ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಮಿನಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕೂಪರ್ ಎಸ್‌ಇ ಎಂಬ ಹೊಸ ಎಲೆಕ್ಟ್ರಿಕ್ ಕಾರನ್ನು 2022ರ ಫೆಬ್ರವರಿ ತಿಂಗಳ ಕೊನೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಮಿನಿ ಕಂಪನಿಯು ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆಯನ್ನು ಪ್ರಾರಂಭಿಸಿದೆ.

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಕಂಪನಿಯು ತನ್ನ ಕಂಪನಿಯು ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿ ಮೊದಲ ಬ್ಯಾಚ್‌ನ ವಿತರಣೆಯನ್ನು ಪ್ರಾರಂಭಿಸಿದೆ ಮತ್ತು ಮುಂಬರುವ ದಿನಗಳಲ್ಲಿ ಹೊಸ ಬ್ಯಾಚ್‌ನ ಬುಕಿಂಗ್ ಅನ್ನು ಘೋಷಿಸಬಹುದು. ಭಾರತದಲ್ಲಿ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ಖರೀದಿಗಾಗಿ ಬುಕ್ಕಿಂಗ್ ಅನ್ನು 2021ರ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭಿಸಲಾಗಿತ್ತು. ಕೆಲವೇ ದಿನಗಳಲ್ಲಿ ಮಾಡೆಲ್‌ಗಾಗಿ ನಿಗದಿಪಡಿಸಿದ ಎಲ್ಲಾ ಯುನಿಟ್ ಗಳು ಸೋಲ್ಡ್ ಔಟ್ ಆಗಿತ್ತು. ಈ ಹೊಸ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.47.20 ಲಕ್ಷವಾಗಿದೆ.

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಈ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರನ್ನು ಭಾರತಕ್ಕೆ ಸಿಬಿಯು ಮಾದರಿಯಾಗಿ ಭಾರತಕ್ಕೆ ತರಲಾಗಿದೆ. ಹೊಸ ಮಿನಿ ಕೂಪರ್ ಎಸ್‌ಇ ಬಿಎಂಡಬ್ಲ್ಯು ಗ್ರೂಪ್‌ನಿಂದ ಭಾರತದಲ್ಲಿ ಮಾರಾಟವಾಗುವ ಮೊದಲ ಆಲ್-ಎಲೆಕ್ಟ್ರಿಕ್ ಮಾದರಿಯಾಗಿದೆ. ಕೂಪರ್ ಎಸ್‌ಇ 3-ಡೋರಿನ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ. ಈ ಹೊಸ ಮಿನಿ ಎಲೆಕ್ಟ್ರಿಕ್ ಕಾರು ಒಂದೇ ರೂಪಾಂತರದಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಈ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು 32.6 kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ. ಇದು ಇನ್ನು ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಎಲೆಕ್ಟ್ರಿಕ್ ಪವರ್‌ಟ್ರೇನ್ 181 ಬಿಹೆಚ್‍ಪಿ ಪವರ್ ಮತ್ತು 270 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು 7.3 ಸೆಕೆಂಡುಗಳಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಇನ್ನು ಈ ಮಿನಿ ಎಲೆಕ್ಟ್ರಿಕ್ ಕಾರು 150 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಡಬ್ಲ್ಯುಎಲ್‌ಟಿಪಿ ಪ್ರಕಾರ ಹೊಸ ಮಿನಿ ಎಲೆಕ್ಟ್ರಿಕ್ ಕಾರನ್ನು ಒಂದು ಭಾರೀ ಪೂರ್ತಿಯಾಗಿ ಚಾರ್ಜ್‌ನಲ್ಲಿ 270 ಕಿಲೋಮೀಟರ್‌ಗಳ ವರೆಗೆ ಚಲಿಸುತ್ತದೆ.

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

11kW ಎಸಿ ವಾಲ್-ಬಾಕ್ಸ್ ಚಾರ್ಜರ್ ಅನ್ನು ಸೇರಿಸಲಾಗಿದೆ, ಇದು ಕಾರನ್ನು ಗಂಟೆಗಳಲ್ಲಿ ಶೂನ್ಯದಿಂದ ಶೇ.80 ರಷ್ಟು ಚಾರ್ಜ್ ಮಾಡುತ್ತದೆ. ಗ್ರಾಹಕರು 50kW ಡಿಸಿ ಫಾಸ್ಟ್ ಚಾರ್ಜರ್ ಅನ್ನು ಸಹ ಬಳಸಬಹುದು ಅದು ಕೇವಲ 36 ನಿಮಿಷಗಳಲ್ಲಿ 0-80 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, ಯೂನಿಯನ್ ಜ್ಯಾಕ್ ವಿಷಯದ ಎಲ್ಇಡಿ ಟೈಲ್‌ಲೈಟ್‌ಗಳು, ರೌಂಡ್ ORVM ಗಳು ಮತ್ತು ಆ ಪರಿಚಿತ ಪ್ರೊಫೈಲ್‌ನಂತಹ ಅಂಶಗಳನ್ನು ಉಳಿಸಿಕೊಂಡಿದೆ.

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ಮುಂಭಾಗದ ಗ್ರಿಲ್ ಪ್ಯಾನೆಲ್ ಮತ್ತು ಹೊಸ 'ಇ' ಬ್ಯಾಡ್ಜ್‌ನೊಂದಿಗೆ ತನ್ನನ್ನು ಪ್ರತ್ಯೇಕಿಸುತ್ತದೆ. ಈ ಮಿನಿ ಎಲೆಕ್ಟ್ರಿಕ್ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಈ ಮಾದರಿಯು ಕೂಪರ್ ಎಸ್‌ಇ 3-ಡೋರಿನ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದೆ, 2019 ರಲ್ಲಿ ಜಾಗತಿಕವಾಗಿ ಪರಿಚಯಿಸಲಾದ ಬ್ರ್ಯಾಂಡ್‌ನ ಮೊದಲ ಆಲ್-ಎಲೆಕ್ಟ್ರಿಕ್ ಕಾರ್ ಕೂಪರ್ ಎಸ್‌ಇ ಇದಾಗಿದೆ,

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಈ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ವೈಟ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್, ಮೂನ್‌ವಾಕ್ ಗ್ರೇ ಮತ್ತು ಬ್ರಿಟಿಷ್ ರೇಸಿಂಗ್ ಗ್ರೀನ್, ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಈ ಕಾರಿನ ವ್ಹೀಲ್ ಗಳು ORVM ಗಳಲ್ಲಿ ಕಾಂಟ್ರಾಸ್ಟ್ ಯೆಲ್ಲೋ ಹೈಲೈಟ್‌ಗಳೊಂದಿಗೆ ಬರಲಿದೆ.

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಒಳಭಾಗದಲ್ಲಿ 5.5-ಇಂಚಿನ ಬಣ್ಣದ MID, 8.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಪೋರ್ಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ನಪ್ಪಾ ಲೆದರ್ ಸ್ಟೀರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ, ಇದರಲ್ಲಿರುವ ಅಂಡಾಕಾರದ ಆಕಾರದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಮಧ್ಯದಲ್ಲಿ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಸಹ ಹೊಂದಿರುತ್ತದ. ಡಿಸ್‌ಪ್ಲೇ ವ್ಯಾಪಕವಾದ ಕನೆಕ್ಟೆಡ್ ಕಾರ್ ಫೀಚರ್‌ಗಳು ಮತ್ತು ಕನ್ಸಿಯರ್ಜ್ ಸೇವೆಗಳನ್ನು ನೀಡುತ್ತದೆ.

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಇವುಗಳಲ್ಲಿ ರಿಮೋಟ್ ಕಾರ್ ಲಾಕಿಂಗ್/ಅನ್‌ಲಾಕ್ ಮತ್ತು ಒಬ್ಬರ ಸ್ಮಾರ್ಟ್‌ಫೋನ್‌ನಿಂದ ಒಳಾಂಗಣದ ಪ್ರಿ-ಕಂಡೀಷನಿಂಗ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ. ಇನ್ನು ಯೆಲ್ಲೋ ಅಸ್ಸೆಂಟ್ ಒಳಭಾಗಕ್ಕೂ ಸಾಗಿಸಲಾಗುತ್ತದೆ. ಹೊಸ ಪವರ್‌ಟ್ರೇನ್‌ನಿಂದ ಆಂತರಿಕ ಮತ್ತು ಬೂಟ್ ಸ್ಥಳವು ಹೆಚ್ಚಾಗಿ ಪರಿಣಾಮ ಬೀರುವುದಿಲ್ಲ ಎಂದು ಮಿನಿ ಹೇಳುತ್ತಾರೆ. ಇನ್ನು ಪಿಲ್ಲರ್‌ಗಳನ್ನು ಎಲ್ಲಾ ಬಣ್ಣದ ಟ್ರಿಮ್‌ಗಳಲ್ಲಿ ಬ್ಲ್ಯಾಕ್ ಅಂಶಗಳನ್ನು ಹೊಂದಿದೆ. ಇದು ಕಾರಿಗೆ ಆಕರ್ಷಕ ಲುಕ್ ನೀಡುತ್ತದೆ.

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಇನ್ನು ಭಾರತದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಇದರಿಂದ ಪಾರಾಗಲು ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಹೆಚ್ಚಾಗುತ್ತಿದೆ. ಇದರ ನಡುವೆ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿದೆ. ಇದರೊಂದಿಗೆ ಹಲವು ಎಲೆಕ್ಟ್ರಿಕ್ ಬ್ರ್ಯಾಂಡ್ ಗಳು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ.ಮಿನಿ ಕಂಪನಿಯು ಕೂಡ ಸೂಕ್ತ ಸಮಯದಲ್ಲಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಹೊಸ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭ

ಇನ್ನು ಭಾರತದಲ್ಲಿ ಹೊಸ ಮಿನಿ ಎಲೆಕ್ಟ್ರಿಕ್ ಕಾರು ಸಂಪೂರ್ಣವಾಗಿ ಕಂಪ್ಲೀಟ್ ಬಿಲ್ಟ್ ಯುನಿಟ್ ಅಗಿ (ಸಿಬಿಯು) ಬಂದಿದೆ. ಈ ಹೊಸ ಎಲೆಕ್ಟ್ರಿಕ್ ಕಾರು ಆಕರ್ಷಕ ವಿನ್ಯಾಸ, ಅಧಿಕ ರೇಂಜ್ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಮಿನಿ ಎಲೆಕ್ಟ್ರಿಕ್ 2 ವರ್ಷಗಳ/ಅನಿಯಮಿತ ಕಿ.ಮೀ ಸ್ಟ್ಯಾಂಡರ್ಡ್ ವಾರಂಟಿಯೊಂದಿಗೆ 5 ವರ್ಷಗಳವರೆಗೆ 24x7 ರೋಡ್ ಅಸಿಸ್ಟ್ ಸೇವೆಯನ್ನು ಹೊಂದಿದೆ.

Image Courtesy: Instagram

Most Read Articles

Kannada
Read more on ಮಿನಿ mini
English summary
Mini cooper se electric car delivery starts in india find here all details
Story first published: Friday, March 25, 2022, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X