Just In
- 41 min ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 13 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 14 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 15 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- News
ಏಡಿ ಕಣ್ಣಿಂದ ಕ್ಯಾಮೆರಾ- ಸೆಲ್ಫ್ ಡ್ರೈವಿಂಗ್ ಕಾರಿಗೆ ಭರ್ಜರಿ ಪುಷ್ಟಿ
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
- Education
Distance Education Courses And Colleges : ದೂರ ಶಿಕ್ಷಣ ಮೂಲಕ ಅಧ್ಯಯನಕ್ಕೆ ಉತ್ತಮ ಕೋರ್ಸ್ ಮತ್ತು ಕಾಲೇಜುಗಳ ವಿವರ
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ
ದೇಶದಲ್ಲಿ ಮಾರಾಟವಾಗುವ ಟೈರ್‌ಗಳಿಗೆ ಹೊಸ ಮಾನದಂಡಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಹೊಸ ಮಾನದಂಡಗಳನ್ನು ಸಿದ್ದಪಡಿಸಿದ್ದು, ಹೊಸ ಕ್ರಮದೊಂದಿಗೆ ಭಾರತದಲ್ಲಿ ಗುಣಮಟ್ಟ ಮತ್ತು ಸುರಕ್ಷಿತ ಟೈರ್‌ಗಳ ಉತ್ಪಾದನೆಗೆ ಅನುವು ಮಾಡಿಕೊಡುತ್ತಿದೆ.

ಹೊಸ ಟೈರ್ ಉತ್ಪಾದನಾ ಮಾನದಂಡಗಳು ಮುಂಬರುವ ಅಕ್ಟೋಬರ್ 1ರಿಂದಲೇ ಅಧಿಕೃತವಾಗಿ ಜಾರಿಗೆ ಬರಲಿದ್ದು, ಹೊಸ ಮಾನದಂಡಗಳೊಂದಿಗೆ ಹೊಸ ವಾಹನಗಳಲ್ಲಿ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ. ಟೈರ್‌ಗಳು ಒಂದು ವಾಹನದ ಪ್ರಮುಖ ಅಂಶವಾಗಿದ್ದು, ಟೈರ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡದಿದ್ದರೆ ವಾಹನವು ಎಷ್ಟೇ ಉತ್ತಮವಾಗಿದ್ದರೂ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

ಅದು ಸೂಪರ್‌ಕಾರ್ ಆಗಿರಲಿ ಅಥವಾ ಟ್ರಕ್ ಆಗಿರಲಿ ಅದರ ಟೈರ್‌ಗಳು ರಸ್ತೆಯ ಸಂಪರ್ಕದ ಏಕೈಕ ಬಿಂದುವಾಗಿರುತ್ತದೆ. ಆದ್ದರಿಂದ ವಾಹನಗಳಲ್ಲಿ ಉತ್ತಮ ಟೈರ್‌ಗಳನ್ನು ಹೊಂದಿರುವುದು ಮುಖ್ಯ ಅಂಶವಾಗಿದ್ದು, ಮಾರುಕಟ್ಟೆಯಲ್ಲಿ ಹಲವಾರು ಮಾದರಿಗಳು ಲಭ್ಯವಿವೆ.

ಕೆಲವು ಟೈರ್ ಮಾದರಿಗಳು ಉತ್ತಮ ತಂತ್ರಜ್ಞಾನ ಪ್ರೇರಣೆಯೊಂದಿಗೆ ನಿರ್ಮಾಣಗೊಂಡಿದ್ದರೆ ಇನ್ನು ಕೆಲವು ಟೈರ್ ಮಾದರಿಗಳು ಕಳಪೆ ಗುಣಮಟ್ಟದೊಂದಿಗೆ ಅಗ್ಗದ ದರದಲ್ಲೂ ಖರೀದಿಗೆ ಲಭ್ಯವಿವೆ. ಕಳಪೆ ಟೈರ್ ಮಾದರಿಗಳು ಕೆಲವೊಮ್ಮೆ ಗುಣಮಟ್ಟದ ಕೊರತೆಯಿಂಗಾಗಿ ಅಪಘಾತಗಳಿಗೆ ಎಡೆಮಾಡಿಕೊಡುವ ಸಾಧ್ಯತೆಗಳಿದ್ದು, ಇದರಿಂದ ಹೊಸ ಸುರಕ್ಷಾ ಮಾನದಂಡಗಳೊಂದಿಗೆ ಕೇಂದ್ರ ಸರ್ಕಾರವು ಟೈರ್ ಉತ್ಪಾದನೆ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದೆ.

ಭಾರತದಲ್ಲಿ ಟೈರ್ ಮಾರುಕಟ್ಟೆಯು ಹೆಚ್ಚಾಗಿ ಅಸಂಘಟಿತವಾಗಿದ್ದು, ಅದನ್ನು ನಿಯಂತ್ರಿಸಲಾಗುತ್ತಿಲ್ಲ. ಇದರಿಂದ ಹೊಸ ಮಾನದಂಡಗಳ ಮೂಲಕ ಟೈರ್ ಉತ್ಪಾದನೆಗೆ ಕನಿಷ್ಠ ಗುಣಮಟ್ಟಗಳ ಅಳವಡಿಕೆ ಖಚಿತಪಡಿಸಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಟೈರ್ ಉತ್ಪಾದಕರಿಗೆ ಹೊಸ ಮಾನದಂಡಗಳನ್ನು ಪರಿಚಯಿಸುತ್ತಿದೆ.

ಭಾರತದಲ್ಲಿ ಕೆಲವು ಕಂಪನಿಗಳು ಅತ್ಯುತ್ತಮ ಟೈರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಅದೇ ಸಮಯದಲ್ಲಿ ಚೀನಾದಿಂದ ಹೆಚ್ಚಾಗಿ ಆಮದು ಮಾಡಿಕೊಳ್ಳುವ ಹಲವಾರು ಕಡಿಮೆ-ಗುಣಮಟ್ಟದ ಟೈರ್‌ಗಳು ಸಹ ಮಾರುಕಟ್ಟೆಯಲ್ಲಿ ಭಾರತದಲ್ಲಿ ಖರೀದಿಗೆ ಲಭ್ಯವಿವೆ.

ಆಮದು ಮಾಡಿಕೊಳ್ಳಲಾಗುವ ಕಳಪೆ ಟೈರ್‌ಗಳನ್ನು ಕೆಲವು ಕಂಪನಿಗಳು ನಂಬಲಾಗದಷ್ಟು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು, ಇದು ಆರಂಭದಲ್ಲಿ ಖರೀದಿಗೆ ಕಡಿಮೆ ಬಜೆಟ್ ಅನ್ನಿಸದರೂ ಇವುಗಳ ಅನೇಕ ಅನಾಹುತಗಳಿಗೆ ಎಡೆಮಾಡಿಕೊಡುತ್ತವೆ.

ಇದೇ ಕಾರಣಕ್ಕೆ ಟೈರ್ ಉತ್ಪಾದನೆ ಮತ್ತು ಮಾರಾಟಕ್ಕಾಗಿ ಹೊಸ ಮಾನದಂಡಗಳನ್ನು ಜಾರಿಗೊಳಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಇತ್ತೀಚೆಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಇದು ಮುಂಬರುವ ದಿನಗಳಲ್ಲಿ ಟೈರ್ ಉತ್ಪಾದನೆಯಲ್ಲಿ ಹೊಸ ಬದಲಾವಣೆ ತರುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೊಸ ಮಾನದಂಡಗಳ ಪ್ರಕಾರ, ಟೈರ್ ಉತ್ಪಾದನೆಗಾಗಿ ಕಾರು, ಬಸ್ ಮತ್ತು ಟ್ರಕ್ ಟೈರ್ ತಯಾರಕರು ರೋಲಿಂಗ್ ರೆಸಿಸ್ಟೆನ್ಸ್, ರೋಲಿಂಗ್ ಸೌಂಡ್ ಮತ್ತು ವೆಟ್ ಗ್ರಿಪ್ ಮಾನದಂಡಗಳನ್ನು ಟೈರ್‌ನಲ್ಲಿ ಅಳವಡಿಸುವುದು ಕಡ್ಡಾಯವಾಗಲಿದೆ.

ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ (AMI) 142:2019 ರಲ್ಲಿ ವ್ಯಾಖ್ಯಾನಿಸಲಾದ ಉದ್ಯಮದ ಮಾನದಂಡಗಳು ವಾಹನದ ಟೈರ್ ಗುಣಮಟ್ಟವನ್ನು ವ್ಯಾಖ್ಯಾನಿಸಲಿದ್ದು, ಟೈರ್ ರೆಸಿಸ್ಟೆನ್ಸ್ ಮೂಲಕ ಟೈರ್ ಎಲ್ಲಾ ಭೂಪ್ರದೇಶಗಳಿನ ಹವಾಮಾನವನ್ನು ತಡೆದುಕೊಳ್ಳುವುದನ್ನು ಖಚಿತಪಡಿಸುತ್ತದೆ.

ಹಾಗೆಯೇ ರೋಲಿಂಗ್ ಸೌಂಡ್ ಮೂಲಕ ಟೈರ್ ಮೂಲಕ ಟೈರ್ ಘರ್ಷಣೆಯಿಂದಾಗಿ ಉಂಟಾಗುವ ಶಬ್ದ ಮಾಲಿನ್ಯವನ್ನು ತಗ್ಗಿಸಲಿದ್ದು, ವೆಟ್ ಗ್ರಿಪ್ ಮಾನದಂಡವು ಒದ್ದೆಯಾದ ರಸ್ತೆಗಳಲ್ಲೂ ಟೈರ್‌ನ ಬ್ರೇಕಿಂಗ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ಒಟ್ಟಾರೆಯಾಗಿ ಈ ಹೊಸ ಮಾನದಂಡಗಳು ವಾಹನಗಳ ಮೈಲೇಜ್ ಹೆಚ್ಚಳಕ್ಕೆ ಸಹಕಾರಿಯಾಗುವುದರ ಜೊತೆಗೆ ಶಬ್ದ ಮಾಲಿನ್ಯವನ್ನು ತಗ್ಗಿಸಲು ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿಯಾಗಲಿದ್ದು, ಪ್ರಯಾಣಿಕ ಕಾರುಗಳು, ಲಘು ವಾಣಿಜ್ಯ ವಾಹನಗಳು ಮತ್ತು ಭಾರೀ ವಾಣಿಜ್ಯ ವಾಹನಗಳನ್ನು ಈ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ.

ಆಕ್ಟೋಬರ್ 1ರಿಂದಲೇ ಹೊಸ ನಿಯಮ ಜಾರಿಗೆ ಬರಲಿದ್ದರೆ 2023ರ ಏಪ್ರಿಲ್ ರಿಂದ ದೇಶದಲ್ಲಿ ಮಾರಾಟವಾಗುವ ಪ್ರತಿಯೊಂದು ಟೈರ್‌ಗಳು ಹೊಸ ಮಾನದಂಡಗಳನ್ನು ಕಡ್ಡಾಯವಾಗಿ ಹೊಂದಿರಬೇಕಿದ್ದು, ಕಳಪೆ ಗುಣಮಟ್ಟದ ಟೈರ್‌ಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ.