ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

ಚೀನಾದ ಒಡೆತನದ ಬ್ರಿಟಿಷ್ ವಾಹನ ತಯಾರಕ ಎಂಜಿ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ. ಎಂಜಿ ಮೋಟಾರ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರನ್ನು ಕೂಡ ಮಾರಾಟ ಮಾಡುತ್ತಿದೆ.

ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

ಭಾರತದಲ್ಲಿ ಮಾರಾಟವಾಗುತ್ತಿರುವ ಎಂಜಿ ಮೋಟಾರ್ ಕಾರುಗಳು SAIC-Wuling-GM ನಿಂದ ತಯಾರಿಸಲ್ಪಟ್ಟ ಮರುಬ್ರಾಂಡ್ ಮಾಡಿದ ಚೈನೀಸ್ ವಾಹನಗಳಾಗಿವೆ. ಉದಾಹರಣೆಗೆ ಎಂಜಿ ಹೆಕ್ಟರ್ ಶೀಘ್ರದಲ್ಲೇ ಮುಂದಿನ ಜನರೇಷನ್ ಅವತಾರವನ್ನು ಪಡೆಯಲು ಸಿದ್ಧವಾಗಿದೆ. ಈ ಹೆಕ್ಟರ್ ಎಸ್‍ಯುವಿಯು Baojun 530 ಎಂಬ ಮಾದರಿಯಾಗಿದೆ. ಆದರೆ ಭಾರತದಲ್ಲಿ ಹೆಕ್ಟರ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಇತರ ಮಾರುಕಟ್ಟೆಯಲ್ಲಿ ವುಲಿಂಗ್ ಅಲ್ಮಾಜ್ ಮತ್ತು ಷೆವರ್ಲೆ ಕ್ಯಾಪ್ಟಿವಾ ಎಂದು ಸಹ ಮಾರಾಟ ಮಾಡಲಾಗುತ್ತದೆ. ಚೀನಾ ವಿಶ್ವದ ಅತಿ ದೊಡ್ಡ ವಾಹನ ಮಾರುಕಟ್ಟೆಯಾಗಿದೆ ನಂತರ ಯುಎಸ್ಎ ಆಗಿದೆ.

ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

ಎಂಜಿಯ ಸಾಮಾನ್ಯ ಕಾರುಗಳು ಭಾರತದಲ್ಲೂ ಸಾಕಷ್ಟು ಜನಪ್ರಿಯವಾಗಿವೆ. ಆದರೆ ಚೀನಾ ಮಿನಿ ಎಲೆಕ್ಟ್ರಿಕ್ ಕಾರುಗಳನ್ನು ಮುದ್ದಾದ ಮತ್ತು ಚೀನಾದ ದಟ್ಟಣೆಯ ರಸ್ತೆಗಳಲ್ಲಿ ಉತ್ತಮ ಆಯ್ಕೆಯಾಗಿದೆ. ಇವುಗಳು ಜಪಾನ್‌ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಕೀ ಕಾರ್ ವಿಭಾಗದಿಂದ ಸ್ಫೂರ್ತಿ ಪಡೆದಿವೆ.

ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

ಕೀ ಕಾರಿಗೆ ಒಂದು ಉದಾಹರಣೆಯೆಂದರೆ ಸುಜುಕಿ ಆಲ್ಟೋ ಲ್ಯಾಪಿನ್ ಎಲ್‌ಸಿ ಇದನ್ನು ಜೂನ್ 2022 ರಲ್ಲಿ ಪ್ರಾರಂಭಿಸಲಾಯಿತು. ಇನ್ನು ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸುತ್ತಿರುವ ಎಂಜಿ ಏರ್ ಇವಿ ನೆನಪಿದೆಯೇ? ಅದು ಮತ್ತು ವುಲಿಂಗ್‌ನ Hongguang Mini ಇವಿ ಜೊತೆ ನಿಕಟ ಸಂಬಂಧ ಹೊಂದಿದೆ.

ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

ಇದಷ್ಟೇ ಅಲ್ಲ, ಬಾಜುನ್ ಇ100, ಇ200 ಮತ್ತು ಇ300 ಕೂಡ ಸಂಬಂಧಿಸಿವೆ. ಇವೆಲ್ಲವೂ ಎರಡು ಡೋರುಗಳನ್ನು ಹೊಂದಿರುವ ಮಿನಿ ಎಲೆಕ್ಟ್ರಿಕ್ ಕಾರುಗಳಿವೆ. ದಟ್ಟಣೆಯಿರುವ ದೊಡ್ಡ ನಗರಗಳಲ್ಲಿ ಈ ಮಿನಿ ಕಾರುಗಳು ಹೆಚ್ಚು ಸೂಕ್ತವಾಗಿದೆ. ಚೀನಾದಲ್ಲಿ ಇಂತಹ ಮಿನಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

Wuling Hongguang Mini ಇವಿ ಬಗ್ಗೆ ತಿಳಿದಿಲ್ಲದ ಜನರಿಗೆ, ಇದು ಚೀನಾದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು, ಇದು ಅತಿದೊಡ್ಡ ವಾಹನ ಮಾರುಕಟ್ಟೆಯಾಗಿದೆ. ಇದು ಕೇವಲ 2022ರ ಜುಲೈ ತಿಂಗಳಿನಲ್ಲಿ 56,609 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಎಷ್ಟು ದೊಡ್ಡ ಸಂಖ್ಯೆ ಅಂಡರೆ ಹ್ಯುಂಡೈ ಇಂಡಿಯಾ ಭಾರತದಲ್ಲಿ ಒಂದೇ ತಿಂಗಳಲ್ಲಿ ತಮ್ಮ ಎಲ್ಲಾ ವಾಹನಗಳ 50,500 ಯುನಿಟ್‌ಗಳನ್ನು ಮಾರಾಟ ಮಾಡಿ ಎರಡು ಸ್ಥಾನ ಗಳಿಸಿತು.

ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

Wuling Hongguang ಮಿನಿ ಎವಿಯು ಚೀನಾದಲ್ಲಿ ಫೋಕ್ಸ್‌ವ್ಯಾಗನ್ ಲಾವಿಡಾಕ್ಕಿಂತ ಹೆಚ್ಚು ಮಾರಾಟವಾಗುತ್ತದೆ. ವಿಡಬ್ಲ್ಯು ಚೀನಾದಲ್ಲಿ ದೀರ್ಘಕಾಲದವರೆಗೆ ಇದೆ. ಈ ಜನಪ್ರಿಯತೆಯೊಂದಿಗೆ, ಕನ್ವರ್ಟಿಬಲ್ ಕ್ಯಾಬ್ರಿಯೊಲೆಟ್ ಆವೃತ್ತಿಯೊಂದಿಗೆ ಹೆಚ್ಚಿನ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ವುಲಿಂಗ್ ಹೊಂದಿದೆ.

ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

ಇದು 2021ರ ಶಾಂಘೈ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್ ಕಾರ್ ಅನ್ನು ಆಧರಿಸಿದೆ. ಮಿನಿ ಇವಿ ಕ್ಯಾಬ್ರಿಯೊಲೆಟ್ ಐಷಾರಾಮಿ ಒಳಾಂಗಣವನ್ನು ಸಹ ಪಡೆಯುತ್ತದೆ. ಇದು ಸಿ-ಆಕಾರದ ಎಲ್ಇಡಿ ಡಿಆರ್ಎಲ್ಗಳು ಮತ್ತು ಎಲ್ಇಡಿ ಹೆಡ್ಲೈಟ್ಗಳು, ಪ್ರಕಾಶಿತ ವುಲಿಂಗ್ ಲೋಗೋ ಮತ್ತು ಬಂಪರ್ ನಲ್ಲಿ ಎಲ್ಇಡಿ ಡಿಆರ್ಎಲ್ ಅನ್ನು ಹೊಂದಿದೆ.

ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

ಇದರೊಂದಿಗೆ ಸೊಗಸಾದ ಅಲಾಯ್ ವ್ಹೀಲ್ ಗಳು, ಎಕ್ಸ್-ಆಕಾರದ ಎಲ್ಇಡಿ ಟೈಲ್ ಲೈಟ್ ಗಳು, ಐವರಿ ಕಲರ್ ಅಪ್ಹೋಲ್ಸ್ಟರಿ ಮತ್ತು ಡ್ಯಾಶ್ಬೋರ್ಡ್ ಅಂಶಗಳು ಮತ್ತು ಇತರ ಅಂಶಗಳನ್ನು ಒಳಗೊಂಡಿರುತ್ತದೆ. ಇದು ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಪಡೆಯುವುದಿಲ್ಲ ಮತ್ತು ದೊಡ್ಡ ಡ್ರೈವರ್ ಡಿಸ್‌ಪ್ಲೇಯನ್ನು ಪಡೆಯುತ್ತದೆ. ಇದರೊಂದಿಗೆ ಇದು ಮುದ್ದಾದ ರಿಮೋಟ್ ಕೀ, ಮುಂಭಾಗದ ಪವರ್ ವಿಂಡೋಗಳು ಮತ್ತು IRVM ಬಟನ್‌ಗಳನ್ನು ಸಹ ಪಡೆಯುತ್ತದೆ. ಇನ್ನು ಹೊಸ ಎಂಜಿ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಫ್ರೇಮ್‌ಲೆಸ್ ಡೋರುಗಳನ್ನು ಸಹ ಪಡೆಯುತ್ತದೆ.

ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

ಈ ಹೊಸ ಎಂಜಿ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು 3,059mm ಉದ್ದ, 1,521mm ಅಗಲ, 1,614mm ಎತ್ತರ ಮತ್ತು 2,010mm ವೀಲ್‌ಬೇಸ್ ಅನ್ನು ಹೊಂದಿದೆ. ಇದು ಎಂಜಿ ಏರ್ ಇವಿಯ ಲಾಂಗ್ ರೇಂಜ್ 26 kWh ಬ್ಯಾಟರಿ ಪ್ಯಾಕ್ ನೊಂದಿಗೆ ಬರುತ್ತದೆ. ಇದು 110 ಎನ್ಎಂ ನೊಂದಿಗೆ 40 ಬಿಹೆಚ್‍ಪಿ ಮೋಟಾರ್ ಅನ್ನು ಪಡೆಯುವ ಸಾಧ್ಯತೆಯಿದೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

ಹಾಗೆಯೇ ಈ ಕಾರನ್ನು ಈಗಿನಿಂದಲೇ ಖರೀದಿಸಬೇಕು ಎಂಬ ಆಸೆ ನಿಮ್ಮಲ್ಲಿದ್ದರೆ ಶೋರೂಮ್ ಗೆ ಹೋಗಿ ಖರೀದಿಸುವಷ್ಟು ಸರಳವಲ್ಲ. ನಿರೀಕ್ಷಿತ ಗ್ರಾಹಕರು LING ಕ್ಲಬ್ ಅಪ್ಲಿಕೇಶನ್ ಮೂಲಕ ಭಾಗವಹಿಸಬೇಕು ಮತ್ತು ಫಲಿತಾಂಶಗಳನ್ನು ಸೆಪ್ಟೆಂಬರ್ 21 ರಂದು ಪ್ರಕಟಿಸಲಾಗುವುದು.

ಕೇವಲ 3 ಮೀಟರ್ ಉದ್ದದ ಮಿನಿ ಎಲೆಕ್ಟ್ರಿಕ್ ಕನ್ವರ್ಟಿಬಲ್ ಕಾರು ಪರಿಚಯಿಸಿದ ಎಂಜಿ

ಇನ್ನು ಎಂಜಿ ಮೋಟಾರ್ ಇಂಡಿಯಾ 2022ರ ಆಗಸ್ಟ್ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳು ಎಂಜಿ ಮೋಟಾರ್ ಇಂಡಿಯಾ ಕಂಪನಿಯು 3,823 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಆಗಸ್ಟ್ ತಿಂಗಳಿನಲ್ಲಿ 4,315 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ.11.4 ರಷ್ಟು ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಒಟ್ಟಾರೆಯಾಗಿ ಕಳೆದ ತಿಂಗಳು ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿದೆ.

Most Read Articles

Kannada
English summary
Mg mini electric car debuts with convertible feature details
Story first published: Monday, September 5, 2022, 16:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X