Just In
- 2 hrs ago
ಫೋರ್ಡ್ ಇಂಡಿಯಾದ ಸನಂದ್ ಕಾರ್ಖಾನೆ ಟಾಟಾ ಮೋಟಾರ್ಸ್ ತೆಕ್ಕೆಗೆ: 726 ಕೋಟಿ ರೂ.ಗೆ ಖರೀದಿ
- 3 hrs ago
ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಟಾಟಾ ಕಾರುಗಳು...
- 3 hrs ago
ಗೂಗಲ್ ಮ್ಯಾಪ್ ನಂಬಿಕೊಂಡು ಸೀದ ಹೋಗಿ ಕಾಲುವೆಗೆ ಬಿದ್ದ ಡಾಕ್ಟರ್ ಫ್ಯಾಮಿಲಿ
- 3 hrs ago
ರಾಯಲ್ ಎನ್ಫೀಲ್ಡ್ ಹೊಸ ಹಂಟರ್ 350 ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಪ್ರಕಟ
Don't Miss!
- News
ಬಿಹಾರದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು: ನಿತೀಶ್ ಕುಮಾರ್ ರಾಜಕೀಯ ಇತಿಹಾಸ ಗೊತ್ತಾ?
- Technology
ಅತೀ ಕಡಿಮೆ ಬೆಲೆಗೆ ಲಗ್ಗೆ ಇಟ್ಟ 'ಇನ್ಫಿನಿಕ್ಸ್ ಸ್ಮಾರ್ಟ್ 6 HD' ಫೋನ್!
- Movies
ಉತ್ತರದಲ್ಲಿ ವಿಜಯ್ ದೇವರಕೊಂಡ ಸುನಾಮಿ: ಬಾಲಿವುಡ್ಡಿಗರಿಗೆ ಹೊಟ್ಟೆ ಉರಿ!
- Sports
ಕಾಮನ್ವೆಲ್ತ್ ಗೇಮ್ಸ್ 2022: ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಚಿನ್ನದ ಪದಕ ಗೆದ್ದ ಪಿ.ವಿ ಸಿಂಧು
- Lifestyle
ಬೆಚ್ಚಗಾಗಲು ಬಳಸುವ ರೂಮ್ ಹೀಟರ್ ಎಷ್ಟು ಅಪಾಯಕಾರಿ ಗೊತ್ತಾ?
- Finance
ಮುಕೇಶ್ ಅಂಬಾನಿ ಮಾಸಿಕ ವೇತನ ಕೇಳಿದ್ರೆ ಅಚ್ಚರಿ ಮೂಡುತ್ತೆ!
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಯಾಣಿಕ ಕಾರು ಮಾದರಿಗಳಿಗಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ಟೈರ್ ಬಿಡುಗಡೆ ಮಾಡಿದ ಮೈಕೆಲಿನ್
ಹೊಸ ವಾಹನಗಳ ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಕೇಂದ್ರ ಸಾರಿಗೆ ಇಲಾಖೆಯು ಕಳೆದ ಕೆಲ ವರ್ಷಗಳಿಂದ ಆಟೋ ಉದ್ಯಮದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ವಾಹನ ಇಂಧನಗಳ ಕಾರ್ಯಕ್ಷಮತೆ ಮತ್ತು ಸುಧಾರಿಕ ಬ್ರೇಕಿಂಗ್ ಸೌಲಭ್ಯಕ್ಕಾಗಿ ಟೈರ್ ಉತ್ಪಾದನೆಯಲ್ಲೂ ಕೂಡಾ ಕೆಲವು ಹೊಸ ಮಾನದಂಡಗಳನ್ನು ಕಡ್ಡಾಯಗೊಳಿಸಿದೆ.

ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯು ಹೊಸ ನಿಯಮಗಳೊಂದಿಗೆ ವಾಹನಗಳ ಮಾಲಿನ್ಯ ತಗ್ಗಿಸುವ ಉಪಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಹೊಸ ಎಮಿಷನ್ ಜಾರಿ ನಂತರ ಇದೀಗ ಸುರಕ್ಷತೆಯತ್ತ ಹೆಚ್ಚಿನ ಗಮನಹರಿಸಲಾಗುತ್ತಿದೆ. ವಾಹನಗಳಲ್ಲಿ ಕನಿಷ್ಠ ಸುರಕ್ಷಾ ಸೌಲಭ್ಯಗಳ ಕಡ್ಡಾಯ ನಂತರ ವಾಹನಗಳ ಟೈರ್ ಬಳಕೆಗೂ ಕೆಲವು ಮಾನದಂಡಗಳನ್ನು ಕಡ್ಡಾಯಗೊಳಿಸಿದ್ದು, ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಮೈಕೆಲಿನ್ ಕಂಪನಿಯು ಹೊಸ ಮಾನದಂಡಗಳಿಗೆ ಅನುಗುಣವಾಗಿ ಹೊಸ ಉತ್ಪನ್ನಗಳನ್ನು ಅಭಿವೃದ್ದಿಗೊಳಿಸಿದೆ.

ಭಾರತ ಸರ್ಕಾರವು ಹೊಸದಾಗಿ ಪ್ರಾರಂಭಿಸಿರುವ ಸ್ಟಾರ್ ಲೇಬಲಿಂಗ್ ಕಾರ್ಯಕ್ರಮದಡಿ ಅನುಮೋದಿಸಲ್ಪಟ್ಟ ಭಾರತದಲ್ಲಿನ ಪ್ರಯಾಣಿಕ ವಾಹನ ವಿಭಾಗದಲ್ಲಿ ಮೈಕೆಲಿನ್ ಮೊದಲ ಟೈರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದು, ಮೈಕೆಲಿನ್ ಅಭಿವೃದ್ದಿಪಡಿಸಿದ ಲ್ಯಾಟಿಟ್ಯೂಡ್ ಸ್ಪೋರ್ಟ್ 3 ಮತ್ತು ಲ್ಯಾಟಿಟ್ಯೂಡ್ ಸ್ಪೋರ್ಟ್ 4 ಟೈರ್‌ಗಳು 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿವೆ.

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ(BEE) ಯಿಂದ ಸ್ಟಾರ್ ರೇಟಿಂಗ್ ಅನ್ನು ಪಡೆದ ಭಾರತದ ಮೊದಲ ಬ್ರ್ಯಾಂಡ್ ಮೈಕೆಲಿನ್ ಹೊಸ ಉತ್ಪನ್ನಗಳನ್ನು ಗರಿಷ್ಠ ಸುರಕ್ಷತೆ ಮತ್ತು ಇಂಧನ ದಕ್ಷತೆಗೆ ಪೂರಕವಾಗಿ ಹೊಸ ಟೈರ್ ಮಾದರಿಗಳನ್ನು ಅಭಿವೃದ್ದಿಪಡಿಸಿದೆ.

ಹೊಸ ನಿಯಮವು ಕಡ್ಡಾಯವಾಗಿರುವುದರಿಂದ ಎಲ್ಲಾ ದೇಶೀಯ ಮತ್ತು ವಿದೇಶಿ ಟೈರ್ ತಯಾರಕರು ಮತ್ತು ಟ್ರಕ್, ಬಸ್ ಮತ್ತು ಪ್ರಯಾಣಿಕ ಕಾರ್ ಟೈರ್‌ಗಳ ಆಮದುದಾರರು ಭಾರತದಲ್ಲಿ ಮಾರಾಟ ಮಾಡುವ ಟೈರ್‌ಗಳನ್ನು ಇನ್ಮುಂದೆ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಸ್ಟಾರ್ ಲೇಬಲ್ ಗುಣಲಕ್ಷಣವನ್ನು ಹೊಂದಿರಬೇಕಾಗುತ್ತದೆ.

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಮಾನದಂಡವು ಟೈರ್‌ಗಳ ಗುಣಮಟ್ಟ, ಇಂಧನ ದಕ್ಷತೆ, ಸುರಕ್ಷತೆ ಆಧರಿಸಿ ಸ್ಟಾರ್ ರೇಟಿಂಗ್ಸ್ ನೀಡಲಿದ್ದು, ಸ್ಟಾರ್ ರೇಟಿಂಗ್ಸ್‌ನಿಂದಾಗಿ ಗ್ರಾಹಕರಿಗೆ ಸುರಕ್ಷಿತ ಟೈರ್‌ಗಳನ್ನು ಆಯ್ಕೆಗೆ ಸಹಕಾರಿಯಾಗಲಿದೆ.

ಹೊಸ ಮಾನದಂಡಗಳನ್ನು ಅನುಸರಿಸಿರುವ ಟೈರ್ ಮಾದರಿಗಳು ಉತ್ತಮ ಇಂಧನ ದಕ್ಷತೆ ಹೊಂದಿರುವುದರಿಂದ ವಾಹನಗಳ ಕಾರ್ಯಕ್ಷಮತೆ ಹೆಚ್ಚಳವಾಗುವುದರೊಂದಿಗೆ ಮಾಲಿನ್ಯ ಪ್ರಮಾಣವು ಗಣನೀಯವಾಗಿ ತಗ್ಗಲಿದೆ.

ಮೈಕೆಲಿನ್ ಲ್ಯಾಟಿಟ್ಯೂಡ್ ಸ್ಪೋರ್ಟ್ 4 ಎಸ್‌ಯುವಿ ಟೈರ್ ಮಾದರಿಯು ಕಡಿಮೆ ಬ್ರೇಕಿಂಗ್ ದೂರದಲ್ಲಿ ಅಭಿವೃದ್ಧಿಪಡಿಸಲಾದ ಪ್ರೀಮಿಯಂ ಎಸ್‌ಯುವಿ ಟೈರ್ ಆಗಿದ್ದು, ಇದು ಒಣ ಮತ್ತು ಆರ್ದ್ರತೆಯಲ್ಲೂ ಆನ್-ರೋಡ್ ಬ್ರೇಕಿಂಗ್‌ನಲ್ಲಿ ಪ್ರತಿಸ್ಪರ್ಧಿಗಳಿಗಿಂತಸೂ ಉತ್ತಮ ಕಾರ್ಯಕ್ಷಮತೆ ಹೊಂದಿರುತ್ತದೆ.

ಹಾಗೆಯೇ ಮೈಕೆಲಿನ್ ಲ್ಯಾಟಿಟ್ಯೂಡ್ ಸ್ಪೋರ್ಟ್ 3 ಕೂಡಾ ಮೂರನೇ ತಲೆಮಾರಿನ ವೈಶಿಷ್ಟ್ಯತೆಯ ಎಸ್‌ಯುವಿ ಟೈರ್ ಆಗಿದ್ದು, ಇದು ಕಡಿಮೆ ರೋಲ್ ಪ್ರತಿರೋಧದೊಂದಿಗೆ ಆರ್ದ್ರತೆಯಲ್ಲೂ ರಸ್ತೆಗಳಲ್ಲಿ ಅತ್ಯುತ್ತಮ ಹಿಡಿತದೊಂದಿಗೆ ಇಂಧನ ಆರ್ಥಿಕತೆಯಲ್ಲಿ ಗಮನಸೆಳೆಯುತ್ತದೆ.

ಟೈರ್ ಉದ್ಯಮದಲ್ಲಿ ಹೊಸ ಬೆಳವಣಿಗೆಗಳು ವಾಹನಗಳ ಕಾರ್ಯಕ್ಷಮತೆಯನ್ನು ಪರಿಣಾಮಕಾರಿಯಾಗಿಸುವುದಲ್ಲದೆ ಆರಾಮದಾಯಕ ಮತ್ತು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದು, ಈ ನಿಟ್ಟಿನಲ್ಲಿ ಮೈಕೆಲಿನ್ ಕಂಪನಿಯು ಟೈರ್ ಉದ್ಯಮಕ್ಕೆ ನವೀನ ಕೊಡುಗೆಗಳನ್ನು ನೀಡಲು ನಿರಂತರವಾಗಿ ಶ್ರಮಿಸುತ್ತಿದೆ.

ಹೊಸ ಮಾನದಂಡಗಳಿಂದಾಗಿ ಹೊಸ ಟೈರ್ ಮಾದರಿಗಳು ತುಸು ದುಬಾರಿಯಾಗಲಿದ್ದರೂ ಉತ್ತಮ ಇಂಧನ ಕಾರ್ಯಕ್ಷಮತೆ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆಯಿಂದಾಗಿ ನಿರ್ವಹಣಾ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗುವುದಲ್ಲದೆ ಸುರಕ್ಷತೆಗೂ ಆದ್ಯತೆ ನೀಡಿದಂತಾಗುತ್ತದೆ.

ಟೈರ್ ಉತ್ಪಾದನೆ ಹೊಸ ಮಾನದಂಡಗಳು ವ್ಯಯಕ್ತಿಕ ವಾಹನಗಳಿಂತಲೂ ವಾಣಿಜ್ಯ ವಾಹನಗಳ ಟೈರ್ ಉತ್ಪಾದನೆಯಲ್ಲಿ ಗುಣಮಟ್ಟ ಸುಧಾರಿಸುವುದರ ಜೊತೆಗೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ತಡೆಗೆ ಹೊಸ ಟೈರ್ ತಂತ್ರಜ್ಞಾನವು ಸಹಕಾರಿಯಾಗಲಿದೆ.

ಟೈರ್ ಉತ್ಪಾದನೆಗೆ ಹೊಸ ಮಾನದಂಡಗಳು ಕಡ್ಡಾಯಗೊಂಡ ನಂತರ ರೋಲಿಂಗ್ ರೆಸಿಸ್ಟೆನ್ಸ್, ವೆಟ್ ಗ್ರಿಪ್ ಮತ್ತು ಟೈರ್ ಪ್ರೆಷರ್ ಮಟ್ಟವನ್ನು ನಿಯಂತ್ರಣದಲ್ಲಿಡಲಿದ್ದು, ಹೊಸ ಟೈರ್ ಮಾನದಂಡಳನ್ನು ಯುರೋಪ್ ಮಾರುಕಟ್ಟೆಗಳಲ್ಲಿ ಅನುಸರಿಸಲಾಗುತ್ತಿರುವ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟ ಮಾನದಂಡಗಳಿಗೆ ಸಮವಾಗಿರುತ್ತದೆ.