Just In
- 1 hr ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 17 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 18 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
ಉಪ ಚುನಾವಣೆ: 7 ವಿಧಾನಸಭೆ 3 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿವರು
- Finance
ಜುಲೈ 1ರಿಂದ ಏನೆಲ್ಲಾ ಬದಲಾವಣೆ?, ವೈಯಕ್ತಿಕ ಹಣಕಾಸಿಗೆ ಏಟು
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಅರೆನಾ ಕಾರು ಮಾದರಿಗಳ ಮೇ ತಿಂಗಳ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ
ಕಾರು ಮಾರಾಟದಲ್ಲಿ ಅಗ್ರಸ್ಥಾನ ಹೊಂದಿರುವ ಮಾರುತಿ ಸುಜುಕಿ ಕಂಪನಿಯು ವಿವಿಧ ಕಾರಣಗಳಿಂದ ಕಳೆದ ಕೆಲ ತಿಂಗಳಿನಿಂದ ಕಾರು ಮಾರಾಟದಲ್ಲಿ ತುಸು ಹಿನ್ನಡೆ ಅನುಭವಿಸುತ್ತಿದ್ದು, ಮಾರಾಟ ಪ್ರಮಾಣವನ್ನು ಸುಧಾರಿಸಲು ಕಂಪನಿಯು ಮೇ ತಿಂಗಳಿನಲ್ಲಿ ಪ್ರಮುಖ ಕಾರುಗಳ ಮೇಲೆ ಆಕರ್ಷಕ ಆಫರ್ ನೀಡುತ್ತಿದೆ.

2022ರ ಕಾರು ಮಾದರಿಗಳ ಮೂಲಕ ಕಾರು ಮಾರಾಟವನ್ನು ಸುಧಾರಿಸುತ್ತಿರುವ ಮಾರುತಿ ಸುಜುಕಿ ಕಂಪನಿಯು ಅರೆನಾ ಕಾರು ಮಾದರಿಗಳ ಮೇಲೆ ಹೆಚ್ಚಿನ ಆಫರ್ ನೀಡುತ್ತಿದ್ದು, ಮಾರುತಿ ಸುಜುಕಿ ಹೊಸ ಆಫರ್ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರವೆ. ಹೊಸ ಆಫರ್ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಎಕ್ಸ್ಚೆಂಜ್ ಆಫರ್ಗಳನ್ನು ನೀಡಲಾಗುತ್ತಿದೆ.

ಮಾರುತಿ ಸುಜುಕಿ ಕಂಪನಿಯು ತಮ್ಮ ಪ್ರಮುಖ ಕಾರುಗಳನ್ನು ಅರೆನಾ ಮತ್ತು ನೆಕ್ಸಾ ಶೋರೂಂಗಳನ್ನು ಮಾರಾಟ ಮಾಡುತ್ತಿದ್ದು, ಅರೆನಾ ಕಾರು ಶೋರೂಂ ಮೂಲಕ ಸಾಮಾನ್ಯ ಕಾರುಗಳನ್ನು ಮತ್ತು ನೆಕ್ಸಾ ಶೋರೂಂ ಮೂಲಕ ಪ್ರೀಮಿಯಂ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಸದ್ಯಕ್ಕೆ ಅರೆನಾ ಕಾರುಗಳ ಖರೀದಿ ಮೇಲೆ ವಿವಿಧ ಆಫರ್ಗಳು ಲಭ್ಯವಿದ್ದು, ಆಯ್ದ ಮಾದರಿಗಳ ಮೇಲೆ ಆಫರ್ ನೀಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಸಿಎನ್ಜಿ ಮಾದರಿಗಳ ಮೇಲೆ ಯಾವುದೇ ಆಫರ್ ಘೋಷಣೆ ಮಾಡಿಲ್ಲ.

ಹೊಸ ಆಫರ್ಗಳಲ್ಲಿ ಆರಂಭಿಕ ಕಾರು ಮಾದರಿಯಾದ ಆಲ್ಟೊ 800 ಮಾದರಿಯ ಮೇಲೆ ಒಟ್ಟು 21 ಸಾವಿರ ಮೌಲ್ಯದ ಆಫರ್ ನೀಡಲಾಗಿದ್ದು, ರೂ. 21 ಸಾವಿರದಲ್ಲಿ ರೂ. 8 ಸಾವಿರ ಕ್ಯಾಶ್ ಆಫರ್, ರೂ.10 ಸಾವಿರ ಎಕ್ಸ್ಚೆಂಜ್ ಆಫರ್ ಮತ್ತು ರೂ.3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದೆ.

ಆಲ್ಟೊ 800 ನಂತರ ಎಸ್-ಪ್ರೆಸ್ಸೊ ಮ್ಯಾನುವಲ್ ಮೇಲೆ ಮಾರುತಿ ಸುಜುಕಿ ಕಂಪನಿಯು ರೂ. 28 ಸಾವಿರ ಮೌಲ್ಯದ ಆಫರ್ ಘೋಷಿಸಿದ್ದು, ರೂ. 28 ಸಾವಿರದಲ್ಲಿ ರೂ. 15 ಸಾವಿರ ಕ್ಯಾಶ್ ಆಫರ್, ರೂ.10 ಸಾವಿರ ಎಕ್ಸ್ಚೆಂಜ್ ಆಫರ್ ಮತ್ತು ರೂ.3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದೆ.

ಇಕೊ ವಾಹನದ ಮೇಲೂ ಮಾರುತಿ ಸುಜುಕಿಯು ಉತ್ತಮ ಆಫರ್ ಘೋಷಣೆ ಮಾಡಿದ್ದು, ರೂ. 28 ಸಾವಿರ ಮೌಲ್ಯದ ಆಫರ್ನಲ್ಲಿ ರೂ. 10 ಸಾವಿರ ಕ್ಯಾಶ್ ಆಫರ್, ರೂ.15 ಸಾವಿರ ಎಕ್ಸ್ಚೆಂಜ್ ಆಫರ್ ಮತ್ತು ರೂ. 3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದೆ.

ಹೊಸ ಆಫರ್ನಲ್ಲಿ ನ್ಯೂ ಜನರೇಷನ್ ಸೆಲೆರಿಯೊ ಮಾದರಿಯ ಮೇಲೂ ಅತ್ಯುತ್ತಮ ಆಫರ್ಗಳು ಲಭ್ಯವಿದ್ದು, ರೂ. 33 ಸಾವಿರ ಮೌಲ್ಯದ ಆಫರ್ನಲ್ಲಿ ರೂ. 20 ಸಾವಿರ ಕ್ಯಾಶ್ ಆಫರ್, ರೂ.10 ಸಾವಿರ ಎಕ್ಸ್ಚೆಂಜ್ ಆಫರ್ ಮತ್ತು ರೂ. 3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದೆ.

ಇನ್ನು ವ್ಯಾಗನ್ಆರ್ ಮಾದರಿಯ ಮೇಲೂ ಮಾರುತಿ ಸುಜುಕಿ ಕಂಪನಿಯು ಸುಮಾರು ರೂ.38 ಸಾವಿರ ಮೌಲ್ಯದ ಆಫರ್ ನೀಡುತ್ತಿದ್ದು, ಇದು 1.0 ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಗೆ ಮಾತ್ರ ಅನ್ವಯಿಸಲಿದೆ. 1.2 ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಗಾಗಿ ಕಂಪನಿಯು ರೂ.18 ಸಾವಿರ ಮೌಲ್ಯದ ಆಫರ್ ನೀಡುತ್ತಿದ್ದು, ರೂ.18 ಸಾವಿರ ಆಫರ್ನಲ್ಲಿ ರೂ.5 ಸಾವಿರ ಕ್ಯಾಶ್ ಆಫರ್, ರೂ.10 ಸಾವಿರ ಎಕ್ಸ್ಚೆಂಜ್ ಆಫರ್ ಮತ್ತು ರೂ. 3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದೆ.

ಹೊಸ ಆಫರ್ಗಳಲ್ಲಿ ಸ್ವಿಫ್ಟ್ ಮ್ಯಾನುವಲ್ ಮಾದರಿಯ ಮೇಲೆ ರೂ. 21 ಸಾವಿರ ಮೌಲ್ಯದ ಆಫರ್ ನೀಡುತ್ತಿದ್ದು, ರೂ. 21 ಸಾವಿರ ಮೌಲ್ಯದ ಆಫರ್ನಲ್ಲಿ ರೂ. 8 ಸಾವಿರ ಕ್ಯಾಶ್ ಆಫರ್, ರೂ.10 ಸಾವಿರ ಎಕ್ಸ್ಚೆಂಜ್ ಆಫರ್ ಮತ್ತು ರೂ. 3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದೆ.

ಸ್ವಿಫ್ಟ್ ನಂತರ ಡಿಜೈರ್ ಕಾರು ಮಾದರಿಯ ಖರೀದಿಯ ಮೇಲೂ ರೂ. 23 ಸಾವಿರ ಮೌಲ್ಯ ಆಫರ್ ನೀಡಲಾಗುತ್ತಿದ್ದು, ರೂ. 23 ಸಾವಿರ ಮೌಲ್ಯದ ಆಫರ್ನಲ್ಲಿ ರೂ. 10 ಸಾವಿರ ಕ್ಯಾಶ್ ಆಫರ್, ರೂ.10 ಸಾವಿರ ಎಕ್ಸ್ಚೆಂಜ್ ಆಫರ್ ಮತ್ತು ರೂ. 3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದೆ.

ಮಾರುತಿ ಸುಜುಕಿಯು ವಿಟಾರಾ ಬ್ರೆಝಾ ಮಾದರಿಯ ಮೇಲೆ ರೂ.18 ಸಾವಿರ ಮೌಲ್ಯದ ಆಫರ್ ನೀಡುತ್ತಿದ್ದು, ರೂ. 18 ಸಾವಿರ ಮೌಲ್ಯದ ಆಫರ್ನಲ್ಲಿ ರೂ. 5 ಸಾವಿರ ಕ್ಯಾಶ್ ಆಫರ್, ರೂ.10 ಸಾವಿರ ಎಕ್ಸ್ಚೆಂಜ್ ಆಫರ್ ಮತ್ತು ರೂ. 3 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗಿದೆ.

ಮೇಲಿನ ಕಾರು ಮಾದರಿಗಳ ನಿಗದಿತ ವೆರಿಯೆಂಟ್ ಹೊರತುಪಡಿ ಮಾರುತಿ ಸುಜುಕಿ ಕಂಪನಿಯು ಇನ್ನುಳಿದ ಮಾದರಿಯ ಮೇಲೆ ಯಾವುದೇ ಆಫರ್ ನೀಡುತ್ತಿಲ್ಲ. ಹೊಸ ಆಫರ್ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಹೊಸ ಆಫರ್ಗಳು ಮಾರುತಿ ಸುಜುಕಿ ಕಾರುಗಳ ಮಾರಾಟವನ್ನು ಸುಧಾರಿಸಲಿದೆ.

ಇನ್ನು ಮಾರುತಿ ಸುಜುಕಿ ಕಂಪನಿಯು 2022ರ ಏಪ್ರಿಲ್ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದ್ದು ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಒಟ್ಟು 121,995 ಯುನಿಟ್ಗಳನ್ನು ಮಾರಾಟಗೊಳಿಸಿವೆ.

ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ 1,35,879 ಯುನಿಟ್ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಪ್ರಯಾಣಿಕ ವಾಹನ ವ್ಯಾಪಾರದಲ್ಲಿ ಶೇಕಡಾ 10.21 ರಷ್ಟು ಕುಸಿತವನ್ನು ದಾಖಲಿಸಿದೆ. ಇನ್ನು ಮಾಸಿಕ (MoM) ಆಧಾರದ ಮೇಲೆ 1.5 ಶೇಕಡಾ ಕನಿಷ್ಠ ಬೆಳವಣಿಗೆಯನ್ನು ದಾಖಲಿಸಿದ್ದು, 2022ರ ಹೊಸ ಮಾದರಿಗಳು ಉತ್ತಮ ಬೇಡಿಕೆ ತಂದುಕೊಡುತ್ತಿವೆ.