360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ದೇಶಿಯ ಮಾರುಕಟ್ಟೆಯಲ್ಲಿ 2016ರ ಆರಂಭದಿಂದಲೂ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಮಾರಾಟ ಮಾಡುತ್ತಿದೆ. ಸದ್ಯ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

2016ರ ಆರಂಭದಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಪ್ರಬಲ್ಯವನ್ನು ಸಾಧಿಸುತಿದ್ದ ಫೋರ್ಡ್ ಇಕೋಸ್ಪೋರ್ಟ್ ಅನ್ನು ಸೋಲಿಸುವ ಮೂಲಕ ವಿಟಾರಾ ಬ್ರೆಝಾ ನಿಜವಾಗಿಯೂ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಇದೀಗ ದೇಶದ ಅತಿದೊಡ್ಡ ಕಾರು ತಯಾರಕರು ತನ್ನ ಬ್ರೆಝಾವನ್ನು ನವೀಕರಿಸಿದೆ. ಇತ್ತೀಚೆಗೆ ಈ ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಹೊಸ ಮಾರುತಿ ಬ್ರೆಝಾ ಎಸ್‍ಯುವಿಯು ಜೂನ್ 30 ರಂದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ಮಾರುತಿ ಸುಜುಕಿ ಕಂಪನಿಯು ಹೊಸ ಕಾಂಪ್ಯಾಕ್ಟ್ ಮಾರುತಿ ಬ್ರೆಝಾ ಎಸ್‌ಯುವಿಯ ಹೊಸ ಟೀಸರ್‌ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಹೊಸ ಟೀಸರ್ 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾವನ್ನು ತೋರಿಸುತ್ತದೆ,

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

360-ಡಿಗ್ರಿ ಪಾರ್ಕಿಂಗ್ ಕ್ಯಾಮರಾ ಚಾಲಕನಿಗೆ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಗಿಯಾದ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕ್ ಮಾಡಲು ಸಹಾಯ ಮಾಡುತ್ತದೆ. ಇದಕ್ಕೂ ಮೊದಲು, ತಯಾರಕರು ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ಎಲೆಕ್ಟ್ರಿಕ್ ಸನ್‌ರೂಫ್‌ನ ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಎಲ್ಲಾ ವೈಶಿಷ್ಟ್ಯಗಳನ್ನು ಬಲೆನೊದಿಂದ ತೆಗೆದುಕೊಳ್ಳಲಾಗಿದೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ಹೆಡ್ಸ್-ಅಪ್ ಡಿಸ್ಪ್ಲೇ ಸ್ಪೀಡೋಮೀಟರ್,ಮೈಲೇಜ್, ಗೇರ್ ಇಂಡೀಕೆಟರ್, ಸ್ಪೀಡೋಮೀಟರ್ ಮತ್ತು ಬ್ಲೋವರ್ ವೇಗದಂತಹ ವಿವಿಧ ಉಪಯುಕ್ತ ಮಾಹಿತಿಯನ್ನು ತೋರಿಸುತ್ತದೆ. ಇದು ಚಲಾಕನಿಗೆ ಹೆಚ್ಚು ನೆರವಗುವ ಪೀಚರ್ ಆಗಿದೆ. ಚಲಾಕನಿಗೆ ನೇರ್ ನೋಟದಲ್ಲಿ ಎಲ್ಲಾ ಮಾಹಿತಿಗಳು ನೋಡಬಹುದು.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

9-ಇಂಚಿನ ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸಹ ಇದೆ. ಇದನ್ನು ಬಲೆನೊದಿಂದ ತೆಗೆದುಕೊಳ್ಳಲಾಗಿದೆ. ಇದು ಹೊಸ ಯೂಸರ್ ಇಂಟರ್‌ಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು Android Auto ಮತ್ತು Apple CarPlay ಅನ್ನು ಸಹ ಬೆಂಬಲಿಸುತ್ತದೆ. ನಮಗೆ ತಿಳಿದಿರುವ ಇನ್ನೊಂದು ವಿಷಯವೆಂದರೆ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ಹೊಸದಾಗಿರುತ್ತದೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ಇದು ಇನ್ನೂ ಅನಲಾಗ್ ಯುನಿಟ್ ಆಗಿದೆ. ಆದರೆ ಮರುವಿನ್ಯಾಸಗೊಳಿಸಲಾಗಿದೆ. ಅನಲಾಗ್ ಡಯಲ್‌ಗಳ ಮಧ್ಯದಲ್ಲಿ ನವೀಕರಿಸಿದ ಬಣ್ಣದ ಮಲ್ಟಿ-ಇನ್ಫಾರ್ಮಶನ್ ಡಿಸ್ ಪ್ಲೇ ಇದೆ. ಕ್ಯಾಬಿನ್ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್‌ನೊಂದಿಗೆ ಹೊಸದಾಗಿದೆ ಮತ್ತು ಇನ್ಫೋಟೈನ್‌ಮೆಂಟ್ ಈಗ ಡ್ಯಾಶ್ ಬೋರ್ಡ್ ಮಧ್ಯದಲ್ಲಿದೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ಸ್ಟೀರಿಂಗ್ ವೀಲ್ ಕೂಡ ಹೊಸದು. ಇದು ಫ್ಲಾಟ್ ಬಾಟಮ್ನೊಂದಿಗೆ ಮಲ್ಟಿ ಫಂಕ್ಷನ್ ಯುನಿಟ್ ಇದೆ. ಹೊಸ ಅಪ್ಹೋಲ್ಸ್ಟರಿ ಮತ್ತು ಸೆಂಟರ್ ಕನ್ಸೋಲ್ ವಿನ್ಯಾಸವೂ ಇರುತ್ತದೆ. ಬ್ರೆಝಾ LXi, VXi, ZXi ಮತ್ತು ZXi+ ಎಂಬ ನಾಲ್ಕು ರೂಪಾಂತರಗಳನ್ನು ಲಭ್ಯವಿರುತ್ತದೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ಫೇಸ್‌ಲಿಫ್ಟೆಡ್ ಎರ್ಟಿಗಾ ಮತ್ತು XL6 ಮಾದರಿಗಳಲ್ಲಿರುವ 1.5-ಲೀಟರ್ ನಾಲ್ಕು-ಸಿಲಿಂಡರ್ K15C ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಎಂಜಿನ್‌ ಹೊಂದಿರಲಿದೆ. ಈ ಎಂಜಿನ್ 103 ಬಿಹೆಚ್‍ಪಿ ಪವರ್ ಮತ್ತು 136.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹಾಗೂ 6-ಸ್ಪೀಡ್ ಎಟಿ ಯೊಂದಿಗೆ ಜೋಡಿಯಾಗಲಿದೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ಆಟೋಮ್ಯಾಟಿಕ್ ರೂಪಾಂತರವು ಪ್ಯಾಡಲ್ ಶಿಫ್ಟಿಂಗ್ ಕಾರ್ಯವನ್ನು ಪಡೆಯುತ್ತದೆ ಮತ್ತು ಆಯ್ದ ಟ್ರಿಮ್‌ಗಳಲ್ಲಿ ಸಿಎನ್‌ಜಿ ರೂಪಾಂತರದ ಚೊಚ್ಚಲ ಪ್ರವೇಶದೊಂದಿಗೆ ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸಬಹುದು. ಮುಂಬರುವ ಬ್ರೆಝಾವು ಹೊಸ ಕ್ರೋಮ್ ಫ್ರಂಟ್ ಗ್ರಿಲ್‌ನ ಉಪಸ್ಥಿತಿಯೊಂದಿಗೆ ಸಂಪೂರ್ಣವಾಗಿ ಪರಿಷ್ಕೃತ ಮುಂಭಾಗದ ಫಾಸಿಕ ಒಳಪಟ್ಟಿರುತ್ತದೆ ಮತ್ತು ಹೆಡ್‌ಲ್ಯಾಂಪ್‌ಗಳನ್ನು ಟ್ವಿನ್-ಪಾಡ್ ಕ್ಲಸ್ಟರ್ ಮತ್ತು ಎಲ್ಇಡಿ ಲೈಟಿಂಗ್‌ನೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ಈ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯ ಹೈ-ಮೌಂಟೆಡ್ ಸ್ಟಾಪ್ ಲ್ಯಾಂಪ್‌ಗಳು, ಶಾರ್ಕ್ ಫಿನ್ ಆಂಟೆನಾ ಮತ್ತು ಗಟ್ಟಿಮುಟ್ಟಾದ ಬೂದು ರೂಫ್ ರೈಲ್ ಗಳೊಂದಿಗೆ ನೀವು ಸಮಗ್ರ ಸ್ಪಾಯ್ಲರ್ ಅನ್ನು ಸಹ ನೋಡಬಹುದು. ನೇರವಾದ ಸುಜುಕಿ ಬ್ಯಾಡ್ಜ್ ಸಮತಲವಾದ ಕಪ್ಪು ಪ್ಯಾನೆಲ್‌ನಲ್ಲಿ ತಾಜಾ ವೈಬ್ ಅನ್ನು ತರುತ್ತದೆ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು ಹೊಂದಿರಲಿವೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ಬ್ರೆಝಾ ಎಸ್‍ಯುವಿಯ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಸಹ ಪರಿಷ್ಕರಿಸಲಾಗುತ್ತದೆ. ಏಕೆಂದರೆ ಹಿಂದಿನದು ಹೊಸ ಫಾಗ್ ಲ್ಯಾಂಪ್ ಹೌಸಿಂಗ್‌ಗಳು ಮತ್ತು ಪ್ರಮುಖ ಸ್ಕಿಡ್ ಪ್ಲೇಟ್ ಅನ್ನು ಪಡೆಯುತ್ತದೆ. ಹೊಸ ಸ್ಕಿಡ್ ಪ್ಲೇಟ್ ಅನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ ಮತ್ತು ಹಿಂಭಾಗದ ಬಂಪರ್ ಸಣ್ಣ ಹೊಂದಾಣಿಕೆಗಳನ್ನು ಹೊಂದಿರುತ್ತದೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ಈ ಮಾರುತಿ ಬ್ರೆಝಾ ಎಸ್‍ಯುವಿ ಸೈಡ್ ಪ್ರೊಫೈಲ್ ಹೊರಹೋಗುವ ಮಾದರಿಯಂತೆಯೇ ಉಳಿದಿದೆ ಎತ್ತರದ ಪಿಲ್ಲರ್‌ಗಳು, ದಪ್ಪ ಕಪ್ಪು ಬಾಡಿ ಕ್ಲಾಡಿಂಗ್, ಬಾಡಿ ಬಣ್ಣದ ಡೋರ್ ಹ್ಯಾಂಡಲ್‌ಗಳು, ಬ್ಲ್ಯಾಕ್ ಫಿನಿಶ್ಡ್ ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ವಿಂಗ್ ಮೀರರ್ಸ್ ಮತ್ತು ಆಯತಾಕಾರದ ವ್ಹೀಲ್ ಅರ್ಚರ್ ಗಳನ್ನು ಹೊಂದಿರಲಿವೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ಹೊಸ ಬ್ರೆಝಾ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಹೆಚ್ಚಿನ ಸುರಕ್ಷತೆಗಾಗಿ, ಹೆಚ್ಚಿನ ಏರ್‌ಬ್ಯಾಗ್‌ಗಳನ್ನು (ಪ್ರಸ್ತುತ ಮಾದರಿಯು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಮಾತ್ರ ಪಡೆಯುವುದರಿಂದ) ನೀಡಬಹುದು. ಬ್ರೆಝಾವನ್ನು ಸುಜುಕಿ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಬಹುದು. ಇದು ನಾಲ್ಕು ಸ್ಟಾರ್‌ಗಳ ಪ್ರಸ್ತುತ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಸುರಕ್ಷತಾ ರೇಟಿಂಗ್ ಅನ್ನು ಇನ್ನಷ್ಟು ಸುಧಾರಿಸುತ್ತದೆ.

360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ 2022ರ ಮಾರುತಿ ಬ್ರೆಝಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಬ್ರೆಝಾವನ್ನು 2016ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಉತ್ತಮ ಯಶ್ವಸಿಯನ್ನು ಪಡೆದುಕೊಂಡಿದೆ. ಈ ಬ್ರೆಝಾದ ಮುಂಬರುವ ನವೀಕರಿಸಿದ ಮಾದರಿಯು ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಕಂಪನಿಗೆ ದೇಶದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಮತ್ತಷ್ಟು ವಿಸ್ತರಿಸಲು ಮತ್ತು ಸುಧಾರಿಸಲು ನಾವು ನಿರೀಕ್ಷಿಸುತ್ತೇವೆ. 2022ರ ಮಾರುತಿ ಬ್ರೆಝಾ.ಸನ್‌ರೂಫ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ.

Most Read Articles

Kannada
English summary
Maruti suzuki shares new brezza teaser showcasing 360 degree parking camera details
Story first published: Wednesday, June 22, 2022, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X