India
YouTube

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಪರ್ಫಾಮೆನ್ಸ್ ಕಾರು ಮಾರಾಟ ವಿಭಾಗವಾಗಿರುವ ಎಎಂಜಿ ಜೊತೆಗೂಡಿ ಜಿಟಿ ಸರಣಿ ಕಾರು ಮಾದರಿಗಳ ಮಾರಾಟವನ್ನು ಹೆಚ್ಚಿಸುತ್ತಿದ್ದು, ಕಂಪನಿಯು ಇದೀಗ ತನ್ನ ಜನಪ್ರಿಯ ಸೂಪರ್ ಕಾರು ಮಾದರಿಯಾಗಿರುವ ಜಿಟಿ ಬ್ಲ್ಯಾಕ್ ಸೀರಿಸ್ ಮಾದರಿಯನ್ನು ಭಾರತದಲ್ಲೂ ಬಿಡುಗಡೆ ಮಾಡಿದೆ.

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

ವಿಶ್ವಾದ್ಯಂತ ಐಷಾರಾಮಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷವಾಗಿ ಎಎಂಜಿ ಮಾದರಿಗಳ ಮೂಲಕ ಹಲವು ಹೊಸ ಕಾರು ಮಾದರಿಗಳನ್ನು ಪರಿಚಯಿಸಿದ್ದು, ಕಂಪನಿಯು ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಅನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡಿದೆ.

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಅನ್ನು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.50 ಕೋಟಿಗೆ ಬಿಡುಗಡೆಗೊಳಿಸಿದ್ದು, ಸದ್ಯಕ್ಕೆ ಕಂಪನಿಯು ಹೊಸ ಕಾರಿನ ಎರಡು ಯುನಿಟ್‌ಗಳನ್ನು ಮಾತ್ರ ಭಾರತದಲ್ಲಿ ವಿತರಣೆ ಮಾಡುತ್ತಿದೆ.

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಎರಡು ಯುನಿಟ್‌ಗಳು ಈಗಾಗಲೇ ಮಾರಾಟಗೊಂಡಿದ್ದು, ಹೊಸ ಕಾರು ಬಿಡುಗಡೆಯ ದಿನದಂದೆ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ. ಮೊದಲ ಯುನಿಟ್ ಅನ್ನು ನಮ್ಮ ಬೆಂಗಳೂರಿನ ಬ್ರೆನ್ ಗ್ಯಾರೇಜ್ ಮಾಲೀಕ ಭೂಪೇಶ್ ರೆಡ್ಡಿ ಖರೀದಿಸಿದ್ದು, ಮತ್ತೊಂದು ಯುನಿಟ್ ಅನ್ನು ಶೀಘ್ರದಲ್ಲಿಯೇ ವಿತರಣೆ ಮಾಡುವುದಾಗಿ ಕಂಪನಿಯು ಅಧಿಕೃತವಾಗಿ ಹೇಳಿಕೊಂಡಿದೆ.

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

ಸೂಪರ್ ಕಾರುಗಳ ಸಂಗ್ರಹದಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಭೂಪೇಶ್ ರೆಡ್ಡಿ ಬಳಿ ಈಗಾಗಲೇ ಹಲವಾರು ಸೂಪರ್ ಕಾರು ಮಾದರಿಗಳ ಸಂಗ್ರಹಿಸಿದ್ದು, ಇದೀಗ ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಖರೀದಿಸಿದ್ದಾರೆ.

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

ಜಾಗತಿಕ ಪೋರ್ಟ್‌ಫೋಲಿಯೊದಿಂದ ಹೆಚ್ಚು ಅಪೇಕ್ಷಣೀಯ ಮತ್ತು ವಿಶೇಷ ಉತ್ಪನ್ನಗಳಲ್ಲಿ ಒಂದಾಗಿರುವ ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಮಾದರಿಯು ಫ್ಲಾಟ್-ಪ್ಲೇನ್ ಕ್ರ್ಯಾಂಕ್ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್‌ ಜೋಡಣೆ ಹೊಂದಿದೆ.

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಮಾದರಿಯು 7-ಸ್ಪೀಡ್ ಡ್ಯುಯಲ್-ಕ್ಲಚ್ ಸ್ವಯಂಚಾಲಿತ ಗೇರ್‌ಬಾಕ್ಸ್ ಮೂಲಕ 720 ಬಿಎಚ್‌ಪಿ ಮತ್ತು 800 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಕಾರ್ಯಕ್ಷಮತೆ ಸುಧಾರಣೆಗೊಳಿಸಲು ದೊಡ್ಡದಾದ ಟರ್ಬೊಚಾರ್ಜರ್‌ಗಳು, ಹೊಸ ಇಂಟರ್‌ಕೂಲರ್, ಹೊಸ ಕ್ಯಾಮ್‌ಶಾಫ್ಟ್‌ಗಳು ಮತ್ತು ಸ್ಪೋರ್ಟಿ ಎಕ್ಸಾಸ್ಟ್ ಸಿಸ್ಟಂ ಅನ್ನು ಜೋಡಣೆ ಮಾಡಲಾಗಿದೆ.

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

ಮರ್ಸಿಡಿಸ್-ಎಎಂಜಿ ಇತರೆ ಎಎಂಜಿ ಜಿಟಿ ಮಾದರಿಗಳಲ್ಲಿ ಕಂಡುಬರುವ ಎಂಜಿನ್‌ಗೆ ಹೋಲಿಸಿದರೆ ಹೊಸ ಕಾರಿನ ಎಂಜಿನ್ ಹೊಸ ಫೈರಿಂಗ್ ಆರ್ಡರ್ ಹೊಂದಿಲಿದ್ದು, ಕೇವಲ 3.2 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ಪಡೆಯುತ್ತದೆ.

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

100 ಕಿ.ಮೀ ಸ್ಪೀಡ್ ತಲುಪಿದ ನಂತರ ಮುಂದಿನ 9 ಸೆಕೆಂಡುಗಳಲ್ಲಿ 200 ಕಿ.ಮೀ ವೇಗ ತಲುಪುವ ಹೊಸ ಕಾರು ಗಂಟೆಗೆ ಗರಿಷ್ಠ 325 ಕಿ.ಮೀ ಚಲಿಸಲಿದ್ದು, ಹೊಸ ಕಾರಿನಲ್ಲಿ ಅಡಾಪ್ಟಿವ್ ಡ್ಯಾಂಪರ್‌ಗಳೊಂದಿಗೆ ಕಾಯಿಲ್-ಓವರ್ ಸಸ್ಪೆಂಷನ್ ಹಾಗೂ ಮುಂಭಾಗದ ಆಂಟಿ-ರೋಲ್ ಬಾರ್ ಕಾರ್ಬನ್ ಫೈಬರ್ ಘಟಕವನ್ನು ನೀಡಲಾಗಿದೆ.

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

ಹಾಗೆಯೇ ಹೊಸ ಎಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಮುಂಭಾಗದಲ್ಲಿ 19-ಇಂಚಿನ ಚಕ್ರಗಳು ಮತ್ತು ಹಿಂಭಾಗದಲ್ಲಿ 20-ಇಂಚಿನ ಚಕ್ರಗಳನ್ನು ನೀಡಲಾಗಿದ್ದು, ಸ್ಪೋಟಿ ಲುಕ್ ಮತ್ತು ಕಾರ್ಯಕ್ಷಮತೆಗೆ ಪೂರಕವಾಗಿ 10-ಸ್ಪೋಕ್ ಹೊಂದಿರುವ ಮಿಶ್ರಲೋಹದ ಚಕ್ರಗಳೊಂದಿಗೆ ಮೈಕೆಲಿನ್ ಪೈಲಟ್ ಸ್ಪೋರ್ಟ್ ಕಪ್ 2ಆರ್ ಟೈರ್‌ ನೀಡಲಾಗಿದೆ.

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

ಮರ್ಸಿಡಿಸ್ ಎಎಂಜಿ ಬ್ಲ್ಯಾಕ್ ಸರಣಿಯಲ್ಲಿ ಬೃಹತ್ ಬಹು-ಪದರದ ಹಿಂಬದಿಯ ವಿಂಗ್ ಸಹ ನೋಡಬಹುದಾಗಿದ್ದು, ಇದು ಮುಂಭಾಗದಲ್ಲಿ ದೊಡ್ಡದಾದ ಸ್ಪ್ಲಿಟರ್ ಮತ್ತು ಇತರ ಏರೋ ಬಿಟ್‌ಗಳೊಂದಿಗೆ 250 ಕಿ.ಮೀ ವೇಗದಲ್ಲಿ ಒಟ್ಟು 400 ಕೆಜಿಯಷ್ಟು ಡೌನ್‌ಫೋರ್ಸ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

ಬರೋಬ್ಬರಿ ರೂ. 5.50 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರಿಸ್ ಭಾರತದಲ್ಲಿ ಬಿಡುಗಡೆ

ಇನ್ನು ಹೊಸ ಕಾರಿನ ಮೂಲಕ ಮರ್ಸಿಡಿಸ್ ಬೆಂಝ್ ಕಂಪನಿಯು ಸೂಪರ್ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದು, ಕಂಪನಿಯು ವಿಶ್ವಾದ್ಯಾಂತ ಸುಮಾರು 1700 ಯುನಿಟ್ ವಿತರಣೆಗೆ ಸಿದ್ದವಾಗಿದೆ. ಭಾರತದಲ್ಲಿ ಕೇವಲ ಎರಡು ಯುನಿಟ್‌ಗಳನ್ನು ಮಾತ್ರ ವಿತರಣೆ ಮಾಡಲಾಗುತ್ತಿದ್ದು, ಮೊದಲ ಯುನಿಟ್ ಶೀಘ್ರದಲ್ಲಿಯೇ ಬೆಂಗಳೂರಿನ ರಸ್ತೆಗಳಲ್ಲಿ ಸದ್ದು ಮಾಡಲಿದೆ.

Most Read Articles

Kannada
English summary
Mercedes amg gt black series launched in india at rs 5 50 crore details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X