ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 'ಎಂ' ಪರ್ಫಾರ್ಮೆನ್ಸ್ ವಿಭಾಗದ 50 ವರ್ಷಗಳ ವಾರ್ಷಿಕೋತ್ಸವದ ಭಾಗವಾಗಿ, ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

ಈ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.72.90 ಲಕ್ಷವಾಗಿದೆ. ಬಿಎಂಡಬ್ಲ್ಯುಯ ಇನ್ನು ಕೆಲವು ಸೀಮಿತ-ಆವೃತ್ತಿಯ ಮಾದರಿಯು ಬರಲಿದೆ. 630ಐ ಈ ಸಾಲಿಗೆ ಸೇರುವ ಎರಡನೇ ಮಾದರಿಯಾಗಿದೆ. ಇನ್ನೂ ಎಂಟು '50 ಜಹ್ರೆ ಆವೃತ್ತಿಗಳು' ನಮ್ಮ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಇದರಲ್ಲಿ ಎಂ4, ಎಂ5, 5 ಸರಣಿ ಮತ್ತು ಬಿಎಂಡಬ್ಲ್ಯುನ ಎಸ್‍ಯುವಿಯ ಸರಣಿಯಲ್ಲಿರುವ ಕಾರುಗಳು ಸೇರಿವೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

ಸ್ಟ್ಯಾಂಡರ್ಡ್ ಆವೃತ್ತಿಗೆ ಹೋಲಿಸಿದರೆ, ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಪ್ರಮುಖ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುತ್ತದೆ. ಈ ಹೊಸ ಎಡಿಷನ್ ನಾಲ್ಕು ಇಂಡಿವಿಜುವಲ್ ಪೇಂಟ್ ಶೇಡ್‌ಗಳಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ. ಇದು ಟಾಂಜಾನೈಟ್ ಬ್ಲೂ, ಕಾರ್ಬನ್ ಬ್ಲ್ಯಾಕ್, ಬರ್ನಿನಾ ಗ್ರೇ ಆಂಬರ್ ಮತ್ತು ಮಿನರಲ್ ವೈಟ್ ಆಗಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಎಂ ಲೋಗೊವನ್ನು ಸಹ ಪಡೆಯುತ್ತದೆ. ಈ ಹೊಸ ಎಡಿಷನ್ ಮುಂಭಾಗ, ಹಿಂಭಾಗ ಮತ್ತು ಹಬ್ ಕ್ಯಾಪ್‌ಗಳಲ್ಲಿ - ಆರಂಭಿಕ ಬಿಎಂಡಬ್ಲ್ಯು ಮೋಟಾರ್‌ಸ್ಪೋರ್ಟ್ ರೇಸ್ ಕಾರ್‌ಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದನ್ನು ಪ್ರೇರೇಪಿಸುತ್ತದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

ಈ ಕಾರಿನ ಲೋಗೋ ವಿನ್ಯಾಸವು ನೀಲಿ, ನೇರಳೆ ಮತ್ತು ಕೆಂಪು ಬಣ್ಣದ ಅರ್ಧವೃತ್ತಗಳನ್ನು ಒಳಗೊಂಡಿದೆ. ಬಿಎಂಡಬ್ಲ್ಯು ಮೋಟಾರ್‌ಸ್ಪೋರ್ಟ್ಸ್ ಪ್ಯಾಕ್ ಅನ್ನು ಸೀಮಿತ ಆವೃತ್ತಿಯ ಮಾದರಿಗೆ ನೀಡುತ್ತಿದೆ, ಇದರಲ್ಲಿ ಗೋಷ್ ಬ್ಲ್ಯಾಕ್ ಮುಂಭಾಗದ ಗ್ರಿಲ್, ಕಪ್ಪು 19-ಇಂಚಿನ ಎಂ ಅಲಾಯ್ ವ್ಹೀಲ್ ಗಳು ಮತ್ತು ಕಾರ್ಬನ್ ಫೈಬರ್ ಮತ್ತು ಅಲ್ಕಾಂಟಾರಾ ಕೀ ಫೋಬ್ ಸೇರಿವೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಸ್ಪೋರ್ಟ್ ಸೀಟುಗಳಲ್ಲಿ ಡಕೋಟಾ ಲೆದರ್ ಅಪ್ಹೋಲ್ಸ್ಟರಿ ಮತ್ತು ಎಂ ಸ್ಪೆಕ್ ಸೀಟ್‌ಬೆಲ್ಟ್‌ಗಳನ್ನು ಪಡೆಯುತ್ತದೆ. ಹೆಚ್ಚುವರಿಯಾಗಿ, ಇದು ಎರಡು-ಭಾಗದ ಪನರೋಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ನಾಲ್ಕು-ವಲಯ ಕ್ಲೈಮೆಂಟ್ ಕಂಟ್ರೋಲ್ ಮತ್ತು ಪವರ್ ಅಡಜೆಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳನ್ನು ಸಹ ಹೊಂದಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

ಈ ಕಾರಿನಲ್ಲಿ ವೈಶಿಷ್ಟ್ಯಗಳು 12.3-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ ಪ್ಲೇ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಂ, ಹಾರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ಪ್ಲೇ/ಆಂಡ್ರಾಯ್ಡ್ ಆಟೋ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಎರಡು 10.25-ಇಂಚಿನ ಸ್ಕ್ರೀನ್‌ಗಳನ್ನು ಸ್ಟ್ಯಾಂಡರ್ಡ್ ಕಾರಿನಿಂದ ಸಾಗಿಸಲಾಗುತ್ತದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

ಬ್ರ್ಯಾಂಡ್ ಕಾರುಗಳನ್ನು ಏರ್ ಸಸ್ಪೆಂಕ್ಷನ್ ಮತ್ತು ಡ್ರೈವಿಂಗ್ ಮೋಡ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಸಜ್ಜುಗೊಳಿಸಿದೆ. ಇನ್ನು ಬಿಎಂಡಬ್ಲ್ಯು ಪವರ್‌ಟ್ರೇನ್‌ಗೆ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಿಲ್ಲ ಮತ್ತು ಜಹ್ರೆ ಆವೃತ್ತಿಯು ಅದೇ ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 285 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಕಾರು ಕೇವಲ 6.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

ಸ್ಟ್ಯಾಂಡರ್ಡ್ ಹೊಸ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರಿನಲ್ಲಿ ಮೂರು ಎಂಜಿನ್ ಆಯ್ಕೆಗಳ ನೀಡಲಾಗಿದೆ. ಇದರಲ್ಲಿ ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ಎಂಜಿನ್ ಆಯ್ಕೆಗಳಾಗಿವೆ. ಇದರಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಆರ್‌ಪಿಎಂನಲ್ಲಿ ಗರಿಷ್ಠ 257 ಬಿಹೆಚ್‌ಪಿ ಪವರ್ ಹಾಗೂ 1550 ಆರ್‌ಪಿಎಂ ಮತ್ತು 4400 ಆರ್‌ಪಿಎಂ ನಡುವೆ 400 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

620ಡಿ 2.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ 188 ಬಿಹೆಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 630ಡಿ ಎಂ ಸ್ಪೋರ್ಟ್ ವೆರಿಯೆಂಟ್ 3.0-ಲೀಟರ್ ಡೀಸೆಲ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ 188 ಬಿಹೆಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಗಳೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಕೇವಲ 6.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

ಇನ್ನು ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಸಹ ಮರುವಿನ್ಯಾಸಗೊಳಿಸಲಾಗಿದ್ದು, ನೋಚ್‌ಬ್ಯಾಕ್ ಹಿಂಭಾಗವನ್ನು ಮುಂದಕ್ಕೆ ಸಾಗಿಸಲಾಗಿದೆ. 6-ಸೀರಿಸ್ ಮಾದರಿಯು 5-ಸೀರಿಸ್ ಗಿಂತ ಹೆಚ್ಚು ಸ್ಪೋರ್ಟಿಯಾಗಿದೆ. ಈ ಕಾರಿನಲ್ಲಿ 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹಿಂಬದಿಯ ಸೀಟಿನಲ್ಲಿ ಎರಡು 10.25-ಇಂಚಿನ ಎಂಟರ್ ಟೆನ್ ಮೆಂಟ್ ಸ್ಕ್ರೀನ್ ಗಳನ್ನು ನೀಡಿದೆ. ಇದು ಬಿಎಂಡಬ್ಲ್ಯು ಲೈವ್ ಕಾಕ್‌ಪಿಟ್ ಪ್ಲಸ್/ಪ್ರೊಫೆಷನಲ್ ಮತ್ತು ಬಿಎಂಡಬ್ಲ್ಯು ವರ್ಚುವಲ್ ಅಸಿಸ್ಟೆನ್ಸ್, ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಒಟಿಆರ್ ನವೀಕರಣಗಳ ಕನೆಕ್ಟಿವಿಟಿಯನ್ನು ಹೊಂದಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಬಿಎಂಡಬ್ಲ್ಯು 630ಐ ಎಂ ಸ್ಪೋರ್ಟ್ 50 ಜಹ್ರೆ ಎಡಿಷನ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರವೇಶಿಸಿದೆ. ಬಿಎಂಡಬ್ಲ್ಯು ತನ್ನ 'ಎಂ' ಪರ್ಫಾರ್ಮೆನ್ಸ್ ವಿಭಾಗದ 50 ವರ್ಷಗಳ ವಾರ್ಷಿಕೋತ್ಸವದ ಭಾಗವಾಗಿ ಈ ಕಾರನ್ನು ಬಿಡುಗಡೆಗೊಳಿಸಲಾಗಿದೆ,

Most Read Articles

Kannada
English summary
New bmw 630i m sport 50 jahre m edition launched engine features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X