿ ಗ್ರಾಹಕರು ಮ್ಯಾನುವಲ್ ಮತ್ತು ಎಎಮ್‌ಟಿ ಗೇರ್‌ಬಾಕ್ಸ್‌ ಆಯ್ಕೆ ಮಾಡಬಹುದಾಗಿದ್ದು, ಹೊಸ ಸೆಲೆರಿಯೊ ಸಿಎನ್‌ಜಿ ಮಾದರಿಯು ವಿನ್ಯಾಸ ಮತ್ತು ಎಲ್ಲಾ ವೈಶಿಷ್ಟ್ಯಗಳು ಪೆಟ್ರೋಲ್ ಮಾದರಿಯನ್ನೇ ಹೋಲುತ್ತವೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಆದರೆ ಬೂಟ್‌ ವಿಭಾಗದಲ್ಲಿ ಕಂಪನಿಯು ಅಳವಡಿಸಿರುವ ಸಿಎನ್‌ಜಿ ಟ್ಯಾಂಕ್‌ನಿಂದಾಗಿ ಹಿಂಭಾಗದಲ್ಲಿನ ಸರಕು ಸ್ಥಳಾವಕಾಶವು ತುಸು ಕೊರತೆ ಉಂಟಾಗಲಿದ್ದು, ಸೆಲೆರಿಯೊ ಸಿಎನ್‌ಜಿ ವೈಶಿಷ್ಟ್ಯತೆಗಳು ಮತ್ತು ಉಪಕರಣಗಳು ವಿಎಕ್ಸ್ಐ ಟ್ರಿಮ್ ಅನ್ನು ಹೋಲುತ್ತವೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಜೊತೆಗೆ ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ಎಸಿ, ಸೆಂಟ್ರಲ್ ಲಾಕಿಂಗ್, ಪವರ್ ವಿಂಡೋ, ಎಲೆಕ್ಟ್ರಿಕ್-ಅಡ್ಜಸ್ಟ್ ವಿಂಗ್ ಮಿರರ್‌ಗಳು ಮತ್ತು ಸ್ಪ್ಲಿಟ್-ಫೋಲ್ಡಿಂಗ್ ರಿಯರ್ ಸೀಟ್‌ಗಳಂತಹ ಕಿಟ್‌ಗಳನ್ನು ಒಳಗೊಂಡಿದ್ದು, ಸುರಕ್ಷತಾ ಕಿಟ್‌ನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಪ್ರಮಾಣಿತವಾಗಿ ಜೋಡಣೆಯಾಗಿರಲಿವೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಈ ಮೂಲಕ ಮಾರುತಿ ಸೆಲೆರಿಯೊ ಸಿಎನ್‌ಜಿ ಮಾದರಿಯು ಮಾರುಕಟ್ಟೆಯಲ್ಲಿರುವ ಹ್ಯುಂಡೈ ಸ್ಯಾಂಟ್ರೊ ಸಿಎನ್‌ಜಿ, ಮುಂಬರುವ ಟಾಟಾ ಟಿಯಾಗೊ ಸಿಎನ್‌ಜಿಯೊಂದಿಗೆ ಸ್ಪರ್ಧಿಸಲಿದ್ದು, ನ್ಯೂ ಜನರೇಷನ್ ಮಾದರಿಯು ಈ ಹಿಂದೆಂದಿಗಿಂತಲೂ ಹೆಚ್ಚು ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಯಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಹೊಸ ಕಾರು ಈ ಬಾರಿ ವ್ಯಾಗನ್ಆರ್, ಸ್ವಿಫ್ಟ್ ಮತ್ತು ಬಲೆನೊ ಮಾದರಿಗಳ ಉತ್ಪಾದನೆಗಾಗಿ ಬಳಕೆ ಮಾಡಲಾಗುತ್ತಿರುವ ಹಾರ್ಟ್ಟೆಕ್ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ನಿಂದಾಗಿ ಸೆಲೆರಿಯೊ ಕಾರು ಈ ಹಿಂದಿನ ಮಾದರಿಗಿಂತಲೂ ತುಸು ಹೆಚ್ಚುವರಿ ಸ್ಥಳಾವಕಾಶ ಹೊಂದಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಹೊಸ ಕಾರು 3,695 ಎಂಎಂ ಉದ್ದ, 1,655 ಎಂಎಂ ಅಗಲ, 1,555 ಎಂಎಂ ಎತ್ತರ ಮತ್ತು 2,435 ಎಂಎಂ ವ್ಹೀಲ್ ಬೆಸ್ ಹೊಂದಿದ್ದು, ಹಳೆಯ ಮಾದರಿಗಿಂತ ಹೊಸ ಕಾರು 55 ಎಂಎಂ ಅಗಲ ಮತ್ತು 10 ಎಂಎಂ ವ್ಹೀಲ್ ಬೆಸ್ ಮತ್ತು 5 ಎಂಎಂ ಹೆಚ್ಚುವರಿ ಎತ್ತರದೊಂದಿಗೆ 170 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಹೊಸ ಕಾರು ಒಟ್ಟು ಏಳು ವೆರಿಯೆಂಟ್‌‌ಗಳೊಂದಿಗೆ ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಗ್ಲಿಸ್ಟೆನಿಂಗ್ ಗ್ರೇ, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ ಮತ್ತು ಕೆಫೀನ್ ಬ್ರೌನ್ ಎಂಬ ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದ್ದು, ಆಕರ್ಷಕವಾದ ಗ್ರಿಲ್, ರಿಫ್ರೆಶ್‌ ಫ್ರಂಟ್ ಫಾಸಿಯಾದೊಂದಿಗೆ ಪರಿಷ್ಕೃತ ಬಂಪರ್, ವೃತ್ತಾಕಾರವಾದ ಹೆಡ್‌ಲ್ಯಾಂಪ್‌ಗಳು, ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕ ಹೊಂದುವ ಸಿಗ್ನೇಚರ್ ಲೋಗೋ ಪಡೆದುಕೊಂಡಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಹೊಸ ಸೆಲೆರಿಯೊ ಕಾರಿನ ಲೋ ಟ್ರಿಮ್‌ಗಳು ಸಾಧಾರಣ ಅಲಾಯ್ ವ್ಹೀಲ್ ಗಳನ್ನು ಪಡೆದುಕೊಂಡಿದ್ದು, ಉನ್ನತ ರೂಪಾಂತರಗಳು ಬ್ಲ್ಯಾಕ್ ಬಣ್ಣದ 15-ಇಂಚಿನ ಅಲಾಯ್ ವ್ಹೀಲ್ ಜೋಡಣೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಒಳಗೊಂಡ ಇಂಟಿರಿಯರ್ ಒಳಗೊಂಡಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಸೆಲೆರಿಯೊ ಹ್ಯಾಚ್‌ಬ್ಯಾಕ್ ಮಾದರಿಗಾಗಿ ಮಾರುತಿ ಸುಜುಕಿ ಕಂಪನಿಯು ಮೊದಲ ಬಾರಿಗೆ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್ ಸಿಸ್ಟಂ ಒಳಗೊಂಡಿರುವ 7.0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದ್ದು, ಆಪಲ್ ಕಾರ್ ಪ್ಲೇ ಮತ್ತು ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ಸ್ ಸಹ ಒಳಗೊಂಡಿರುತ್ತದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ವರ್ಷನ್ ಬಿಡುಗಡೆ

ಜೊತೆಗೆ ಹೊಸ ಕಾರಿನಲ್ಲಿ ಆಲ್ ಬ್ಲ್ಯಾಕ್ ಥೀಮ್ ಹೊಂದಿರುವ ಒಳಾಂಗಣ ಸೌಲಭ್ಯದೊಂದಿಗೆ ಫ್ಲಕ್ಸ್ ಅಲ್ಯುನಿಯಂ ಆಕ್ಸೆಂಟ್ ಜೊತೆಗೆ ಸ್ಟ್ರೀರಿಂಗ್ ವ್ಹೀಲ್, ಎಸಿ ವೆಂಟ್ಸ್, ಸೆಂಟರ್ ಕನ್ಸೊಲ್, ಸ್ಟಾರ್ಟ್/ಸ್ಟಾಪ್ ಬಟನ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ರಿಯಲ್ ವ್ಯೂ ಮಿರರ್, ಕೀ ಲೆಸ್ ಎಂಟ್ರಿ ಜೊತೆಗೆ ಮ್ಯಾನುವಲ್ ಎಸಿ ಕಂಟ್ರೋಲ್ ಯನಿಟ್ ಹೊಂದಿದೆ.

Most Read Articles

Kannada
English summary
Maruti suzuki celerio s cng launches in india details
Story first published: Monday, January 17, 2022, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X