ಭಾರತದಲ್ಲಿ ಅತ್ಯಂತ ಕೈಗೆಟುವ ಬೆಲೆಯಲ್ಲಿ ಸಿಗಲಿದೆ MG ಎಲೆಕ್ಟ್ರಿಕ್ ಕಾರ್!

ಭಾರತವು ಸೇರಿದಂತೆ ವಿಶ್ವದಾದ್ಯಂತ ವಾಹನ ತಯಾರಿಕ ಕಂಪನಿಗಳು ಎಲೆಕ್ಟ್ರಿಕ್ ವಾಹನ ತಯಾರಿಕೆಯತ್ತ ಮುಖ ಮಾಡಿವೆ. ಎಂಟ್ರಿ-ಲೆವೆಲ್ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಆರಂಭದಲ್ಲಿಯೇ ಪ್ರಗತಿ ಸಾಧಿಸುವ ಗುರಿ ಹೊಂದಿರುವ ಬ್ರಿಟಿಷ್ ಕಂಪನಿ 'ಎಂಜಿ ಮೋಟಾರ್' ಭಾರತೀಯ ಮಾರುಕಟ್ಟೆಯಲ್ಲಿ 2-ಡೋರ್ EV ಕಾರು ಪರಿಚಯಿಸಲು ಕೆಲಸ ಮಾಡುತ್ತಿದೆ.

ಸುಮಾರು 2,900 ಎಂಎಂ ಉದ್ದ ಹೊಂದಿರುವ MG ಏರ್ ಇವಿ, ಭಾರತದ ಅತ್ಯಂತ ಚಿಕ್ಕ ಕಾರುಗಳಲ್ಲಿ ಒಂದಾಗಲಿದೆ. ಇದು ಮಾರುತಿ ಸುಜುಕಿ ಆಲ್ಟೊಗಿಂತ 400 ಎಂಎಂ ಕಡಿಮೆ ಉದ್ದವಿದೆ. ಭಾರತದ ಗ್ರಾಹಕರಿಗೆ ಮಾರಾಟ ಮಾಡಲು ರೆಡಿಯಾಗುತ್ತಿರುವ ಹೊಸ MG ಏರ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸವು E230 ಕಾರಿನ ವಿನ್ಯಾಸವನ್ನು ಹೋಲುತ್ತಿದೆ. MGಯ ಇತ್ತೀಚಿನ ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್ಸ್ (GSEV) ಪ್ಲಾಟ್‌ಫಾರ್ಮ್‌ನಲ್ಲಿ ಈ ಕಾರನ್ನು ತಯಾರಿಸುತ್ತಿದ್ದು, ಒಳಭಾಗದಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿರುವ ಸಾಧ್ಯತೆಯಿದೆ.

ಭಾರತದಲ್ಲಿ ಅತ್ಯಂತ ಕೈಗೆಟುವ ಬೆಲೆಯಲ್ಲಿ ಸಿಗಲಿದೆ MG ಎಲೆಕ್ಟ್ರಿಕ್ ಕಾರ್!

ಸದ್ಯ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿರುವ MG ಏರ್ ಎಲೆಕ್ಟ್ರಿಕ್ ಕಾರಿನಲ್ಲಿ ಸ್ಟೈಲಿಂಗ್ ರಿಯರ್ ವ್ಯೂ ಮಿರರ್‌ಗಳನ್ನು ಸಂಪರ್ಕಿಸಲು ಫುಲ್ ವಿಡ್ತ್ ಲೈಟ್ ಬಾರ್‌ನಂತಹ ಕೆಲವು ವಿಶಿಷ್ಟ ಸ್ಟೈಲಿಂಗ್ ಬಿಟ್‌ಗಳಿವೆ. MG ಲೋಗೋದ ಕೆಳಗೆ ಚಾರ್ಜಿಂಗ್ ಪೋರ್ಟ್ ಇದೆ. ಈ ಹೊಸ ಕಾರಿನಲ್ಲಿರುವ ಇತರೇ ಪ್ರಮುಖ ವೈಶಿಷ್ಟ್ಯಗಳಲ್ಲಿ ಟ್ರೆಪೆಜಾಯ್ಡಲ್ ಹೆಡ್‌ಲ್ಯಾಂಪ್‌ಗಳು, ಆಯತಾಕಾರದ ಫಾಗ್ ಲೈಟ್ಸ್ ಮತ್ತು ಕಾರಿನ ಬಾಡಿ ಬಣ್ಣವೇ ಬಂಪರ್ ಗೂ ಸಹ ಇದೆ ಎಂದು ಹೇಳಲಾಗಿದೆ.

ಸೆಕೆಂಡ್ ರೋ ಸೀಟಿಗೆ ಸುಲಭವಾಗಿ ಪ್ರವೇಶಿಸಲು ಮತ್ತು ಹೊರಹೋಗಲು, ಈ EVಯು ದೊಡ್ಡ ಬಾಗಿಲುಗಳನ್ನು ಹೊಂದಿದ್ದು, ಹಿಂಭಾಗದ ಪ್ರಯಾಣಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ದೊಡ್ಡ, ಲಂಬವಾದ ಕಿಟಕಿಗಳಿವೆ. ಅಲ್ಲದೆ, MG ಏರ್ ಇವಿಯು ಅಲಾಯ್ ವೀಲ್ ಗಳನ್ನು ಹೊಂದುವ ಸಾಧ್ಯತೆಯಿದೆ. ರೇರ್ ವಿನ್ಯಾಸವು ಫ್ರಂಟ್ ಫಾಸ್ಸಿಯವನ್ನು ಹೋಲುತ್ತದೆ. ಸಂಪೂರ್ಣ ಅಗಲವಾದ ಲೈಟ್ ಬಾರ್, ಬಾಗಿದ ವಿಂಡ್‌ಸ್ಕ್ರೀನ್ ಮತ್ತು ನಯವಾದ ಟೈಲ್ ಲೈಟ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಹೇಳಬಹುದು.

MGಯ ಹೊಸ EV ಸುಮಾರು 20 kWh ನಿಂದ 25kWh ಬ್ಯಾಟರಿ ಪ್ಯಾಕ್‌ನೊಂದಿಗೆ ಸಿದ್ಧಗೊಳುತ್ತಿದ್ದು, ಪವರ್ ಔಟ್ ಪುಟ್ 40 hp ಆಗಿರುತ್ತದೆ. ಇದು ಸುಮಾರು 150 ಕಿ.ಮೀ ತನಕ ಕ್ರಮಿಸಬಹುದು. ತನ್ನ EVಯು ಭಾರತದ ವಿವಿಧ ಹವಾಮಾನ, ಅಲ್ಲಿನ ಪರಿಸರಕ್ಕೆ ಸರಿಹೊಂದುವಂತೆ ಮಾಡಲು MG ಹಲವಾರು ಟ್ವೀಕ್‌ಗಳನ್ನು ಪರಿಚಯಿಸುತ್ತದೆ. ಬ್ಯಾಟರಿ ಥರ್ಮಲ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮತ್ತು ಏರ್ ಕಂಡೀಷನ್ ನಂತಹ ಪ್ರಮುಖ ವೈಶಿಷ್ಟಗಳನ್ನು ಈ ಕಾರು ಹೊಂದಿರಲಿದೆ.

ಅಲ್ಲದೆ ಕಂಪನಿಯು ತನ್ನ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು MG ಸ್ಥಳೀಯ ಮಾರಾಟಗಾರರಿಂದ ಪ್ರಮುಖ ಬಿಡಿಭಾಗಗಳನ್ನು ಖರೀದಿ ಮಾಡುತ್ತಿದೆ. ಉದಾಹರಣೆಗೆ, ಬ್ಯಾಟರಿ ಪ್ಯಾಕ್ ಅನ್ನು ಟಾಟಾ ಆಟೋಕಾಂಪ್‌ನಿಂದ ಪಡೆಯುತ್ತಿದ್ದಾರೆ. ಚೀನಾದ ಬ್ಯಾಟರಿ ಪೂರೈಕೆದಾರ ಗೋಷನ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಕಂಪನಿ ಭಾರತದಲ್ಲಿ EVಗಳಿಗಾಗಿ ಬ್ಯಾಟರಿ ಪ್ಯಾಕ್‌ಗಳ ವಿನ್ಯಾಸ, ಉತ್ಪಾದನೆ ಹಾಗೂ ಪೂರೈಕೆಯಂತಹ ಸೇವೆಯನ್ನು ಒದಗಿಸುತ್ತದೆ. ಬ್ಯಾಟರಿ ಪ್ಯಾಕ್ LFP ಸಿಲಿಂಡ್ರಿಕಲ್ ಸೆಲ್ಸ್ ಅನ್ನು ಹೊಂದಿರುತ್ತದೆ. ಇದು ಟಾಟಾ ನೆಕ್ಸಾನ್ EVಯಂತೆಯೇ ಇರುತ್ತದೆ. ಜೊತೆಗೆ ಹೆಚ್ಚು ವಿಶ್ವಾಸಾರ್ಹವಾಗಿದೆ.

ಮೂಲಗಳ ಪ್ರಕಾರ, MG ಏರ್ ಎಲೆಕ್ಟ್ರಿಕ್ ಕಾರಿನ ಉತ್ಪಾದನೆಯು ಮಾರ್ಚ್ 2023ರಿಂದ ಪ್ರಾರಂಭವಾಗಲಿದ್ದು, ವಾರ್ಷಿಕ ಉತ್ಪಾದನಾ ಗುರಿಯನ್ನು 36,000 ಯುನಿಟ್‌ಗಳಿಗೆ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ. ಎಂಜಿಯು ಎಂಟ್ರಿ ಲೆವೆಲ್ EV ಆರಂಭಿಕ ಬೆಲೆ ಸುಮಾರು 10 ಲಕ್ಷ ರೂ. ನಿಂದ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಪರಿಸರ ಸ್ನೇಹಿ ವಾಹನಗಳನ್ನು ಹುಡುಕುತ್ತಿರುವವರು ಈ ಕಾರು ಇಷ್ಟವಾಗಲಿದೆ. ಶ್ರೀಮಂತ ಕುಟುಂಬಗಳು ಸಹ ದೈನಂದಿನ ಕೆಲಸಕ್ಕೆ ಈ EVಯನ್ನು ಉಪಯೋಗ ಮಾಡಬಹುದು. ಸಣ್ಣ ನಗರಗಳಲ್ಲಿ ವಾಸಿಸುವ ಜನರು ಇದನ್ನು ತಮ್ಮ ಪ್ರಾಥಮಿಕ ಕಾರಾಗಿ ಬಳಸಬಹುದು.

ಭಾರತದ ಗ್ರಾಹಕರನ್ನು ತನ್ನತ್ತ ಸೆಳೆಯಲು MG ಈ ಹೊಸ EVಯಲ್ಲಿ ದೊಡ್ಡ ಟಚ್‌ಸ್ಕ್ರೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ನೀಡುವ ಸಾಧ್ಯತೆಯಿದೆ. 2023ರ ಆಟೋ ಎಕ್ಸ್‌ಪೋದಲ್ಲಿ ಹೊಸ EVಯನ್ನು ಅನಾವರಣಗೊಳಿಸಲು ಕಂಪನಿ ಸಿದ್ಧವಾಗಿದೆ. ಮಾರುಕಟ್ಟೆಗೆ ಅದೇ ವರ್ಷದ ಮಧ್ಯಭಾಗದಲ್ಲಿ ಬರಬಹುದು. ಮೈಕ್ರೋ EVಗಳು ಚೀನಾದಲ್ಲಿ ಯಶಸ್ವಿಯಾಗಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಲ್ಲದೆ, ಟಾಟಾ ಮೋಟಾರ್ಸ್ ತನ್ನ ನ್ಯಾನೋವನ್ನು ಎಲೆಕ್ಟ್ರಿಕ್‌ ಕಾರ್ ಆಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ.

Most Read Articles

Kannada
English summary
Mg electric car will be available at the most affordable price in India
Story first published: Friday, December 9, 2022, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X