ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ದೇಶಿಯ ಮಾರುಕಟ್ಟೆಯಲ್ಲಿ ಹಲವು ಹೊಸ ಕಾರುಗಳು ಕಳೆದ ತಿಂಗಳು ಜುಲೈನಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ.

ಕಳೆದ ತಿಂಗಳು ಕೂಡಾ ಹಲವಾರು ಕಾರುಗಳು ಬಿಡುಗಡೆಯಾಗಿದ್ದು, ಬಿಡುಗಡೆಯಾದ ಪ್ರಮುಖ ಕಾರುಗಳ ಮಾಹಿತಿ ಇಲ್ಲಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಸೆಮಿ-ಕಂಡಕ್ಟರ್ ಕೊರತೆಯ ನಡುವೆಯೂ ಹಲವು ಹೊಸ ಕಾರು ಮಾದರಿಗಳು ಕಳೆದ ತಿಂಗಳು ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರುಗಳಲ್ಲಿ ಸಾಮಾನ್ಯ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಬಿಡುಗಡೆಯಾಗಿವೆ. ಹಾಗಾದರೆ ಹೊಸ ಕಾರುಗಳ ವಿಶೇಷತೆಗಳೇನು? ಬೆಲೆ, ಎಂಜಿನ್ ಮತ್ತು ಇತರೆ ತಾಂತ್ರಿಕ ವೈಶಿಷ್ಟ್ಯತೆಗಳ ಸಂಕ್ಷಿಪ್ತ ಮಾಹತಿ ಇಲ್ಲಿ ನೀಡಲಾಗಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಸಿಟ್ರನ್ ಸಿ3

ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಸ ಸಿ3 ಮೈಕ್ರೊ ಎಸ್‌ಯುವಿ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಲೈವ್ ಮತ್ತು ಫೀಲ್ ಎನ್ನುವ ಎರಡು ವೆರಿಯೆಂಟ್‌ಗಳನ್ನು ಹೊಂದಿದೆ. ಹೊಸ ಕಾರಿನ ಆರಂಭಿಕ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ. 5.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.06 ಲಕ್ಷ ಬೆಲೆ ಹೊಂದಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಸಿ3 ಮಾದರಿಯಲ್ಲಿ ಸಿಟ್ರನ್ ಕಂಪನಿಯು ಎರಡು ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಆರಂಭಿಕ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವೈಶಿಷ್ಟ್ಯತೆಯ 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ತ್ರಿ-ಸಿಲಿಂಡರ್ ಪ್ಯೂರ್‌ಟೆಕ್ 82 ಪೆಟ್ರೋಲ್ ಎಂಜಿನ್‌ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವೈಶಿಷ್ಟ್ಯತೆಯ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ. ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಿಂತಲೂ ಅತ್ಯುತ್ತಮ ಫೀಚರ್ಸ್ ಹೊಂದಿದ್ದು, ಹೊಸ ಕಾರಿನಲ್ಲಿ ಸದ್ಯಕ್ಕೆ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡಲಾಗಿಲ್ಲ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಇವಿ

ವೊಲ್ವೊ ಕಂಪನಿಯು ಎಕ್ಸ್‌ಸಿ40 ರೀಚಾರ್ಜ್ ಇವಿ ಕಾರು ಮಾದರಿಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 55.90 ಲಕ್ಷಕ್ಕೆ ಬಿಡುಗಡೆ ಮಾಡಿದ್ದು, ಹೊಸ ಎಕ್ಸ್‌ಸಿ40 ರೀಚಾರ್ಜ್ ಮಾದರಿಯಲ್ಲಿ 78kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದೆ. ಇದು ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಆಯ್ಕೆ ಹೊಂದಿರುವ ಹೊಸ ಕಾರು 402 ಬಿಎಚ್‌ಪಿ ಮತ್ತು 660 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಹೊಸ ಕಾರಿನಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಆಗಿ 11kW ಹೋಂ ಚಾರ್ಜರ್ ನೀಡಲಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 418 ಕಿ.ಮೀ ಮೈಲೇಜ್ ನೀಡುವುದಾಗಿ ಡಬ್ಲ್ಯುಎಲ್‌ಟಿಪಿ ಟೆಸ್ಟಿಂಗ್‌ ಮೂಲಕ ಪ್ರಮಾಣೀಕರಿಸಲಾಗಿದೆ. 11kW ಹೋಂ ಚಾರ್ಜರ್ ಮೂಲಕ ಬ್ಯಾಟರಿ ಪೂರ್ತಿ ಚಾರ್ಜ್ ಮಾಡಲು ಕನಿಷ್ಠ 12 ರಿಂದ 18 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡರೆ 50kW ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಎರಡೂವರೆ ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಮಾಡಬಹುದಾಗಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಮಹೀಂದ್ರಾ ಸ್ಕಾರ್ಪಿಯೋ-ಎನ್ ಆಟೋಮ್ಯಾಟಿಕ್

ಮೊದಲ ಹಂತದಲ್ಲಿ ಸ್ಕಾರ್ಪಿಯೋ-ಎನ್ ಮ್ಯಾನುವಲ್ ಮಾದರಿಗಳ ಬೆಲೆ ಘೋಷಣೆ ಮಾಡಿದ್ದ ಮಹೀಂದ್ರಾ ಕಂಪನಿಗಳು ಇದೀಗ ಆಟೋಮ್ಯಾಟಿಕ್ ಆವೃತ್ತಿಗಳ ಬೆಲೆ ಮಾಹಿತಿ ಬಹಿರಂಗಪಡಿಸಿದೆ. ಹೊಸ ಕಾರಿನ ಮ್ಯಾನುವಲ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಹೊಂದಿದ್ದರೆ ಆಟೋಮ್ಯಾಟಿಕ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.45 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 21.45 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ. ಹೊಸ ಕಾರು ಖರೀದಿಗಾಗಿ ಕಂಪನಿಯು ಆಕರ್ಷಕ ಬಡ್ಡಿದರದಲ್ಲಿ ಸಾಲ-ಸೌಲಭ್ಯವನ್ನು ಸಹ ಘೋಷಣೆ ಮಾಡಿದ್ದು, ಶೇ. 6.99 ಬಡ್ಡಿದರದಲ್ಲಿ ಶೇ.100 ರಷ್ಟು ಆನ್‌ರೋಡ್ ದರದ ಮೇಲೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ನೆಕ್ಸಾನ್ ಇವಿ ಪ್ರೈಮ್

ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ತನ್ನ ಇವಿ ಮಾದರಿಗಳಾದ ಟಾಟಾ ಟಿಗೋರ್ ಇವಿ, ನೆಕ್ಸಾನ್ ಇವಿ, ನೆಕ್ಸಾನ್ ಇವಿ ಮ್ಯಾಕ್ಸ್, ಎಕ್ಸ್‌ಪ್ರೆಸ್‌ ಟಿ ಕಾರುಗಳನ್ನು ಸದ್ಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ಟಾಟಾ ಮೋಟಾರ್ಸ್ ಹೊಸ ನೆಕ್ಸಾನ್ ಇವಿ ಪ್ರೈಮ್ ಅನ್ನು ಪರಿಚಯಿಸಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ನೆಕ್ಸಾನ್ ಇವಿ ಪ್ರೈಮ್ ವಿವಿಧ ಡ್ರೈವ್ ಮೋಡ್‌ಗಳು, ಕ್ರೂಸ್ ಕಂಟ್ರೋಲ್, ಸ್ಮಾರ್ಟ್‌ವಾಚ್ ಸಂಪರ್ಕ ಮತ್ತು i-TPMS ಅನ್ನು ಪಡೆದುಕೊಂಡಿದ್ದು ಈ ಹೊಸ ವೈಶಿಷ್ಟ್ಯಗಳನ್ನು ಪ್ರಸ್ತುತ Nexon EV ಮಾಲೀಕರಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಹೊರತರಲಾಗುತ್ತದೆ. ವಿವಿಧ ವೆರಿಯೆಂಟ್‌ಗಳನ್ನು ಆಧರಿಸಿ ಇದೀಗ ನೆಕ್ಸಾನ್ ಸ್ಟ್ಯಾಂಡರ್ಡ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 14.99 ಲಕ್ಷದಿಂದ ರೂ. 17.50 ಲಕ್ಷ ಬೆಲೆ ಹೊಂದಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಮ್ಯಾಗ್ನೈಟ್ ರೆಡ್ ಎಡಿಷನ್

ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ನಿಸ್ಸಾನ್ ಕಂಪನಿಯು ಇದುವರೆಗೆ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳಿಗೆ ಬುಕಿಂಗ್ ಪಡೆದುಕೊಂಡಿದೆ. ಹೀಗಾಗಿ ಮ್ಯಾಗ್ನೈಟ್ ಮಾದರಿಯಲ್ಲಿ ವಿಶೇಷ ಆವೃತ್ತಿ ಬಿಡುಗಡೆ ಮಾಡಲಾಗಿದ್ದು, ಮ್ನಾಗ್ನೈಟ್ ರೆಡ್ ಎಡಿಷನ್ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7,86,500 ಬೆಲೆ ಹೊಂದಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಹೊಸ ಮ್ಯಾಗ್ನೈಟ್ ರೆಡ್ ಎಡಿಷನ್ ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಎಕ್ಸ್‌ವಿ ಮ್ಯಾನುವಲ್ ರೆಡ್ ವೆರಿಯೆಂಟ್ ರೂ. 7,86,500 ಆರಂಭಿಕ ಬೆಲೆ ಹೊಂದಿದ್ದರೆ ಎಕ್ಸ್‌ವಿ ಟರ್ಬೊ ಮ್ಯಾನುವಲ್ ವೆರಿಯೆಂಟ್ ರೂ. 9,24,500 ಬೆಲೆ ಹೊಂದಿದೆ. ಇದರೊಂದಿಗೆ ವಿಶೇಷ ಮಾದರಿಗಳ ಮುಂಭಾಗದ ಗ್ರಿಲ್, ಮುಂಭಾಗದ ಬಂಪರ್ ಕ್ಲಾಡಿಂಗ್, ವೀಲ್ಹ್ ಆರ್ಚ್‌ ಮತ್ತು ಬಾಡಿ ಸೈಡ್ ಕ್ಲಾಡಿಂಗ್‌ನಲ್ಲಿ ರೆಡ್ ಕ್ಲಾಡಿಂಗ್ ನೀಡಲಾಗಿದ್ದು, ಕಾರಿನ ಮೇಲೆ ಬೋಲ್ಡ್ ಗ್ರಾಫಿಕ್ಸ್, ಟೈಲ್ ಡೋರ್ ಗಾರ್ನಿಶ್, ಎಲ್ಇಡಿ ಸ್ಕಫ್ ಪ್ಲೇಟ್ ಮತ್ತು ರೆಡ್ ಎಡಿಷನ್ ಬ್ಯಾಡ್ಜ್ ಪಡೆದುಕೊಂಡಿವೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

2022ರ ಎಸ್-ಪ್ರೆಸ್ಸೊ

ಹೊಸ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮಾದರಿಯು ಪ್ರಮುಖ ಆರು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.25 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.99 ಲಕ್ಷ ಬೆಲೆ ಹೊಂದಿದ್ದು, ಹೊಸ ಮಾದರಿಯು ಈ ಬಾರಿ ಹಲವಾರು ಹೊಸ ಫೀಚರ್ಸ್ ಸೇರಿದಂತೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಹಾರ್ಟ್‌ಟೆಕ್ ಪ್ಲ್ಯಾಟ್‌ಫಾರ್ಮ್ ಅಡಿ ನಿರ್ಮಾಣಗೊಂಡಿರುವ ಹೊಸಕಾರು ಮಾದರಿಯು ಈ ಬಾರಿ ಹೊಸ ತಲೆಮಾರಿನ ವೈಶಿಷ್ಟ್ಯತೆಯ ಕೆ10ಸಿ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ಇದು ಐಡಲ್ ಸ್ಟಾರ್ಟ್/ಸ್ಟಾಪ್ ಸೌಲಭ್ಯದೊಂದಿಗೆ ಹೆಚ್ಚಿನ ಮಟ್ಟದ ಇಂಧನ ದಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ನೆಕ್ಸಾನ್ ಎಕ್ಸ್ಎಂ ಪ್ಲಸ್ ಎಸ್ ವೆರಿಯೆಂಟ್

ಟಾಟಾ ನೆಕ್ಸಾನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸುಮಾರು 29 ವೆರಿಯೆಂಟ್‌ಗಳನ್ನು ಹೊಂದಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಎಕ್ಸ್ಎಂ ಪ್ಲಸ್ ಎಸ್ ವೆರಿಯೆಂಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಒಟ್ಟು ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿದೆ. ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.75 ಲಕ್ಷ ಬೆಲೆ ಹೊಂದಿದ್ದು, ಹೊಸ ವೆರಿಯೆಂಟ್‌ನಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಹೊಸ ಎಕ್ಸ್ಎಂ ಪ್ಲಸ್ ಎಸ್ ವೆರಿಯೆಂಟ್‌ನಲ್ಲಿ ಕಂಪನಿಯು ಎಲೆಕ್ಟ್ರಿಕ್ ಸನ್‌ರೂಫ್, 7-ಇಂಚಿನ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, 4-ಸ್ಪೀಕರ್ ಸಿಸ್ಟಂ, ಕೂಲ್ಡ್ ಗ್ಲೋವ್ ಬಾಕ್ಸ್, ರಿಯರ್ ಎಸಿ ವೆಂಟ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು, ಆಟೋ ಹೆಡ್‌ಲ್ಯಾಂಪ್ ಸೌಲಭ್ಯಗಳನ್ನು ನೀಡಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

5 ಸೀರಿಸ್ 50ಎಂ ಜಹ್ರೇ ಎಡಿಷನ್

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಸರಣಿಯಲ್ಲಿ ಹೊಸದಾಗಿ 5 ಸೀರಿಸ್ 50ಎಂ ಜಹ್ರೇ ಎಡಿಷನ್ ಬಿಡುಗಡೆಗೊಳಿಸಿದ್ದು, ಹೊಸ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 67.50 ಲಕ್ಷ ಬೆಲೆ ಹೊಂದಿದೆ. ಹೊಸ ಜಹ್ರೇ ಆವೃತ್ತಿಯ ಟಾಪ್-ಆಫ್-ಲೈನ್‌ನಲ್ಲಿರುವ 5 ಸೀರಿಸ್ 530ಐ ಎಂ ಸ್ಪೋರ್ಟ್ ಟ್ರಿಮ್ ಅನ್ನು ಆಧರಿಸಿದ್ದು, ಎಂ ಸರಣಿಯಲ್ಲಿ ಕಂಪನಿಯು 50ನೇ ವರ್ಷದ ಸಂಭ್ರಮಾಚರಣೆಗಾಗಿ ಈ ಹೊಸ ಆವೃತ್ತಿಯನ್ನು ಮಾರಾಟ ಮಾಡುತ್ತಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಜಾಗತಿಕ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಕಂಪನಿಯು ತನ್ನ ಜನಪ್ರಿಯ ಸೆಡಾನ್ ಮಾದರಿಯಾದ 5 ಸೀರಿಸ್ 50ಎಂ ಹಲವಾರು ವಿಶೇಷ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, 5 ಸೀರಿಸ್ 50ಎಂ ಜಹ್ರೇ ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಕಂಪನಿಯು ತನ್ನ ಹೊಸ ಆವೃತ್ತಿಯನ್ನು ಇದೀಗ ಭಾರತದಲ್ಲೂ ಪರಿಚಯಿಸಿದ್ದು, ಹೊಸ ಕಾರು ಮರ್ಸಿಡಿಸ್ ಬೆಂಝ್ ನಿರ್ಮಾಣ ಪ್ರಮುಖ ಸೆಡಾನ್ ಮಾದರಿಗಳಿಗೆ ಇದು ಉತ್ತಮ ಪೈಪೋಟಿಯಾಗಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಎಕ್ಸ್5 ಸರಣಿಯಲ್ಲಿ ಹೊಸ ವೆರಿಯೆಂಟ್ ಒಂದನ್ನು ಪರಿಚಯಿಸಿದ್ದು, ಹೊಸ ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಬಿಡುಗಡೆಯಾಗಿದೆ.

ಜುಲೈನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!

ಹೊಸ ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಎಂ ಸ್ಪೋರ್ಟ್ ಎಕ್ಸ್5 ಸರಣಿಯ ಟಾಪ್ ಎಂಡ್ ಆವೃತ್ತಿಯಾಗಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 97.90 ಲಕ್ಷ ಬೆಲೆ ಹೊಂದಿದೆ. ಹೊಸ ಮಾದರಿಯೊಂದಿಗೆ ಕಂಪನಿಯು ಹೆಚ್ಚಿನ ಮಟ್ಟದ ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರನ್ನು ಸೆಳೆಯಲಿದ್ದು, ಸ್ಪೋರ್ಟಿ ವಿನ್ಯಾಸ ಮತ್ತು ಕೆಲವು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್ ಹೊರತುಪಡಿಸಿ ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

Most Read Articles

Kannada
English summary
New launched cars in july 2022 citroen c3 launched volvo xc40 recharge launched and more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X