ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

ಫ್ರೆಂಚ್ ವಾಹನ ತಯಾರಕ ಕಂಪನಿಯಾದ ಸಿಟ್ರನ್ 2021 ರಲ್ಲಿ ಎಸ್‍ಕೆಡಿ (ಸೆಮಿ-ನಾಕ್ಡ್-ಡೌನ್) ಮಾರ್ಗದ ಮೂಲಕ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಫ್ಲ್ಯಾಗ್‌ಶಿಪ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಬಳಿಕ ಕಂಪನಿಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸಿ3 ಹ್ಯಾಚ್‌ಬ್ಯಾಕ್ ಅನ್ನು 2022ರ ಜುಲೈ 20 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

ಸಿಟ್ರನ್ ಈಗ ಹೊಸ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. 2022ರ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಮಾದರಿಯ ಟೀಸರ್ ಅನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಧಿಕೃತವಾಗಿ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಹೊಸ 2022ರ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಮಾದರಿಯು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

ನವೀಕರಿಸಿದ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಜಾಗತಿಕ-ಸ್ಪೆಕ್ ಮಾದರಿಯನ್ನು 1.5-ಲೀಟರ್ ಡೀಸೆಲ್, ಪೆಟ್ರೋಲ್ ಮತ್ತು ಪೆಟ್ರೋಲ್-ಹೈಬ್ರಿಡ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಕಂಪನಿಯು ಜಾಗತಿಕ ಮಾದರಿಯಿಂದ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದೆ.

ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

ಇಂಡಿಯಾ-ಸ್ಪೆಕ್ 2022ರ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ 2.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ನೀಡುವುದನ್ನು ಮುಂದುವರಿಸುತ್ತದೆ. ಈ ಎಂಜಿನ್ 177 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಡೀಸೆಲ್ ಎಂಜಿನ್ ಅನ್ನು 8-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುವುದು.

ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

ಈ 2022ರ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಮಾದರಿಯು ಹ್ಯುಂಡೈ ಟ್ಯೂಸಾನ್, ಫೋಕ್ಸ್ ವ್ಯಾಗನ್ ಟಿಗ್ವಾನ್ ಮತ್ತು ಸ್ಕೋಡಾ ಕೊಡಿಯಾಕ್‌ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಸಿ5 ಏರ್‌ಕ್ರಾಸ್ ಮತ್ತು ಟ್ಯೂಸಾನ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡುವ ಅದರ ವರ್ಗದಲ್ಲಿ ಹೊಂದಿರುವ ಎಸ್‍ಯುವಿಗಳಾಗಿವೆ.

ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

2022ರ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಎಸ್‍ಯುವಿ ಪರಿಷ್ಕೃತ ಮುಂಭಾಗದ ಫಾಸಿಕವನ್ನು ಹೊಂದಿದೆ. ಇದು ಹೆಚ್ಚು ಸಾಂಪ್ರದಾಯಿಕ ನೋಟವನ್ನು ಹೊಂದಿದೆ. ಹಿಂದಿನ ಮಾದರಿಯು ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿತ್ತು; ಆದರೆ ಫೇಸ್‌ಲಿಫ್ಟೆಡ್ ಮಾಡೆಲ್ LED DRL ಸಿಗ್ನೇಚರ್‌ನೊಂದಿಗೆ ಸಿಂಗಲ್-ಪೀಸ್ ಸುತ್ತುವ ಯುನಿಟ್ ಅನ್ನು ಪಡೆಯುತ್ತದೆ.

ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

ಪರಿಷ್ಕೃತ ಬಂಪರ್ ಸುಧಾರಿತ ಏರೋಡೈನಾಮಿಕ್ ವೆಂಟ್ ಗಳಿಂದ ಸುತ್ತುವರೆದಿರುವ ದೊಡ್ಡ ಏರ್-ಡ್ಯಾಮ್ ಅನ್ನು ಅಳವಡಿಸಿಕೊಂಡಿದೆ. ಇದು ಹೊಸ ಅಲಾಯ್ ವ್ಹೀಳ್ ಗಳು ಮತ್ತು ಮುಕ್ತಾಯದೊಂದಿಗೆ ಪರಿಷ್ಕೃತ ಟೈಲ್-ಲೈಟ್ ಗಳನ್ನು ಹೊಂದಿದೆ.

ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

ಈ ಹೊಸ 2022ರ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಒಳಗೆ ವೈರ್‌ಲೆಸ್ ಸಂಪರ್ಕದೊಂದಿಗೆ ದೊಡ್ಡದಾದ, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ. ಎಸಿ ವೆಂಟ್ ಅನ್ನು ಇರಿಸಲಾಗುತ್ತದೆ, ಆದರೆ ಟಚ್-ಆಧಾರಿತ ಸ್ವಿಚ್‌ಗಿಯರ್‌ಗಳು ಏರ್ ಕಾನ್ ವೆಂಟ್ ಕೆಳಗೆ ಹೋಗುತ್ತವೆ.

ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಾಗಿ ಗೇರ್ ಲಿವರ್ ಅನ್ನು ಈಗ ಟಾಗಲ್ ಸ್ವಿಚ್ ಯುನಿಟ್ ನಿಂದ ಬದಲಾಯಿಸಲಾಗಿದೆ. ಎಸ್‍ಯುವಿ 15 ಎಂಎಂ ಹೆಚ್ಚುವರಿ ಪ್ಯಾಡ್ಲಿಂಗ್ನೊಂದಿಗೆ ಉತ್ತಮ ಮೆತ್ತನೆಯ ಮುಂಭಾಗದ ಸೀಟುಗಳನ್ನು ನೀಡುತ್ತದೆ ಎಂದು ಹೇಳಲಾಗಿದೆ. ಮುಂಭಾಗದ ಸೆಟ್‌ಗಳು ತಾಪನ ಮತ್ತು ತಂಪಾಗಿಸುವ ಕಾರ್ಯಗಳೊಂದಿಗೆ ಬರುತ್ತವೆ. ಎಸ್‍ಯುವಿ ಹೆಚ್ಚುವರಿ USB ಪೋರ್ಟ್‌ಗಳು ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಪಡೆಯುತ್ತದೆ

ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

ಇದರೊಂದಿಗೆ ಸಿಲ್ವರ್ ಫೀನಿಶ್ಡ್ ರೂಫ್ ರೈಲ್ಸ್, ಎಲ್ಇಡಿ ಟೈಲ್‌ಲೈಟ್, ರೂಫ್ ಮೌಂಟೆಡ್ ಸ್ಪಾಯ್ಲರ್‌ನೊಂದಿಗೆ ಆಕರ್ಷಕ ನೋಟ ಹೊಂದಿದ್ದು, ಹೊಸ ಕಾರಿನ ಕಾರಿನ ಒಳಭಾಗವು ಕೂಡಾ ಹಲವಾರು ಸಾಫ್ಟ್ ಟಚ್ ಮೆಟಿರಿಯರ್‌ಗಳಿಂದ ವಿಶಾಲವಾದ ಕ್ಯಾಬಿನ್ ಪಡೆದುಕೊಂಡಿದೆ. ಇದರೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 12.3 ಇಂಚಿನ ಡಿಜಿಟಲ್ ಇನ್‌ಸ್ಟ್ರಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

ಪ್ರಸ್ತುತ ಸಿ5 ಏರ್‌ಕ್ರಾಸ್, ಭಾರತದಲ್ಲಿ ಮಾರಾಟದಲ್ಲಿದೆ, ಫೀಲ್ ಮತ್ತು ಶೈನ್ ಟ್ರಿಮ್‌ಗಳ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಫೀಲ್ ರೂಪಾಂತರದ ಬೆಲೆ ರೂ 32,23,900 ಆದರೆ ಅದರ ಡ್ಯುಯಲ್ ಟೋನ್ ಆಯ್ಕೆಯು ರೂ 32,73,900 ಆಗಿದೆ. ಟಾಪ್ ಆಫ್ ದಿ ಲೈನ್ ಶೈನ್ ಟ್ರಿಮ್ ಬೆಲೆ ರೂ.33,78,400 ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಹೊಸ 2022ರ ಸಿಟ್ರನ್ ಸಿ5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಬೆಲೆ ಏರಿಕೆಯೊಂದಿಗೆ ಬರಲಿದೆ. ಇದು ಭಾರತದಲ್ಲಿ ಹೊಸದಾಗಿ ಬಿಡುಗಡೆಯಾದ ಹ್ಯುಂಡೈ ಟ್ಯೂಸಾನ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ.

ಹ್ಯುಂಡೈ ಟ್ಯೂಸಾನ್‌ಗೆ ಪೈಪೋಟಿ ನೀಡಲು ಹೊಸ ನವೀಕರಣಗಳೊಂದಿಗೆ ಬರುತ್ತಿದೆ ಸಿಟ್ರನ್ ಸಿ5 ಏರ್‌ಕ್ರಾಸ್

ಇನ್ನು ಸಿಟ್ರನ್ ಇಂಡಿಯಾ ಕಂಪನಿಯು ಸಿ3 ಮೈಕ್ರೊ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಕಂಪನಿಯು ಶೀಘ್ರದಲ್ಲಿಯೇ ಹೊಸ ಕಾರು ಮಾದರಿಯಲ್ಲಿ ಸಿಎನ್‌ಜಿ ಆವೃತ್ತಿಯ ಬಿಡುಗಡೆಯ ಸಿದ್ದತೆಯಲ್ಲಿದೆ. ಸಿಎನ್‌ಜಿ ಕಾರಗಳ ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಕಂಪನಿಯು ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮಾರುತಿ ಸುಜುಕಿ ಪ್ರಮುಖ ಸಿಎನ್‌ಜಿ ಕಾರುಗಳಿಗೆ ಪೈಪೋಟಿಯಾಗಿ ಸಿಟ್ರನ್ ಸೇರಿದಂತೆ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಮುಂಬರುವ ದಿನಗಳಲ್ಲಿ ವಿವಿಧ ಸಿಎನ್‌ಜಿ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

Most Read Articles

Kannada
English summary
New ctroen c5 aircross facelift suv teased launch soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X