ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ 2022ರ ಜೂನ್ ತಿಂಗಳಿನಲ್ಲಿ 4,503 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 27 ರಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ಎಂಜಿ ಮೋಟಾರ್ ಇಂಡಿಯಾ ಕಂಪನಿಗೆ ಮಾರಾಟದಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯು ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಕಂಪನಿಯು ನವೀಕರಿಸಿದ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯು ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿತ್ತು. ಇನ್ನು ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆಯಾದಾಗಿನಿಂದ 5,000 ಕ್ಕೂ ಹೆಚ್ಚು ಕಾರುಗಳ ಮಾರಾಟವನ್ನು ದಾಖಲಿಸಿದೆ. ಕಂಪನಿಯು ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಗಾಗಿ ತಿಂಗಳಿಗೆ 1,000 ಬುಕ್ಕಿಂಗ್‌ಗಳನ್ನು ದಾಖಲಿಸುತ್ತಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಸೆಗ್ಮೆಂಟ್-ಅತಿದೊಡ್ಡ 50.3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಈ ಎಸ್‍ಯುವಿಯಲ್ಲಿ 143 ಬಿಹೆಚ್‍ಪಿ ಪವರ್ ಮತ್ತು 353 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯುನ್ನು ಒಂದ್ ಬಾರಿ ಪೂರ್ತಿಯಾಗಿ ಚಾರ್ಜ್‌ ಮಾಡಿದರೆ 461 ಕಿಮೀ ಚಲಿಸುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಕೇವಲ 8.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಸ್‍ಯುವಿಯಲ್ಲಿ FWD ಸಿಸ್ಟಮ್, ಸಿಂಗಲ್-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಬಹು ಡ್ರೈವ್ ಮೋಡ್‌ಗಳೊಂದಿಗೆ ಬರುವುದನ್ನು ಮುಂದುವರೆಸಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಎಂಜಿ ಜೆಡ್ಎಸ್ ಇವಿ ಪ್ರಸ್ತುತ ಒಂದೇ ಸಂಪೂರ್ಣ ಲೋಡ್ ಮಾಡಲಾದ ಎಕ್ಸ್‌ಕ್ಲೂಸಿವ್ ರೂಪಾಂತರದಲ್ಲಿ ಲಭ್ಯವಿದೆ, ಇದರ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.25.88 ಲಕ್ಷವಾಗಿದೆ. ನವೀಕರಿಸಿದ ಜೆಡ್ಎಸ್ ಎಲೆಕ್ಟ್ರಿಕ್ ಮಾದರಿಯು ವಿಸ್ತರಿತ ಬ್ಯಾಟರಿ ಪ್ಯಾಕ್ ಮತ್ತು ಸುಧಾರಿತ ಕಾರ್ ಕನೆಕ್ಟ್ ಫೀಚರ್ಸ್‌ಗಳೊಂದಿಗೆ 2021 ಮಾದರಿಗಿಂತ ರೂ.60 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ಬೆಲೆ ಏರಿಕೆಗೆ ಅನುಗುಣವಾಗಿ ಹೊಸ ಕಾರಿನಲ್ಲಿ ಸಾಕಷ್ಟು ಹೊಸ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯು ಹೊಸ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಜೊತೆ 8 ಲೆಯರ್ ಹೆರ್ ಪಿನ್ ಎಲೆಕ್ಟ್ರಿಕ್ ಮೋಟಾರ್ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ಸಹ ಖಚಿತಪಡಿಸುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ನವೀಕರಿಸಿದ ಮಾದರಿಯು ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ಈ ಎಸ್‍ಯುವಿಯಲ್ಲಿ ಈ ಹಿಂದಿನ ರೆಡ್, ವೈಟ್ ಮತ್ತು ಪೊಲಾರ್ ವೈಟ್ ಬಣ್ಣಗಳ ಜೊತೆಗೆ ಹೊಸ ಮಾದರಿಯಲ್ಲಿ ಸಿಲ್ವರ್, ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಎಂಜಿ ಮೋಟಾರ್ ಕಂಪನಿಯು ಫುಲ್ ಎಲ್‌ಇಡಿ ಯುನಿಟ್ ಹೊಂದಿರುವ ಹ್ವಾಕ್ ಐ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್ ಮತ್ತು ಫಾಗ್‌ಲ್ಯಾಂಪ್ ಹೊಂದಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ಎಂಜಿ ಜೆಡ್ಎಸ್ ಇವಿಯು ಇದರ ಹಿಂದಿನ ಗ್ರಿಲ್ ಅನ್ನು ಬಾಡಿ ಕಲರ್ ಕವರ್ಡ್ ಪ್ಲೇಟ್ ನಿಂದ ಬದಲಾಯಿಸಲಾಗಿದೆ. ಜೊತೆಗೆ ಇನ್ ಟೆಕ್ ವಿನ್ಯಾಸವು ಸಹ ಹಳೆಯ ಮಾದರಿಗೆ ಹೋಲಿಸಿದರೆ ಒಟ್ಟಾರೆ ವಿನ್ಯಾಸವು ಏರೋಡೈನಾಮಿಕ್ ಹೆಚ್ಚು ಪರಿಣಾಮಕಾರಿಯಾಗಿ ಕಾಣಲಿದ್ದು, ಮರುವಿನ್ಯಾಸಗೊಳಿಸಿದ 17 ಇಂಚಿನ ಟೊಮ್ಹಾಕ್ ಹಬ್ ಅಲಾಯ್ ವ್ಹೀಲ್ ಗಳು ಕಾರಿನ ಹೆಚ್ಚಿನ ಆಕರ್ಷಣೆ ನೀಡುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ನವೀಕರಿಸಿದ ಎಂಜಿ ಜೆಡ್ಎಸ್ ಇವಿ ಫೇಸ್‌ಲಿಫ್ಟ್ ಮಾದರಿಯ ಕ್ಯಾಬಿನ್ ಒಳಗೂ ಕೂಡಾ ನವೀಕರಿಸಿದ ಹಲವು ಬದಲಾವಣೆಗಳಾಗಿದೆ. ಇದರಲ್ಲಿ ಎಂಜಿ ಐಸ್ಮಾರ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ದೊಡ್ಡದಾದ ಪನೊರಮಿಕ್ ಸನ್‌ರೂಫ್, ಪಿಎಂ 2.5 ಫಿಲ್ಟರ್ ಹೊಂದಿರುವ ಏರ್ ಪ್ಯೂರಿಫೈಯರ್ ಹೊಂದಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ಇದರೊಂದಿಗೆ ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಕಾರಿನಲ್ಲಿ ಸುಧಾರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಕೂಡಾ ಅಳವಡಿಸಿದ್ದು, 10.1 ಇಂಚಿನ ಹೆಚ್‌ಡಿ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅತ್ಯುತ್ತಮ ಗ್ರಾಫಿಕ್ಸ್ ಮತ್ತು ಮೆನು ಲೇಔಟ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಜೋಡಣೆ ಹೊಂದಿದೆ. ನವೀಕರಿಸಿದ ವೈಶಿಷ್ಟ್ಯತೆಗಳಲ್ಲಿ ರಿಮೋಟ್ ಕಂಟ್ರೋಲ್‌ನೊಂದಿಗೆ ಹೆಚ್ಚಿನ ಕನೆಕ್ಟಿವಿಟಿ ಫೀಚರ್ಸ್‌ಗಳ ಆಯ್ಕೆಗಳನ್ನು ಪಡೆಯಬಹುದಾಗಿದ್ದು, ಹೊಸ ಕಾರನಲ್ಲಿ ಕಂಪನಿಯು ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಹೊಂದಿರುವ ರಿಯರ್ ಎಡಿಎಎಸ್ ಅನ್ನು ಹೊಂದಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ರಿಯರ್ ಎಡಿಎಎಸ್‌ನಲ್ಲಿ 360 ಡಿಗ್ರಿ ಕ್ಯಾಮೆರಾ ಮೂಲಕ ಲೈನ್ ಚೇಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ರಿಯರ್ ಕ್ರಾರ್ಸ್-ಟ್ರಾಫಿಕ್ ಅಲರ್ಟ್ ಸೌಲಭ್ಯಗಳನ್ನು ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಹಿಲ್ ಡಿಸೆಂಟ್ ಕಂಟ್ರೊಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಟೈರ್ ಪ್ರೆಷರ್ ಮಾನಿಟರಿಂಗ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಜೊತೆ ಆಟೋ ಹೋಲ್ಡ್ ಮತ್ತು 6 ಏರ್‌ಬ್ಯಾಗ್ ಗಳನ್ನು ನೀಡಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಗೆ ಗರಿಷ್ಠ ವಾರಂಟಿ ನೀಡಿರುವ ಎಂಜಿ ಕಂಪನಿಯು ಎಂಜಿ ಇ-ಶೀಲ್ಡ್ ಪ್ಯಾಕೇಜ್ ಅಡಿಯಲ್ಲಿ 5 ವರ್ಷಗಳ ಅನ್‌ಲಿಮಿಟೆಡ್ ವಾರಂಟಿ ಜೊತೆ 5 ವರ್ಷಗಳ ರೋಡ್‌ಸೈಡ್ ಅಸಿಸ್ಟ್, 5 ಉಚಿತ ಲೆಬರ್ ಸರ್ವಿಸ್, ಬ್ಯಾಟರಿ ಮೇಲೆ 8 ವರ್ಷ ಅಥವಾ 1.50 ಲಕ್ಷ ಕಿ.ಮೀ ಮೇಲೆ ವಾರಂಟಿ ಘೋಷಣೆ ಮಾಡಿದೆ.

Most Read Articles

Kannada
English summary
Mg zs electric suv recorded 5000 unit sales since launch in india details
Story first published: Saturday, July 16, 2022, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X