Just In
- 1 hr ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 17 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 18 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
ಉಪ ಚುನಾವಣೆ: 7 ವಿಧಾನಸಭೆ 3 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿವರು
- Finance
ಜುಲೈ 1ರಿಂದ ಏನೆಲ್ಲಾ ಬದಲಾವಣೆ?, ವೈಯಕ್ತಿಕ ಹಣಕಾಸಿಗೆ ಏಟು
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಹೊಸ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ಮಾದರಿಯ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ,48.43 ಲಕ್ಷವಾಗಿದೆ.

ಟೊಯೊಟಾ ಕಂಪನಿಯು ಫಾರ್ಚುನರ್ ಜಿಆರ್ ಸ್ಪೋರ್ಟ್ ಎಂಬ ಹೊಸ ಟಾಪ್ ವೇರಿಯಂಟ್ನ ಸೇರ್ಪಡೆಯೊಂದಿಗೆ ಫಾರ್ಚುನರ್ ಸರಣಿಯನ್ನು ವಿಸ್ತರಿಸಿದೆ.ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ಮಾದರಿಯು ಫಾರ್ಚುನರ್ ಲೆಜೆಂಡರ್ 4X4 ಗಿಂತ ಸುಮಾರು ರೂ.3.8 ಲಕ್ಷ ದುಬಾರಿಯಾಗಿದೆ. ಈ ಎಸ್ಯುವಿಯ ಹೊಸ ರೂಪಾಂತರವು ಕೆಲವು ಕಾಸ್ಮೆಟಿಕ್ ನವೀಕರಣಗಳು, ವೈಶಿಷ್ಟ್ಯದ ನವೀಕರಣಗಳು ಮತ್ತು ಕೆಲವು ಯಾಂತ್ರಿಕ ಬದಲಾವಣೆಗಳೊಂದಿಗೆ ಬರುತ್ತದೆ. ಲೆಜೆಂಡರ್ ಅನ್ನು ಆಧರಿಸಿದ ಹೊಸ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ಅನ್ನು ಸಾಮಾನ್ಯ ಮಾದರಿಯಿಂದ ಸುಲಭವಾಗಿ ಗುರುತಿಸಬಹುದು.

ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ಎಸ್ಯುವಿ ಪರಿಷ್ಕೃತ ಏರ್ ಡ್ಯಾಮ್ನೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಬಂಪರ್ ಅನ್ನು ಹೊಂದಿದೆ, 'GR ಬ್ಯಾಡ್ಜಿಂಗ್ ಮತ್ತು ಮುಂಭಾಗದ ತುದಿಯಲ್ಲಿ ಹೊಸ ಫಾಗ್ ಲ್ಯಾಂಪ್ ಕ್ಲಸ್ಟರ್ಗಳನ್ನು ಹೊಂದಿದೆ.

ಡಾರ್ಕ್ ಫಿನಿಶ್ ಹೊಂದಿರುವ ಅದರ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳು ಲೆಜೆಂಡರ್ ಅನ್ನು ಹೋಲುತ್ತವೆ, ಇದು ಸ್ವಲ್ಪ ಪರಿಷ್ಕೃತ ಹಿಂಬದಿಯ ಬಂಪರ್ ಮತ್ತು ಟೈಲ್ಲ್ಯಾಂಪ್ಗಳ ನಡುವೆ ಬಾಡಿಯ ಬಣ್ಣದ ಟ್ರಿಮ್ ಸ್ಟ್ರಿಪ್ ಅನ್ನು ಪಡೆಯುತ್ತದೆ. ಹೊಸ ಟೊಯೋಟಾ ಫಾರ್ಚುನರ್ GR-S ರೂಪಾಂತರವು GR ಲೋಗೋವನ್ನು ಒಳಗೊಂಡಿರುವ ರೆಡ್ ಬ್ರೇಕ್ ಕ್ಯಾಲಿಪರ್ಗಳೊಂದಿಗೆ ಬರುತ್ತದೆ.

ಬ್ಲ್ಯಾಕ್ ಲೆದರ್ ಸೀಟ್ಗಳು ಮತ್ತು ಕೆಂಪು ಸ್ಟಿಚಿಂಗ್ನೊಂದಿಗೆ ಸ್ಯೂಡ್ ಸಜ್ಜುಗಳೊಂದಿಗೆ ಒಳಾಂಗಣವು ಸ್ಪೋರ್ಟಿಯರ್ ಆಗಿ ಕಾಣುತ್ತದೆ. ಹೆಡ್ರೆಸ್ಟ್ ಮತ್ತು ಸ್ಟೀರಿಂಗ್ ವೀಲ್ನಲ್ಲಿ GR ಲೋಗೋಗಳನ್ನು ನೀವು ಗಮನಿಸಬಹುದು. ಇದರ ಸೆಂಟರ್ ಕನ್ಸೋಲ್ ಮತ್ತು ಇನ್ಸ್ ಟ್ರೂಮೆಂಟ್ ಪ್ಯಾನೆಲ್ ವಿಭಿನ್ನ ಟ್ರಿಮ್ ಫಿನಿಶ್ ಹೊಂದಿದೆ.

ಹೊಸ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ನ ಸ್ಟ್ಯಾಂಡರ್ಡ್ ಫೀಚರ್ ಕಿಟ್ ಗೆಸ್ಚರ್-ಕಂಟ್ರೋಲ್ ಟೈಲ್ಗೇಟ್, ಇತ್ತೀಚಿನ ಸ್ಮಾರ್ಟ್ಫೋನ್ ಸಂಪರ್ಕದೊಂದಿಗೆ 8.0-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಜೆಬಿಎಲ್ ಆಡಿಯೊ ಸಿಸ್ಟಮ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಕನೆಕ್ಟ್ ಕಾರ್ ಟೆಕ್, ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, 7 ಏರ್ಬ್ಯಾಗ್ಗಳು ಮತ್ತು ಇನ್ನಷ್ಟು ಫೀಚರ್ಸ್ ಗಳನ್ನು ಹೊಂದಿವೆ.

ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ನಲ್ಲಿರುವ ಅದೇ 2.8 ಲೀಟರ್ ಡೀಸೆಲ್ ಎಂಜಿನ್ ಅನ್ನು ರ್ಚುನರ್ ಜಿಆರ್ ಸ್ಪೋರ್ಟ್ ಹೊಂದಿದೆ. ಈ ಎಂಜಿನ್ 204 ಬಿಹೆಚ್ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ ಜೋಡಿಸಲಾಗಿದೆ.

ಫಾರ್ಚುನರ್ GR ಸ್ಪೋರ್ಟ್ ರೂಪಾಂತರದಲ್ಲಿ 4WD ಸಿಸ್ತಂ ಅನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಲೆಜೆಂಡರ್ ಎಸ್ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಲೆಜೆಂಡರ್ ಮರುವಿನ್ಯಾಸಗೊಳಿಸಲಾದ ಹೆಡ್ಲ್ಯಾಂಪ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ಡಿಆರ್ಎಲ್ಗಳು ಹೊಂದಿದೆ. ಇದನ್ನು ಟೊಯೊಟಾ ವಾಟರ್ ಫಾಲ್ ಡಿಆರ್ಎಲ್ಗಳು' ಎಂದು ಕರೆಯಲಾಗಿದೆ.

ಇದರ ಹೆಡ್ಲ್ಯಾಂಪ್ಗಳ ಕೆಳಗೆ ಫಾಗ್ ಲ್ಯಾಂಪ್ ಗಳಿವೆ. ಇನ್ನು ಡೈನಾಮಿಕ್ ಟರ್ನ್ ಸಿಗ್ನಲ್ ಇಂಡೀಕೆಟರ್ ಗಳಿವೆ. ಫಾರ್ಚೂನರ್ ಲೆಜೆಂಡರ್ ಸುತ್ತಲೂ ಎಲ್ಇಡಿ ಲೈಟಿಂಗ್ ಹೊಂದಿದೆ. ಇನ್ನು ಇದರ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಇದರಲ್ಲಿ 18 ಇಂಚಿನ ಮೆಷಿನ್-ಕಟ್ ಅಲಾಯ್ ವ್ಹೀಲ್ಗಳನ್ನು ಅಳವಡಿಸಲಾಗಿದೆ. ಇದು ಎಲ್ಲಾರ ಗಮನಸೆಳೆಯುವಂತಿದೆ. ಅಲ್ಲದೇ ಇದು ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸುತ್ತದೆ.

ಇದು ಫ್ಲೋರ್ಬೋರ್ಡ್ ಅನ್ನು ಸಹ ಪಡೆಯುತ್ತದೆ, ಇನ್ನು ಡೋರಿನ ಹ್ಯಾಂಡಲ್ಗಳಲ್ಲಿ ಕೆಲವು ಕ್ರೋಮ್ ಇದೆ ಮತ್ತು ಉದ್ದಕ್ಕೂ ಸ್ಟ್ರಿಪ್ ಅನ್ನು ಸಹ ಕ್ರೋಮ್ನಿಂದಮಾಡಲಾಗಿದೆ. ಈ ಫಾರ್ಚೂನರ್ ಲೆಜೆಂಡರ್ ಎಸ್ಯುವಿಯ ರೂಫ್ ಮ್ಯಾಟ್ ಬ್ಲ್ಯಾಕ್ನಿಂದ ಕೂಡಿದ್ದು, ಇದು ಒಟ್ಟಾರೆ ಬಿಳಿ ಬಣ್ಣದೊಂದಿಗೆ ಉತ್ತಮ ವ್ಯತಿರಿಕ್ತತೆಯನ್ನು ನೀಡುತ್ತದೆ. ಇನ್ನು ಈ ಎಸ್ಯುವಿಯ ಸ್ಪೋರ್ಟಿ ಲುಕ್ಗೆ ಪೂರಕವಾಗಿ ರೂಫ್ ರೈಲ್ ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ನೀಡಿದೆ.

ಇನ್ನು ಈ ಲೆಜೆಂಡರ್ ವೆರಿಯೆಂಟ್ ಮಾದರಿಯ ಹಿಂಭಾಗದಲ್ಲಿ ನಯವಾದ-ಕಾಣುವ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಅದನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದು ಬ್ಲ್ಯಾಕ್ ಸ್ಟ್ರಿಪ್ ಸಹ ಪಡೆಯುತ್ತದೆ, ಅದು ಎರಡೂ ಟೈಲ್ ಲೈಟ್ಗಳನ್ನು ಅದರ ಉದ್ದಕ್ಕೂ 'ಫೋರ್ಟೂನರ್' ಬ್ರ್ಯಾಂಡಿಂಗ್ನೊಂದಿಗೆ ಸಂಪರ್ಕಿಸುತ್ತದೆ. ಇನ್ನು ಲೆಜೆಂಡರ್ ವೆರಿಯೆಂಟ್ ಒಳಭಾಗದಲ್ಲಿಯು ಕೆಲವು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಫಾರ್ಚೂನರ್ ಲೆಜೆಂಡರ್ ಇಂಟಿರಿಯರ್ ಅಥವಾ ಒಳಭಾಗದಲ್ಲಿ ಡ್ಯುಯಲ್-ಟೋನ್ (ಬ್ಲ್ಯಾಕ್ ಮತ್ತು ಮರೂನ್) ಅಂಶಗಳನ್ನು ಹೊಂದಿದೆ,

ಇದು ಒಳಾಂಗಣವನ್ನು ಸ್ಪೋರ್ಟಿ ಆಗಿ ಕಾಣುವಂತೆ ಮಾಡಿದೆ, ಇದರ ಡ್ಯಾಶ್ಬೋರ್ಡ್ ಮತ್ತು ಡೋರಿನ ಪ್ಯಾನೆಲ್ ಗಳಲ್ಲಿ ಸಾಕಷ್ಟು ಸಾಫ್ಟ್-ಟಚ್ ಸಾಮಗ್ರಿಗಳಿವೆ. ಎಸ್ಯುವಿ ಸುತ್ತಲೂ ವೈಟ್ ಅಬೈಂಡ್ ಲೈಟ್ ಅನ್ನು ಹೊಂದಿದೆ. ಇದರೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯನ್ನು ಒಳಗೊಂಡಿರುವ ದೊಡ್ಡ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಉತ್ತಮ ರೆಸ್ಪಾನ್ಸ್ ನಿಂದ ಕೂಡಿದೆ. ಇದರ ಕೆಳಗೆ ಟೆಪ್ರೇಚರ್ ಮತ್ತು ಪ್ಯಾನ್ ಸ್ಪೀಡ್ ವೇಗವನ್ನು ಪ್ರದರ್ಶಿಸಲು ಎಲ್ಇಡಿ ಡಿಸ್ ಪ್ಲೇಯೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ನೀಡಲಾಗಿದೆ.

ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ನಲ್ಲಿ ಸುರಕ್ಷತೆಗಾಗಿ 7 ಏರ್ಬ್ಯಾಗ್ಗಳು, ಇಬಿಡಿಯೊಂದಿಗೆ ಎಬಿಎಸ್, ಬ್ರೇಕ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ಸ್ಟೆಬಿಲಿಟಿ ಕಂಟ್ರೋಲ್, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟಡ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ (ಆಟೋ ಎಮರ್ಜೆನ್ಸಿ ಅನ್ಲಾಕ್) ಮತ್ತು ಎಮರ್ಜನ್ಸಿ ಬ್ರೇಕ್ ಸಿಗ್ನಲ್ನಂತಹ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇನ್ನು ಹೊಸದಾಗಿ ಬಿಡುಗಡೆಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ವೆರಿಯೆಂಟ್ ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡಬಹುದು