ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಹ್ಯುಂಡೈ ತನ್ನ ಫ್ಲ್ಯಾಗ್‌ಶಿಪ್ ಎಸ್‌ಯುವಿ ಟ್ಯೂಸಾನ್ ಅನ್ನು ಬುಧವಾರ ಭಾರತದಲ್ಲಿ 27.70 ಲಕ್ಷ ರೂ. ಎಕ್ಸ್ ಶೋರೂಂ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ. ಕೊರಿಯನ್ ತಯಾರಕರು ಭಾರತದಲ್ಲಿ ಟ್ಯೂಸಾನ್‌ನ ಲಾಂಗ್-ವೀಲ್‌ಬೇಸ್ ಆವೃತ್ತಿಯನ್ನು ಪರಿಚಯಿಸಿದ್ದು, ಈ ಹೊಸ SUV ಸಿಟ್ರನ್ C5 ಏರ್‌ಕ್ರಾಸ್, ಜೀಪ್ ಕಂಪಾಸ್ ಮತ್ತು ಫೋಕ್ಸ್‌ವ್ಯಾಗನ್ ಟಿಗುವಾನ್ ವಿರುದ್ಧ ಸ್ಪರ್ಧಿಸಲಿದೆ.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಹೊಸ ಟ್ಯೂಸಾನ್ ಲೆವೆಲ್ 2 ಸುಧಾರಿತ ಡ್ರೈವರ್-ಅಸಿಸ್ಟಂಟ್ ವ್ಯವಸ್ಥೆಗಳೊಂದಿಗೆ (ADAS) ಸಜ್ಜಾಗಿರುವ ಮೊದಲ ಹ್ಯುಂಡೈ ವಾಹನವಾಗಿದೆ. ಕ್ಯಾಮೆರಾ, ರಾಡಾರ್‌ ಮತ್ತು ಸೆನ್ಸಾರ್‌ಗಳ ಸಹಾಯದಿಂದ ಈ ಹೊಸ SUV ಬ್ಲೈಂಡ್-ಸ್ಪಾಟ್ ಕೊಲಿಷನ್ ವಾರ್ನಿಂಗ್, ಫಾರ್ವರ್ಡ್ ಕೊಲಿಷನ್ ಅಸಿಸ್ಟ್ ಮತ್ತು ವಾರ್ನಿಂಗ್, ಲೇನ್ ಕೀಪ್ ಅಸಿಸ್ಟ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದ್ದು ಈ ಅತ್ಯಾಧುನಿಕ ಟೆಕ್ ಪ್ಯಾಕೇಜ್ ಉನ್ನತ ರೂಪಾಂತರದಲ್ಲಿ (ಟಾಪ್ ವೇರಿಯಂಟ್) ಮಾತ್ರ ಲಭ್ಯವಿದೆ.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಮೊದಲ ಪ್ರತಿಸ್ಪರ್ಧಿ ಸಿಟ್ರನ್ C5 ಏರ್‌ಕ್ರಾಸ್

ಟ್ಯೂಸಾನ್ ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಲಭ್ಯವಿದೆ. ಈ ಹಿಂದಿನ ಮಾದರಿಯು 154bhp 2-ಲೀಟರ್ ನಾಲ್ಕು-ಸಿಲಿಂಡರ್ ಪವರ್‌ಟ್ರೇನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್‌ಗೆ ಸಂಯೋಜಿಸಲಾಗಿದೆ. ಆದರೆ 2-ಲೀಟರ್ ಡೀಸೆಲ್ 184bhp ಮತ್ತು 416Nm ಟಾರ್ಕ್ ಅನ್ನು ಹೊರಹಾಕುತ್ತದೆ. ಜೊತೆಗೆ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಇದೀಗ ಹೊಸ 2022ರ ಟ್ಯೂಸಾನ್ ಪ್ಲಾಟಿನಮ್ ಮತ್ತು ಸಿಗ್ನೇಚರ್ ಎಂಬ ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಪ್ಲಾಟಿನಂ ಎಟಿ ಬೆಲೆ 27.70 ಲಕ್ಷ ರೂಪಾಯಿಗಳಾಗಿದ್ದು, ಸಿಗ್ನೇಚರ್ ಎಟಿ 30.17 ಲಕ್ಷ ರೂಪಾಯಿಗಳಿಗೆ ಲಭ್ಯವಿದೆ. ಮತ್ತೊಂದೆಡೆ, ಡೀಸೆಲ್ ಮೂರು ರೂಪಾಂತರಗಳನ್ನು ಒಳಗೊಂಡಿದ್ದು, ಇದರಲ್ಲಿ ಪ್ಲಾಟಿನಂ AT ರೂಪಾಂತರ 30.20 ಲಕ್ಷ ರೂ., ಸಿಗ್ನೇಚರ್ AT 32.87 ಲಕ್ಷ ರೂ. ಮತ್ತು ಸಿಗ್ನೇಚರ್ AT 4WD ರೂ. 34.39 ಲಕ್ಷಕ್ಕೆ ಲಭ್ಯವಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂದ್ದಾಗಿವೆ. 15,000 ರೂ.ಗಳನ್ನು ಹೆಚ್ಚುವರಿಯಾಗಿ ವೆಚ್ಚಿಸಿದರೆ ಸಿಗ್ನೇಚರ್ ರೂಪಾಂತರಗಳಲ್ಲಿ ಡ್ಯುಯಲ್-ಟೋನ್ ಎಕ್ಸ್‌ಟೀರಿಯರ್ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಇನ್ನು ಸಿಟ್ರನ್ C5 ಏರ್‌ಕ್ರಾಸ್ ವಿಷಯಕ್ಕೆ ಬಂದರೆ ಇದು ಡೀಸೆಲ್‌ನಲ್ಲಿ ಮಾತ್ರ ಲಭ್ಯವಿದೆ. 2-ಲೀಟರ್ ನಾಲ್ಕು ಸಿಲಿಂಡರ್ ಮೋಟಾರ್‌ನಿಂದ ಚಾಲಿತವಾಗಿದ್ದು, ಇದು 174bhp ಮತ್ತು 400Nm ಟಾರ್ಕ್ ಉತ್ಪಾದನೆಯನ್ನು ಹೊಂದಿದೆ. ಟ್ಯೂಸಾನ್‌ನಂತೆ, ಇದು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ. C5 ಏರ್‌ಕ್ರಾಸ್ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದ್ದು, ತನ್ನ ಆರಂಭಿಕ ಬೆಲೆಯನ್ನು 32.23 ಲಕ್ಷ ರೂಪಾಯಿಗಳಿಗೆ (ಎಕ್ಸ್‌ ಶೋರೂಂ) ನಿಗಧಿಪಡಿಸಿದೆ.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಟ್ಯೂಸಾನ್‌ಗೆ ಹೋಲಿಸಿದರೆ ಸಿಟ್ರನ್ ಎಸ್‌ಯುವಿಯು 4.5 ಲಕ್ಷ ರೂ. ಹೆಚ್ಚು ದುಬಾರಿಯಾಗಿದೆ. ಸಿಟ್ರನ್‌ನ ಮುಂದಿನ ರೂಪಾಂತರವಾದ ಫೀಲ್ ಡ್ಯುಯಲ್ ಟೋನ್ ಬೆಲೆಯು ರೂ. 32.74 ಲಕ್ಷ ಮತ್ತು ಎರಡು ಟ್ರಿಮ್‌ಗಳು - ಶೈನ್ ಮತ್ತು ಶೈನ್ ಡ್ಯುಯಲ್ ಟೋನ್ - ರೂ. 33.78 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ನಲ್ಲಿ ಲಭ್ಯವಿದೆ. C5 ಏರ್‌ಕ್ರಾಸ್ ಆಲ್-ವೀಲ್-ಡ್ರೈವ್ ಸಿಸ್ಟಮ್ ಅನ್ನು ಒದಗಿಸುವುದಿಲ್ಲ. ಟ್ಯೂಸಾನ್ ಮತ್ತು C5 ಏರ್‌ಕ್ರಾಸ್ ಎರಡೂ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿವೆ.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಎರಡನೇ ಸ್ಪರ್ಧಿ ಜೀಪ್ ಕಂಪಾಸ್

ಕಂಪಾಸ್ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳಲ್ಲಿ ಲಭ್ಯವಿದ್ದು, ಟೂ-ವೀಲ್ ಅಥವಾ ಫೋರ್-ವೀಲ್ ಡ್ರೈವ್ ಮತ್ತು ಮ್ಯಾನ್ಯುವಲ್-ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಂತಹ ಬಹು ಆಯ್ಕೆಗಳನ್ನು ನೀಡುತ್ತದೆ. ಪೆಟ್ರೋಲ್ ಟ್ರಿಮ್‌ಗಳು 1.4-ಲೀಟರ್ ಎಂಜಿನ್ ಅನ್ನು 161bhp ಮತ್ತು 250Nm ಟಾರ್ಕ್ ಉತ್ಪಾದನೆಯೊಂದಿಗೆ ಪಡೆಯುತ್ತವೆ.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಪ್ರವೇಶ ಮಟ್ಟದ ಪೆಟ್ರೋಲ್ ಕಂಪಾಸ್ 6-ಸ್ಪೀಡ್ ಮ್ಯಾನುವಲ್‌ಗೆ ಹೊಂದಿಕೆಯಾಗುತ್ತದೆ. ಆದರೆ ಉನ್ನತ ರೂಪಾಂತರಗಳು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಅನ್ನು ಪಡೆಯುತ್ತವೆ. ಡೀಸೆಲ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಪ್ರಮಾಣಿತವಾಗಿ ಬರುತ್ತದೆ, ಆದರೆ ಟ್ರೈಲ್‌ಹಾಕ್ ಆವೃತ್ತಿಯು 9-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಡೀಸೆಲ್ ಮತ್ತು ಟ್ರೈಲ್‌ಹಾಕ್‌ನ ಎಂಜಿನ್‌ಗಳು 168bhp ಮತ್ತು 350Nm ಅನ್ನು ಹೊರಹಾಕುತ್ತವೆ.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಎಂಟ್ರಿ-ಲೆವೆಲ್ ಪೆಟ್ರೋಲ್ ಸ್ಪೋರ್ಟ್ ಬೆಲೆ 18.39 ಲಕ್ಷ ರೂಪಾಯಿ ಇದ್ದು, ಇದು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುವ ಏಕೈಕ ಮಾದರಿಯಾಗಿದೆ. ಈ ಹೋಲಿಕೆಯಲ್ಲಿ ಇದು ಅತ್ಯಂತ ಕೈಗೆಟುಕುವ ವಾಹನವಾಗಿದೆ. ಆಟೋಮ್ಯಾಟಿಕ್ ಪೆಟ್ರೋಲ್ ಶ್ರೇಣಿಯು 22.69 ಲಕ್ಷದಿಂದ ಪ್ರಾರಂಭವಾಗುತ್ತದೆ, ಮಾಡೆಲ್ ಎಸ್ 26.94 ಲಕ್ಷಕ್ಕೆ ಲಭ್ಯವಿದೆ.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಇವು ಎಕ್ಸ್ ಶೋರೂಂ ಬೆಲೆಗಳಾಗಿವೆ. ಟ್ಯೂಸಾನ್‌ಗೆ ಹೋಲಿಸಿದರೆ ಕಂಪಾಸ್ ಚಿಕ್ಕ ಎಂಜಿನ್‌ನಿಂದ ಚಾಲಿತವಾಗಿದ್ದರೂ, ಇದು ಹೆಚ್ಚುವರಿಯಾಗಿ 7bhp ಹೊಂದಿದೆ. ಡೀಸೆಲ್ 4×2 ಶ್ರೇಣಿಯು 19.99 ಲಕ್ಷ ರೂ. ನಿಂದ 26.14 ಲಕ್ಷ ರೂ. ಬೆಲೆಯಲ್ಲಿ ಲಭ್ಯವಿದ್ದರೆ, 4×4 ರೂಪಾಂತರಗಳು 27.79 ಲಕ್ಷ ರೂ.ನಿಂದ 29.94 ಲಕ್ಷ ರೂ.ವರೆಗೆ ಎಕ್ಸ್ ಶೋರೂಂ ಇಂಡಿಯಾದಲ್ಲಿ ಲಭ್ಯವಿದೆ.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಸಂಪೂರ್ಣ ಲೋಡ್ ಆಗಿರುವ ಮತ್ತು ಆಫ್-ರೋಡಿಂಗ್ ರೂಪಾಂತರವಾದ ಟ್ರೈಲ್ಹಾಕ್ ಎಕ್ಸ್ ಶೋರೂಂ ಬೆಲೆ 31.32 ಲಕ್ಷ ರೂ. ಇದೆ. ಈ ಹೋಲಿಕೆಯಲ್ಲಿ ಕಂಪಾಸ್ ಅತ್ಯಂತ ಕೈಗೆಟುಕುವ ವಾಹನವಾಗಿದೆ.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಕೊನೆಯ ಪ್ರತಿಸ್ಪರ್ಧಿ ಫೋಕ್ಸ್‌ವ್ಯಾಗನ್ ಟಿಗುವಾನ್

ಫೋಕ್ಸ್‌ವ್ಯಾಗನ್ ಟಿಗುವಾನ್ ಕೇವಲ ಒಂದು ರೂಪಾಂತರದಲ್ಲಿ ಲಭ್ಯವಿದೆ. VW SUV 320Nm ಟಾರ್ಕ್‌ನೊಂದಿಗೆ 188bhp 2-ಲೀಟರ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಇದು ಕಂಪಾಸ್ ಪೆಟ್ರೋಲ್‌ನಂತಹ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಹೊಸ ಹ್ಯುಂಡೈ ಟ್ಯೂಸಾನ್‌ಗಿವೆ ಟಾಪ್ 3 ಪ್ರತಿಸ್ಪರ್ಧಿಗಳು: ಬೆಲೆ, ಪರ್ಫಾಮೆನ್ಸ್, ಫೀಚರ್ಸ್ ಹೋಲಿಕೆ

ಇದು ಆಲ್-ವೀಲ್-ಡ್ರೈವ್ ಸಿಸ್ಟಮ್ ಅನ್ನು ಬಳಸಿಕೊಳ್ಳುತ್ತದೆ. Tiguan ಬೆಲೆಯು 32.79 ಲಕ್ಷ ರೂ. (ದೆಹಲಿಯ ಎಕ್ಸ್‌ಶೋ ರೂಂ)ಗೆ ಲಭ್ಯವಿದೆ. ಇದು ನಾಲ್ಕು SUV ಗಳಲ್ಲಿ ಅತ್ಯಂತ ದುಬಾರಿ ವಾಹನವಾಗಿದ್ದರೂ, ಅತ್ಯಂತ ಶಕ್ತಿಶಾಲಿ ವಾಹನವಾಗಿದೆ.

Most Read Articles

Kannada
English summary
New Hyundai Tucson Has 3 Rivals Price Performance Features Comparison
Story first published: Thursday, August 11, 2022, 11:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X