Just In
- 3 min ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 1 hr ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 17 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
ಶೀಘ್ರವೇ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ: ಪಿಯೂಷ್ ಗೋಯಲ್
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಹೊಸ ಕಾರು ಉತ್ಪಾದನಾ ಘಟಕ ನಿರ್ಮಾಣ: ರೂ.11 ಸಾವಿರ ಕೋಟಿ ಹೂಡಿಕೆಗೆ ಸಿದ್ದವಾದ ಮಾರುತಿ ಸುಜುಕಿ!
ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿಯು ದೇಶದ ವಿವಿಧಡೆ ಒಟ್ಟು ಮೂರು ವಾಹನ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಉತ್ಪಾದನಾ ಘಟಕಗಳ ವಿಸ್ತರಣೆಗಾಗಿ ಕೆಲವು ಮಹತ್ವದ ಯೋಜನೆ ರೂಪಿಸಿದೆ.

ಮಾರುತಿ ಸುಜುಕಿ ಕಂಪನಿಯು ಸದ್ಯ ಹರಿಯಾಣದ ಮನೆಸಾರ್ ಮತ್ತು ಗುರುಗ್ರಾಮ್, ಗುಜರಾತಿನ ಹನ್ಸಲ್‌ಪುರ್ ಘಟಕ ಸೇರಿ ಒಟ್ಟು ಮೂರು ವಾಹನ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಕಾರ್ಪೊರೇಷನ್ ವ್ಯಾಪ್ತಿಯಲ್ಲಿರುವ ಗುರುಗ್ರಾಮ್ ಕಾರು ಉತ್ಪಾದನಾ ಘಟಕದಿಂದ ಹೊರಹೋಗಲು ನಿರ್ಧರಿಸಿದೆ. ನಗರೀಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಳೆಯ ಉತ್ಪಾದನಾ ಘಟಕ ವಿಸ್ತರಣೆಗೆ ಅವಕಾಶವಿಲ್ಲವಾಗಿರುವುದರಿಂದ ಹೊಸ ಘಟಕದ ನಿರ್ಮಾಣಕ್ಕಾಗಿ ಸ್ಥಳ ಬದಲಾವಣೆಗೆ ನಿರ್ಧರಿಸಿದೆ.

ಸದ್ಯ ಗುರುಗ್ರಾಮ್ ಕಾರು ಉತ್ಪಾದನಾ ಘಟಕವು 300 ಎಕರೆಯಲ್ಲಿ ವಿಸ್ತಿರ್ಣದಲ್ಲಿ ಹರಡಿಕೊಂಡಿದ್ದು, ಈ ಘಟಕದಲ್ಲಿ ವಾರ್ಷಿಕವಾಗಿ 7 ಲಕ್ಷ ಕಾರುಗಳನ್ನು ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಆದರೆ ಪ್ಯಾಸೆಂಜರ್ ವಾಹನಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ಘಟಕದ ವಿಸ್ತರಣೆಯು ಮಾರುತಿ ಸುಜುಕಿ ಕಂಪನಿಗೆ ಅನಿವಾರ್ಯವಾಗಿದೆ.

ಮಾರುತಿ ಸುಜುಕಿಯು ಗುರುಗ್ರಾಮ್ ಘಟಕವು ಆರಂಭದ ದಿನಗಳಲ್ಲಿ ನಗರ ವ್ಯಾಪ್ತಿಯಿಂದ ಸಾಕಷ್ಟು ದೂರದಲ್ಲಿತ್ತು. ಆದರೆ ಇದೀಗ ಕಾರು ಘಟಕದ ಸುತ್ತಲೂ ಅನೇಕ ಕಾರ್ಖಾನೆಗಳು ನಿರ್ಮಾಣಗೊಂಡಿರುವುದಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಗೃಹ ನಿರ್ಮಾಣ ಯೋಜನೆಗಳು ಚಾಲ್ತಿಯಲ್ಲಿವೆ.

ಈ ಹಿನ್ನಲೆಯಲ್ಲಿ ಕಾರು ಉತ್ಪಾದನಾ ಘಟಕದ ವಿಸ್ತರಣೆ ಸಾಧ್ಯವಿಲ್ಲದಿರುವುದರಿಂದ 40 ವರ್ಷಗಳಷ್ಟು ಹಳೆಯದಾದ ಉತ್ಪಾದನಾ ಘಟಕವನ್ನು ತೊರೆಯಲು ಮುಂದಾಗಿರುವ ಮಾರುತಿ ಸುಜುಕಿಗೆ ಹರಿಯಾಣ ಸರ್ಕಾರವು ಅಗತ್ಯವಿರುವ ಭೂಮಿ ನೀಡಲು ಸಿದ್ದವಾಗಿದೆ.

ಹರಿಯಾಣ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (HSIIDC) ಸಂಸ್ಥೆಯು ಸೋನಿಪತ್ ಜಿಲ್ಲೆಯ ಐಎಂಟಿ ಖಾರ್ಖೋಡಾದಲ್ಲಿ ಬರೋಬ್ಬರಿ 800 ಎಕರೆ ಜಮೀನು ಮಂಜೂರು ಮಾಡಿದ್ದು, ಹೊಸ ಘಟಕವನ್ನು ಹಂತ-ಹಂತವಾಗಿ ಅಭಿವೃದ್ದಿಗೊಳಿಸಲಿರುವ ಕಂಪನಿಯು 2025ರ ವೇಳೆಗೆ ಅಧಿಕೃತವಾಗಿ ಉತ್ಪಾದನಾ ಪ್ರಕ್ರಿಯೆ ಕೈಗೊಳ್ಳಲಿದೆ.

ಆರಂಭಿಕವಾಗಿ 2.50 ಲಕ್ಷ ವಾಹನಗಳನ್ನು ವಾರ್ಷಿಕವಾಗಿ ಉತ್ಪಾದನೆ ಕೈಗೊಳ್ಳಲಿರುವ ಮಾರುತಿ ಸುಜುಕಿ ಕಂಪನಿಯು ಭೂ ಸ್ವಾಧೀನ ಪ್ರಕ್ರಿಯೆಗೆ ಮತ್ತು ಮೊದಲ ಹಂತದ ಕಾರು ಘಟಕದ ನಿರ್ಮಾಣಕ್ಕಾಗಿ ಬರೋಬ್ಬರಿ ರೂ.11 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ.

ಕಂಪನಿಯ ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಮುಖ ಕಾರು ಶ್ರೇಣಿಗಳ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಹೊಸ ಉತ್ಪಾದನಾ ಸೌಲಭ್ಯವನ್ನು ಬಳಸಿಕೊಳ್ಳಲಿದ್ದು, ಹೊಸ ಉತ್ಪಾದನಾ ಘಟಕದಲ್ಲಿ ಪೂರ್ಣ ಪ್ರಮಾಣದ ಕಾರ್ಯಾಚರಣೆ ತನಕ ಗುರುಗ್ರಾಮ್ ಕಾರು ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಪ್ರಕ್ರಿಯೆಯನ್ನು ಮುಂದುವರಿಸಲಿದೆ.

ಹೊಸ ಕಾರು ಉತ್ಪಾದನಾ ಘಟಕದೊಂದಿಗೆ ಮಾರುತಿ ಸುಜುಕಿಯು ಕಾರು ಉತ್ಪಾದನೆಯನ್ನು ವಾರ್ಷಿಕವಾಗಿ 7 ಲಕ್ಷದಿಂದ 10 ಲಕ್ಷಕ್ಕೆ ಏರಿಕೆ ಮಾಡುವ ಯೋಜನೆಯಲ್ಲಿದ್ದು, ಹೊಸ ಘಟಕವನ್ನು ಸಂಪೂರ್ಣವಾಗಿ ಅತ್ಯಾಧುನಿಕ ಕಾರು ಉತ್ಪಾದನಾ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಿದೆ.

ಜೊತೆಗೆ ಹೊಸ ಕಾರು ಉತ್ಪಾದನಾ ಘಟಕದಲ್ಲಿ ಭವಿಷ್ಯದ ಇವಿ ಕಾರು ಉತ್ಪಾದನಾ ಸೌಲಭ್ಯಕ್ಕಾಗಿ ಸಿದ್ದವಾಗುತ್ತಿದ್ದು, ಹೊಸ ಕಾರು ಉತ್ಪಾದನಾ ಘಟಕದಲ್ಲಿನ ವಿಸ್ತಾರವಾದ ಭೂಮಿಯಲ್ಲಿ ಬ್ಯಾಟರಿ ನಿರ್ಮಾಣ ಘಟಕವನ್ನು ಸಹ ನಿರ್ಮಾಣ ಮಾಡಬಹುದಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಪ್ರಮುಖ ಕಾರು ಮಾದರಿಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಭಾರತದಲ್ಲಿ ಮಾರಾಟಗೊಳ್ಳುವ ಪ್ರಮುಖ ಹತ್ತು ಕಾರುಗಳಲ್ಲಿ ಬರೋಬ್ಬರಿ ಆರು ಕಾರು ಮಾದರಿಗಳು ಮಾರುತಿ ಸುಜುಕಿ ನಿರ್ಮಾಣ ಕಾರು ಮಾದರಿಗಳಾಗಿವೆ.

ಮಾರುಕಟ್ಟೆ ಬೇಡಿಕೆ ಮತ್ತು ಸರ್ಕಾರದ ನಿಯಮಾನುಸಾರವಾಗಿ ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಕಂಪನಿಯು ಕೇವಲ ಪೆಟ್ರೋಲ್, ಸಿಎನ್‌ಜಿ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲಿ ಹೊಸ ನಿರ್ಮಾಣ ಘಟಕದೊಂದಿಗೆ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಮಾಲಿನ್ಯ ತಗ್ಗಿಸುವ ಉದ್ದೇಶದಿಂದಾಗಿ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟವನ್ನು ತಗ್ಗಿಸಲಾಗುತ್ತಿದ್ದು, ಪರಿಸರಕ್ಕೆ ಪೂರಕರವಾದ ಸಿಎನ್‌ಜಿ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚು ಅಭಿವೃದ್ದಿಗೊಳಿಸಲಾಗುತ್ತಿದೆ.

2030ರ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ಪ್ರಕಟಿಸುತ್ತಿದ್ದು, ಪರಿಸರ ಸ್ನೇಹಿ ಹೈಬ್ರಿಡ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಳಕೆ ಮಾಡುವಂತೆ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ.