ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ ಜೂನ್ 2022ರ ಮಾರಾಟ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ, ಜೂನ್ ತಿಂಗಳಲ್ಲಿ 4,503 ಯುನಿಟ್ ಕಾರುಗಳು ಮಾರಾಟವಾಗಿದ್ದು, ಈ ಮೂಲಕ ವರ್ಷದಿಂದ ವರ್ಷಕ್ಕೆ ಶೇ 27 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ಕಂಪನಿಯ ಪ್ರಕಾರ ಪ್ರಮುಖ ಹೆಕ್ಟರ್ SUV ಮತ್ತು ZS EV ಗಾಗಿ ಜೂನ್‌ನಲ್ಲಿ ಕ್ರಮವಾಗಿ 4,000 ಯುನಿಟ್ ಮತ್ತು 1,000 ಯುನಿಟ್‌ಗಳ ಬುಕ್ಕಿಂಗ್‌ಗಳು ದಾಖಲಾಗಿವೆ. ಸುಧಾರಿತ ಸೆಮಿಕಂಡಕ್ಟರ್ ಪೂರೈಕೆಯಿಂದಾಗಿ ಮಾರಾಟವು ಹೆಚ್ಚಿದೆ, ಆದರೆ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿಯು ಅಡ್ಡಿಪಡಿಸಿತು ಎಂದು ಕಂಪನಿ ಹೇಳಿದೆ.

ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ಉತ್ಪಾದನೆ ಮತ್ತು ಪೂರೈಕೆ-ಸರಪಳಿ ಸಮಸ್ಯೆಗಳನ್ನು ಪರಿಹರಿಸಲು ಕಾರು ತಯಾರಕರು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಕಂಪನಿಯು ಗುಜರಾತ್‌ನಲ್ಲಿರುವ ತನ್ನ ಹಾಲೋಲ್ ಘಟಕದಲ್ಲಿ ಕಾರುಗಳನ್ನು ತಯಾರಿಸುತ್ತಿದೆ. ಸ್ಥಾವರದಲ್ಲಿ ವಾರ್ಷಿಕವಾಗಿ 80,000 ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ಈ ಮೂಲಕ ಪ್ರತ್ಯಕ್ಷವಾಗಿ 2,500 ಉದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸುತ್ತಿದೆ. ಕಂಪನಿಯು ಭಾರತದಲ್ಲಿ ಸೆಗ್ಮೆಂಟ್ ವಾಹನಗಳಲ್ಲಿ ಮೊದಲನೆಯದನ್ನು ಪರಿಚಯಿಸಿದೆ. ಇವುಗಳಲ್ಲಿ MG ಹೆಕ್ಟರ್ SUV, ಇದು ಭಾರತದ ಮೊದಲ ಇಂಟರ್ನೆಟ್ SUV ಆಗಿದೆ. MG ZS EV ಭಾರತದ ಮೊದಲ ಶುದ್ಧ ಎಲೆಕ್ಟ್ರಿಕ್ SUV ಆಗಿದೆ.

ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ಇದಲ್ಲದೆ, ಕಂಪನಿಯು MG ಗ್ಲೋಸ್ಟರ್ ಮತ್ತು MG ಆಸ್ಟರ್ ಅನ್ನು ಸಹ ಮಾರಾಟ ಮಾಡುತ್ತಿದೆ, ಇದು ಸ್ವಾಯತ್ತ ಮಟ್ಟ-2 ತಂತ್ರಜ್ಞಾನ ಮತ್ತು ವೈಯಕ್ತಿಕ AI ಸಹಾಯಕವನ್ನು ಹೊಂದಿರುವ ದೇಶದ ಮೊದಲ SUV ಆಗಿದೆ.

ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ ಕಾರನ್ನು ತರುತ್ತಿದೆ ಎಂಜಿ

ಎಂಜಿ ಮೋಟಾರ್ ಭಾರತದಲ್ಲಿ ಶೀಘ್ರದಲ್ಲೇ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇತ್ತೀಚೆಗೆ ಇದು ಭಾರತದಲ್ಲಿ ಆನ್‌ ರೋಡ್ ಟೆಸ್ಟ್ ಸಮಯದಲ್ಲಿ ಕಂಡುಬಂದಿದೆ. ಮಾಹಿತಿಯ ಪ್ರಕಾರ, MG ಯ ಮಿನಿ ಎಲೆಕ್ಟ್ರಿಕ್ ಕಾರು ಚೀನಾದಲ್ಲಿ ಮಾರಾಟವಾಗುವ ವುಲಿಂಗ್ EV ಅನ್ನು ಆಧರಿಸಿರಬಹುದು ಎನ್ನಲಾಗಿದೆ.

ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ಇದು ಮೂರು-ಬಾಗಿಲಿನ ಹ್ಯಾಚ್‌ಬ್ಯಾಕ್ ಮತ್ತು ಎರಡು-ಆಸನಗಳು, ನಾಲ್ಕು-ಆಸನಗಳ ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ಎಂಜಿಯ ಎಲೆಕ್ಟ್ರಿಕ್ ಕಾರು ವಿನ್ಯಾಸ ಮತ್ತು ಗಾತ್ರದಲ್ಲಿ ಹೆಚ್ಚು ಭಿನ್ನವಾಗಿರುವುದಿಲ್ಲ. ವುಲಿಂಗ್‌ನ ಈ ಸಣ್ಣ ಗಾತ್ರದ ಎಲೆಕ್ಟ್ರಿಕ್ ಕಾರು ಚೀನಾದಲ್ಲಿ ತುಂಬಾ ಜನಪ್ರಿಯವಾಗಿರುವುದು ಈಗಾಗಲೇ ಎಲ್ಲರಿಗು ತಿಳಿದಿರುವ ವಿಷಯ.

ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ಚೀನಾದ ಹೊರಗೆ, ಇದನ್ನು MG E230 ಎಂದು ಮಾರಾಟ ಮಾಡಲಾಗುತ್ತಿದೆ. ವುಲಿಂಗ್‌ನ ಈ ಎಲೆಕ್ಟ್ರಿಕ್ ಕಾರು 3-ಮೀಟರ್‌ಗಳಿಗಿಂತ ಚಿಕ್ಕದಾಗಿದೆ. ಅದರ ಉದ್ದಳತೆಗಳ ಬಗ್ಗೆ ಮಾತನಾಡುವುದಾದರೆ, ಅದರ ಉದ್ದ 2,917 ಮಿ.ಮೀ, ಎತ್ತರ 1,621 ಮಿ.ಮೀ ಮತ್ತು ಅಗಲ 1,493 ಮಿ.ಮೀ ಇದೆ.

ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ದಟ್ಸನ್ ರೆಡಿಗೊ ಮತ್ತು ಮಾರುತಿ ಸುಜುಕಿ ಆಲ್ಟೊ ವಿರುದ್ಧ ಬಿಡುಗಡೆ ಮಾಡಬಹುದು. ಇತ್ತೀಚೆಗೆ ಈ ಮಿನಿ ಎಲೆಕ್ಟ್ರಿಕ್ ಕಾರಿನ ಪೇಟೆಂಟ್ ಅನ್ನು ಭಾರತದಲ್ಲಿ ನೋಂದಾಯಿಸಲಾಗಿದೆ. ಭಾರತದಲ್ಲಿ ಪರಿಚಯಿಸಲಿರುವ ಎಲೆಕ್ಟ್ರಿಕ್ ಕಾರು ನಾಲ್ಕು ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ಕಾರಿನ ಪವರ್‌ಟ್ರೇನ್ ಕುರಿತು ಮಾತನಾಡುವುದಾದರೆ, ಇದು 20kWh ಬ್ಯಾಟರಿ ಪ್ಯಾಕ್ ಜೊತೆಗೆ 20kWh ಎಲೆಕ್ಟ್ರಿಕ್ ಮೋಟರ್ ಅನ್ನು ನೀಡಬಹುದು. ಕಾರು ಸಂಪೂರ್ಣ ಚಾರ್ಜ್‌ನಲ್ಲಿ 150 ಕಿ.ಮೀ ದೂರದ ಚಾಲನಾ ವ್ಯಾಪ್ತಿಯನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸಣ್ಣ ಗಾತ್ರವಾದ ಕಾರಣ ಇಕ್ಕಟ್ಟಿನ ಸ್ಥಳಗಳಲ್ಲಿಯೂ ಸಹ ನಿಲ್ಲಿಸಲು ಸುಲಭವಾಗುತ್ತದೆ.

ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ವರದಿಗಳ ಪ್ರಕಾರ, ABS, EBD, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS), ವಾಹನಗಳ ಇಂಟರ್ನೆಟ್ (IOV), ಸ್ವಯಂಚಾಲಿತ ಪಾರ್ಕಿಂಗ್, ವಾಯಿಸ್ ಕಮಾಂಡ್ ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳಂತಹ ವೈಶಿಷ್ಟ್ಯಗಳನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ ನೀಡಬಹುದು.

ಜೂನ್ ತಿಂಗಳಲ್ಲಿ 4,503 ಕಾರುಗಳನ್ನು ಮಾರಾಟ ಮಾಡಿದ MG ಮೋಟಾರ್: ಶೇ 27ರಷ್ಟು ವಾರ್ಷಿಕ ಬೆಳವಣಿಗೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಕಾರುಗಳ ಖರೀದಯು ವರ್ಷ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಇದೀಗ ಮಧ್ಯಮ ವರ್ಗದವರಿಗೂ ಕೈಗೆಟುಕುವ ಬೆಲೆಗೆ ವಾಹನಗಳು ಲಭ್ಯವಾಗುತ್ತಿರುವುದರಿಂದ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಎಂಜಿ ಕೂಡ ಎಲೆಕ್ಟ್ರಿಕ್ ವಾಹನವನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವುದರಿಂದ ಈ ಕಾರಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ.

Most Read Articles

Kannada
English summary
MG Motor sold 4503 cars in June grew 27 year on year
Story first published: Friday, July 1, 2022, 16:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X