ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ನ್ಯೂ ಜನರೇಷನ್ ಸಿ-ಕ್ಲಾಸ್ ಕಾರನ್ನು ಅನಾವರಣಗೊಳಿಸಿದೆ. ಈ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ 2022ರ ಮೇ 10 ರಂದು ಬಿಡುಗಡೆಯಾಗಲಿದೆ.

ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಇದಲ್ಲದೆ, ಮುಂಬರುವ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ 50,000 ಪಾವತಿಸುವ ಮೂಲಕ ನೇರವಾಗಿ ಬುಕ್ ಮಾಡಬಹುದು. ಅದರ ಜೊತೆಗೆ, ಮರ್ಸಿಡಿಸ್ ಬೆಂಝ್ ಇಂಡಿಯಾ ಈಗಾಗಲೇ ಪುಣೆಯಲ್ಲಿರುವ ಚಕನ್ ಉತ್ಪಾದನಾ ಘಟಕದಲ್ಲಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್ ಉತ್ಪಾದನೆಯನ್ನು ಪ್ರಾರಂಭಿಸಿದೆ. ಇತ್ತೀಚೆಗೆ, ಜರ್ಮನ್ ವಾಹನ ತಯಾರಕರು 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸಿ-ಕ್ಲಾಸ್‌ನ ಮೊದಲ ಉತ್ಪಾದನಾ ಯುನಿಟ್ ಅನ್ನು ಹೊರತಂದಿದೆ.

ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಬಗ್ಗೆ ಹೇಳುವುದಾದರೆ, ಈ ಜರ್ಮನ್ ಸೆಡಾನ್‌ನ 5ನೇ ತಲೆಮಾರಿನ ಮಾದರಿ 2021 ರಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಿದರು ಮತ್ತು ಮುಂಬರುವ ಈ ಸಿ-ಕ್ಲಾಸ್ ಸೆಡಾನ್ ಇಲ್ಲಿಯವರೆಗಿನ ಸೆಡಾನ್‌ನ ಅತ್ಯಾಧುನಿಕ ಆವೃತ್ತಿಯಾಗಿದೆ ಎಂದು ಜರ್ಮನ್ ವಾಹನ ತಯಾರಕರು ಹೇಳಿಕೊಂಡಿದ್ದಾರೆ.

ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಈ ಮಾದರಿಯು ಪ್ರಸ್ತುತ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್‌ಗಿಂತ ಸರಿಸುಮಾರು 65 ಎಂಎಂ ಉದ್ದ ಮತ್ತು 10 ಎಂಎಂ ಅಗಲವಿದೆ. ಅದರ ಜೊತೆಗೆ, ಹೊಸ ತಲೆಮಾರಿನ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ವೀಲ್‌ಬೇಸ್ ಕೂಡ ಉದ್ದವಾಗಿದೆ ಏಕೆಂದರೆ ವೀಲ್‌ಬೇಸ್ ಈಗ 2,865 ಎಂಎಂ ಆಗಿದೆ. ಇನ್ನು ಈ ಕಾರು ನ ಬೂಟ್ ಸುಮಾರು 30-ಲೀಟರ್ ಗಳಷ್ಟು ಹೆಚ್ಚಾಗಿದೆ.

ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದಲ್ಲದೆ, ಈ ಎಲ್ಲಾ ಎಂಜಿನ್ ಆಯ್ಕೆಗಳು 48V ಬೆಲ್ಟ್-ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಅನ್ನು ಸಹ ಹೊಂದಿವೆ. ಈ ಸಿಸ್ಟಂ 19.7 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಮುಂಬರುವ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಎಂಟ್ರಿ ಲೆವೆಲ್ ಮಾದರಿಯು ಸಿ200 ಆಗಿದೆ. ಈ ಆವೃತ್ತಿಯು 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ 201.5 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್‌ನೊಂದಿಗೆ ಬರುತ್ತದೆ.

ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಮತ್ತೊಂದೆಡೆ C200ಡಿ ಮುಂಬರುವ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಡೀಸೆಲ್ ಆವೃತ್ತಿಯಾಗಿದೆ ಮತ್ತು ಈ ಮಾದರಿಯು ದೊಡ್ಡ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ. ಇದಲ್ಲದೆ, ಈ ಎಂಜಿನ್ ಆರೋಗ್ಯಕರ 198 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಮುಂಬರುವ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸಿ300ಡಿ ರೂಪಾಂತರವು ಅತ್ಯಂತ ಶಕ್ತಿಶಾಲಿ ರೂಪಾಂತರವಾಗಿದೆ ಮತ್ತು ಈ ರೂಪಾಂತರವು 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ 262 ಬಿಹೆಚ್‍ಪಿ ಪವರ್ ಮತು 550 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಎಲ್ಲಾ ಮೂರು ಇಂಜಿನ್‌ಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್‌ನಂತೆ ಸಂಯೋಜಿಸಲ್ಪಟ್ಟಿವೆ ಮತ್ತು C200 ರೂಪಾಂತರಕ್ಕೆ 16.9 ಕಿ.ಮೀ, C200d ರೂಪಾಂತರಕ್ಕೆ 23 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಕಾರ್ಯಕ್ಷಮತೆಯ ವಿಷಯದಲ್ಲಿ, C200 ಮತ್ತು C200d ರೂಪಾಂತರಗಳಿಗೆ ಮರ್ಸಿಡಿಸ್-ಬೆಂಝ್ ಕೇವಲ 7.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ, ಆದರೆ C300d ಕೇವಲ 5.7 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ,

ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಬಣ್ಣದ ಆಯ್ಕೆಗಳ ವಿಷಯದಲ್ಲಿ, ಮುಂಬರುವ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಸಲಾಟಿನ್ ಗ್ರೇ, ಮೊಜಾವೆ ಸಿಲ್ವರ್, ಹೈಟೆಕ್ ಸಿಲ್ವರ್, ಮ್ಯಾನುಫಕ್ತುರ್ ಓಪಲೈಟ್ ವೈಟ್, ಕ್ಯಾವನ್ಸೈಟ್ ಬ್ಲೂ ಮತ್ತು ಅಬ್ಸಿಡಿಯನ್ ಬ್ಲಾಕ್.ಎಂಬ 6 ಬಾಹ್ಯ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ .ಇನ್ನು ವಿನ್ಯಾಸದ ವಿಷಯದಲ್ಲಿ, ಮುಂಭಾಗದ ಗ್ರಿಲ್, ಹೆಡ್‌ಲೈಟ್‌ಗಳು, ಟೈಲ್ ಲ್ಯಾಂಪ್‌ಗಳು, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಂತಹ ಅಂಶಗಳು ಭಾರತದಲ್ಲಿನ ಇತರ ನವೀಕರಿಸಿದ ಮರ್ಸಿಡಿಸ್-ಬೆಂಝ್ ಕಾರುಗಳ ವಿನ್ಯಾಸಕ್ಕೆ ಅನುಗುಣವಾಗಿರುತ್ತವೆ.

ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಆದರೆ ಒಳಾಂಗಣ ವಿನ್ಯಾಸವು ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್‌ನ ವಿನ್ಯಾಸದೊಂದಿಗೆ ಅದರ ಎರಡು ದೊಡ್ಡ ಡಿಸ್ ಪ್ಲೇಯನ್ನು ಹೊಂದಿದೆ. ಇದು ದೊಡ್ಡ 11.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ದೊಡ್ಡ 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಗಿದೆ. ಇನ್ನು ಮರ್ಸಿಡಿಸ್-ಬೆಂಝ್ ಇಂಡಿಯಾ ಭಾರತದಲ್ಲಿ ತನ್ನ ಅತ್ಯುತ್ತಮ ತ್ರೈಮಾಸಿಕ (ಜನವರಿ-ಮಾರ್ಚ್) ಮಾರಾಟವನ್ನು ವರದಿ ಮಾಡಿದೆ. ಕಂಪನಿಯು ಈ ತ್ರೈಮಾಸಿಕದಲ್ಲಿ 4,022 ಯುನಿಟ್ ಕಾರುಗಳನ್ನು ಜನವರಿಯಿಂದ ಮಾರ್ಚ್ 2022 ರವರೆಗೆ ವಿತರಿಸುವುದರೊಂದಿಗೆ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಮರ್ಸಿಡಿಸ್-ಬೆಂಝ್ ನ ಇ-ಕ್ಲಾಸ್ ಸೆಡಾನ್ ಕಂಪನಿಯ ಹೆಚ್ಚು ಮಾರಾಟವಾದ ಮಾದರಿಯಾಗಿದೆ, ಆದರೆ ಎಸ್‍ಯುವಿ ಮಾದರಿಗಳಲ್ಲಿ GLC ಮತ್ತು GLE ಮಾದರಿಗಳನ್ನು ಗ್ರಾಹಕರು ಹೆಚ್ಚು ಇಷ್ಟಪಟ್ಟಿದ್ದಾರೆ.

ಐಷಾರಾಮಿ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಅನಾವರಣ

ಮರ್ಸಿಡಿಸ್-ಬೆಂಝ್ ತನ್ನ ಹೊಸ ಎಲೆಕ್ಟ್ರಿಕ್ ಎಸ್‍ಯುವಿ ಇಕ್ಯೂಎಸ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಇದು ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಎಸ್‍ಯುವಿ ಆಗಿದ್ದು ಇದನ್ನು 7-ಸೀಟರ್ ಆಯ್ಕೆಯಲ್ಲಿ ಪರಿಚಯಿಸಲಾಗಿದೆ. ಕಂಪನಿಯು ಆರಂಭದಲ್ಲಿ ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಯುರೋಪ್ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಿದೆ.

Most Read Articles

Kannada
English summary
Mercedes benz unveiled 2022 c class ahead of the launch details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X