ಹೆಚ್ಚಿನ ಮೈಲೇಜ್‌ನೊಂದಿಗೆ ಬರುತ್ತಿವೆ ಹೊಸ ಮಾರುತಿ ಸಿಎನ್‌ಜಿ ಎಸ್‍ಯುವಿಗಳು...

ಇತ್ತೀಚೆಗೆ ಸಿಎನ್‌ಜಿ ಹಾಗೂ ಪೆಟ್ರೋಲ್/ಡೀಸೆಲ್ ನಡುವಿನ ಬೆಲೆಯ ಅಂತರ ಕಡಿಮೆಯಾಗಿದೆ, ಸಿಎನ್‌ಜಿ ತುಸು ಅಗ್ಗದ ಬೆಲೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಸಿಎನ್‌ಜಿ ವಾಹನಗಳ ಮೈಲೇಜ್ ಅವುಗಳ ಪೆಟ್ರೋಲ್ ಅಥವಾ ಡೀಸೆಲ್-ಚಾಲಿತ ಕೌಂಟರ್‌ಪಾರ್ಟ್‌ಗಳಿಗಿಂತ ಹೆಚ್ಚು. ಇನ್ನು ಒಟ್ಟಾರೆಯಾಗಿ ಸಿಎನ್‌ಜಿ ವಾಹನ ಬಳಕೆದಾರರಿಗೆ ಉಳಿತಾಯ ಕೂಡ ಹೆಚ್ಚು.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರು ತಯಾರಕರು ಹೊಸ ಸಿಎನ್‌ಜಿ ಮಾದರಿಗಳನ್ನು ಪರಿಚಯಿಸುವುದನ್ನು ಮುಂದುವರೆಸಿದ್ದಾರೆ. ಇದೀಗ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿ ಮತ್ತು ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಿದೆ. ಮಾರುತಿ ಸುಜುಕಿ ಈಗ ತನ್ನ ಮುಂದಿನ ಜನಪ್ರಿಯ ಕೊಡುಗೆಯಾದ ಬ್ರೆಝಾ ಕಾಂಪ್ಯಾಕ್ಟ್ ಈಗ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿಯ ಸಿಎನ್‌ಜಿ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಹೊಸ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಪೆಟ್ರೋಲ್-ಚಾಲಿತ ಪ್ರತಿರೂಪಕ್ಕಿಂತ ಯಾವುದೇ ದೃಶ್ಯ ವ್ಯತ್ಯಾಸಗಳನ್ನು ಹೊಂದಿರುವುದಿಲ್ಲ.. ಹೊರಭಾಗದಲ್ಲಿ, ಇದು ಬ್ರೆಝಾದ ಸಾಮಾನ್ಯ ಆವೃತ್ತಿಯಂತೆಯೇ ಕಾಣುತ್ತದೆ, ಈ ಹೊಸ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಎಸ್‍ಯುವಿಯ ಮುಂಭಾಗದಲ್ಲಿ ನಯವಾದ ಕಾಣುವ ಗ್ರಿಲ್, ಡ್ಯುಯಲ್ ಎಲ್-ಆಕಾರದ ಡೇಟೈಮ್ ರನ್ನಿಂಗ್ ಎಲ್ಇಡಿಗಳೊಂದಿಗೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಫಾಗ್ ಲ್ಯಾಂಪ್‌ಗಳು, ಮುಂಭಾಗ ಮತ್ತು ಹಿಂಭಾಗದ ಭಾರವಾದ ಬ್ಲ್ಯಾಕ್ ಕ್ಲಾಡಿಂಗ್, ಮತ್ತು ಮಸ್ಕರ್ ವಿನ್ಯಾಸವನ್ನು ಹೊಂದಿದೆ.

ಹೊಸ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ನಾಲ್ಕು ರೂಪಾಂತರಗಳಲ್ಲಿ ನೀಡಲಾಗುವುದು ಎಂದು ವೀಡಿಯೊ ಬಹಿರಂಗಪಡಿಸುತ್ತದೆ. ಇದು LXI, VXI, ZXI ಮತ್ತು ZXI+ ಆಗಿದೆ. ಸ್ಟ್ಯಾಂಡರ್ಡ್ ಪೆಟ್ರೋಲ್-ಚಾಲಿತ ಪ್ರತಿರೂಪದಂತೆಯೇ. ಈ ಎಲ್ಲಾ ರೂಪಾಂತರಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತವೆ. ಆದರೆ ZXI ಮತ್ತು ZXI+ ರೂಪಾಂತರಗಳಲ್ಲಿ ನೀಡಲಾಗುವ ಆಯ್ಜೆಯ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾರುತಿ ಸುಜುಕಿ ಕಂಪನಿಗೆ ಗೇಮ್ ಚೇಂಜರ್ ಆಗಿರಬಹುದು.

ಇದರೊಂದಿಗೆ, ಬ್ರೆಝಾ ಫ್ಯಾಕ್ಟರಿ ಫಿಟಡ್ ಅಳವಡಿಸಲಾಗಿರುವ ಸಿಎನ್‌ಜಿ ಕಿಟ್‌ನೊಂದಿಗೆ ಆಯ್ಕೆಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗುವ ಭಾರತದಲ್ಲಿ ಮೊದಲ ವಾಹನವಾಗಿದೆ. ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯ ಸ್ಟ್ಯಾಂಡರ್ಡ್ ರೂಪಾಂತರವು ಇದೇ ರೀತಿಯ ಎಂಜಿನ್ ಅನ್ನು ಹೊಂದಿದ್ದು, 103 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯ ಸಿಎನ್‌ಜಿ ಆವೃತ್ತಿಯ ನಿರ್ವಹಣೆ ವೆಚ್ಚವು ಕಡಿಮೆಯಾಗಿರುತ್ತದೆ. ಇದು ಎರ್ಟಿಗಾ ಎಂಯುವಿಯ ಸಿಎನ್‌ಜಿ ಆವೃತ್ತಿಗಿಂತ ಸ್ವಲ್ಪ ಹೆಚ್ಚು ಇಂಧನ-ಸಮರ್ಥವಾಗಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ಇನ್ನು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸಿಎನ್‌ಜಿ ರೂಪಾಂತರವು ಈ ತಿಂಗಳು ಬಿಡುಗಡೆಯಾಗಲಿದೆ. ಮುಂಬರುವ ಸಿಎನ್‌ಜಿ ಆವೃತ್ತಿಯ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯನ್ನು ಕೇವಲ ಎರಡು ಟ್ರಿಮ್ ಹಂತಗಳಲ್ಲಿ ನೀಡಲಾಗುತ್ತದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಮುಂಬರುವ ಸಿಎನ್‌ಜಿ ಆವೃತ್ತಿಯಲ್ಲಿ ನೀಡಲಾದ ಎರಡು ಟ್ರಿಮ್ ಹಂತಗಳು 'ಡೆಲ್ಟಾ' ಮತ್ತು 'ಝೀಟಾ' ಟ್ರಿಮ್‌ಗಳಾಗಿರಬಹುದು. ಇದಲ್ಲದೆ, ಈ ಟ್ರಿಮ್ ಮಟ್ಟಗಳ ಆಧಾರದ ಮೇಲೆ CNG ರೂಪಾಂತರಗಳಿಗೆ ನಾವು 1 ಲಕ್ಷ ರೂಪಾಯಿಗಳಷ್ಟು ದುಬಾರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಮುಂಬರುವ ಸಿಎನ್‌ಜಿ ಆವೃತ್ತಿಯು ಅದೇ 1.5-ಲೀಟರ್ ನ್ಯಾಚುರಲ್ 4-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ, ಇದೇ ಎಂಜಿನ್ ಮಾರುತಿ ಸುಜುಕಿ ಎರ್ಟಿಗಾ ಎಸ್-ಸಿಎನ್‌ಜಿ ಮತ್ತು ಮಾರುತಿ ಸುಜುಕಿ ಎಕ್ಸ್‌ಎಲ್ 6 ಕಾರುಗಳಲ್ಲಿ ಲಭ್ಯವಿದೆ. ಈ ಸಿಎನ್‌ಜಿ 87 ಬಿಹೆಚ್‍ಪಿ ಪವರ್ ಮತ್ತು 121.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಗ್ರ್ಯಾಂಡ್ ವಿಟಾರಾ ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ.

ಈ ಎಸ್‍ಯುವಿಯು 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು 1.5-ಲೀಟರ್ TNGA ಪೆಟ್ರೋಲ್ ಮೋಟರ್ ಸ್ಟ್ರಾಂಗ್-ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿದೆ. ಇದರಲ್ಲಿ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ 102 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಂ ಎಂದೂ ಕರೆಯಲ್ಪಡುವ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಐಸಿಇ ಯುನಿಟ್ ಮೂಲಕ ಸಂಯೋಜಿತವಾಗಿ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

Most Read Articles

Kannada
English summary
Maruti suzuki will launch two new cng suvs details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X