Just In
- 26 min ago ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- 53 min ago ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- 53 min ago ಪ್ರೇರಣಾತ್ಮಕ ಕಥೆ: ಮನೆ ಕೆಲಸದಾಕೆಗೆ 'ಸೈಕಲ್' ಖರೀದಿಸಲು ಸಹಾಯ ಮಾಡಿದ ಮಾಲೀಕ.. ವಿಡಿಯೋ ವೈರಲ್
- 2 hrs ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
Don't Miss!
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಗಸ್ಟ್ 20ರಂದು ಬಿಡುಗಡೆಯಾಗಲಿದೆ ಹೊಸ ಸೌಲಭ್ಯ ಒಳಗೊಂಡ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
ಮಹೀಂದ್ರಾ ಕಂಪನಿಯು ತನ್ನ ನವೀಕೃತ ಸೌಲಭ್ಯಗಳನ್ನು ಒಳಗೊಂಡ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಹೊಸ ಕಾರು ಮಾದರಿಯು ಇದೇ ತಿಂಗಳು 20ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಅನಾವರಣದೊಂದಿಗೆ ಬುಕಿಂಗ್ ಆರಂಭಿಸಿರುವ ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಪ್ರಮುಖ ಎರಡು ವೆರಿಯೆಂಟ್ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ.
ಎಸ್ ಮತ್ತು ಎಸ್11 ಎನ್ನುವ ಎರಡು ವೆರಿಯೆಂಟ್ಗಳೊಂದಿಗೆ ಖರೀದಿಗೆ ಲಭ್ಯವಿರಲಿರುವ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹಳೆಯ ಮಾದರಿಯಲ್ಲಿನ ಕೆಲವು ಫೀಚರ್ಸ್ಗಳೊಂದಿಗೆ ವಿನ್ಯಾಸದಲ್ಲಿ ತುಸು ಹೊಸ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ಹೊಂದಿದೆ.
ಹೊಸ ತಲೆಮಾರಿನ ಸ್ಕಾರ್ಪಿಯೋ-ಎನ್ ಬಿಡುಗಡೆಯ ನಂತರ ಮಹೀಂದ್ರಾ ಕಂಪನಿಯು ಇದೀಗ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
ಸ್ಕಾರ್ಪಿಯೋ-ಎನ್ ಮಾದರಿಯ ಸಂಪೂರ್ಣ ಹೊಸ ತಲೆಮಾರಿನ ಆವೃತ್ತಿಯಾಗಿದ್ದರೆ ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯು ಹಳೆಯ ತಲೆಮಾರಿನ ಆವೃತ್ತಿಯಾಗಿದ್ದು, ಸ್ಕಾರ್ಪಿಯೋ-ಎನ್ ಬಿಡುಗಡೆಯ ನಂತರ ಹಳೆಯ ಮಾದರಿಯಲ್ಲಿ ಹೊಸ ಬದಲಾವಣೆಗಾಗಿ ಸ್ಕಾರ್ಪಿಯೋ ಕ್ಲಾಸಿಕ್ ಪರಿಚಯಿಸುತ್ತಿದೆ.
ಹೊಸ ಮಾದರಿಯಲ್ಲಿ 2.2 ಲೀಟರ್ ಎಂಹ್ವಾಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆ ಹೊಂದಿದ್ದು, 132 ಬಿಎಚ್ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಹಳೆಯ ಮಾದರಿಯಲ್ಲಿನ ಎಂಜಿನ್ಗಿಂತಲೂ 55 ಕೆ.ಜಿ ಕಡಿಮೆ ತೂಕದೊಂದಿಗೆ ಶೇ.14 ರಷ್ಟು ಉತ್ತಮ ಇಂಧನ ದಕ್ಷತೆ ಹೊಂದಿದೆ.
ಇದರೊಂದಿಗೆ ಹೊಸ ಮಾದರಿಯು ಈ ಹಿಂದಿನಂತೆ ಹೊರನೋಟ ಹೊಂದಿದ್ದರು ಕೆಲವು ಹೊಸ ಫೀಚರ್ಸ್ಗಳು ಕಾರಿನ ನೋಟಕ್ಕೆ ಮತ್ತಷ್ಟು ಮೆರಗು ನೀಡಲಿದ್ದು, ಮರುವಿನ್ಯಾಸಗೊಳಿಸಲಾದ ಸಿಕ್ಸ್ ಸ್ಲಾಟ್ ಫ್ರಂಟ್ ಗ್ರಿಲ್ ಮತ್ತು ಬಂಪರ್ ಜೊತೆ ಹೊಸ ಲೊಗೊ ಸಾಕಷ್ಟು ಆಕರ್ಷಕವಾಗಿದೆ.
ಮುಖ್ಯವಾಗಿ ಹೊಸ ಕಾರಿನಲ್ಲಿ ಈ ಬಾರಿ ಎಲ್ಇಡಿ ಐಬೋ ಜೊತೆಗೆ ಪ್ರೊಜೆಕ್ಟರ್ ಹೆಡ್ಲ್ಯಾಂಪ್ ನೀಡಲಾಗಿದ್ದು, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ನೀಡಲಾಗಿದೆ.
ಇದರೊಂದಿಗೆ ಹೊಸ ಕಾರಿನ ಮುಂಭಾಗದಲ್ಲಿ ಮತ್ತಷ್ಟು ಬದಲಾವಣೆಗಾಗಿ ಫಾಗ್ ಲ್ಯಾಂಪ್ ಹೌಸಿಂಗ್ ಸಹ ಬದಲಾವಣೆಗೊಳಿಸಲಾಗಿದ್ದು, ಡೈಮಂಡ್ ಕಟ್ ಹೊಂದಿರುವ 17 ಇಂಚಿನ ಅಲಾಯ್ ವ್ಹೀಲ್, ಡ್ಯುಯಲ್ ಟೋನ್ ಕ್ಲಾಡಿಂಗ್, ಹಿಂಬದಿಯಲ್ಲಿ ಸಿಗ್ನಿಚೆರ್ ಟವರ್ ವಿನ್ಯಾಸದ ಎಲ್ಇಡಿ ಟೈಲ್ ಲ್ಯಾಂಪ್ ನೀಡಲಾಗಿದೆ.
ಇನ್ನು ಹೊಸ ಕಾರು ಮಾದರಿಯ ಇಂಟಿರಿಯರ್ ವಿನ್ಯಾಸದ ಕುರಿತಾಗಿ ಮಾತನಾಡುವುದಾದರೇ ಸ್ಕಾರ್ಪಿಯೋ ಕ್ಲಾಸಿಕ್ ಹಳೆಯ ಮಾದರಿಗಿಂತ ಕೆಲವೇ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ವುಡ್ ಟ್ರಿಮ್ ಹೊಂದಿರುವ ಸುಧಾರಿತ ಡ್ಯಾಶ್ಬೋರ್ಡ್, 9 ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟೀರಿಂಗ್ ವ್ಹೀಲ್, ಬ್ಲ್ಯಾಕ್ ಮತ್ತು ಬ್ರಿಝ್ ಇಂಟಿರಿಯರ್ ಹೊಂದಿದೆ.
ಹೊಸ ಕಾರಿನಲ್ಲಿ ಕಂಪನಿಯು 7 ಸೀಟರ್ ಮತ್ತು 9 ಸೀಟರ್ ಸೌಲಭ್ಯದ ಆಯ್ಕೆ ನೀಡಲಾಗಿದ್ದು, ಮೂರನೇ ಸಾಲಿನಲ್ಲಿ ಬೆಂಚ್ ಆಸನ ಸೌಲಭ್ಯದೊಂದಿಗೆ 7 ಸೀಟರ್ ಮಾದರಿಯ ತುಸು ಹೆಚ್ಚಿನ ಸ್ಥಳವಾಕಾಶ ಹೊಂದಿದ್ದರೆ 9 ಸೀಟರ್ ಮಾದರಿಯ ಆಸನ ಸೌಲಭ್ಯವು ತುಸು ಇಕ್ಕಟ್ಟಾದ ಸ್ಥಳಾವಕಾಶ ಹೊಂದಿದೆ.
ಹೊಸ ಮಾದರಿಯಲ್ಲಿ ಈ ಹಿಂದಿನ ಮಾದರಿಯಲ್ಲಿ ಕೆಲವು ಫೀಚರ್ಸ್ಗಳೊಂದಿಗೆ ಕ್ರೂಸ್ ಕಂಟ್ರೋಲ್, ಎರಡನೇ ಸಾಲಿನ ಆಸನಗಳಿಗೆ ರಿಯರ್ ಎಸಿ ವೆಂಟ್ಸ್ ಮತ್ತು ಸುರಕ್ಷತೆಗಾಗಿ ಎರಡು ಮಾದರಿಯಲ್ಲೂ ಡ್ಯುಯಲ್ ಏರ್ಬ್ಯಾಗ್ ಸೌಲಭ್ಯವನ್ನು ಸೇರಿಸಲಾಗಿದೆ.
ಹಾಗೆಯೇ ಹೊಸ ಕಾರಿನಲ್ಲಿ ಡ್ಯುಯಲ್ ವಿಶ್ ಬೋನ್ ಸಸ್ಷೆಂಷನ್ ಹೊಂದಿರುವ ಹೊಸ ಲ್ಯಾಡರ್ ಫ್ರೇಮ್ ಚಾಸಿಸ್ ನೀಡಿರುವ ಕೂಡಾ ಕಾರಿನ ಬಾಡಿ ರೋಲ್ ಸಾಕಷ್ಟು ಸುಧಾರಿಸಿದ್ದು, ಹೈ ಸ್ಪೀಡ್ನಲ್ಲೂ ಕಾರನ್ನು ಅರಾಮವಾಗಿ ಹ್ಯಾಂಡಲ್ ಮಾಡಬಹುದಾಗಿದೆ.