ಪ್ರತಿ ಚಾರ್ಜ್‌ಗೆ 857 ಕಿ.ಮೀ ಮೈಲೇಜ್ ಪ್ರೇರಿತ ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಇಕ್ಯೂಎಸ್ 580 4 ಮ್ಯಾಟಿಕ್ ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 1.55 ಕೋಟಿ ಬೆಲೆ ಹೊಂದಿದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ವಿಶ್ವಾದ್ಯಂತ ಎಲೆಕ್ಟ್ರಿಕ್ ಸರಣಿ ಕಾರುಗಳ ಸಂಖ್ಯೆ ಹೆಚ್ಚಿಸಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಎರಡನೇ ಕಾರು ಮಾದರಿಯಾಗಿ ಇಕ್ಯೂಎಸ್ 580 ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಕಾರು ಮಾದರಿಯು ಮರ್ಸಿಡಿಸ್ ನಿರ್ಮಾಣದ ಇತರೆ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್ ಸೇರಿದಂತೆ ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಮಾದರಿಯು ಭಾರತದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಳ್ಳಲಿದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಬ್ಯಾಟರಿ ಮತ್ತು ಮೈಲೇಜ್

ಇಕ್ಯೂಎಸ್ 580 4 ಮ್ಯಾಟಿಕ್ ಎಲೆಕ್ಟ್ರಿಕ್ ಕಾರು ಮಾದರಿಯಲ್ಲಿ ಮರ್ಸಿಡಿಸ್ ಕಂಪನಿಯು 107.8 kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್‌ಗೆ ಎಆರ್‌ಎಐ ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ 857 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಎಲೆಕ್ಟ್ರಿಕ್ ಮೋಟಾರ್ ಮತ್ತು ಪರ್ಫಾಮೆನ್ಸ್

ಹೊಸ ಕಾರಿನಲ್ಲಿ ಮರ್ಸಿಡಿಸ್ ಕಂಪನಿಯು ಎರಡು ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಆಕ್ಸೆಲ್‌ಗೂ ಪ್ರತ್ಯೇಕವಾಗಿ ಶಕ್ತಿ ಪೂರೈಕೆ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್‌ಗೆ ಸಹಕಾರಿಯಾಗಿದೆ.

ಎರಡು ಎಲೆಕ್ಟ್ರಿಕ್ ಮೋಟಾರ್ ಮೂಲಕ ಹೊಸ ಕಾರು 516 ಬಿಎಚ್‌ಪಿ ಮತ್ತು 855 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಹೊಸ ಕಾರು 4.3 ಸೆಕೆಂಡ್‌ಗಳಲ್ಲಿ ಪ್ರತಿಗಂಟೆಗೆ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಬಲ್ಲದು.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಮೂಲಕ ಪ್ರತಿ ಗಂಟೆಗೆ 210 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಇವಿ ಕಾರು ಮಾದರಿಯು ಡ್ರ್ಯಾಗ್ ಗುಣಾಂಕದಲ್ಲಿ ಕೇವಲ 0.20 ಹೊಂದಿದ್ದು, ಬೃಹತ್ ಗಾತ್ರ ಬ್ಯಾಟರಿ ಪ್ಯಾಕ್ ಚಾರ್ಜ್‌ಗಾಗಿ 200kW ವರೆಗಿನ ಡಿಸಿ ಫಾಸ್ಟ್ ಚಾರ್ಜರ್ ಅನ್ನು ಬೆಂಬಲಿಸುತ್ತದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

200kW ಡಿಸಿ ಫಾಸ್ಟ್ ಚಾರ್ಜರ್‌ಗೆ ಪ್ಲಗ್ ಇನ್ ಮಾಡಿದಾಗ ಇಕ್ಯೂಎಸ್ ತನ್ನ ಬ್ಯಾಟರಿ ಪ್ಯಾಕ್ ಅನ್ನು ಕೇವಲ 31 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದಾಗಿದ್ದು, ಹೋಂ ಚಾರ್ಜರ್‌ನಲ್ಲಿ 7.4kW ಎಸಿ ಚಾರ್ಜಿಂಗ್ ಬಾಕ್ಸ್‌ ಪ್ಲಗ್ ಮಾಡಿ ಚಾರ್ಜ್ ಮಾಡಿದ್ದಲ್ಲಿ ಹೊಸ ಕಾರು ಶೇ. 10 ರಿಂದ ಶೇ. 100 ರಷ್ಟು ಚಾರ್ಜ್ ಆಗಲು ಕನಿಷ್ಠ 15 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಒಂದು ವೇಳೆ 11kW ಎಸಿ ಚಾರ್ಜರ್ ಬಾಕ್ಸ್‌ಗೆ ಸಂಪರ್ಕಿ ಚಾರ್ಜ್‌ ಮಾಡಿದ್ದಲ್ಲಿ ಶೇ. 100ರಷ್ಟು ಚಾರ್ಜ್‌ ಅನ್ನು 10 ಗಂಟೆಗಳ ಕಾಲ ತೆಗೆದುಕೊಳ್ಳಲಿದ್ದು, ಹೊಸ ಕಾರು ಬೆಸ್ಪೋಕ್ ದೊಡ್ಡ ಇವಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ನಿರ್ಮಾಣಗೊಂಡಿದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಮರ್ಸಿಡಿಸ್ ಇಕ್ಯೂಎಸ್ ಸೆಡಾನ್ ತನ್ನ ಇಕ್ಯೂ ಎಲೆಕ್ಟ್ರಿಕ್ ಉಪ ಬ್ರಾಂಡ್‌ನಿಂದ ಮೊದಲ ಕಾರು ಮಾದರಿಯಾಗಿದ್ದು, ಬೆಸ್ಪೋಕ್ ದೊಡ್ಡದಾದ ಇವಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ನಿರ್ಮಾಣಗೊಂಡಿದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಹೊಸ ಎಲೆಕ್ಟ್ರಿಕ್ ಸೆಡಾನ್ ಮಾದರಿಯು ಲಿಮೊಸಿನ್ ವೈಶಿಷ್ಟ್ಯತೆ ಹೊಂದಿದ್ದು, ಇದು 5,216 ಎಂಎಂ ಉದ್ದ, 1,926 ಎಂಎಂ ಅಗಲ 1,512 ಎಂಎಂ ಎತ್ತರ ಮತ್ತು 3,210 ಎಂಎಂ ವ್ಹೀಲ್‌ಬೆಸ್ ಉದ್ದ ಹೊಂದಿದ್ದು, ಬೃಹತ್ ಗಾತ್ರದ ಬ್ಯಾಟರಿ ಪ್ಯಾಕ್ ಜೋಡಣೆ ಪರಿಣಾಮ ಹೊಸ ಕಾರು ಒಟ್ಟು 2,585 ಕಿ.ಗ್ರಾಂ ತೂಕ ಹೊಂದಿದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಹೊಸ ಕಾರಿನ ಮುಂಭಾಗದಲ್ಲಿ ಮರ್ಸಿಡಿಸ್ ಕಂಪನಿಯು ನಾಲ್ಕು-ಲಿಂಕ್ ಹೊಂದಿರುವ ಸಸ್ಪೆನ್ಷನ್ ಸೆಟಪ್ ಜೋಡಣೆ ಮಾಡಿದರೆ ಹಿಂಭಾಗದಲ್ಲಿ ಮಲ್ಟಿ-ಲಿಂಕ್ ವ್ಯವಸ್ಥೆಯನ್ನು ಜೋಡಣೆ ಮಾಡಿದ್ದು, ಅಡಾಪ್ಟಿವ್ ಏರ್ ಸಸ್ಪೆನ್ಶನ್‌ನೊಂದಿಗೆ ಇಕೋ, ಕಂಫರ್ಟ್, ಸ್ಪೋರ್ಟ್ ಮತ್ತು ಇಂಡಿವಿಷಲ್ ಮೋಡ್‌ಗಳನ್ನು ಹೊಂದಿದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಇಕ್ಯೂಎಸ್ ವಿನ್ಯಾಸ ಮತ್ತು ವೈಶಿಷ್ಟ್ಯಗಳು

ಮರ್ಸಿಡಿಸ್ ಇಕ್ಯೂಎಸ್ ಸೆಡಾನ್ ಮಾದರಿಯು ಅತ್ಯಂತ ಸುವ್ಯವಸ್ಥಿತ ನೋಟವನ್ನು ಹೊಂದಿದ್ದು, ಇದು ಸಾಂಪ್ರಾದಾಯಿಕ ಸೆಡಾನ್ ಪ್ರಿಯರಿಗೆ ತುಸು ನೀರಸವೆಂದು ಪರಿಗಣಿಸಬಹುದು. ಆದಾಗ್ಯೂ ಹೊಸ ಕಾರು ಅಲ್ಟ್ರಾ ಸ್ಮೂತ್ ವಿನ್ಯಾಸದೊಂದಿಗೆ ಡ್ರ್ಯಾಗ್ ಮೌಲ್ಯವನ್ನು ಹೊಂದಿದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಮುಂಭಾಗದ ವಿನ್ಯಾಸದಲ್ಲಿ ಸಾಂಪ್ರಾದಾಯಿಕ ಗ್ರಿಲ್ ವಿನ್ಯಾಸದ ಬದಲಾಗಿ ಸಂಪೂರ್ಣವಾಗಿ ಮುಚ್ಚಲಾಗಿದ್ದು, ಅದರ ಮಧ್ಯದಲ್ಲಿರುವ ಮೂರು-ಬಿಂದುಗಳು ದೊಡ್ಡ ಮರ್ಸಿಡಿಸ್ ಲೋಗೋವನ್ನು ಹೊಂದಿದ್ದು, ಎರಡೂ ಬದಿಗಳಲ್ಲಿ ಕೋನೀಯವಾಗಿರುವ ಎಲ್ಇಡಿ ಹೆಡ್‌ಲೈಟ್‌ಗಳ ಗ್ರಿಲ್ ವಿಭಾಗದ ಮೇಲೆ ಚಲಿಸುವ ಎಲ್ಇಡಿ ಲೈಟ್ ಬಾರ್ ಮೂಲಕ ಪರಸ್ಪರ ಸಂಪರ್ಕಿಸಲಾಗಿದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಹಾಗೆಯೇ ಮುಂಭಾಗದ ಬಂಪರ್‌ನಲ್ಲಿ ಆಂತರಿಕವಾಗಿ ಉತ್ಪಾದನೆಯಾಗುವ ಬಿಸಿಗಾಳಿಯನ್ನು ತಂಪಾಗಿರಿಸಲು ಸಹಾಯವಾಗುವಂತೆ ದೊಡ್ಡದಾದ ಸೆಂಟ್ರಲ್ ಏರ್‌ಇನ್‌ಟೆಕ್ ಜೋಡಿಸಿದ್ದು, 20-ಇಂಚಿನ 5-ಸ್ಪೋಕ್ ಅಲಾಯ್ ವೀಲ್‌ಗಳು ಹೈ ಶೀನ್ ಫಿನಿಶ್ ಬ್ಲ್ಯಾಕ್ ಫಿನಿಶ್ ನೀಡಲಾಗಿದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಇಕ್ಯೂಎಸ್ ಕಾರಿನ ಹಿಂಭಾಗದ ವಿಭಾಗವು ಕೂಡಾ ದೊಡ್ಡದಾದ ಲೈಟ್ ಬಾರ್ ಶೈಲಿಯ ಟೈಲ್‌ಲೈಟ್‌ಗಳಿಂದ ಪ್ರಾಬಲ್ಯ ಹೊಂದಿದ್ದು, ಜೊತೆಗೆ ಬೂಟ್ ಸ್ಪೆಸ್ ಮುಚ್ಚಳವು ದೊಡ್ಡದಾದ ಮರ್ಸಿಡಿಸ್ ಮೂರು-ಬಿಂದುಗಳ ನಕ್ಷತ್ರದ ಬ್ಯಾಡ್ಜ್ ಅನ್ನು ಹೊಂದಿದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಮರ್ಸಿಡಿಸ್ ಇಕ್ಯೂಸಿ 580 ಒಳಗೆ ಹೆಜ್ಜೆಹಾಕುತ್ತಿದ್ದಂತೆ ವಿಶಾಲವಾದ ಕ್ಯಾಬಿನ್ ಸ್ವಾಗತಿಸಲಿದ್ದು, 56-ಇಂಚಿನ ಹೈಪರ್‌ಸ್ಕ್ರೀನ್ ಡಿಸ್‌ಪ್ಲೇ ಡ್ಯಾಶ್‌ಬೋರ್ಡ್ ಉದ್ದಕ್ಕೂ ವಿಸ್ತರಿಸಿದೆ. ಈ ಹೈಪರ್‌ಸ್ಕ್ರೀನ್ ವಾಸ್ತವವಾಗಿ ಮೂರು ಡಿಸ್ಪ್ಲೇಗಳನ್ನು ಒಳಗೊಂಡಿದ್ದು, 12.3-ಇಂಚಿನ ಡ್ರೈವರ್ ಡಿಸ್ಪ್ಲೇ, 17.7-ಇಂಚಿನ ಸೆಂಟ್ರಲ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಮತ್ತು ಮುಂಭಾಗದ ಪ್ರಯಾಣಿಕರಿಗೆ ಮತ್ತೊಂದು 12.3-ಇಂಚಿನ ಡಿಸ್ಪ್ಲೇ, ಹೈಪರ್‌ಸ್ಕ್ರೀನ್ ಸೆಟಪ್ ಜೊತೆ ಎಂಯುಬಿಎಕ್ಸ್ ಸೆಟಪ್ ಅನ್ನು ಹೊಂದಿದೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಇದರೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಯಂತಹ ಸಂಪರ್ಕಿತ ಕಾರ್ ಸೌಲಭ್ಯಗಳ ಆಯ್ಕೆಗಳನ್ನು ನೀಡುತ್ತದೆ. ಹಾಗೆಯೇ ನಪ್ಪಾ ಲೆದರ್ ಆಸನಗಳು, ಡ್ಯಾಶ್‌ಬೋರ್ಡ್ ವುಡ್ ಟ್ರಿಮ್ ಕಾರಿಗೆ ಮತ್ತಷ್ಟು ಐಷಾರಾಮಿ ಲುಕ್ ನೀಡಿದ್ದು, ಬರ್ಮೆಸ್ಟರ್ ಸರೌಂಡ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಏರ್ ಐಯಾನೈಸರ್ನ ಮರ್ಕ್ ಏರ್ ಬ್ಯಾಲೆನ್ಸ್ ಸೆಟಪ್ ಮತ್ತು ಸುಗಂಧ ಹೊಂದಿರುವ ಡಿಫ್ಯೂಸರ್ ಸೌಲಭ್ಯಗಳಿವೆ.

ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಜೊತೆಗೆ ಹೊಸ ಕಾರಿನಲ್ಲಿ ವೈರ್‌ಲೆಸ್ ಫೋನ್ ಚಾರ್ಜಿಂಗ್ ಪ್ಯಾಡ್, ಒನ್ ಟಚ್ ಮೂಲಕ ಹೊಂದಾಣಿಕೆ ಮಾಡಬಹುದಾದ ಮಸಾಜ್ ಸೀಟ್‌ಗಳು ಮತ್ತು ಮಲ್ಟಿ ಜೋನ್ ಹವಾಮಾನ ನಿಯಂತ್ರಣ ಸೌಲಭ್ಯವಿದ್ದು, ಅಬ್ಸಿಡಿಯನ್ ಬ್ಲಾಕ್, ಗ್ರ್ಯಾಫೈಟ್ ಗ್ರೇ, ಡೈಮಂಡ್ ವೈಟ್ ಬ್ರೈಟ್, ಸೋಡಾಲೈಟ್ ಬ್ಲೂ ಮತ್ತು ಹೈ-ಟೆಕ್ ಸಿಲ್ವರ್ ಬಣ್ಣಗಳ ಆಯ್ಕೆ ಹೊಂದಿದೆ.

Most Read Articles

Kannada
English summary
Mercedes eqs 580 ev sedan launched in india at rs 1 55 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X