ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ತನ್ನ ಹೊಸ ತಲೆಮಾರಿನ ಸಿ-ಕ್ಲಾಸ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 55 ಲಕ್ಷ ಬೆಲೆ ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಸಿ-ಕ್ಲಾಸ್ ಸೆಡಾನ್ ಮಾದರಿಯು ಇದುವರೆಗೆ ಸುಮಾರು ಐದು ತಲೆಮಾರುಗಳೊಂದಿಗೆ ಯಶಸ್ವಿಯಾಗಿ ಮಾರಾಟಗೊಂಡು ಇದೀಗ ಆರನೇ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರಿನಲ್ಲಿ ಕಂಪನಿಯು ಈ ಬಾರಿ ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಜೋಡಣೆ ಮಾಡಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಮರ್ಸಿಡಿಸ್ ಬೆಂಝ್ ಕಾರು ವಿನ್ಯಾಸಕಾರರು ಹೊಸ ಮಾದರಿಯ ವಿನ್ಯಾಸದಲ್ಲಿ ಹಿಂದಿನ ಮಾದರಿಗಿಂತ ಯಾವುದೇ ತೀವ್ರವಾದ ಬದಲಾವಣೆಗಳನ್ನು ತಂದಿಲ್ಲವಾದರೂ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಎಂಜಿನ್ ಮತ್ತು ತಂತ್ರಜ್ಞಾನ ಜೋಡಣೆಯಲ್ಲಿ ಸಾಕಷ್ಟು ನವೀಕರಣಗಳನ್ನು ಪರಿಚಯಿಸಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಹೊಸ ಸಿ-ಕ್ಲಾಸ್ ಸೆಡಾನ್ ಮಾದರಿಯು ಮರ್ಸಿಡಿಸ್-ಬೆಂಝ್ ಪೋರ್ಟ್‌ಫೋಲಿಯೊದಲ್ಲಿನ ಇತರೆ ಮಾದರಿಗಳಿಂತಲೂ ಇದು ಭಿನ್ನವಾಗಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರು ಎಂಜಿನ್ ಆಯ್ಕೆಗಳೊಂದಿಗೆ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಸಿ-ಕ್ಲಾಸ್ ಮಾದರಿಯು ಎಂಜಿನ್ ಆಯ್ಕೆಗೆ ಅನುಗುಣವಾಗಿ ಸಿ200, ಸಿ220ಡಿ ಮತ್ತು ಸಿ300ಡಿ ಎನ್ನುವ ಮೂರು ವೆರಿಯೆಂಟ್‌ಗಳೊಂದಿಗೆ ಒಟ್ಟು ಎರಡು ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಆರಂಭಿಕ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 55 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 61 ಲಕ್ಷ ಬೆಲೆ ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಹೊಸ ಕಾರಿನಲ್ಲಿ ಸಿ200 ಆವೃತ್ತಿಯು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, ಇದು 201 ಬಿಎಚ್‌ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಡೀಸೆಲ್ ಮಾದರಿಗಳಲ್ಲಿರುವ 2.0 ಲೀಟರ್ ಫೋರ್ ಸಿಲಿಂಡರ್ ಮಾದರಿಯನ್ನು ಕಂಪನಿಯು ಎರಡು ರೀತಿಯಲ್ಲಿ ಪರ್ಫಾಮೆನ್ಸ್ ಟ್ಯೂನ್ ಮಾಡಿದ್ದು, ಸಿ220ಡಿ ಡೀಸೆಲ್ ಮಾದರಿಯು 197 ಬಿಎಚ್‌ಪಿ ಮತ್ತು 440 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದರೆ ಹೈ ಎಂಡ್ ಮಾದರಿಯಲ್ಲಿರುವ ಡೀಸೆಲ್ ಮಾದರಿಯು 261.5 ಬಿಎಚ್‌ಪಿ ಮತ್ತು 550 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಹೊಸ ಕಾರಿನ ಮೂರು ಎಂಜಿನ್‌ಗಳಲ್ಲೂ ಕಂಪನಿಯು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಿದ್ದು, ಅವುಗಳು ಐಎಸ್‌ಜಿ(ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್) ಜೊತೆಗೆ ಸೌಮ್ಯ-ಹೈಬ್ರಿಡ್ ಸಿಸ್ಟಮ್ ಅನ್ನು ಒಳಗೊಂಡಿರುತ್ತವೆ. ಈ ಮೂಲಕ ಸಿ200 ಮತ್ತು ಸಿ220ಡಿ ಮಾದರಿಗಳು ಕೇವಲ 7.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ತಲುಪುವ ಶಕ್ತಿಶಾಲಿ ಕಾರು ಮಾದರಿಯಾಗಿದ್ದು, ಸಿ200 ಮಾದರಿಯು ಪ್ರತಿ ಲೀಟರ್‌ಗೆ 16.9 ಕಿ.ಮೀ ಮತ್ತು ಡೀಸೆಲ್ ಮಾದರಿಯು ಪ್ರತಿ ಲೀಟರ್‌ಗೆ 20.37 ಕಿ.ಮೀ ಇಂಧನ ದಕ್ಷತೆಯನ್ನು ಹೊಂದಿವೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಇನ್ನು ಹೊಸ ಕಾರು ಮಾದರಿಯು 4,751 ಎಂಎಂ ಉದ್ದ, 1,820 ಅಗಲ, 1,438 ಎತ್ತರ ಮತ್ತು 2,865 ಎಂಎಂ ವ್ಹೀಲ್‌ಬೆಸ್ ಹೊಂದಿದ್ದು, ಹೊಸ ಮಾದರಿಯು ಹಳೆಯ ಮಾದರಿಗಿಂತಲೂ 25 ಎಂಎಂ ಹೆಚ್ಚುವರಿ ಉದ್ದಳತೆಯೊಂದಿಗೆ ಅತ್ಯುತ್ತಮ ಆಸನ ಸೌಲಭ್ಯವನ್ನು ಹೊಂದಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಹೊಸ ಕಾರಿನಲ್ಲಿ ಕಂಪನಿಯು ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳನ್ನು ನೀಡಿದ್ದು, ಬೇಬಿ ಎಸ್ ಕ್ಲಾಸ್ ಮಾದರಿಯೆಂದು ಗುರುತಿಸಿಕೊಳ್ಳುವ ಹೊಸ ಸಿ-ಕ್ಲಾಸ್ ಮಾದರಿಯಲ್ಲಿ ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್, ನವೀಕರಿಸಿದ ಗ್ರಿಲ್, ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್‌ಲೈಟ್ ಮತ್ತು ವಿವಿಧ ಮಾದರಿಗಳಿಗೆ ಅನುಗುಣವಾಗಿ 17 ಮತ್ತು 18 ಇಂಚಿನ ಫೈವ್ ಸ್ಪೋಕ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಒಳಾಂಗಣ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳ ವಿಚಾರದಲ್ಲಿ ಹೊಸ ಸಿ-ಕ್ಲಾಸ್ ಮಾದರಿಯು ಹಲವಾರು ಆಧುನಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಅಲ್ಯೂಮಿನಿಯಂ ಬಟನ್‌ಗಳು, ಹ್ಯಾಪ್ಟಿಕ್ ಟಚ್ ಪ್ಯಾನೆಲ್‌ಗಳು, ದೊಡ್ಡ ಪರದೆಗಳು ಮತ್ತು ಲೈಟ್‌ಗಳ ಗೀಕ್‌ಫೆಸ್ಟ್ ಮೂಲಕ ಕಾರಿನ ಒಳಭಾಗಕ್ಕೆ ಐಷಾರಾಮಿ ಮೆರಗು ನೀಡಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

11.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 12.3-ಇಂಚಿನ ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಎಸ್-ಕ್ಲಾಸ್‌ನಿಂದ ಸ್ಫೂರ್ತಿ ಪಡೆದಿದ್ದು, ಇದರಲ್ಲಿ ಕಾರಿನ ವೇಗ, ಡ್ರೈವ್ ಮೋಡ್‌ಗಳು, ಗೇರ್ ಸ್ಥಾನ, ಇನ್‌ಸ್ಟಾಂಡ್ ಮತ್ತು ಸರಾಸರಿ ಇಂಧನ ದಕ್ಷತೆ, ಟ್ರಿಪ್ ಮೀಟರ್‌ಗಳು ಇತ್ಯಾದಿ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಹಾಗೆಯೇ ಹೊಸ ಕಾರಿನಲ್ಲಿ ಎರಡನೇ ತಲೆಮಾರಿನ MBUX ಪ್ಲಾಟ್‌ಫಾರ್ಮ್ ಬಳಸಲಾಗಿದ್ದು, ಇದು ಸಂಪರ್ಕಿತ ಕಾರ್ ವೈಶಿಷ್ಟ್ಯಗಳು ಮತ್ತು ಧ್ವನಿ ಸಹಾಯವನ್ನು ಸಹ ಒಳಗೊಂಡಿದೆ. ಈ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೈಯಕ್ತೀಕರಿಸಿದ ಸೆಟ್ಟಿಂಗ್‌ಗಳು ಮತ್ತು ಡೇಟಾಗೆ ಪ್ರವೇಶಕ್ಕಾಗಿ ಫಿಂಗರ್‌ಪ್ರಿಂಟ್ ಅಥವಾ ಧ್ವನಿಯ ಮೂಲಕ ಬಯೋಮೆಟ್ರಿಕ್ ದೃಢೀಕರಣವನ್ನು ಸಹ ಒಳಗೊಂಡಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಹೊಸ ಸಿ-ಕ್ಲಾಸ್‌ನಲ್ಲಿನ ಎಸಿ ವೆಂಟ್‌ಗಳು ಬ್ರಷ್ಡ್ ಅಲ್ಯೂಮಿನಿಯಂ ಕ್ರೋಮ್ ಹೊಂದಿದ್ದು, ಸೆಂಟರ್ ಕನ್ಸೋಲ್ ಒಳಭಾಗದಲ್ಲಿ ಕನಿಷ್ಠ ವಿನ್ಯಾಸವನ್ನು ಕಾಣಬಹುದು. ನಯವಾದ ಸೆಂಟರ್ ಕನ್ಸೋಲ್ ಜೊತೆಗೆ ನೀವು ಡ್ಯುಯಲ್-ಜೋನ್ ಹವಾಮಾನ ನಿಯಂತ್ರಣ ಸೌಲಭ್ಯವು ಕ್ಯಾಬಿನ್ ಅನ್ನು ತ್ವರಿತವಾಗಿ ತಂಪಾಗಿಸುತ್ತದೆ ಮತ್ತು ಇನ್ಫೋಟೈನ್‌ಮೆಂಟ್ ಪರದೆಯ ಮೂಲಕ ಅದನ್ನು ನಿಯಂತ್ರಿಸಬಹುದಾಗಿದೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಇದರೊಂದಿಗೆ ಡ್ರೈವಿಂಗ್ ಮೋಡ್ ತಕ್ಕಂತೆ ಆ್ಯಂಬಿಯೆಂಟ್ ಲೈಟಿಂಗ್ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಪ್ರೀಮಿಯಂ ಫೀಚರ್ಸ್‌ಗಳಾದ ಡ್ಯುಯಲ್-ಪೇನ್ ಸನ್‌ರೂಫ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಲೆದರ್ ಆಸನಗಳು ಕಾರು ಪ್ರಯಾಣವನ್ನು ಮತ್ತಷ್ಟು ಸುಲಭವಾಗಿಸುತ್ತವೆ.

ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್

ಪ್ರೀಮಿಯಂ ಫೀಚರ್ಸ್ ಜೊತೆಗೆ ಹೊಸ ಸಿ-ಕ್ಲಾಸ್ ಮಾದರಿಯಲ್ಲಿ ಕಂಪನಿಯು ಹಲವಾರು ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಕಾರಿನಲ್ಲಿ ಆಕ್ಟಿವ್ ಬ್ರೇಕ್ ಅಸಿಸ್ಟ್, ಆಕ್ವಿವ್ ಬ್ಲೈಂಡ್ ಸ್ಪಾಟ್ ಅಸಿಸ್ಟ್, ಆಕ್ಟಿವ್ ಸ್ಟೀರಿಂಗ್ ಅಸಿಸ್ಟ್, ಆಕ್ಟಿವ್ ಲೇನ್ ಕೀಪಿಂಗ್ ಅಸಿಸ್ಟ್, ಅಡಾಪ್ಟಿವ್ ಹೈಬೀಮ್ ಅಸಿಸ್ಟ್, ಇಬಿಡಿ ಜೊತೆಗೆ ಎಬಿಎಸ್, ಟ್ರಾಕ್ಷನ್ ಕಂಟ್ರೊಲ್ ಮತ್ತು 8 ಏರ್‌ಬ್ಯಾಗ್‌ಗಳಿವೆ.

Most Read Articles

Kannada
English summary
New mercedes c class launched in india prices start at rs 55 lakh details
Story first published: Tuesday, May 10, 2022, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X