ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ವಾಹನ ಮಾರಾಟದಲ್ಲಿ ದೇಶದಲ್ಲಿ ಮತ್ತೊಮ್ಮೆ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಕೈಗೆಟುಕುವ ಬೆಲೆಗೆ ತನ್ನ ಮಾದರಿಗಳಲ್ಲಿ ನೀಡಲಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹಲವು ವೈಶಿಷ್ಟ್ಯಗಳೊಂದಿಗೆ ಜನರನ್ನು ಆಕರ್ಷಿಸುತ್ತಿದೆ.

 ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

ಕಳೆದ ಹಲವು ವರ್ಷಗಳಿಂದ ಮಾರುತಿ ಸುಜುಕಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಇದೂ ಒಂದು ಪ್ರಮುಖ ಕಾರಣವೆಂದೇ ಹೇಳಬಹುದು. ಕಳೆದ ತಿಂಗಳು, ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎರಡು ಕಾರುಗಳು ತನ್ನ ಬ್ರಾಂಡ್‌ನಿಂದ ಹೊರಹೊಮ್ಮಿರುವುದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ)ಗೆ ಹೆಮ್ಮೆಯನ್ನು ತಂದುಕೊಟ್ಟಿದೆ.

 ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

ಅವುಗಳೆಂದರೆ ವ್ಯಾಗನ್ಆರ್ ಮತ್ತು ಎರ್ಟಿಗಾ. ಮಾರುತಿ ಕಳೆದ ತಿಂಗಳ ದ್ವಿತೀಯಾರ್ಧದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಫೇಸ್‌ಲಿಫ್ಟೆಡ್ ಎರ್ಟಿಗಾವನ್ನು ಬಿಡುಗಡೆ ಮಾಡಿತ್ತು. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಬಂದಿರುವ ಈ ವಾಹನಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ ಎಂದು ಇತ್ತೀಚಿನ ಅಂಕಿ-ಅಂಶಗಳು ಹೇಳುತ್ತಿವೆ.

 ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

2022ರ ಮಾರುತಿ ಸುಜುಕಿ ಎರ್ಟಿಗಾ MPV ಕಳೆದ ತಿಂಗಳು 14,889 ಯುನಿಟ್‌ಗಳನ್ನು ಮಾರಾಟ ಮಾಡಿತು, ಏಪ್ರಿಲ್ 2021 ರಲ್ಲಿ ಮಾರಾಟವಾದ 8,644 ಯುನಿಟ್‌ಗಳಿಗೆ ಹೋಲಿಸಿದರೆ. ಎರ್ಟಿಗಾ ಇತ್ತೀಚೆಗೆ ಅತ್ಯಾಧುನಿಕ ವೈಶಿಷ್ಟ್ಯ ವ್ಯವಸ್ಥೆಗಳೊಂದಿಗೆ ಕಿಯಾ ಕಾರೆನ್ಸ್‌ನ ಆಗಮನದೊಂದಿಗೆ ಕಾಂಪ್ಯಾಕ್ಟ್ MPV ವಿಭಾಗದಲ್ಲಿ ಈ ಸಾಧನೆಯನ್ನು ಸಾಧಿಸಿದೆ ಎಂಬುದು ಗಮನಿಸಬೇಕಾದ ಸಂಗತಿ.

 ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

ಮಾರುತಿ ಸುಜುಕಿ ಎರ್ಟಿಗಾ 72% ವಾರ್ಷಿಕ ಮಾರಾಟ ಬೆಳವಣಿಗೆಯನ್ನು ಸಾಧಿಸಿದೆ. ಪರಿಷ್ಕೃತ ಮಾರುತಿ ಸುಜುಕಿ ಎರ್ಟಿಗಾ ದೇಶದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗುವ ಪ್ರಯಾಣಿಕ ಕಾರು ಎನಿಸಿಕೊಂಡಿದೆ. ಇದು ಟೊಯೊಟಾ ಇನ್ನೋವಾ ಕ್ರಿಸ್ಟಗಿಂತ ಸ್ಥಳೀಯವಾಗಿ ಹೆಚ್ಚು ಮಾರಾಟವಾಗುವ MPV ಆಗಿ ಗುರ್ತಿಸಿಕೊಂಡಿದೆ.

 ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

ಹೊಸ ಎರ್ಟಿಗಾ ಟಾಟಾ ನೆಕ್ಸಾನ್‌ಗಿಂತ ಮೊದಲ ಹತ್ತು ಕಾರು ಮಾರಾಟ ಪಟ್ಟಿಯಲ್ಲಿ ಎರಡನೇ ಅತಿ ಹೆಚ್ಚು ವಾರ್ಷಿಕ ಮಾರಾಟವನ್ನು ಹೊಂದಿದೆ. 2022ರ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್‌ನ ಮೂಲ ಮಾದರಿಯಾದ LXi ರೂಪಾಂತರವು ರೂ. 8.35 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿದೆ. MPVಯ ಟಾಪ್ ಎಂಡ್ ರೂಪಾಂತರವಾದ ZXi + ಆವೃತ್ತಿಯು 2.79 ಲಕ್ಷ ರೂ. ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.

 ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

ವಾಹನವು VXi, ZXi ಮತ್ತು ಟೂರ್ M ರೂಪಾಂತರಗಳಲ್ಲಿ ಲಭ್ಯವಿದೆ. ಎರ್ಟಿಗಾ ಮಾರುತಿ ಸುಜುಕಿ ಸಬ್‌ಸ್ಕ್ರಿಪ್ಶನ್ ಪ್ಲಾನ್ ಮೂಲಕ ಮತ್ತು ಎಲ್ಲವನ್ನೂ ಒಳಗೊಂಡಿರುವ ಮಾಸಿಕ ಬಾಡಿಗೆಯಲ್ಲಿ ಲಭ್ಯವಿದೆ ಎಂಬುದು ಗಮನಿಸಬೇಕಾದ ಸಂಗತಿ. ಕಂಪನಿಯು CNG ರೂಪಾಂತರಗಳಿಗೆ ತಿಂಗಳಿಗೆ 22,400 ರೂ. ಚಂದಾದಾರಿಕೆ ಶುಲ್ಕವನ್ನು ವಿಧಿಸುತ್ತದೆ.

 ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

ಎರಡನೇ ತಲೆಮಾರಿನ ಎರ್ಟಿಗಾ 2022ರ ಅಂತ್ಯದ ವೇಳೆಗೆ ದೇಶೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಲಿದೆ. ಇತ್ತೀಚಿನ ಫೇಸ್‌ಲಿಫ್ಟ್ ಬದಲಾವಣೆಯೊಂದಿಗೆ ಪ್ರಸ್ತುತ ಪೀಳಿಗೆಯನ್ನು ವಿಸ್ತರಿಸಲು ಕಂಪನಿಯು ಉದ್ದೇಶಿಸಿದೆ. ಇದು ಕೆಲವು ಸೂಕ್ಷ್ಮ ಮಾರ್ಪಾಡುಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಆದರೆ ಮೂಂದಿನ ಮಾದರಿಯಲ್ಲಿ ಮಾರುತಿ ಸುಜುಕಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಒಳಾಂಗಣಕ್ಕೆ ಪರಿಚಯಿಸುತ್ತಿದೆ.

 ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

ಎಂಜಿನ್ ಆಯ್ಕೆಯಲ್ಲಿ ವಾಹನವು ನವೀಕರಣಗಳನ್ನು ಸಹ ಪಡೆಯುತ್ತದೆ. ಎರ್ಟಿಗಾ ಫೇಸ್‌ಲಿಫ್ಟ್ MPV ಪ್ರಗತಿಶೀಲ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಹೊಸ 1.5-ಲೀಟರ್ K15C ನಾಲ್ಕು ಸಿಲಿಂಡರ್ ಡ್ಯುಯಲ್-ಜೆಟ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 6,000 rpm ನಲ್ಲಿ ಗರಿಷ್ಠ 103 bhp ಪವರ್ ಮತ್ತು 4,400 rpm ನಲ್ಲಿ 136 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

 ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

5-ಸ್ಪೀಡ್ ಮ್ಯಾನುವಲ್ ಅಥವಾ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಹೊಸ ಸಿಕ್ಸ್‌-ಸ್ಪೀಡ್ ಟಾರ್ಕ್ ಕನ್ವರ್ಟರ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಇದನ್ನು ಆಯ್ಕೆ ಮಾಡಬಹುದು. ಮಾರುತಿ ಸುಜುಕಿಯು ಫೇಸ್‌ಲಿಫ್ಟ್ ಎರ್ಟಿಗಾದ ಪೆಟ್ರೋಲ್ ಆವೃತ್ತಿಗೆ 20.51 kmph ಮತ್ತು CNG ರೂಪಾಂತರಕ್ಕಾಗಿ 26.11 kmph ಎಂದು ಹೇಳಿಕೊಂಡಿದೆ.

 ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

ವೈಶಿಷ್ಟ್ಯಗಳಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಹೊಸ ಎರಡು-ಟೋನ್ ಅಲಾಯ್ ವೀಲ್‌ಗಳು, ಮೆಟಾಲಿಕ್ ಟೀಕ್ ವುಡ್ ಡ್ಯಾಶ್‌ಬೋರ್ಡ್ ಫಿನಿಶ್, ಒನ್-ಟಚ್ ರಿಕಾಲ್ ಲೈನ್, ಸ್ಲೈಡ್ ಮೆಕಾನಿಸಂ, ನಾಲ್ಕು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ (ESP) ಮತ್ತು ಏಳು-ಇಂಚಿನ ಸ್ಮಾರ್ಟ್‌ ಸ್ಕ್ರೀನ್ ಅನ್ನು ಒಳಗೊಂಡಿದೆ.

 ದೇಶದಲ್ಲಿ 2ನೇ ಅತಿಹೆಚ್ಚು ಮಾರಾಟಗೊಂಡ ವಾಹನವಾಗಿ ಹೊರಹಿಮ್ಮಿದೆ ಎರ್ಟಿಗಾ ಫೇಸ್‌ಲಿಫ್ಟ್‌

ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ವಾಯಿಸ್ ಅಸಿಸ್ಟ್ ಮತ್ತು ಸುಜುಕಿ ಕನೆಕ್ಟ್‌ನೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಹೊಂದಿದೆ. ಈ MPV ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಆಬರ್ನ್ ರೆಡ್, ಪರ್ಲ್ ಮೆಟಾಲಿಕ್ ಆಕ್ಸ್‌ಫರ್ಡ್ ಬ್ಲೂ ಮತ್ತು ಡಿಗ್ನಿಟಿ ಬ್ರೌನ್ ಎಂಬ ಆರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ.

Most Read Articles

Kannada
English summary
Maruti suzuki ertiga facelift was the second most selling passenger car in april 2022
Story first published: Friday, May 6, 2022, 17:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X