ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಈ ತಿಂಗಳ ಆರಂಭದಲ್ಲಿ ತನ್ನ ಕಾರು ಶ್ರೇಣಿಯಾದ್ಯಂತ ಜಾರಿಗೆ ಬರುವಂತೆ ಶೇಕಡಾ 1.7 ರಷ್ಟು ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿತು. ಮಾರುತಿ ಸುಜುಕಿ ಕಂಪನಿಯು ಈಗ ನವೀಕರಿಸಿದ ಬೆಲೆಗಳನ್ನು ಬಹಿರಂಗಪಡಿಸಿದ್ದಾರೆ.

ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಾರುಗಳ ಮಾದರಿಯನ್ನು ಅವಲಂಬಿಸಿ ರೂ.30,000 ವರೆಗೆ ಹೆಚ್ಚಾಗಿದೆ.ಮಾರುತಿ ಸುಜುಕಿ ವ್ಯಾಗನ್ ಆರ್ ರೂಪಾಂತರದ ಆಯ್ಕೆಯ ಆಧಾರದ ಮೇಲೆ ರೂ.30,000 ವರೆಗಿನ ಅತ್ಯಂತ ಮಹತ್ವದ ಬೆಲೆ ಏರಿಕೆಯನ್ನು ಪಡೆಯುತ್ತದೆ. ಎರ್ಟಿಗಾ ಮತ್ತು ಇಕೋ ಈಗ ಕ್ರಮವಾಗಿ ರೂ.21,000 ಮತ್ತು ರೂ.20,170 ವರೆಗೆ ಬೆಲೆ ಏರಿಕೆ ಪಡೆದುಕೊಂದಿದೆ. ಇನ್ನು ಸೆಲೆರಿಯೊದ ಗ್ರಾಹಕರು ಹಿಂದಿನ ವರ್ಷಕ್ಕಿಂತ ರೂ.16,000 ಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ, ಆದರೂ ಇದು ಮೂಲ ರೂಪಾಂತರಕ್ಕೆ ಮಾತ್ರ ಅನ್ವಯಿಸುತ್ತದೆ.

ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸ್ವಿಫ್ಟ್ ಕಳೆದ ವರ್ಷದ ಬೆಲೆಗಳಿಗೆ ಹೋಲಿಸಿದರೆ ಈಗ ರೂ.15,000 ವರೆಗೆ ಹೆಚ್ಚಾಗಿದೆ. ಇನ್ನು ಮಾರುತಿ ವಿಟಾರಾ ಬ್ರೆಝಾದ ರೂಪಾಂತರದ ಆಯ್ಕೆಯ ಆಧಾರದ ಮೇಲೆ ರೂ.14,500 ವರೆಗೆ ಏರಿಕೆ ಕಂಡಿದೆ. ಅದೇ ರೀತಿ, ಆಲ್ಟೊ ಮತ್ತು ಎಸ್-ಪ್ರೆಸ್ಸೊ ಈಗ ರೂ.12,500 ವರೆಗೆ ಬೆಲೆ ಏರಿಕೆ ಪಡೆದುಕೊಂಡಿದೆ. ಇನ್ನು ಮಾರುತಿ ಸ್ವಿಪ್ಟ್ ಡಿಜೈರ್ ಬೆಲೆ ರೂ.10,000 ರೂ.ವರೆಗೆ ಏರಿಕೆಯಾಗಿದೆ.

ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ನೆಕ್ಸಾ ಸರಣಿಯಲ್ಲಿ, ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಬೆಲೆಯು ರೂ.21,000 ವರೆಗೆ ಏರಿಕೆಯಾಗಿದೆ. ಇನ್ನು ಬಲೆನೊ ಕೂಡ ಈಗ ರೂಪಾಂತರದ ಆಯ್ಕೆಯ ಆಧಾರದ ಮೇಲೆ ರೂ.21,000 ವರೆಗೆ ದುಬಾರಿಯಾಗಿದೆ. ಮಾರುತಿ XL6 ಮತ್ತು ಇಗ್ನಿಸ್ ಕಾರುಗಳ ಎಲ್ಲಾ ರೂಪಾಂತರಗಳು ಈಗ ಕಳೆದ ವರ್ಷದ ಬೆಲೆಗಳಿಗೆ ಹೋಲಿಸಿದರೆ ಕ್ರಮವಾಗಿ ರೂ.16,000 ಮತ್ತು ರೂ.15,000 ವರೆಗೆ ಹೆಚ್ಚಾಗಿದೆ.

ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿ ಸಿಯಾಜ್ ಕಾರಿನ ಬೆಲೆಯು ರೂ.15,000 ರೂ.ವರೆಗೆ ಬೆಲೆ ಏರಿಕೆಯನ್ನು ಪಾವತಿಸಬೇಕಾಗುತ್ತದೆ. ಇನ್ನು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳಿಂದಾಗಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಈ ಹಣಕಾಸು ವರ್ಷದ ನಾಲ್ಕನೇ ಬೆಲೆ ಹೆಚ್ಚಳವನ್ನು ಘೋಷಿಸಿದೆ ಮತ್ತು ಈ ಬಾರಿ ಸರಾಸರಿ ತೂಕದ ಆಧಾರದ ಮೇಲೆ ಬೆಲೆಗಳು ಶೇಕಡಾ 1.7 ರಷ್ಟು ಏರಿಕೆಯಾಗಿದೆ

ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ಈ ಹಿಂದೆ, ದೇಶದ ಅತಿದೊಡ್ಡ ಕಾರು ತಯಾರಕರು ಏಪ್ರಿಲ್‌ನಲ್ಲಿ 1.6 ಶೇಕಡಾ ಮತ್ತು ಸೆಪ್ಟೆಂಬರ್ 2021 ರಲ್ಲಿ ಶೇಕಡಾ 1.9 ರಷ್ಟು ಬೆಲೆಗಳನ್ನು ಹೆಚ್ಚಿಸಿದ್ದಾರೆ. ಈ ಹೊಸ ಬೆಲೆ ಏರಿಕೆಯು ಕಾರುಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ಭಾರತೀಯ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಎಲ್ಲಾ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಬಹು ಜನಪ್ರಿಯತೆಯನ್ನು ಗಳಿಸುವಲ್ಲಿ ಯಶ್ವಸಿಯಾಗಿದೆ.

ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ಇದರಲ್ಲಿ ಬಲೆನೊ ಹ್ಯಾಚ್‌ಬ್ಯಾಕ್‌ ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಕಂಪನಿಯು 2015ರಲ್ಲಿ ಮೊದಲ ಬಾರಿಗೆ ಬಲೆನೊ ಕಾರನ್ನು ಬಿಡುಗಡೆಗೊಳಿಸಿತ್ತು. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. ಇದೀಗ ಮಾರುತಿ ಸುಜುಕಿ ಕಂಪನಿಯು ಈ ಬಲೆನೊ ಕಾರನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ 2022ರ ಮಾರುತಿ ಬಲೆನೊ ಫೇಸ್‌ಲಿಫ್ಟ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.

ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ನವೀಕರಿಸಿದ ಬಲೆನೊ ಮಾದರಿಯು ಪರಿಷ್ಕೃತ ಹೊರಭಾಗದೊಂದಿಗೆ ಬರುತ್ತದೆ. ಆದರೆ ಕ್ಯಾಬಿನ್ ಒಳಗೆ ದೊಡ್ಡ ಬದಲಾವಣೆಗಳನ್ನು ಮಾಡಲಾಗುವುದು. ಹೊಸ ಬಲೆನೊದ ಸ್ಪಷ್ಟ ಸ್ಪೈ ಚಿತ್ರಗಳು ಈಗಾಗಲೇ ಅಂತರ್ಜಾಲಗಳಲ್ಲಿ ಕಾಣಿಸಿಕೊಂಡಿದೆ. 2022ರ ಮಾರುತಿ ಬಲೆನೊ ಸಂಪೂರ್ಣವಾಗಿ ಪರಿಷ್ಕೃತ ಮುಂಭಾಗ ಮತ್ತು ಹಿಂಭಾಗದ ವಿನ್ಯಾಸದೊಂದಿಗೆ ಬರಲಿದೆ ಎಂದು ಸ್ಪೈ ಚಿತ್ರಗಳು ಬಹಿರಂಗಪಡಿಸುತ್ತವೆ. ಇದು ದೊಡ್ಡದಾದ ಗ್ರಿಲ್ ಮತ್ತು ಹೊಸ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳಿಗಾಗಿ ಹೊಸ ಎಲ್-ಆಕಾರದ ಸುತ್ತುವ ವಿನ್ಯಾಸದೊಂದಿಗೆ ಬರುತ್ತದೆ.

ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ಇದರೊಂದಿಗೆ ವಿಟಾರಾ ಬ್ರೆಝಾ ಎಸ್‍ಯುವಿಯನ್ನು ಕೂಡ ನವೀಕರಿಸಲಾಗುತ್ತಿದೆ. ನ್ಯೂ ಜನರೇಷನ್ ಮಾರುತಿ ಬ್ರೆಝಾ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಮಾರುತಿ ಸುಜುಕಿಯು ಈ ಎಸ್‍ಯುವಿಯ ಹೆಸರಿನಿಂದ 'ವಿಟಾರಾ' ಪದವನ್ನು ಕೈಬಿಡುತ್ತಾರೆ. ಏಕೆಂದರೆ, ಕಾರು ತಯಾರಕ ತನ್ನ ಕ್ರೆಟಾ ಫೈಟರ್‌ಗೆ ಈ ಹೆಸರನ್ನು ಬಳಸಬಹುದು, ಇದು ಈಗಾಗಲೇ ವಿದೇಶದಲ್ಲಿ ವಿಟಾರಾ ಹೆಸರಿನ ದೊಡ್ಡ ಎಸ್‍ಯುವಿಯನ್ನು ಪರಿಚತಿಸುತ್ತದೆ. ಇನ್ನು ಹೊಸ ವರದಿಗಳ ಪ್ರಕಾರ, ಈ ನ್ಯೂ ಜನರೇಷನ್ ಮಾರುತಿ ಬ್ರೆಝಾ ಈ ವರ್ಷದ ಮಧ್ಯಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ.

ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ಈ ನ್ಯೂ ಜನರೇಷನ್ ಮಾರುತಿ ಬ್ರೆಝಾ ಎಸ್‍ಯುವಿಯು 1.5-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುವ ಸ್ಟಾರ್ಟ್/ಸ್ಟಾಪ್ SHVS ತಂತ್ರಜ್ಞಾನದ ಜೊತೆಗೆ ಒಳ ಮತ್ತು ಹೊರಭಾಗದಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ ಬರುತ್ತದೆ.

ರೂ.30 ಸಾವಿರದವರೆಗೂ ಕಾರುಗಳ ಬೆಲೆ ಏರಿಕೆ ಘೋಷಿಸಿದ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಹಲವು ಜನಪ್ರಿಯ ಮಾದರಿಗಳು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ, ಇದರ ಮೂಲಕ ಕಾರು ಮಾರಾಟದ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ,

Most Read Articles

Kannada
English summary
Maruti suzuki increased the prices of all models up to rs 30000 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X