Just In
- 1 hr ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 2 hrs ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 2 hrs ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
- 2 hrs ago ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
Don't Miss!
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News Priyank Kharge Life Threat: ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Movies 'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಹುನಿರೀಕ್ಷಿತ ಜೀಪ್ ಮೆರಿಡಿಯನ್ ಎಸ್ಯುವಿ ಬಿಡುಗಡೆ ದಿನಾಂಕ ಬಹಿರಂಗ
ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಮೆರಿಡಿಯನ್ 7-ಸೀಟರ್ ಪ್ರೀಮಿಯಂ ಎಸ್ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಜೀಪ್ ಕಂಪನಿಯು ಮೆರಿಡಿಯನ್ ಎಸ್ಯುವಿ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ.
ಹೊಸ ಜೀಪ್ ಮೆರಿಡಿಯನ್ ಎಸ್ಯುವಿ 2022ರ ಮೇ 19 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಜೀಪ್ ಮೆರಿಡಿಯನ್ ಜನಪ್ರಿಯ ಕಂಪಾಸ್ ಎಸ್ಯುವಿಯನ್ನು ಆಧರಿಸಿದೆ. ಹೊಸ ಮೆರಿಡಿಯನ್ ಅನ್ನು ಈ ವರ್ಷದ ಮೇ ತಿಂಗಳಿನಲ್ಲಿ ಮಹಾರಾಷ್ಟ್ರದ ಪುಣೆ ಬಳಿಯ ಬ್ರಾಂಡ್ನ ರಂಜನ್ಗಾಂವ್ ಘಟಕದಲ್ಲಿ ಉತ್ಪಾದಿಸಲಿದೆ. ಜೀಪ್ ಮೆರಿಡಿಯನ್ ಮಾದರಿ ದಕ್ಷಿಣ ಅಮೆರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುವ ಜೀಪ್ ಕಮಾಂಡರ್ನೊಂದಿಗೆ ಹಲವಾರು ಸಾಮ್ಯತೆಯನ್ನು ಹೊಂದಿದೆ.
ಈ ಹೊಸ ಜೀಪ್ ಮೆರಿಡಿಯನ್ ಪ್ರೀಮಿಯಂ ಎಸ್ಯುವಿಯ ಮುಂಭಾಗವನ್ನು ಕಂಪಾಸ್ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿದೆ. ಈ ಎಸ್ಯುವಿಯ ಮುಂಭಾಗದ ಫಾಸಿಕ ವಿಶಿಷ್ಟವಾದ ಕ್ರೋಮ್ ಸ್ಲೇಟೆಡ್ ಫ್ರಂಟ್ ಗ್ರಿಲ್, ಮಸ್ಕಲರ್ ಬಾನೆಟ್ ರಚನೆ, ಅಗಲವನ್ನು ಒಳಗೊಂಡ ದಪ್ಪ ಅಡ್ಡ ರೇಖೆಯೊಂದಿಗೆ ಸ್ಪೋರ್ಟಿ ಬಂಪರ್, ಅಗಲವಾದ ಸೆಂಟ್ರಲ್ ಏರ್ ಟೆಕ್ ಮತ್ತು ಬಾನೆಟ್ನ ಅಂಚಿನಲ್ಲಿ ಜೀಪ್ ಬ್ಯಾಡ್ಜ್ ಅನ್ನು ಹೊಂದಿದೆ.
ಜೀಪ್ ಮೆರಿಡಿಯನ್ ಎಸ್ಯುವಿಯ ಇತರ ಸ್ಟೈಲಿಂಗ್ ಮುಖ್ಯಾಂಶಗಳು ಸ್ಕ್ವೇರ್-ಆಫ್ ವ್ಹೀಲ್ ಆರ್ಚ್ಗಳು, ಬ್ಲ್ಯಾಕ್ ಬಾಡಿ ಕ್ಲಾಡಿಂಗ್ ಮತ್ತು ಮುಂಭಾಗದ ಡೋರುಗಳು, ದೊಡ್ಡ ವಿಂಡೋಗಲು ಮತ್ತು ಪ್ರಮುಖ ರೂಫ್ ರೈಲ್ ಗಳ ಮೇಲೆ ಮೆರಿಡಿಯನ್ ಎಂದು ಬರೆಯಲಾಗಿದೆ.
ಇನ್ನು ಈ ಹೊಸ ಜೀಪ್ ಮೆರಿಡಿಯನ್ ಎಸ್ಯುವಿಯಲ್ಲಿ ಸುತ್ತುವ ಎಲ್ಇಡಿ ಟೈಲ್ ಲ್ಯಾಂಪ್ಗಳನ್ನು ಮತ್ತು ನೇರವಾದ ಟೈಲ್ಗೇಟ್ ಅನ್ನು ಹೊಂದಿದೆ. ಮೆರಿಡಿಯನ್ ಅನ್ನು ಸಿಂಗಲ್ ಮತ್ತು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಇನ್ನು ಜೀಪ್ ಕಂಪಾಸ್ಗೆ ಹೋಲಿಸಿದರೆ, ಹೊಸ ಮೂರು-ಸಾಲಿನ ಮೆರಿಡಿಯನ್ ಎಸ್ಯುವಿಯು ಸುಮಾರು 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂ ಎತ್ತರವನ್ನು ಹೊಂದಿದೆ, ಈ ಹೊಸ ಮೆರಿಡಿಯನ್ ಎಸ್ಯುವಿಯು 2794 ಎಂಎಂ ವೀಲ್ಬೇಸ್ ಅನ್ನು ಹೊಂದಿದೆ.
ಈ ಹೊಸ ಜೀಪ್ ಮೆರಿಡಿಯನ್ ಎಸ್ಯುವಿಯಲ್ಲಿ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 170 ಬಿಹೆಚ್ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಈ ಎಂಜಿನ್ ಅನ್ನು 6 ಸ್ಪೀಡ್ ಎಂಟಿ ಅಥವಾ ಎಟಿಯೊಂದಿಗೆ ಜೋಡಿಸಲಾಗುತ್ತದೆ. ಮೊದಲನೆಯದು 4×2 ಸಿಸ್ಟಮ್ ಮತ್ತು ಎರಡನೆಯದು 4×2 ಮತ್ತು 4×4 ಕಾನ್ಫಿಗರೇಶನ್ಗಳನ್ನು ಹೊಂದಿದೆ. ಇನ್ನು ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಕೂಡ ಹೊಂದಿರಲಿದೆ,
ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್ನ 7-ಸೀಟರುಗಳ ಆವೃತ್ತಿಯಾಗಿದೆ, ಇದು ಈಗಾಗಲೇ ಕಮಾಂಡರ್ ಆಗಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಆದರೆ ಭಾರತದಲ್ಲಿ ಇಂಡಿಯಾ-ಸ್ಪೆಕ್ ಮಾದರಿಯನ್ನು 'ಮೆರಿಡಿಯನ್' ಹೆಸರನ್ನು ನೀಡಲಾಗಿದೆ, ಏಕೆಂದರೆ ಮಹೀಂದ್ರಾ ಕಂಪನಿಯು ಭಾರತದಲ್ಲಿ 'ಕಮಾಂಡರ್' ಟ್ರೇಡ್ಮಾರ್ಕ್ ಹೊಂದಿದೆ. ಇದರಿಂದ ಮೆರಿಡಿಯನ್ ಹೆಸರಿನಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.
ಜೀಪ್ ಮೆರಿಡಿಯನ್ ಎಸ್ಯುವಿಯು ಸಂಪೂರ್ಣವಾಗಿ 'ಮೇಡ್-ಇನ್-ಇಂಡಿಯಾ' ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ಮರೆಮಾಚುವ ಚಿತ್ರ ಮತ್ತು ಮುಂಬರುವ 3-ಸಾಲು ಜೀಪ್ ಮೆರಿಡಿಯನ್ನ ಟೀಸರ್ ವೀಡಿಯೊವನ್ನು ಸಹ ಇತ್ತೀಚೆಗೆ ಬಿಡುಗಡೆಗೊಳಿಸಲಾಗಿತ್ತು.
ಜೀಪ್ ಮೆರಿಡಿಯನ್ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 5,000 ಕಿ.ಮೀ ಗೂ ಹೆಚ್ಚು ದೂರವನ್ನು ಕವರ್ ಮಾಡುವುದರ ಮೂಲಕ ತೀವ್ರವಾದ ಪರೀಕ್ಷೆಯ ಮೂಲಕ ಸಾಗಿದೆ ಎಂದು ಟೀಸರ್ ವೀಡಿಯೊ ಬಹಿರಂಗಪಡಿಸಿತು. ಈ ವಿಡಿಯೋ ಕಂಡುಬರುವ ಎಸ್ಯುವಿಯು ವಿವಿಧ ರಾಜ್ಯಗಳ ಐಕಾನ್ಗಳನ್ನು ಬಹಿರಂಗಪಡಿಸುವ ವಿಶೇಷ ಮರೆಮಾಚುವಿಕೆಯಲ್ಲಿ ಮುಚ್ಚಲ್ಪಟ್ಟಿತ್ತು. ಈ ಕೆಲವು ಐಕಾನ್ಗಳಲ್ಲಿ ದೆಹಲಿಯಿಂದ ಇಂಡಿಯಾ ಗೇಟ್, ರಾಜಸ್ಥಾನದ ಒಂಟೆ, ಮಧ್ಯಪ್ರದೇಶದ ಹುಲಿ, ಕರ್ನಾಟಕದ ಆನೆ ಮತ್ತು ಇತರವು ಸೇರಿವೆ.
ಈ ಮೆರಿಡಿಯನ್ ಎಸ್ಯುವಿಯ ಒಳಭಾಗವು ಬ್ರೌನ್ ಥೀಮ್ ಅನ್ನು ಹೊಂದಿದ್ದು, 10-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಆಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸನ್ರೂಫ್, ವೆಂಟಿಲೇಟೆಡ್ ಸೀಟ್ಗಳು, ಲೆದರ್ ಅಪ್ಹೋಲ್ಸ್ಟರಿ, ಅಡ್ಜೆಸ್ಟ್ ಮಾಡಬಹುದಾದ ಹೆಡ್ರೆಸ್ಟ್ಗಳು, ಮೆಟಾಲಿಕ್ ಆಕ್ಸೆಂಟ್ಗಳೊಂದಿಗೆ ಲೇಯರ್ಡ್ ಡ್ಯಾಶ್ಬೋರ್ಡ್, ವೈ-ಆಕಾರದ ಅಲಾಯ್ ವ್ಹೀಲ್ ಗಳು ಮತ್ತು ಮುಂತಾದವುಗಳನ್ನು ಸಹ ಒಳಗೊಂಡಿವೆ. ಇನ್ನು ಈ ಜೀಪ್ ಮೆರಿಡಿಯನ್ ಎಸ್ಯುವಿಯ ಆಫ್-ರೋಡ್ ಸಾಮರ್ಥ್ಯದ ವಿಡಿಯೋವನ್ನು ಕಳೆದ ಬಾರಿ ಬಿಡುಗಡೆಗೊಳಿಸಿತ್ತು.
ಈ ವಿಡಿಯೋದಲ್ಲಿ ಬೆಟ್ಟ ಹತ್ತುವಿಕೆ, ವಿಭಿನ್ನ ಭೂಪ್ರದೇಶಗಳನ್ನು ಸಾಗುವುದನ್ನು ಪ್ರದರ್ಶಿಸಿದ್ದಾರೆ. ವಿವಿಧ ಆಫ್-ರೋಡ್ ಸವಾಲುಗಳನ್ನು ನಿರ್ವಹಿಸುವುದನ್ನು ವಿಡಿಯೋದಲ್ಲಿ ಪ್ರದರ್ಶಿಸಲಾಗಿದೆ. ಈ ಹೊಸ ಜೀಪ್ ಮೆರಿಡಿಯನ್ ಎಸ್ಯುವಿಯು ವಿಡಿಯೋದಲ್ಲಿ ಮೊದಲು ಕಡಿದಾದ ಇಳಿಜಾರಿನಲ್ಲಿ ಸುಲಭವಾಗಿ ಇಳಿಯುತ್ತದೆ. ಈ ಎಸ್ಯುವಿಯು ಉತ್ತಮ ಆಫ್-ರೋಡ್ ಸಾಮರ್ಥ್ಯ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ.
ಹೊಸ ಜೀಪ್ ಮೆರಿಡಿಯನ್ 7-ಸೀಟರ್ ಪ್ರೀಮಿಯಂ ಎಸ್ಯುವಿ ಭಾರತದಲ್ಲಿ ಬಿಡುಗಡೆಯಾದ ಬಳಿಕ ಟೊಯೊಟಾ ಫಾರ್ಚೂನರ್, ಫೋಕ್ಸ್ವ್ಯಾಗನ್ ಟಿಗ್ವಾನ್ ಆಲ್ಸ್ಪೇಸ್ ಮತ್ತು ಮಹೀಂದ್ರಾ ಅಲ್ತುರಾಸ್ ಜಿ4 ಎಸ್ಯುವಿಗಳಿಗೆ ಪೈಪೋಟಿ ನೀಡುತ್ತದೆ.