ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ಭಾರತದ ಅತಿ ದೊಡ್ಡ ಮತ್ತು ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸುವಲ್ಲಿ ಯಶ್ವಸಿಯಾಗಿದೆ.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದೆ. ಇಂಡೋ-ಜಪಾನೀಸ್ ವಾಹನ ತಯಾರಕರು ಕಳೆದ ತಿಂಗಳು ಮಾರಾಟದ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದರು, ಅದೂ ಸಹ ಎಲ್ಲಾ ಪ್ರತಿಸ್ಪರ್ಧಿ ಕಾರು ತಯಾರಕರಿಗಿಂತ ಆರಾಮದಾಯಕ ಮುನ್ನಡೆಯೊಂದಿಗೆ. ಮೇ 2022 ರಲ್ಲಿ, ಎಂಟು ವಿಭಿನ್ನ ಮಾರುತಿ ಸುಜುಕಿ ಮಾದರಿಗಳು 10,000-ಯೂನಿಟ್ ಮಾಸಿಕ ಮಾರಾಟದ ಅಂಕಿಅಂಶವನ್ನು ದಾಟಲು ಯಶಸ್ವಿಯಾಗಿದೆ.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ಕಳೆದ ತಿಂಗಳು ಮಾರುತಿ ಸುಜುಕಿಯ ವ್ಯಾಗನ್-ಆರ್ (16,814 ಯುನಿಟ್‌ಗಳು), ಸ್ವಿಫ್ಟ್ (14,133 ಯುನಿಟ್‌ಗಳು), ಬಲೆನೊ (13,970 ಯುನಿಟ್‌ಗಳು), ಆಲ್ಟೋ (12,933 ಯುನಿಟ್‌ಗಳು), ಎರ್ಟಿಗಾ (12,226 ಯುನಿಟ್‌ಗಳು), ಡಿಜೈರ್ (11,603 ಯುನಿಟ್‌ಗಳು), ಇಕೋ (10,482 ಯುನಿಟ್‌ಗಳು), ಮತ್ತು ವಿಟಾರಾ ಬ್ರೆಝಾ (10,312 ಯುನಿಟ್‌ಗಳು) ಮಾರಾಟವಾಗಿವೆ.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

2022ರ ಮೇ ತಿಂಗಳಿನಲ್ಲಿ ಭಾರತದಲ್ಲಿ ಎರಡನೇ ಮತ್ತು ಮೂರನೇ ಅತಿದೊಡ್ಡ ಕಾರು ಬ್ರಾಂಡ್‌ಗಳು - ಟಾಟಾ ಮತ್ತು ಹ್ಯುಂಡೈ - 10,000-ಯುನಿಟ್ ಮಾರಾಟದ ಗಡಿಯನ್ನು ದಾಟಿದ ಕೆಲವೇ ಮಾದರಿಗಳನ್ನು ಹೊಂದಿದ್ದೆ ಎಂಬುದು ಗಮನಿಸಬೇಕಾದ ಸಂಗತಿ. ಅವುಗಳೆಂದರೆ ಟಾಟಾ ನೆಕ್ಸಾನ್ (14,614 ಯುನಿಟ್‌ಗಳು), ಹ್ಯುಂಡೈ ಕ್ರೆಟಾ (10,973 ಯುನಿಟ್‌ಗಳು), ಮತ್ತು ಟಾಟಾ ಪಂಚ್ (10,241 ಯುನಿಟ್‌ಗಳು) ಆಗಿವೆ.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ಇತ್ತೀಚಿನ ದಿನಗಳಲ್ಲಿ, ಎಸ್‍ಯುವಿಗಳ ಬೇಡಿಕೆಯು ಸ್ಥಿರವಾಗಿ ಹೆಚ್ಚುತ್ತಿದೆ ಮತ್ತು ಹೆಚ್ಚಿನ ಖರೀದಿದಾರರನ್ನು ಆಕರ್ಷಿಸಲು ತನ್ನ ಎಸ್‍ಯುವಿ ಪೋರ್ಟ್‌ಫೋಲಿಯೊವನ್ನು ನವೀಕರಿಸುವ ಮೂಲಕ ಮಾರುತಿ ಸುಜುಕಿ ಅದನ್ನು ಲಾಭ ಮಾಡಿಕೊಳ್ಳಲು ಯೋಜಿಸುತ್ತಿದೆ.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ಯುಟಿಲಿಟಿ ವೆಹಿಕಲ್ಸ್ (ಎಸ್‍ಯುವಿಗಳು ಮತ್ತು ಎಂಪಿವಿಗಳು) ವಿರುದ್ಧ ಸಣ್ಣ ಕಾರುಗಳಿಗೆ (ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್‌ಗಳು) ಬೇಡಿಕೆ ಕುಗ್ಗುತ್ತಿದೆ. ಇದರಿಂದ ಮಾರುತಿ ಸುಜುಕಿ ಕಂಪನಿಯು ಎಸ್‍ಯುವಿಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದೆ.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ಇನ್ನು ಮಾರುತಿ ಸುಜುಕಿ ಕಂಪನಿಯು ಹಳೆಯದಾದ ಎಸ್-ಕ್ರಾಸ್ ಅನ್ನು ಹೊಚ್ಚಹೊಸ ಮಾದರಿಯಿಂದ ಬದಲಾಯಿಸಲು ನಿರ್ಧರಿಸಲಾಗಿದೆ. ಕೆಲವು ವರದಿಗಳ ಪ್ರಕಾರ, ಈ ಮುಂಬರುವ ಸಿ-ಸೆಗ್ಮೆಂಟ್ ಎಸ್‍ಯುವಿಯನ್ನು ಮುಂದಿನ ತಿಂಗಳುಗಳಲ್ಲಿ ಅನಾವರಣಗೊಳಿಸಬಹುದು, ನಂತರದ ತಿಂಗಳುಗಳಲ್ಲಿ ಬಿಡುಗಡೆ ಮಾಡಬಹುದು.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ತಯಾರಕರು ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಕಾಂಪ್ಯಾಕ್ಟ್ ಎಸ್‍ಯುವಿ ಅನ್ನು ಪರಿಚಯಿಸಲು ಯೋಜಿಸುತ್ತಿದ್ದಾರೆ, ಇದು ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ. ಹೊಸ ಎಲೆಕ್ಟ್ರಿಕ್ ಎಸ್‍ಯುವಿ ಜೊತೆ ಹೊಸ ಮೂರು-ಸಾಲಿನ ಎಸ್‍ಯುವಿ ಕೂಡ ಪೈಪ್‌ಲೈನ್‌ನಲ್ಲಿದೆ ಎಂದು ವರದಿಯಾಗಿದೆ.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ಈ ಮುಂಬರುವ ಕೆಲವು ಎಸ್‌ಯುವಿಗಳನ್ನು ಟೊಯೋಟಾ ಸಹಭಾಗಿತ್ವದಲ್ಲಿ ತಯಾರಿಸಲಾಗುತ್ತಿದೆ, ಇದು ತನ್ನದೇ ಬ್ರಾಂಡ್‌ನಲ್ಲಿ ಈ ಮಾದರಿಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಇನ್ನು ದೇಶದ ಅತಿದೊಡ್ಡ ಕಾರು ತಯಾರಕರು ತನ್ನ ಬ್ರೆಝಾವನ್ನು ನವೀಕರಿಸಿದೆ. ಇತ್ತೀಚೆಗೆ ಈ ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಹೊಸ ಮಾರುತಿ ಬ್ರೆಝಾ ಎಸ್‍ಯುವಿಯು ಜೂನ್ 30 ರಂದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ಮಾರುತಿ ಸುಜುಕಿ ಕಂಪನಿಯು ಹೊಸ ಕಾಂಪ್ಯಾಕ್ಟ್ ಮಾರುತಿ ಬ್ರೆಝಾ ಎಸ್‌ಯುವಿಯ ಹೊಸ ಟೀಸರ್‌ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಹೊಸ ಟೀಸರ್ 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾವನ್ನು ತೋರಿಸುತ್ತದೆ, 360-ಡಿಗ್ರಿ ಪಾರ್ಕಿಂಗ್ ಕ್ಯಾಮರಾ ಚಾಲಕನಿಗೆ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಗಿಯಾದ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕ್ ಮಾಡಲು ಸಹಾಯ ಮಾಡುತ್ತದೆ. ಇದಕ್ಕೂ ಮೊದಲು, ತಯಾರಕರು ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ಎಲೆಕ್ಟ್ರಿಕ್ ಸನ್‌ರೂಫ್‌ನ ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಎಲ್ಲಾ ವೈಶಿಷ್ಟ್ಯಗಳನ್ನು ಬಲೆನೊದಿಂದ ತೆಗೆದುಕೊಳ್ಳಲಾಗಿದೆ.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ಹೆಡ್ಸ್-ಅಪ್ ಡಿಸ್ಪ್ಲೇ ಸ್ಪೀಡೋಮೀಟರ್,ಮೈಲೇಜ್, ಗೇರ್ ಇಂಡೀಕೆಟರ್, ಸ್ಪೀಡೋಮೀಟರ್ ಮತ್ತು ಬ್ಲೋವರ್ ವೇಗದಂತಹ ವಿವಿಧ ಉಪಯುಕ್ತ ಮಾಹಿತಿಯನ್ನು ತೋರಿಸುತ್ತದೆ. ಇದು ಚಲಾಕನಿಗೆ ಹೆಚ್ಚು ನೆರವಗುವ ಪೀಚರ್ ಆಗಿದೆ. ಚಲಾಕನಿಗೆ ನೇರ್ ನೋಟದಲ್ಲಿ ಎಲ್ಲಾ ಮಾಹಿತಿಗಳು ನೋಡಬಹುದು. 9-ಇಂಚಿನ ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸಹ ಇದೆ. ಇದನ್ನು ಬಲೆನೊದಿಂದ ತೆಗೆದುಕೊಳ್ಳಲಾಗಿದೆ. ಇದು ಹೊಸ ಯೂಸರ್ ಇಂಟರ್‌ಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು Android Auto ಮತ್ತು Apple CarPlay ಅನ್ನು ಸಹ ಬೆಂಬಲಿಸುತ್ತದೆ. ನಮಗೆ ತಿಳಿದಿರುವ ಇನ್ನೊಂದು ವಿಷಯವೆಂದರೆ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ಹೊಸದಾಗಿರುತ್ತದೆ.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ಫೇಸ್‌ಲಿಫ್ಟೆಡ್ ಎರ್ಟಿಗಾ ಮತ್ತು XL6 ಮಾದರಿಗಳಲ್ಲಿರುವ 1.5-ಲೀಟರ್ ನಾಲ್ಕು-ಸಿಲಿಂಡರ್ K15C ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಎಂಜಿನ್‌ ಹೊಂದಿರಲಿದೆ. ಈ ಎಂಜಿನ್ 103 ಬಿಹೆಚ್‍ಪಿ ಪವರ್ ಮತ್ತು 136.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹಾಗೂ 6-ಸ್ಪೀಡ್ ಎಟಿ ಯೊಂದಿಗೆ ಜೋಡಿಯಾಗಲಿದೆ.

ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದೆ. ಕಳೆದ ತಿಂಗಳು ಎಂಟು ವಿಭಿನ್ನ ಮಾರುತಿ ಸುಜುಕಿ ಮಾದರಿಗಳು 10 ಸಾವಿರ ಯೂನಿಟ್ ಮಾಸಿಕ ಮಾರಾಟದ ಅಂಕಿಅಂಶವನ್ನು ದಾಟಲು ಯಶಸ್ವಿಯಾಗಿದೆ.

Most Read Articles

Kannada
English summary
Maruti suzuki s eight models crossing the 10000 units monthly sales in may 2022 details
Story first published: Friday, June 24, 2022, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X