Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಬಿಡುಗಡೆಯ ಸನಿಹದಲ್ಲಿ Skoda Slavia ಕಾರು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಹೊಸ ಸ್ಲಾವಿಯಾ ಸೆಡಾನ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ(Skoda Slavia) ಮಿಡ್-ಸೈಜ್ ಸೆಡಾನ್ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಸ್ಕೋಡಾ ಕಳೆದ ವರ್ಷ ಭಾರತ 2.0 ಸ್ಟ್ರಾಟಜಿ ಅಡಿಯಲ್ಲಿ ತಮ್ಮ ಎರಡನೇ ಉತ್ಪನ್ನವನ್ನು ಅನಾವರಣಗೊಳಿಸಿತು. ಇದು ಸ್ಕೋಡಾ ಸ್ಲಾವಿಯಾ ಮಧ್ಯಮ ಗಾತ್ರದ ಸೆಡಾನ್ ಆಗಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ ಕಾರು 2022ರ ಮೊದಲ ತ್ರೈಮಾಸಿಕದಲ್ಲಿ ಸೆಡಾನ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸ್ಲಾವಿಯಾ ಸೆಡಾನ್‌ನ ಹೊರಭಾಗ ಮತ್ತು ಒಳಭಾಗಕ್ಕಾಗಿ ಸ್ಕೋಡಾ ಹಲವಾರು ವೀಡಿಯೊಗಳನ್ನು ಬಿಡುಗಡೆ ಮಾಡುತ್ತಿದೆ ಮತ್ತು ಸ್ಕೋಡಾ ಸ್ಲಾವಿಯಾದಲ್ಲಿ ನೀಡಲಾದ ವೈಶಿಷ್ಟ್ಯಗಳು ಮತ್ತು ಸ್ಥಳಾವಕಾಶದ ಹೊಸ ವೀಡಿಯೊವನ್ನು ಇದೀಗ ಬಿಡುಗಡೆ ಮಾಡಿದೆ.

ಹೊಸ ಸ್ಲಾವಿಯಾ ಸೆಡಾನ್ ಕಾರು ಸ್ಕೋಡಾದ ಹೆಕ್ಸ್ ಜಿಕಲ್ ಗ್ರಿಲ್‌ನೊಂದಿಗೆ ಬರುತ್ತದೆ, ಇದನ್ನು ಕೆಲವರು ಬಟರ್‌ಫ್ಲೈ ಗ್ರಿಲ್ ಎಂದು ಕರೆಯುತ್ತಾರೆ. ಗ್ರಿಲ್ ಸುತ್ತಲೂ ಕ್ರೋಮ್ ಸರೌಂಡ್ ಕೂಡ ಇದೆ. ಎಲ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳಿವೆ.

ಇನ್ನು ಸ್ಕೋಡಾ ಅವುಗಳನ್ನು ಕ್ರಿಸ್ಟ್ ಲೈನ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳಿವೆ ಎಂದು ಕರೆಯುತ್ತದೆ. ಕ್ರೋಮ್ ಸುತ್ತು ಫಾಗ್ ಲ್ಯಾಂಪ್ ಗಳಳಿವೆ. ನಂತರ ವೀಡಿಯೊ ಸ್ಲಾವಿಯಾದ ಟೈಲ್ ಲ್ಯಾಂಪ್‌ಗಳನ್ನು ಪ್ರದರ್ಶಿಸುತ್ತದೆ. ಬೂಟ್ ಲಿಡ್‌ನ ಮಧ್ಯಭಾಗದಲ್ಲಿ ಸ್ಕೋಡಾ ಬ್ಯಾಡ್ಜಿಂಗ್ ಅನ್ನು ನೀಡಿದೆ,

ಹಿಂಭಾಗದ ಬಂಪರ್‌ನಲ್ಲಿ ಜೋಡಿಸಲಾದ ರೇರ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಸಹ ಹೊಂದಿದೆ. ಕಾರಿನ ಮುಂಭಾಗದ ಫೆಂಡರ್‌ಗಳಲ್ಲಿ ಸ್ಕೋಡಾ ಬ್ಯಾಡ್ಜಿಂಗ್ ಇದೆ. ಬ್ಯಾಡ್ಜಿಂಗ್ ಸ್ವತಃ ಪಿಯಾನೋ ಬ್ಲ್ಯಾಕ್ ಮತ್ತು ಕ್ರೋಮ್ ಅನ್ನು ಹೊಂದಿದೆ.

ಇನ್ನು ಸ್ಲಾವಿಯಾ ಸೆಡಾನ್ ಶಾರ್ಕ್-ಫಿನ್ ಆಂಟೆನಾ, ಆಂಟಿ-ಪಿಂಚ್ ತಂತ್ರಜ್ಞಾನದೊಂದಿಗೆ ಬರುವ ಎಲೆಕ್ಟ್ರಿಕ್ ಸನ್‌ರೂಫ್, ಆಟೋ-ಫೋಲ್ಡ್ ಫಂಕ್ಷನ್‌ನೊಂದಿಗೆ ಹೊರಗಿನ ರಿಯರ್‌ವ್ಯೂ ಮಿರರ್‌ಗಳ ಮೇಲೆ ಜೋಡಿಸಲಾದ ಎಲ್ಇಡಿ ಟರ್ನ್ ಇಂಡೀಕೆಟರ್ಸ್, ಕೀಲೆಸ್ ಎಂಟ್ರಿ ಮತ್ತು ಕ್ರೋಮ್‌ನೊಂದಿಗೆ ಬಾಡಿಯ ಬಣ್ಣದ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ.

ಹೊಸ ಸ್ಕೋಡಾ ಸ್ಲಾವಿಯಾದಲ್ಲಿ ಡ್ಯಾಶ್‌ಬೋರ್ಡ್‌ನೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಸ್ಲಾವಿಯಾವನ್ನು ಪ್ರೀಮಿಯಂ ಮಧ್ಯಮ ಗಾತ್ರದ ಸೆಡಾನ್ ಆಗಿ ಮಾರಾಟ ಮಾಡಲಾಗುತ್ತಿದೆ ಮತ್ತು ಟ್ಯಾಗ್ ಅನ್ನು ಸಮರ್ಥಿಸುವ ಸಲುವಾಗಿ, ಇದು ಪ್ರೀಮಿಯಂ ಕಾಣುವ ಕ್ಯಾಬಿನ್ ಅನ್ನು ಪಡೆಯುತ್ತದೆ. ಒಳಭಾಗದಲ್ಲಿ 10-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಯುನಿಟ್ ಹೊಂದಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗೆ ಕನೆಕ್ಟೆಡ್ ಸೂಟ್ ಅನ್ನು ಪಡೆಯುತ್ತದೆ.

ಇದು ಆಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಅನ್ನು ಒಳಗೊಂಡಿದೆ. ಉತ್ತಮ ಗುಣಮಟ್ಟದ ಸ್ಪೀಕರ್‌ಗಳನ್ನು ಹಿಂದಿವೆ, ಉನ್ನತ-ಸ್ಪೆಕ್ ಶೈಲಿಯ ರೂಪಾಂತರವು ಸಬ್-ವೂಫರ್ ಅನ್ನು ಸಹ ಹೊಂದಿರಲಿದೆ. ಇನ್ನು ಈ ಕಾರಿನಲ್ಲಿ 8-ಇಂಚಿನ ಟಿಎಫ್ಟಿ ಡಿಸ್ ಪ್ಲೇ ಮತ್ತು ಇದು ಇನ್ಸ್ ಟ್ರೂಮೆಂಟ್ ಆಗಿ ಕರ್ತವ್ಯಗಳನ್ನು ನಿರ್ವಹಿಸುತ್ತದೆ.

ಈ ಡಿಜಿಟಲ್ ಇನ್ಸ್ ಟ್ರೂಮೆಂಟ್ ಪ್ರಸ್ತುತ ಫ್ಯೂಯಲ್ ದಕ್ಷತೆ, ಸರಾಸರಿ ಇಂಧನ ದಕ್ಷತೆ, ಇಂಧನ ಮಟ್ಟಗಳು, ಓಡೋಮೀಟರ್, ಸ್ಪೀಡೋಮೀಟರ್, ಇತ್ಯಾದಿ ಸೇರಿದಂತೆ ಬಹಳಷ್ಟು ಮಾಹಿತಿಯನ್ನು ಪ್ರದರ್ಶಿಸುತ್ತದೆ. ಖಚಿತವಾಗಿ ಪ್ರೀಮಿಯಂ ಮತ್ತು ಅಲಂಕಾರಿಕವಾಗಿ ಕೂಡ ಕಾಣುತ್ತದೆ.

ಈ ಹೊಸ ಸ್ಕೋಡಾ ಸ್ಲಾವಿಯಾ ಸೆಡಾನ್ ಐದು ವಿಭಿನ್ನ ಬಣ್ಣಗಳಲ್ಲಿ ಹೊಂದಬಹುದು. ಇದು ಟೊರಂಡೊ ರೆಡ್, ಕ್ಯಾಂಡಿ ವೈಟ್, ಕಾರ್ಬನ್ ಸ್ಟೀಲ್, ರಿಫ್ಲೆಕ್ಸ್ ಸಿಲ್ವರ್ ಮತ್ತು ಕ್ರಿಸ್ಟಲ್ ಬ್ಲೂ ಬಣ್ಣಗಳ ಆಯ್ಜೆಯನ್ನು ಹೊಂದಿವೆ. ಇನ್ನು ಈ ಸ್ಲಾವಿಯಾ ಕಾರು ಆಕ್ಟೀವ್, ಆಂಬಿಷನ್ ಮತ್ತು ಸ್ಟೈಲ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ, ಫೋಕ್ಸ್‌ವ್ಯಾಗನ್ ಗ್ರೂಪ್‌ನ ಇಂಡಿಯಾ ಪ್ಲಾನ್ 2.0 ಅಡಿಯಲ್ಲಿ ಈ ಕಾರು ಬಿಡುಗಡೆಯಾಗಲಿದೆ.

ರ‍್ಯಾಪಿಡ್ ಸೆಡಾನ್ ಅನ್ನು ಬದಲಿಸಲು, ಹೊಸ ಸ್ಕೋಡಾ ಸ್ಲಾವಿಯಾ ಫೋಕ್ಸ್‌ವ್ಯಾಗನ್ ಹೆಚ್ಚು ಸ್ಥಳೀಯ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ, ಕುಶಾಕ್ ಕಾಂಪ್ಯಾಕ್ಟ್ ಎಸ್‍ಯುವಿಗೆ ಇದೇ ಪ್ಲಾಟ್‌ಫಾರ್ಮ್ ಆಧಾರವಾಗಿದೆ. ಹೊಸ ಸ್ಕೋಡಾ ಸ್ಲಾವಿಯಾ ಕಾರು ಜೆಕ್ ಬ್ರ್ಯಾಂಡ್‌ನ ಇತ್ತೀಚಿನ ಹೊಸ ವಿನ್ಯಾಸ ಶೈಲಿಯನ್ನು ಅನುಸರಿಸುತ್ತದೆ ಮತ್ತು ಇದನ್ನು MQB A0-IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು, ಈ ಪ್ಲಾಟ್‌ಫಾರ್ಮ್ ವಿವಿಧ ಬಾಡಿಯ ಶೈಲಿಗಳು ಮತ್ತು ಎಂಜಿನ್ ಆಯ್ಕೆಗಳನ್ನು ಸರಿಹೊಂದಿಸಲು ಸಾಕಷ್ಟು ಬಹುಮುಖವಾಗಿದೆ.
ಸ್ಕೋಡಾ ಸ್ಲಾವಿಯಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಈ ಕಾರಿನಲ್ಲಿ 1.0-ಲೀಟರ್ TSI ಮೂರು-ಸಿಲಿಂಡರ್ ಎಂಜಿನ್ ಮತ್ತು 1.5-ಲೀಟರ್ ನಾಲ್ಕು-ಸಿಲಿಂಡರ್ TSI ಎಂಜಿನ್ ಜೊತೆಗೆ ಎರಡೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಮೋಟಾರ್‌ಗಳಾಗಿವೆ. ಇದರಲ್ಲಿ 1.0-ಲೀಟರ್ TSI ಮೂರು-ಸಿಲಿಂಡರ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕರ್ನವಾಟರ್ ಆಯ್ಕೆಯನ್ನು ನೀಡಲಾಗುತ್ತದೆ.

ಇನ್ನು ದೊಡ್ಡದಾದ 1.5-ಲೀಟರ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಹೊಸ ಸ್ಕೋಡಾ ಸ್ಲಾವಿಯಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.