Just In
- 35 min ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 13 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 14 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 15 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- News
ಏಡಿ ಕಣ್ಣಿಂದ ಕ್ಯಾಮೆರಾ- ಸೆಲ್ಫ್ ಡ್ರೈವಿಂಗ್ ಕಾರಿಗೆ ಭರ್ಜರಿ ಪುಷ್ಟಿ
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
- Education
Distance Education Courses And Colleges : ದೂರ ಶಿಕ್ಷಣ ಮೂಲಕ ಅಧ್ಯಯನಕ್ಕೆ ಉತ್ತಮ ಕೋರ್ಸ್ ಮತ್ತು ಕಾಲೇಜುಗಳ ವಿವರ
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು
ಭಾರತದ ಅತಿ ದೊಡ್ಡ ಮತ್ತು ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸುವಲ್ಲಿ ಯಶ್ವಸಿಯಾಗಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದೆ. ಇಂಡೋ-ಜಪಾನೀಸ್ ವಾಹನ ತಯಾರಕರು ಕಳೆದ ತಿಂಗಳು ಮಾರಾಟದ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದರು, ಅದೂ ಸಹ ಎಲ್ಲಾ ಪ್ರತಿಸ್ಪರ್ಧಿ ಕಾರು ತಯಾರಕರಿಗಿಂತ ಆರಾಮದಾಯಕ ಮುನ್ನಡೆಯೊಂದಿಗೆ. ಮೇ 2022 ರಲ್ಲಿ, ಎಂಟು ವಿಭಿನ್ನ ಮಾರುತಿ ಸುಜುಕಿ ಮಾದರಿಗಳು 10,000-ಯೂನಿಟ್ ಮಾಸಿಕ ಮಾರಾಟದ ಅಂಕಿಅಂಶವನ್ನು ದಾಟಲು ಯಶಸ್ವಿಯಾಗಿದೆ.

ಕಳೆದ ತಿಂಗಳು ಮಾರುತಿ ಸುಜುಕಿಯ ವ್ಯಾಗನ್-ಆರ್ (16,814 ಯುನಿಟ್ಗಳು), ಸ್ವಿಫ್ಟ್ (14,133 ಯುನಿಟ್ಗಳು), ಬಲೆನೊ (13,970 ಯುನಿಟ್ಗಳು), ಆಲ್ಟೋ (12,933 ಯುನಿಟ್ಗಳು), ಎರ್ಟಿಗಾ (12,226 ಯುನಿಟ್ಗಳು), ಡಿಜೈರ್ (11,603 ಯುನಿಟ್ಗಳು), ಇಕೋ (10,482 ಯುನಿಟ್ಗಳು), ಮತ್ತು ವಿಟಾರಾ ಬ್ರೆಝಾ (10,312 ಯುನಿಟ್ಗಳು) ಮಾರಾಟವಾಗಿವೆ.

2022ರ ಮೇ ತಿಂಗಳಿನಲ್ಲಿ ಭಾರತದಲ್ಲಿ ಎರಡನೇ ಮತ್ತು ಮೂರನೇ ಅತಿದೊಡ್ಡ ಕಾರು ಬ್ರಾಂಡ್ಗಳು - ಟಾಟಾ ಮತ್ತು ಹ್ಯುಂಡೈ - 10,000-ಯುನಿಟ್ ಮಾರಾಟದ ಗಡಿಯನ್ನು ದಾಟಿದ ಕೆಲವೇ ಮಾದರಿಗಳನ್ನು ಹೊಂದಿದ್ದೆ ಎಂಬುದು ಗಮನಿಸಬೇಕಾದ ಸಂಗತಿ. ಅವುಗಳೆಂದರೆ ಟಾಟಾ ನೆಕ್ಸಾನ್ (14,614 ಯುನಿಟ್ಗಳು), ಹ್ಯುಂಡೈ ಕ್ರೆಟಾ (10,973 ಯುನಿಟ್ಗಳು), ಮತ್ತು ಟಾಟಾ ಪಂಚ್ (10,241 ಯುನಿಟ್ಗಳು) ಆಗಿವೆ.

ಇತ್ತೀಚಿನ ದಿನಗಳಲ್ಲಿ, ಎಸ್ಯುವಿಗಳ ಬೇಡಿಕೆಯು ಸ್ಥಿರವಾಗಿ ಹೆಚ್ಚುತ್ತಿದೆ ಮತ್ತು ಹೆಚ್ಚಿನ ಖರೀದಿದಾರರನ್ನು ಆಕರ್ಷಿಸಲು ತನ್ನ ಎಸ್ಯುವಿ ಪೋರ್ಟ್ಫೋಲಿಯೊವನ್ನು ನವೀಕರಿಸುವ ಮೂಲಕ ಮಾರುತಿ ಸುಜುಕಿ ಅದನ್ನು ಲಾಭ ಮಾಡಿಕೊಳ್ಳಲು ಯೋಜಿಸುತ್ತಿದೆ.

ಯುಟಿಲಿಟಿ ವೆಹಿಕಲ್ಸ್ (ಎಸ್ಯುವಿಗಳು ಮತ್ತು ಎಂಪಿವಿಗಳು) ವಿರುದ್ಧ ಸಣ್ಣ ಕಾರುಗಳಿಗೆ (ಹ್ಯಾಚ್ಬ್ಯಾಕ್ ಮತ್ತು ಸೆಡಾನ್ಗಳು) ಬೇಡಿಕೆ ಕುಗ್ಗುತ್ತಿದೆ. ಇದರಿಂದ ಮಾರುತಿ ಸುಜುಕಿ ಕಂಪನಿಯು ಎಸ್ಯುವಿಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದೆ.

ಇನ್ನು ಮಾರುತಿ ಸುಜುಕಿ ಕಂಪನಿಯು ಹಳೆಯದಾದ ಎಸ್-ಕ್ರಾಸ್ ಅನ್ನು ಹೊಚ್ಚಹೊಸ ಮಾದರಿಯಿಂದ ಬದಲಾಯಿಸಲು ನಿರ್ಧರಿಸಲಾಗಿದೆ. ಕೆಲವು ವರದಿಗಳ ಪ್ರಕಾರ, ಈ ಮುಂಬರುವ ಸಿ-ಸೆಗ್ಮೆಂಟ್ ಎಸ್ಯುವಿಯನ್ನು ಮುಂದಿನ ತಿಂಗಳುಗಳಲ್ಲಿ ಅನಾವರಣಗೊಳಿಸಬಹುದು, ನಂತರದ ತಿಂಗಳುಗಳಲ್ಲಿ ಬಿಡುಗಡೆ ಮಾಡಬಹುದು.

ತಯಾರಕರು ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಕಾಂಪ್ಯಾಕ್ಟ್ ಎಸ್ಯುವಿ ಅನ್ನು ಪರಿಚಯಿಸಲು ಯೋಜಿಸುತ್ತಿದ್ದಾರೆ, ಇದು ಬಲೆನೊ ಹ್ಯಾಚ್ಬ್ಯಾಕ್ ಅನ್ನು ಆಧರಿಸಿದೆ. ಹೊಸ ಎಲೆಕ್ಟ್ರಿಕ್ ಎಸ್ಯುವಿ ಜೊತೆ ಹೊಸ ಮೂರು-ಸಾಲಿನ ಎಸ್ಯುವಿ ಕೂಡ ಪೈಪ್ಲೈನ್ನಲ್ಲಿದೆ ಎಂದು ವರದಿಯಾಗಿದೆ.

ಈ ಮುಂಬರುವ ಕೆಲವು ಎಸ್ಯುವಿಗಳನ್ನು ಟೊಯೋಟಾ ಸಹಭಾಗಿತ್ವದಲ್ಲಿ ತಯಾರಿಸಲಾಗುತ್ತಿದೆ, ಇದು ತನ್ನದೇ ಬ್ರಾಂಡ್ನಲ್ಲಿ ಈ ಮಾದರಿಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಇನ್ನು ದೇಶದ ಅತಿದೊಡ್ಡ ಕಾರು ತಯಾರಕರು ತನ್ನ ಬ್ರೆಝಾವನ್ನು ನವೀಕರಿಸಿದೆ. ಇತ್ತೀಚೆಗೆ ಈ ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್ಯುವಿಯ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಹೊಸ ಮಾರುತಿ ಬ್ರೆಝಾ ಎಸ್ಯುವಿಯು ಜೂನ್ 30 ರಂದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಮಾರುತಿ ಸುಜುಕಿ ಕಂಪನಿಯು ಹೊಸ ಕಾಂಪ್ಯಾಕ್ಟ್ ಮಾರುತಿ ಬ್ರೆಝಾ ಎಸ್ಯುವಿಯ ಹೊಸ ಟೀಸರ್ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಹೊಸ ಟೀಸರ್ 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾವನ್ನು ತೋರಿಸುತ್ತದೆ, 360-ಡಿಗ್ರಿ ಪಾರ್ಕಿಂಗ್ ಕ್ಯಾಮರಾ ಚಾಲಕನಿಗೆ ಕಾಂಪ್ಯಾಕ್ಟ್ ಎಸ್ಯುವಿಯನ್ನು ಬಿಗಿಯಾದ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕ್ ಮಾಡಲು ಸಹಾಯ ಮಾಡುತ್ತದೆ. ಇದಕ್ಕೂ ಮೊದಲು, ತಯಾರಕರು ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ಎಲೆಕ್ಟ್ರಿಕ್ ಸನ್ರೂಫ್ನ ಟೀಸರ್ಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಎಲ್ಲಾ ವೈಶಿಷ್ಟ್ಯಗಳನ್ನು ಬಲೆನೊದಿಂದ ತೆಗೆದುಕೊಳ್ಳಲಾಗಿದೆ.

ಹೆಡ್ಸ್-ಅಪ್ ಡಿಸ್ಪ್ಲೇ ಸ್ಪೀಡೋಮೀಟರ್,ಮೈಲೇಜ್, ಗೇರ್ ಇಂಡೀಕೆಟರ್, ಸ್ಪೀಡೋಮೀಟರ್ ಮತ್ತು ಬ್ಲೋವರ್ ವೇಗದಂತಹ ವಿವಿಧ ಉಪಯುಕ್ತ ಮಾಹಿತಿಯನ್ನು ತೋರಿಸುತ್ತದೆ. ಇದು ಚಲಾಕನಿಗೆ ಹೆಚ್ಚು ನೆರವಗುವ ಪೀಚರ್ ಆಗಿದೆ. ಚಲಾಕನಿಗೆ ನೇರ್ ನೋಟದಲ್ಲಿ ಎಲ್ಲಾ ಮಾಹಿತಿಗಳು ನೋಡಬಹುದು. 9-ಇಂಚಿನ ಹೊಸ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸಹ ಇದೆ. ಇದನ್ನು ಬಲೆನೊದಿಂದ ತೆಗೆದುಕೊಳ್ಳಲಾಗಿದೆ. ಇದು ಹೊಸ ಯೂಸರ್ ಇಂಟರ್ಫೇಸ್ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು Android Auto ಮತ್ತು Apple CarPlay ಅನ್ನು ಸಹ ಬೆಂಬಲಿಸುತ್ತದೆ. ನಮಗೆ ತಿಳಿದಿರುವ ಇನ್ನೊಂದು ವಿಷಯವೆಂದರೆ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ಹೊಸದಾಗಿರುತ್ತದೆ.

ಫೇಸ್ಲಿಫ್ಟೆಡ್ ಎರ್ಟಿಗಾ ಮತ್ತು XL6 ಮಾದರಿಗಳಲ್ಲಿರುವ 1.5-ಲೀಟರ್ ನಾಲ್ಕು-ಸಿಲಿಂಡರ್ K15C ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 103 ಬಿಹೆಚ್ಪಿ ಪವರ್ ಮತ್ತು 136.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹಾಗೂ 6-ಸ್ಪೀಡ್ ಎಟಿ ಯೊಂದಿಗೆ ಜೋಡಿಯಾಗಲಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದೆ. ಕಳೆದ ತಿಂಗಳು ಎಂಟು ವಿಭಿನ್ನ ಮಾರುತಿ ಸುಜುಕಿ ಮಾದರಿಗಳು 10 ಸಾವಿರ ಯೂನಿಟ್ ಮಾಸಿಕ ಮಾರಾಟದ ಅಂಕಿಅಂಶವನ್ನು ದಾಟಲು ಯಶಸ್ವಿಯಾಗಿದೆ.