Just In
- 12 hrs ago
ಸ್ಟೈಲಿಶ್ ಲುಕ್ ಹೊಂದಿರುವ ಹೋಂಡಾ ಆಕ್ಟಿವಾ 6ಜಿ ಪ್ರೀಮಿಯಂ ಎಡಿಷನ್ ವಿಶೇಷತೆಗಳು
- 12 hrs ago
ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್ಫೀಲ್ಡ್ ಮೀಟಿಯೋರ್ 650
- 13 hrs ago
ಬಿಎಂಟಿಸಿ ಸೇರ್ಪಡೆಯಾಗಲಿವೆ 921 ಎಲೆಕ್ಟ್ರಿಕ್ ಬಸ್: ಟಾಟಾ ಮೋಟಾರ್ಸ್ ಪಾಲಾದ ಹೊಸ ಟೆಂಡರ್!
- 13 hrs ago
2022ರ ಯಮಹಾ ಆರ್7, ಎಂಟಿ-09 ಬೈಕ್ಗಳ ಟೀಸರ್ ಬಿಡುಗಡೆ
Don't Miss!
- Finance
ಆಗಸ್ಟ್ 19: ಕಚ್ಚಾತೈಲ ಬೆಲೆ ಚೇತರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ
- News
ಭಾರತದ 12 ರಾಜ್ಯ, 1 ಕೇಂದ್ರಾಡಳಿತ ಪ್ರದೇಶದಲ್ಲಿ ವಿದ್ಯುತ್ ಕಟ್: ಏನಿದರ ರಹಸ್ಯ?
- Lifestyle
Today Rashi Bhavishya: ಶುಕ್ರವಾರದ ದಿನ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಕಚೇರಿಯಲ್ಲಿ ಬಹಳ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ
- Movies
2ನೇ ಮದುವೆ ಬಗ್ಗೆ ಮೇಘನಾ ರಾಜ್ ಪ್ರತಿಕ್ರಿಯೆ: ಹೇಳಿದ್ದೇನು?
- Sports
ಜಿಂಬಾಬ್ವೆ ವಿರುದ್ಧ ಓಪನರ್ ಆಗಿ ಕಣಕ್ಕಿಳಿಯದ KL ರಾಹುಲ್ ವಿರುದ್ಧ ನೆಟ್ಟಿಗರ ಟೀಕೆ!
- Education
Entrance Exams After Class 12 : ಪಿಯು ನಂತರ ಯಾವೆಲ್ಲಾ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಬಹುದು ಗೊತ್ತಾ ?
- Technology
ಇನ್ಫಿನಿಕ್ಸ್ ನೋಟ್ 12 ಪ್ರೊ 4G ಸ್ಮಾರ್ಟ್ಫೋನ್ ಲಾಂಚ್ ಡೇಟ್ ಫಿಕ್ಸ್!
- Travel
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ
ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್-5 ಡೀಸೆಲ್ ಕಾರುಗಳಿವು...
ಭಾರತದಲ್ಲಿ ಕಾರು ಖರೀದಿಸುವ ಹೆಚ್ಚಿನ ಗ್ರಾಹಕರು ಮೊದಲು ಕಾರು ಎಷ್ಟು ಮೈಲೇಜ್ ನೀಡುತ್ತದೆ ಎಂದು ನೋಡುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಅಧಿಕ ಮೈಲೇಜ್ ನೀಡುವ ಕಾರುಗಳು ಹೆಚ್ಚು ಬೇಡಿಕೆಯನ್ನು ಹೊಂದಿದೆ.

ಹೆಚ್ಚಿನ ಗ್ರಾಹಕರು ಮೈಲೇಜ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅಲ್ಲದೇ ಇಂಧನಗಳ ಬೆಲೆಯು ಕೂಡ ದಾಖಲೆ ಮಾಟ್ಟದಲ್ಲಿ ಹೆಚ್ಚಾಗಿದೆ. ಹೀಗಾಗಿ ಕಾರು ಖರೀದಿಸುವ ಗ್ರಾಹಕರು ಹೆಚ್ಚು ಮೈಲೇಜ್ ನೀಡುವ ಕಾರಿನ ಕಡೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಅದರಲ್ಲಿಯು ಕೆಲವು ಗ್ರಾಹಕರು ಡೀಸೆಲ್ ಕಾರನ್ನು ಇಷ್ಟಪಡುತ್ತಾರೆ. ನೀವು ಡೀಸೆಲ್ ಕಾರು ಪ್ರಿಯರಾಗಿ ಅತಿ ಹೆಚ್ಚು ಮೈಲೇಜ್ ನೀಡುವ ಡೀಸೆಲ್ ಕಾರಿನ ಹುಡುಕಾಟದಲ್ಲಿರುವೀರಾ? ಇಲ್ಲಿದೆ ಅತಿ ಹೆಚ್ಚು ಮೈಲೇಜ್ ನೀಡುವ ಡೀಸೆಲ್ ಕಾರುಗಳ ಮಾಹಿತಿ.

ಹ್ಯುಂಡೈ ವೆರ್ನಾ
ಹ್ಯುಂಡೈ ಕಂಪನಿಯ ಮಿಡ್ ಸೆಡಾನ್ ಆದ ವೆರ್ನಾ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಹ್ಯುಂಡೈ ವೆರ್ನಾ ಹೋಂಡಾ ಸಿಟಿಯ ನಂತರ ಡೀಸೆಲ್ ಎಂಜಿನ್ನೊಂದಿಗೆ ನೀಡಲಾಗುವ ಏಕೈಕ ಸೆಡಾನ್ ಆಗಿದೆ. ಈ ಹೊಸ ಹ್ಯುಂಡೈ ವೆರ್ನಾ ಕಾರು ಪ್ರತಿ ಲೀಟರ್ಗೆ 25 ಕಿ.ಮೀ ಮೈಲೇಜ್ ಅನ್ನು ಒದಗಿಸುತ್ತದೆ.

ಈ ಹ್ಯುಂಡೈ ವೆರ್ನಾ ಕಾರಿನಲ್ಲಿ 1.5 ಲೀಟರ್ U2 CRDi ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಹೊಂದಬಹುದು ಮತ್ತು ಮ್ಯಾನ್ಯುವಲ್ ಮಾದರಿಯು 25 ಕಿ.ಮೀ ಮೈಲೇಜ್ ಅನ್ನು ಒದಗಿಸುತ್ತಿದೆ. ಭಾರತದಲ್ಲಿ ಹುಂಡೈ ವೆರ್ನಾ ಡೀಸೆಲ್ ಬೆಲೆಯು ದೆಹಲಿ ಎಕ್ಸ್ ಶೋ ರೂಂ ಪ್ರಕಾರ ರೂ.11 ಲಕ್ಷವಾಗಿದೆ,

ಹ್ಯುಂಡೈ ಐ20
ಈ ಹ್ಯುಂಡೈ ಐ20 ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಹ್ಯಾಚ್ಬ್ಯಾಕ್ಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಐ20 ಕಾರಿನಲ್ಲಿ 1.5 ಲೀಟರ್, ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಗೇರ್ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹ್ಯುಂಡೈ ಐ20 ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಡೀಸೆಲ್ ಕಾರುಗಳಲ್ಲಿ ಒಂದಾಗಿದೆ. ಎಆರ್ಎನ್ಐ ಮಾನ್ಯತೆಯ ಪ್ರಕಾರ, ಹೊಸ ಹ್ಯುಂಡೈ ಐ20 ಕಾರು ಪ್ರತಿ ಲೀಟರ್ಗೆ 25 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಹ್ಯುಂಡೈ ಐ20 ಕಾರಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ,8.33 ಲಕ್ಷವಾಗಿದೆ.

ಹೋಂಡಾ ಅಮೇಜ್
ಹೋಂಡಾ ಅಮೇಜ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಏಕೈಕ ಡೀಸೆಲ್ ಕಾಂಪ್ಯಾಕ್ಟ್ ಸೆಡಾನ್ ಆಗಿದೆ. ಈ ಹೋಂಡಾ ಅಮೇಜ್ ಕಾರಿನ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.8.90 ಲಕ್ಷವಾಗಿದೆ. ಈ ಕಾರಿನಲ್ಲಿ .5L ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 100 ಬಿಹೆಚ್ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೋಂಡಾ ಅಮೇಜ್ ಕಾರಿನ ಮ್ಯಾನುಯಲ್ ರೂಪಾಂತರವು 24.7 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೋಂಡಾ ಸಿಟಿ
ಹೋಂಡಾ ಸಿಟಿಯನ್ನು ಸಾಮಾನ್ಯವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸೆಡಾನ್ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಮತ್ತು ಇದು ನೀಡಲಾಗುವ ಪ್ರೀಮಿಯಂ ಮತ್ತು ಆರಾಮದಾಯಕ ಪ್ಯಾಕೇಜ್ಗಾಗಿ ಮೆಚ್ಚುಗೆ ಪಡೆದಿದೆ. ಈ ಕಾರಿನಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

1.5 ಲೀಟರ್ ಡೀಸೆಲ್ ಎಂಜಿನ್ ಆರು-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ ಮಾತ್ರ ಲಭ್ಯವಿದೆ ಮತ್ತು 24.1 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಭಾರತದಲ್ಲಿ ಸಿಟಿ ಡೀಸೆಲ್ ಕಾರಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.13.06 ಲಕ್ಷವಾಗಿದೆ.

ಕಿಯಾ ಸೊನೆಟ್
ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಸೊನೆಟ್(Sonet) ಕಾಂಪ್ಯಾಕ್ಟ್ ಎಸ್ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇದು ಅತ್ಯಂತ ಕೈಗೆಟುಕುವ ಕಿಯಾ ಕಾರು. ಈ ಕಿಯಾ ಸೊನೆಟ್ ಮಾದರಿಯಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಗಳೊಂದಿಗೆ ಹೊಂದಬಹುದು.

ಇದರ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಾದರಿಯು 24.1 ಕಿ.ಮೀ ಮೈಲೇಜ್ ನೀಡುತ್ತದೆ. ಭಾರತದಲ್ಲಿ ಕಿಯಾ ಸೊನೆಟ್ ಡೀಸೆಲ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.8.88 ಲಕ್ಷದಿಂದ ಪ್ರಾರಂಭವಾಗುತ್ತದೆ ಕಿಯಾ ಸೊನೆಟ್ ಬಿಡುಗಡೆಯಾದ ಎರಡು ವರ್ಷದೊಳಗೆ ದೇಶೀಯ ಮಾರುಕಟ್ಟೆಯಲ್ಲಿ 1.5 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿತು. ಈ ಸೊನೆಟ್ ಎಸ್ಯುವಿ ಒಳಭಾಗದಲ್ಲೂ ಕೂಡಾ ಹಲವಾರು ಪ್ರೀಮಿಯಂ ಫೀಚರ್ಸ್ಗಳ ನೀಡಲಾಗಿದೆ

ಇನ್ನು ಈ ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ, ಇದರಲ್ಲಿ 6-ಏರ್ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಮ್ಯಾನೆಜ್ಮೆಂಟ್(ವಿಎಸ್ಎಂ), ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಬ್ರೇಕ್ ಅಸಿಸ್ಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಇಂಪ್ಯಾಕ್ಟ್ ಸೆನ್ಸಾರ್ ಆಟೋ ಡೋರ್ ಅನ್ಲಾಕ್, ಸ್ಪೀಡ್-ಸೆನ್ಸಿಂಗ್ ಆಟೋ ಡೋರ್ ಲಾಕ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೊಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಅನ್ನು ಹೊಂದಿದೆ.