ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಪ್ರಸ್ತುತ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಭಾರತದ ಕೆಲವೇ ವಾಹನ ತಯಾರಕರಲ್ಲಿ ಎಂಜಿ ಮೋಟಾರ್ಸ್ ಕೂಡ ಒಂದು. ಈ ಬ್ರಿಟಿಷ್ ಕಾರ್ ಬ್ರಾಂಡ್ ಈಗ ತನ್ನ ಜೆಡ್ಎಸ್ ಇವಿ ಮಾದರಿಯನ್ನು ಹಲವು ಮಹತ್ವದ ಬದಲಾವಣೆಗಳೊಂದಿಗೆ ನವೀಕರಿಸಿ ಭಾರತದಲ್ಲಿ ಪರಿಚಯಿಸಲಿದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಇತ್ತೀಚಿನ ವರದಿಯ ಪ್ರಕಾರ, ಎಂಜಿ ಮೋಟಾರ್ ಇಂಡಿಯಾ ಈ ವರ್ಷದ ಫೆಬ್ರವರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಫೇಸ್‌ಲಿಫ್ಟ್ ಇವಿ ಮಾದರಿಯನ್ನು ಪರಿಚಯಿಸಬಹುದು, ನವೀಕರಿಸಿದಈ ಎಲೆಕ್ಟ್ರಿಕ್ ಎಸ್‍ಯುವಿಯು ಈಗಾಗಲೇ ಭಾರತದಲ್ಲಿ ರೋಡ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ. ಆದರೆವಾಹನದಲ್ಲಿನ ದೊಡ್ಡ ಬದಲಾವಣೆಯು ಪವರ್‌ಟ್ರೇನ್‌ಗೆ, ಹೆಚ್ಚು ನಿರ್ದಿಷ್ಟವಾಗಿ, ಬ್ಯಾಟರಿ ಪ್ಯಾಕ್‌ಗೆ ಇರುತ್ತದೆ. 2022ರ ಎಂಜಿ ಜೆಡ್ಎಸ್ ಇವಿ ಫೇಸ್‌ಲಿಫ್ಟ್ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿದೆ. ಇದು 72 kWh ಬ್ಯಾಟರಿ ಮತ್ತು 51 kWh ಬ್ಯಾಟರಿ ಆಯ್ಕೆಗಳಾಗಿದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಇಂಡಿಯಾ-ಸ್ಪೆಕ್ ಆವೃತ್ತಿಯು ಚಿಕ್ಕ ಬ್ಯಾಟರಿ ಆಯ್ಕೆಯನ್ನು ಪಡೆಯುತ್ತದೆ, ಇದು ಹೊರಹೋಗುವ ಆವೃತ್ತಿಗೆ ಪವರ್ ನೀರುವ 44.5 kWh ಬ್ಯಾಟರಿಗಿಂತ ಇನ್ನೂ ದೊಡ್ಡದಾಗಿದೆ. ಎಸ್‍ಯುವಿಯ ಪ್ರಸ್ತುತ 419 ಕಿಮೀ ರೇಂಜ್ ಅನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ನವೀಕರಿಸಿದ ಈ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಮುಂಭಾಗದ ಪ್ರೊಫೈಲ್ ಗಮನಾರ್ಹ ಬದಲಾವಣೆಯನ್ನು ಪಡೆದಿದೆ.ಇದು ಐಸಿಇ ಚಾಲಿತ ಜೆಡ್ಎಸ್ ನಂತೆಯೇ ಹೊಸ ತೀಕ್ಷ್ಣವಾದ LED ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಈ ಕಾರು ಗ್ರಿಲ್ ಅನ್ನು ತೆಗೆದು ಕವರ್ಡ್ ಪ್ಲೇಟ್ ನಿಂದ ಬದಲಾಯಿಸುತ್ತದೆ. ಮುಂಭಾಗದ ಬಂಪರ್ ಅನ್ನು ಸಹ ನವೀಕರಿಸಲಾಗಿದೆ ಮತ್ತು ಇನ್ ಟೆಕ್ ನಯವಾದ ಕಡಿತಗಳೊಂದಿಗೆ ಬರುತ್ತದೆ. ಭಾರತದಲ್ಲಿ ಮಾರಾಟದಲ್ಲಿರುವ ಪ್ರಸ್ತುತ ಮಾದರಿಗೆ ಹೋಲಿಸಿದರೆ ಒಟ್ಟಾರೆ ವಿನ್ಯಾಸವು ಏರೋಡೈನಾಮಿಕ್ ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಈ ಕಾರಿನ ಹಿಂದಿನ ಪ್ರೊಫೈಲ್ ಕೂಡ ಸ್ವಲ್ಪ ಬದಲಾವಣೆ ಪಡೆಯುತ್ತದೆ. ಇದು ಮರುವಿನ್ಯಾಸಗೊಳಿಸಿದ ಅಲಾಯ್ ವ್ಹೀಲ್ ಗಳೊಂದಿಗೆ ಹೆಚ್ಚಿನ ದೃಶ್ಯ ಆಕರ್ಷಣೆಯನ್ನು ನೀಡುತ್ತದೆ.ಈ ನವೀಕರಿಸಿದ ಎಂಜಿ ಜೆಡ್ಎಸ್ ಇವಿ ಫೇಸ್‌ಲಿಫ್ಟ್ ಮಾದರಿಯ ಕ್ಯಾಬಿನ್ ಒಳಗೆ ಕೂಡ ನವೀಕರಿಸಿದ ಹಲವು ಬದಲಾವಣೆಗಳೊಂದಿಗೆ ಬರುತ್ತದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಈ ಹೊಸ ಎಂಜಿ ಐಸ್ಮಾರ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ 10.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ, ಇದು ಹೊಸ ವೈಶಿಷ್ಟ್ಯಗಳು, ರಿಮೋಟ್ ಕಂಟ್ರೋಲ್ ಕಾರ್ಯಗಳು ಮತ್ತು ಹೆಚ್ಚಿನ ಕನೆಕ್ಟಿವಿಟಿ ಫೀಚರ್ಸ್ ಆಯ್ಕೆಗಳನ್ನು ಪಡೆಯುತ್ತದೆ ಎಂದು ಬ್ರಿಟಿಷ್ ಕಾರ್ ಬ್ರಾಂಡ್ ಹೇಳಿಕೊಂಡಿದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಗೆ ಪರಿಚಯಿಸಲಾದ ಅತಿದೊಡ್ಡ ಅಪ್‌ಡೇಟ್ ಪವರ್‌ಟ್ರೇನ್ ಆಗಿದೆ.= ಈ ಫೇಸ್‌ಲಿಫ್ಟ್ ಮಾದರಿಯಲ್ಲಿ ಚಾರ್ಜಿಂಗ್ ಪೋರ್ಟ್ ಒಳಗೆ ನಾಲ್ಕು ಹಂತದ LED ಇಂಡೀಕೆಟರ್ ಗಳನ್ನು ಪಡೆಯುತ್ತದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಇದು ಚಾರ್ಜಿಂಗ್ ಸ್ಥಿತಿಯ ನೋಟವನ್ನು ನೀಡುತ್ತದೆ. ಕಾರು ಟೈಪ್ 2 ಮತ್ತು ಸಿಸಿಎಸ್ ಚಾರ್ಜರ್‌ಗಳ ಸಂಯೋಜನೆಯನ್ನು ಪಡೆಯುತ್ತದೆ ಆನ್‌ಬೋರ್ಡ್ ಎಸಿ ಚಾರ್ಜರ್ ಬಳಸಿ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಒದಗಿಸುತ್ತದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಎಂಜಿ ಮೋಟಾರ್ ಇಂಡಿಯಾ ಕಳೆದ ವರ್ಷ ಜನವರಿಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಮಾದರಿಯಾದ ಜೆಡ್ಎಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಆ ಸಮಯದಲ್ಲಿ ದೇಶದಲ್ಲಿ ಬ್ರ್ಯಾಂಡ್‌ನ ಎರಡನೇ ಮಾದರಿಯಾಗಿ ಈ ಜೆಡ್ಎಸ್ ಇವಿ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಈ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಇದರಿಂದ ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಜೆಡ್ಎಸ್ ಎಲೆಕ್ಟ್ರಿಕ್ ಕಾರನ್ನು ನವೀಕರಿಸಿ ಫೇಸ್‌ಲಿಫ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಅಲ್ಲದೇ ಭಾರತದಲ್ಲಿ ಇಂದನ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಇನ್ನು 2020ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಜೆಡ್ಎಸ್ ಇವಿ ಮಾದರಿಯು ಮೊದಲ ವರ್ಷದಲ್ಲಿ 1,142 ಯುನಿಟ್ ಮತ್ತು ಎರಡನೇ ವರ್ಷದಲ್ಲಿ 2,798 ಯುನಿಟ್ ಮಾರಾಟಗೊಂಡಿದೆ. ಬಿಡುಗಡೆಯ ಆರಂಭದಲ್ಲಿ ಕಡಿಮೆ ರೇಂಜ್ ಹೊಂದಿದ್ದ ಜೆಡ್ಎಸ್ ಇವಿ ಮಾದರಿಯು 2021ರ ಮಾದರಿಯೊಂದಿಗೆ ಹೆಚ್ಚಿನ ರೇಂಜ್ ಹೊಂದಿರುವುದು ಬೇಡಿಕೆ ಹೆಚ್ಚಳವಾಗುತ್ತಿದೆ. ಈ ಜೆಡ್ಎಸ್ ಇವಿ ಮಾದರಿಯು ತುಸು ದುಬಾರಿಯಾಗಿದ್ದರೂ ಹೆಚ್ಚಿನ ಮಟ್ಟದ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ.

ಹೆಚ್ಚಿನ ಮೈಲೇಜ್‌ನೊಂದಿಗೆ ಬಿಡುಗಡೆಯಾಗಲಿದೆ MG ZS EV ಫೇಸ್‌ಲಿಫ್ಟ್

ಪ್ರಸ್ತುತ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿಯ ಬೆಲೆಯು ಎಕ್ಸ್ ಶೂರೂಂ ಪ್ರಕಾರ ರೂ,21.49 ಲಕ್ಷವಾಗಿದೆ.ಇದು ಹುಂಡೈ ಕೋನಾ ಇವಿಗೆ ನೇರ ಪ್ರತಿಸ್ಪರ್ಧಿಯಾಗಿದೆ. ಮುಂಬರುವ ಫೇಸ್‌ಲಿಫ್ಟ್ ಎಸ್‍ಯುವಿ ಅದರ ಹ್ಯುಂಡೈ ಪ್ರತಿಸ್ಪರ್ಧಿಗಿಂತ ಹೆಚ್ಚು ದುಬಾರಿಯಾಗಿಸುತ್ತದೆ ಮತ್ತು ಟಾಟಾ ನೆಕ್ಸಾನ್ ಇವಿ ಮಾದರಿಗಿಂತ ಕೂಡ ಹೆಚ್ಚು ದುಬಾರಿಯಾಗಿದೆ.

Most Read Articles

Kannada
English summary
New mg zs electric facelift coming soon to india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X