ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

ಪ್ರಸ್ತುತ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿಯು 20 ಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಸೆಮಿಕಂಡಕ್ಟರ್‌ಗಳ ಲಭ್ಯತೆಯನ್ನು ಸುಧಾರಿಸುವುದರೊಂದಿಗೆ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾ ಅಧ್ಯಕ್ಷ ಆರ್‌ಸಿ ಭಾರ್ಗವ ಹೇಳಿದ್ದಾರೆ.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

2021-22ರ ಕಂಪನಿಯ ವಾರ್ಷಿಕ ವರದಿಯಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಮಧ್ಯಮ ಗಾತ್ರದ ಎಸ್‌ಯುವಿ ಗ್ರ್ಯಾಂಡ್ ವಿಟಾರಾ 20 ಲಕ್ಷ ಘಟಕಗಳನ್ನು ಮುಟ್ಟುವ ಸವಾಲಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

2021-22 ರಲ್ಲಿ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ ಒಟ್ಟು 16.52 ಲಕ್ಷ ಯುನಿಟ್‌ಗಳ ಮಾರಾಟದ ಮೂಲಕ ಶೇಕಡಾ 13.4ರಷ್ಟು ಹೆಚ್ಚಾಗಿದೆ. ಆದರೆ ದೇಶೀಯ ಮಾದರಿಗಳಿಗೆ ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಉತ್ಪಾದನೆಯ ಮೇಲೆ ಹೆಚ್ಚು ಪರಿಣಾಮ ಬೀರಿದ್ದರಿಂದ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಾರಾಟವನ್ನು ಕಳೆದುಕೊಂಡಿದೆ ಎಂದು ಭಾರ್ಗವ ತಿಳಿಸಿದರು.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

ವರ್ಷಾಂತ್ಯದಲ್ಲಿ ಕಂಪನಿಯೊಂದಿಗೆ ಅನ್‌ಮೆಟ್ ಬುಕಿಂಗ್‌ಗಳ ಸಂಖ್ಯೆ ಸುಮಾರು 2.7 ಲಕ್ಷಕ್ಕೆ ಏರಿದೆ. ಆದರೂ ದೇಶೀಯ ಮಾರುಕಟ್ಟೆಯಲ್ಲಿ ಕೆಲವು ಅವಕಾಶಗಳನ್ನು ಕಳೆದುಕೊಂಡಿದ್ದರಿಂದ MSIL ನ ಮಾರುಕಟ್ಟೆ ಪಾಲು ಶೇ 50 ರಿಂದ ಶೇ 43.4ಕ್ಕೆ ಕುಸಿದಿದೆ ಎಂದು ಹೇಳಿದರು.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಡೇಟಾ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ 2020-21 ರಲ್ಲಿ ಮಾರಾಟವಾಗಿದ್ದ 27,11,457 ದೇಶೀಯ ಪ್ರಯಾಣಿಕ ವಾಹನಗಳಿಗೆ ಹೋಲಿಸಿದರೆ 2021-22 ರಲ್ಲಿ 30,69,499 ಯುನಿಟ್‌ಗಳು ಮಾರಾಟವಾಗಿವೆ.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

ಪ್ರಸಕ್ತ ವರ್ಷದ ಮುನ್ನೋಟದ ಕುರಿತು ಅವರು ಮಾತನಾಡಿ, "ಸೆಮಿಕಂಡಕ್ಟರ್‌ಗಳ ಲಭ್ಯತೆಯ ಬಗ್ಗೆ ಪರಿಸ್ಥಿತಿ ಸುಧಾರಿಸಿದಂತೆ ವಾಹನ ಉತ್ಪಾದನೆಯು ಹೆಚ್ಚಾಗುತ್ತದೆ. ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಲು ಮತ್ತಷ್ಟು ಸುಧಾರಣೆಗಳನ್ನು ಮಾಡಿದೆ. ನಮ್ಮ ತಂಡವನ್ನು 2 ಮಿಲಿಯನ್ ಘಟಕಗಳನ್ನು ತಲುಪಲು ಪ್ರೋತ್ಸಾಹಿಸುತ್ತಿದ್ದೇನೆ, ಆದರೂ ಇದೊಂದು ಸವಾಲಾಗಿ ಉಳಿದಿದೆ."

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

ಟೊಯೊಟಾ ತನ್ನ ಕರ್ನಾಟಕ ಕಾರ್ಖಾನೆಯಲ್ಲಿ ತಯಾರಿಸಲಿರುವ ಗ್ರಾಂಡ್ ವಿಟಾರಾ ಬಿಡುಗಡೆಯು "ನಾವು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು 2 ಮಿಲಿಯನ್ ಘಟಕಗಳಿಗೆ ಸವಾಲು ಹಾಕಲು ನಿರೀಕ್ಷಿಸುತ್ತಿದ್ದೇವೆ. ಹೊಸ ಎಸ್‌ಯುವಿಯು ಟೊಯೋಟಾದ ಪ್ರಬಲ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರಲಿದೆ ಎಂದು ಅವರು ಹೇಳಿದರು.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

2020-2021ಕ್ಕೆ ಹೋಲಿಸಿದರೆ ಹೆಚ್ಚುತ್ತಿರುವ ವೆಚ್ಚಗಳಿಂದಾಗಿ 2022 ರಲ್ಲಿ ಶೇಕಡಾ 5 ರಷ್ಟು ಕುಸಿದಿರುವ ಕಂಪನಿಯ ಪ್ರಮುಖ ವಿಭಾಗವಾದ ಪ್ರೀಮಿಯಂ ಅಲ್ಲದ ಹ್ಯಾಚ್‌ಬ್ಯಾಕ್‌ಗಳ ಮಾರಾಟದಲ್ಲಿನ ಕುಸಿತವನ್ನು ಸರಿದೂಗಿಸಲು ಮಾರುತಿ ಸುಜುಕಿಯ SUV ಪೋರ್ಟ್‌ಫೋಲಿಯೊವನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದರು.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

"ಮತ್ತೊಂದೆಡೆ ಎಸ್‌ಯುವಿ ವಲಯವು ಬೆಳೆಯುತ್ತಲೇ ಇದೆ. ಈ ವಿಭಾಗದಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸಲು ನಮ್ಮಲ್ಲಿ ಸಾಕಷ್ಟು ಮಾದರಿಗಳು ಇರಲಿಲ್ಲ, ಆದರೆ ಈಗ ಮರುರೂಪಿಸಲಾದ ಬ್ರೆಝಾ ಬಿಡುಗಡೆ ಮತ್ತು ಗ್ರ್ಯಾಂಡ್ ವಿಟಾರಾ ಜಾಗತಿಕ ಉಡಾವಣೆಯೊಂದಿಗೆ ಸದ್ಯ ಪರಿಸ್ಥಿತಿ ಹೆಚ್ಚು ಸುಧಾರಿಸುತ್ತಿದೆ ಎಂದು ಭಾರ್ಗವ ಅವರು ಹೇಳಿದರು.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

ಮಾರುತಿ ಸುಜುಕಿ ಮಾರುಕಟ್ಟೆ ಪಾಲು ಎಸ್‌ಯುವಿ ವಿಭಾಗದಲ್ಲಿ ವೇಗವಾಗಿ ಹೆಚ್ಚಾಗುತ್ತದೆ ಎಂದು ನಾವು ಭಾವಿಸಿದ್ದೇವೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಗುಜರಾತ್ ಸ್ಥಾವರವು 2024-25 ರಿಂದ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ. ಬಳಿಕ ಎಂಎಸ್‌ಐಎಲ್‌ನಿಂದ ಮಾರಾಟವಾಗಲಿದೆ ಎಂದು ತಿಳಿಸಿದರು.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

"ಕಳೆದ ವರ್ಷ ನಾನು ಹೇಳಿದಂತೆ ಮಾರುಕಟ್ಟೆಯ ಎಲ್ಲಾ ವಿಭಾಗಗಳಲ್ಲಿ ಎಲೆಕ್ಟ್ರಿಕ್ ಕಾರುಗಳು ಪ್ರಮುಖ ಉತ್ಪನ್ನವಾಗಲು ಸಮಯ ತೆಗೆದುಕೊಳ್ಳುತ್ತವೆ. ಇವಿಗಳ ಜೊತೆಗೆ ಸಿಎನ್‌ಜಿ, ಎಥೆನಾಲ್, ಬಯೋಗ್ಯಾಸ್ ಮತ್ತು ಸ್ಟ್ರಾಂಗ್ ಹೈಬ್ರಿಡ್‌ಗಳು ಕಾರ್ಬನ್ ಹೊರಸೂಸುವಿಕೆಗೆ ಚೆಕ್ ಇಡಲಿವೆ ಎಂದು ಹೇಳಿದರು.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

ಭವಿಷ್ಯದ ಬೇಡಿಕೆಗಳನ್ನು ಪೂರೈಸಲು MSIL ತನ್ನ ಹೊಸ ಉತ್ಪಾದನಾ ಘಟಕಕ್ಕಾಗಿ ಹರಿಯಾಣದ ಖಾರ್ಖೋಡಾದಲ್ಲಿ ಭೂಮಿ ಖರೀದಿಯನ್ನು ಅಂತಿಮಗೊಳಿಸಿದೆ, ಅಲ್ಲಿ ಮೊದಲ ಹಂತದಲ್ಲಿ 11,000 ಕೋಟಿ ಹೂಡಿಕೆ ಮಾಡುತ್ತಿದೆ ಎಂದು ಭಾರ್ಗವ ಹೇಳಿದರು.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

"ಭವಿಷ್ಯದ ಬೇಡಿಕೆಗಳನ್ನು ಪೂರೈಸಲು ಈ ಪ್ರದೇಶದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ವಿಸ್ತರಿಸಲು ನಾವು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಮೊದಲ ಘಟಕವನ್ನು 2025 ರಲ್ಲಿ ಮತ್ತು ಎರಡನೆಯದು ಸುಮಾರು ಒಂದು ವರ್ಷದ ನಂತರ ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ ಎಂದು ಮಾರುಕಟ್ಟೆಯ ಸ್ಥಿತಿಗತಿಗಳ ಆಧಾರದ ಮೇಲೆ ಭಾರ್ಗವ ಹೇಳಿದರು.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

ಈ ತಾಣವು ಪ್ರಪಂಚದಲ್ಲೇ ಅತಿ ದೊಡ್ಡ ಕಾರು ತಯಾರಿಕಾ ತಾಣಗಳಲ್ಲಿ ಒಂದಾಗುವ ಸಾಮರ್ಥ್ಯವನ್ನು ಹೊಂದಿದೆ. ಉತ್ತಮ ಸೌಲಭ್ಯಗಳು ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿರಲಿದ್ದು, ಹರಿಯಾಣ ಮತ್ತು ಎಲ್ಲ ರಾಜ್ಯಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದರು.

ಮಾರುತಿ ಸುಜುಕಿ 20 ಲಕ್ಷ ಯೂನಿಟ್‌ಗಳ ಉತ್ಪಾದನೆಗೆ ಸಜ್ಜಾಗಿದೆ: MSIL ಅಧ್ಯಕ್ಷ ಆರ್‌ಸಿ ಭಾರ್ಗವ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ಭಾರತದಲ್ಲಿ ವಾಹನ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಇಂಡಿಯಾವು ಕೊರೊನಾ ಸಂದರ್ಭದಲ್ಲಿ ಎಲ್ಲಾ ವಾಹನ ತಯಾರಕರಂತೆ ಹಿನ್ನಡೆ ಅನುಭವಿಸಬೇಕಾಯಿತು. ಅಲ್ಲದೇ ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸೆಮಿಕಂಡಕ್ಟರ್‌ಗಳ ಅಲಭ್ಯತೆಯಿಂದಾಗಿ ಮಾರಾಟದಲ್ಲಿ ಇಳಿಕೆಯಾಗಿತ್ತು. ಇದೀಗ ಉತ್ಪದನಾ ಸೌಲಭ್ಯಗಳನ್ನು ಹೆಚ್ಚಿಸುತ್ತಿರುವುದು ಮುಂಬರುವ ವರ್ಷಗಳಲ್ಲಿ ಕಂಪನಿಯ ದಾಖಲೆ ಮಟ್ಟದ ಮಾರಾಟಕ್ಕೆ ನಾಂದಿ ಹಾಡಲಿದೆ.

Most Read Articles

Kannada
English summary
Maruti Suzuki set to produce 20 lakh units MSIL Chairman RC Bhargava
Story first published: Monday, August 8, 2022, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X