Just In
- 51 min ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 18 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
Breaking: ಯುಪಿ ಉಪಚುನಾವಣೆ: ರಾಂಪುರದಲ್ಲಿ ಎಸ್ಪಿ ಅಭ್ಯರ್ಥಿ, ಅಜಂಗಢದಲ್ಲಿ ಬಿಜೆಪಿ ಮುನ್ನಡೆ
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಜೂನ್ 20ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ
ಮಹೀಂದ್ರಾ ಕಂಪನಿಯು ತನ್ನ ಬಹುನೀರಿಕ್ಷಿತ ನ್ಯೂ ಜನರೇಷನ್ ಸ್ಕಾರ್ಪಿಯೋ ಬಿಡುಗಡೆಗಾಗಿ ಅಂತಿಮ ಸಿದ್ದತೆ ನಡೆಸುತ್ತಿದ್ದು, ಹೊಸ ಕಾರು ಮಾದರಿಯನ್ನು ಕಂಪನಿಯು ಮುಂದಿನ ತಿಂಗಳು 20ರಂದು ಬಿಡುಗಡೆ ಮಾಡುವ ಮಾಹಿತಿ ಲಭ್ಯವಾಗಿದೆ.

ಹೊಸ ಕಾರು ಖರೀದಿಗಾಗಿ ಮಹೀಂದ್ರಾ ಕಂಪನಿಯ ಪ್ರಮುಖ ಡೀಲರ್ಸ್ಗಳಲ್ಲಿ ಈಗಾಗಲೇ ಬುಕಿಂಗ್ ಕೂಡಾ ಆರಂಭವಾಗಿದ್ದು, ಹೊಸ ಕಾರು ಮಾದರಿಯು ಮಹತ್ವದ ಬದಲಾವಣೆಗಳೊಂದಿಗೆ ಮಧ್ಯಮ ಕ್ರಮಾಂಕದ ಎಸ್ಯುವಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ. ಹೊಸ ತಲೆಮಾರಿನ ಸ್ಕಾರ್ಪಿಯೋ ಎಸ್ಯುವಿ ಮಾದರಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಗೊಂಡ 20 ವರ್ಷಗಳ ಸಂಭ್ರಮದಲ್ಲಿರುವ ಸ್ಕಾರ್ಪಿಯೋ ಮಾದರಿಯು ಮೊದಲ ತಲೆಮಾರಿನಿಂದ ಇಲ್ಲಿಯ ತನಕ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಮಹೀಂದ್ರಾ ಕಂಪನಿಯು ಕಳೆದ ಎರಡು ವರ್ಷಗಳಲ್ಲಿ ತನ್ನ ಪ್ರಮುಖ ಕಾರುಗಳ ನ್ಯೂ ಜನರೇಷನ್ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ತಲೆಮಾರಿನ ಸ್ಕಾರ್ಪಿಯೋ ಆವೃತ್ತಿಯೊಂದಿಗೆ ಎಸ್ಯುವಿ ಕಾರು ಮಾರಾಟದಲ್ಲಿ ತನ್ನ ಪ್ರಾಬಲ್ಯವನ್ನು ಗಟ್ಟಿಗೊಳಿಸಲಿದೆ.

ಬಿಡುಗಡೆಯಾಗಲಿರುವ ಹೊಸ ಸ್ಕಾರ್ಪಿಯೋ ಕಾರು ಮಾದರಿಯ ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾರಾಜೋ ಎಂಪಿವಿಯಿಂದಲೂ ಕೆಲವು ಪ್ರೀಮಿಯಂ ಫೀಚರ್ಸ್ಗಳನ್ನು ಎರವಲು ಪಡೆದುಕೊಂಡಿದ್ದು, ಹೊಸ ಫೀಚರ್ಸ್ಗಳಿಂದಾಗಿ ಸ್ಕಾರ್ಪಿಯೋ ಕಾರು ಮತ್ತಷ್ಟು ಬಲಿಷ್ಠ ವಿನ್ಯಾಸದೊಂದಿಗೆ ವಿಸ್ತರಿತ ವೀಲ್ಹ್ ಬೆಸ್ ಮೂಲಕ ಅರಾಮದಾಯಕ ಕ್ಯಾಬಿನ್ ಸ್ಪೆಸ್ ಹೊಂದಿದೆ.

ಹಾಗೆಯೇ ಹೊಸ ಕಾರಿನಲ್ಲಿ ಈ ಬಾರಿ ಹಲವಾರು ಪ್ರೀಮಿಯಂ ಫೀಚರ್ಸ್ಗಳ ಜೊತೆಗೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಆರಾಮದಾಯಕವಾದ ಆಸನ ಸೌಲಭ್ಯದೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ ಸರ್ಪೊಟ್ ಮಾಡುವ ಇನ್ಪೋಟೈನ್ಮೆಂಟ್ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್ರೂಫ್ ಮತ್ತು ವಿವಿಧ ಡ್ರೈವ್ ಮೋಡ್ ಕಂಟ್ರೋಲ್ ಸೇರಿದಂತೆ ಹಲವು ಹೊಸ ಸೌಲಭ್ಯಗಳಿವೆ.

ನ್ಯೂ ಜನರೇಷನ್ ಮಾದರಿಯ ವಿಶೇಷವೆಂದರೆ ಬ್ರಾಂಡ್ ನ್ಯೂ ಲೋಗೊ ಹೊಂದಿದ್ದು, ಸ್ಟೀರಿಂಗ್ ಮೌಂಟೆಡ್ ಮೇಲೆ ಇರಿಸಲಾಗಿರುವ ಲೋಗೊ ಸಾಕಷ್ಟು ಆಕರ್ಷಕವಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ಮಲ್ಟಿ ಏರ್ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್ಗಳಲ್ಲಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೌಲಭ್ಯಗಳಿವೆ.

ಟಾಪ್ ಎಂಡ್ ಮಾದರಿಗಳಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಕ್ರೂಸ್ ಕಂಟ್ರೋಲ್, ಸನ್ರೂಫ್, ಪುಶ್ ಬಟನ್ ಆನ್/ಆಫ್, ಕೀ ಲೆಸ್ ಎಂಟ್ರಿ, ರೂಫ್ ರೈಲ್ಸ್, ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಫಾಗ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್ ಸೌಲಭ್ಯಗಳಿರಲಿವೆ.

ಇದರೊಂದಿಗೆ ಹೊಸ ಕಾರಿನಲ್ಲಿ 17 ಇಂಚಿನ ಅಲಾಯ್ ವೀಲ್ಹ್ಗಳು, ಹೊಸ ವಿನ್ಯಾಸದ ಫ್ರಂಟ್ ಅಂಡ್ ರಿಯರ್ ಬಂಪರ್ ಮತ್ತು ವಿಸ್ತರಿತ ವೀಲ್ಹ್ಬೆಸ್ನಿಂದಾಗಿ ಮೂರನೇ ಸಾಲಿನ ಪ್ರಯಾಣಿಕರಿಗೆ ಹೆಚ್ಚಿನ ಮಟ್ಟದ ಸ್ಥಳಾವಕಾಶ ನೀಡಲಿದೆ.

ಹೊಸ ಕಾರಿನಲ್ಲಿ ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಸೇರಿದಂತೆ ಹೊಸ ಕಾರಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

ಹೊಸ ಕಾರಿನ ವಿನ್ಯಾಸದ ಕುರಿತು ಹೇಳುವುದಾದರೆ ನವೀಕರಿಸಲಾದ ಗ್ರಿಲ್ನೊಂದಿಗೆ ಅಡ್ಡಲಾಗಿ ಮತ್ತು ನಡುವೆ ಐದು ಲಂಬ ಸ್ಲೇಟ್ಗಳನ್ನು ನೀಡಲಾಗಿದೆ. ಇದರೊಂದಿಗೆ ಎರಡು ಭಾಗಗಳಲ್ಲಿ ಹೆಡ್ಲೈಟ್ ಘಟಕಗಳನ್ನು ನೀಡಲಾಗಿದ್ದು, ಅದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

ಮುಂಭಾಗದಿಂದ ಬಲವಾದ ನೋಟವನ್ನು ನೀಡುವ ಅದರ ಬಾನೆಟ್ ಮೇಲೆ ಗೆರೆಗಳನ್ನು ಕಾಣಬಹುದು. ಅದರ ಬದಿಯಲ್ಲಿ ದೊಡ್ಡ ಮಿಶ್ರಲೋಹದ ಚಕ್ರಗಳು ಕಂಡುಬರುತ್ತವೆ. ಇದು ಈ ಎಸ್ಯುವಿಯ ಗಾತ್ರಕ್ಕೆ ಸಾಕಾಗಲಿದ್ದು, ಇದರ ಪಕ್ಕದಲ್ಲಿರುವ ಪುಟ್ ಸ್ಟೆಪ್ಗಳನ್ನು ಮೊದಲಿಗಿಂತಲೂ ದೊಡ್ಡದಾಗಿ ಇರಿಸಬಹುದಾಗಿದ್ದು, ಪ್ರಯಾಣಿಕರಿಗೆ ಇದು ಹತ್ತಲು ಮತ್ತು ಇಳಿಯಲು ಸಾಕಷ್ಟು ಸಹಕಾರಿಯಾಗುತ್ತದೆ. ಹಿಂಭಾಗದಲ್ಲಿ ಟೈಲ್ ಗೇಟ್ ಮತ್ತು ಅದನ್ನು ತೆರೆಯಲು ಬದಿಯಲ್ಲಿ ಡೋರ್ ಹ್ಯಾಂಡಲ್ ಇದ್ದು, ಎಲ್ಇಡಿ ಟೈಲ್ ಲೈಟ್ ಇದರಲ್ಲಿ ಕಾಣಬಹುದಾಗಿದೆ.

ಹಿಂಭಾಗದಲ್ಲಿ ಸ್ಟಾಪ್ ಲೈಟ್, ದೊಡ್ಡ ವೈಪರ್ ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಮೇಲಿನ ಭಾಗದಲ್ಲಿ ಕಾಣಬಹುದಾಗಿದ್ದು, ಇದು ಹಿಂಭಾಗದಿಂದ ವಿನ್ಯಾಸವನ್ನು ಮತ್ತಷ್ಟು ಬಲಿಷ್ಠತೆ ನೀಡುತ್ತದೆ.

ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಬಹುದು. ಎಕ್ಸ್ಯುವಿ700 ಮತ್ತು ಥಾರ್ ಮಾದರಿಯಲ್ಲಿರುವಂತೆ 2.0 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಬಹುದಾಗಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ ಎಸ್ಯುವಿ ಕಾರು ಮಾದರಿಯು ಪ್ರಮುಖ ಐದು ವೆರಿಯೆಂಟ್ಗಳೊಂದಿಗೆ 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ವಿವಿಧ ವೆರಿಯೆಂಟ್ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.53 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.61 ಲಕ್ಷ ಬೆಲೆ ಹೊಂದಿದೆ.