ಸಿಎನ್‌ಜಿ ವರ್ಷನ್‌ನಲ್ಲಿ ಬರುತ್ತಿದೆ ಜನಪ್ರಿಯ ಟೊಯೊಟಾ ಗ್ಲಾಂಝಾ ಕಾರು

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ತನ್ನ ನವೀಕರಿಸಿದ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಮಾರ್ಚ್ 15 ರಂದು ಬಿಡುಗಡೆಗೊಳಿಸಿತ್ತು. ಹೊಸ ಮಾದರಿಯು ಸ್ಲೀಕರ್ ವಿನ್ಯಾಸ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಮತ್ತು ಪವರ್‌ಟ್ರೇನ್‌ಗೆ ನವೀಕರಣಗಳನ್ನು ಪಡೆದುಕೊಂಡಿತ್ತು.

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಟೊಯೊಟಾ ಗ್ಲಾಂಝಾ

ಇದೀಗ ಟೊಯೊಟಾ ಕಂಪನಿಯು ಮುಂಬರುವ ವಾರಗಳಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಅದರ ಮಾರುಕಟ್ಟೆ ಆಗಮನದ ಮೊದಲು, ಅದರ ವಿಶೇಷಣಗಳು ಮತ್ತು ರೂಪಾಂತರದ ವಿವರಗಳು ವೆಬ್‌ನಲ್ಲಿ ಸೋರಿಕೆಯಾಗಿವೆ. ಸೋರಿಕೆಯಾದ ದಾಖಲೆಯ ಪ್ರಕಾರ, ಹೊಸ ಟೊಯೊಟಾ ಗ್ಲಾಂಝಾ ಸಿಎನ್‌ಜಿ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಇದು ಎಸ್, ಜಿ ಮತ್ತು ವಿ ಎಂಬ ರೂಪಾಂತರಗಳಾಗಿದೆ,

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಟೊಯೊಟಾ ಗ್ಲಾಂಝಾ

ಟೊಯೊಟಾ ಗ್ಲಾಂಝಾ ಸಿಎನ್‌ಜಿ ಕಾರಿನಲ್ಲಿ 1.2 ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ಗೆ ಜೋಡಿಸಲಾಗಿರುತ್ತದೆ. ಇದು 76 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಬರಲಿದೆ.

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಟೊಯೊಟಾ ಗ್ಲಾಂಝಾ

ಅದರ ಒಟ್ಟಾರೆ ಉದ್ದ, ಅಗಲ ಮತ್ತು ಎತ್ತರಕ್ಕೆ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಟೊಯೊಟಾ ಗ್ಲಾಂಝಾ ಸಿಎನ್‌ಜಿ 3990 ಎಂಎಂ ಉದ್ದ, 1745 ಎಂಎಂ ಅಗಲ, 1500 ಎಂಎಂ (ಅನ್‌ಲ್ಯಾಡೆನ್) ಎತ್ತರ ಮತ್ತು 2520 ಎಂಎಂ ವ್ಹೀಲ್‌ಬೇಸ್ ಹೊಂದಿರುತ್ತದೆ.

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಟೊಯೊಟಾ ಗ್ಲಾಂಝಾ

ಹ್ಯಾಚ್‌ಬ್ಯಾಕ್‌ನ ಎಲ್ಲಾ ಮೂರು ಸಿಎನ್‌ಜಿ ರೂಪಾಂತರಗಳು 1450kgs GVW ಅನ್ನು ಹೊಂದಿರುತ್ತದೆ. ಸೋರಿಕೆಯಾದ ದಾಖಲೆಯು ಅದರ ಮೈಲೇಜ್ ಅನ್ನು ಉಲ್ಲೇಖಿಸದಿದ್ದರೂ, ಹಿಂದೆ ಸೋರಿಕೆಯಾದ ಡೇಟಾವು 25 ಕಿಮೀ/ಕೆಜಿ ಮೈಲೇಜ್ ಅನ್ನು ನೀಡುತ್ತದೆ ಎಂದು ಬಹಿರಂಗಪಡಿಸಿದೆ.

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಟೊಯೊಟಾ ಗ್ಲಾಂಝಾ

ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಈ ಟೊಯೊಟಾ ಗ್ಲಾಂಝಾ ಕಾರು ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಈ ಹೊಸ ಟೊಯೊಟಾ ಗ್ಲಾಂಝಾ ಕಾರು ಹಿಂದಿನ ಮಾದರಿಗಿಂತ ಹೆಚ್ಚು ಸ್ಪೋರ್ಟಿಯರ್ ವಿನ್ಯಾಸದ ಶೈಲಿಯನ್ನು ಹೊಂದಿದೆ. ಹೊಸ ಟೊಯೊಟಾ ಗ್ಲಾಂಝಾ ಕಾರಿನ ವಿನ್ಯಾಸದ ಬಗ್ಗೆ ಹೆಳುವುದಾದರೆ, ಈ ಕಾರಿನ ಮುಂಭಾಗದ ಹೊಸ ವಿನ್ಯಾಸ ಶೈಲಿಯೊಂದಿಗೆ ಬಂದಿದೆ.

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಟೊಯೊಟಾ ಗ್ಲಾಂಝಾ

ಇದು ಟೊಯೊಟಾದ ಜಾಗತಿಕ ಕಾರುಗಳಿಗೆ ಅನುಗುಣವಾಗಿರುತ್ತದೆ. ಇದು ಕ್ಯಾಮ್ರಿ ತರಹದ ಮುಂಭಾಗದ ಗ್ರಿಲ್ ಮತ್ತು ಬಂಪರ್, ಹೊಸ ಕ್ರೋಮ್ ಮತ್ತು ಎಲ್-ಆಕಾರದ ಎಲ್ಇಡಿ ಡಿಆರ್ಎಲ್ (ಡೇಟೈಮ್ ರನ್ನಿಂಗ್ ಲ್ಯಾಂಪ್) ಗಳನ್ನು ಒಳಗೊಂಡಿದೆ. ಈ ಟೊಯೊಟಾ ಗ್ಲಾಂಝಾ ಕಾರಿನ ಹಿಂಭಾಗವು ಸ್ವಲ್ಪ ಪರಿಷ್ಕೃತ ಬಂಪರ್ ಮತ್ತು ಟೈಲ್-ಲೈಟ್‌ಗಾಗಿ ಹೊಸ ಇನ್‌ಸರ್ಟ್‌ಗಳನ್ನು ಹೊಂದಿದೆ.

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಟೊಯೊಟಾ ಗ್ಲಾಂಝಾ

ಈ ಹೊಸ ಟೊಯೊಟಾ ಗ್ಲಾಂಝಾ ವಿನ್ಯಾಸಗೊಳಿಸಲಾದ 16-ಇಂಚಿನ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಸ್ಟ್ಯಾಂಡರ್ಡ್ ಗ್ಲಾಂಝಾ ಕಾರು ರೆಡ್, ಬ್ಲೂ, ಗ್ರೇ, ವೈಟ್ ಮತ್ತು ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಟೊಯೊಟಾ ಗ್ಲಾಂಝಾ

ಟೊಯೊಟಾ ಗ್ಲಾಂಝಾ ಹ್ಯಾಚ್‌ಬ್ಯಾಕ್ ಕಾರಿನ ಕ್ಯಾಬಿನ್ ಹೊಸ ಬಲೆನೊ ಮಾದರಿಗೆ ಹೋಲುವಂತಿದೆ. ಇದು ಬಲೆನೊದಲ್ಲಿ ನೀಡಲಾಗುವ ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳ ಬದಲಿಗೆ ಬ್ಲ್ಯಾಕ್ ಮತ್ತು ಬೀಜ್ ಬಣ್ಣಗಳ ಯೋಜನೆಯೊಂದಿಗೆ ಬರುತ್ತದೆ. ವೈಶಿಷ್ಟ್ಯಗಳ ವಿಷಯದಲ್ಲಿ, ಹೊಸ ಗ್ಲಾಂಝಾ ಮಲ್ಟಿ-ಫಂಕ್ಷನಲ್ ಲೆದರ್ ಸುತ್ತಿದ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್, ನವೀಕರಿಸಿದ ಇನ್ಸ್ಟ್ರುಮೆಂಟ್ ಕನ್ಸೋಲ್, ಸೆಂಟರ್ ಕನ್ಸೋಲ್‌ನಲ್ಲಿ ಹೊಸ ಏರ್-ಕಾನ್ ವೆಂಟ್‌ಗಳು ಮತ್ತು ಹಿಂಭಾಗ ಆಟೋಮ್ಯಾಟಿಕ್ ಎಸಿಯನ್ನು ಒಳಗೊಂಡಿವೆ.

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಟೊಯೊಟಾ ಗ್ಲಾಂಝಾ

ಇದರೊಂದಿಗೆ Apple CarPlay ಮತ್ತು Android Auto, ನ್ಯಾವಿಗೇಶನ್ ಮತ್ತು ವಾಯ್ಸ್ ಕಾಮೆಂಡ್ ಗಳೊಂದಿಗೆ ದೊಡ್ಡ 9-ಇಂಚಿನ SmartPlay Pro+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬಂದಿದೆ. ಈ ಕಾರಿನಲ್ಲಿ ಹೊಸದಾಗಿ 360-ಡಿಗ್ರಿ ಕ್ಯಾಮೆರಾ, ಹೆಡ್ಸ್-ಅಪ್ ಡಿಸ್ಪ್ಲೇ (HUD), ವಾಯ್ಸ್ ಅಸಿಸ್ಟ್ ಫೈಂಡ್ ಮೈ ಕಾರ್ ವೈಶಿಷ್ಟ್ಯ ಮತ್ತು ರಿಮೋಟ್ ಲಾಕ್ ಮತ್ತು ಅನ್‌ಲಾಕ್ ಕಾರ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಕನೆಕ್ಟಿವಿಟಿ ಕಾರ್ ತಂತ್ರಜ್ಞಾನಗಳನ್ನು ಹೊಂದಿದೆ.

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಟೊಯೊಟಾ ಗ್ಲಾಂಝಾ

ಈ ಹೊಸ ಗ್ಲಾಂಝಾ ಹ್ಯಾಚ್‌ಬ್ಯಾಕ್ ನಲ್ಲಿ ಸುರಕ್ಷೆತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷೆತೆಗೆಗಾಗಿ, ಆರು ಏರ್‌ಬ್ಯಾಗ್‌ಗಳು, ಕ್ರೂಸ್ ಕಂಟ್ರೋಲ್, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್, ಇಬಿಡಿಯೊಂದಿಗೆ ಎಬಿಎಸ್ ಇತ್ಯಾದಿಗಳಂತಹ ಉನ್ನತ-ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಿದೆ. ಸ್ಟ್ಯಾಂಡರ್ಡ್ ಟೊಯೊಟಾ ಗ್ಲಾಂಝಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20, ಟಾಟಾ ಆಲ್ಟ್ರೋಜ್, ಹೋಂಡಾ ಜಾಝ್ ಮತ್ತು ಮಾರುತಿ ಸುಜುಕಿ ಬಲೆನೊ ಕಾರುಗಳುಗೆ ಪೈಪೋಟಿ ನೀಡುತ್ತಿದೆ.

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಟೊಯೊಟಾ ಗ್ಲಾಂಝಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟೊಯೊಟಾ ಕಂಪನಿಯು ಹೊಸ ಗ್ಲಾಂಝಾಗೆ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು. ಇದು 2022ರ ಮಾರುತಿ ಸುಜುಕಿ ಬಲೆನೊದಿಂದ ದೃಶ್ಯಾತ್ಮಕವಾಗಿ ಪ್ರತ್ಯೇಕಿಸುತ್ತದೆ. ಇದೀಗ ಟೊಯೊಟಾ ಕಂಪನಿಯು ಮುಂಬರುವ ವಾರಗಳಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆ ಮಾಡಲಿದೆ.

Most Read Articles

Kannada
Read more on ಟೊಯೊಟಾ toyota
English summary
New toyota glanza cng launch soon variants details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X