Just In
Don't Miss!
- News
ಶಿವಮೊಗ್ಗದಲ್ಲಿ ಮಾಜಿ ಕಾರ್ಪೊರೇಟರ್ ಮನೆ ಕುಸಿದರೂ ನೆರವಿಗೆ ಧಾವಿಸದ ಕಾರ್ಫೋರೇಟರ್
- Movies
'ಬಘೀರ' ಶೂಟಿಂಗ್ಗೆ ಶ್ರೀಮುರುಳಿ ಬ್ರೇಕ್: 'ಉಗ್ರಂ ವೀರಂ' ಕಿಕ್ ಸ್ಟಾರ್ಟ್?
- Lifestyle
Raksha Bandhan 2022: ರಕ್ಷಾಬಂಧನದಂದು ಸಹೋದರನ ಸುರಕ್ಷತೆಗಾಗಿ ಸಹೋದರಿಯರು ಈ ದೇವರನ್ನು ಪ್ರಾರ್ಥಿಸಿ
- Sports
ಆತನಿಲ್ಲದೆ ವಿಶ್ವಕಪ್ನಲ್ಲಿ ಸ್ಪರ್ಧೆ ಸಾಧ್ಯವೇ ಇಲ್ಲ: ಏಷ್ಯಾಕಪ್ನಲ್ಲಿಲ್ಲದ ಆಟಗಾರನ ಬಗ್ಗೆ ಕಿರಣ್ ಮೋರೆ ಹೇಳಿಕೆ
- Finance
ನಿಮ್ಮ ಸಂಸ್ಥೆ ಪಿಎಫ್ ಮೊತ್ತ ಜಮೆ ಮಾಡುತ್ತಿದೆಯೇ, ಹೀಗೆ ಚೆಕ್ ಮಾಡಿ
- Technology
ಚೀನಾ ಫೋನ್ ಬ್ಯಾನ್ ಮಾಡಿದ್ರೆ, ದೇಶಿಯ ಮೊಬೈಲ್ ಕಂಪನಿಗಳಿಗೆ ಲಾಭವೇ?
- Education
JEE Advanced 2022 Registration : ಪರೀಕ್ಷಾ ನೊಂದಣಿ ಪ್ರಕ್ರಿಯೆ ಆರಂಭ ; ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಕೆ ವಿವರ
- Travel
ಇತಿಹಾಸ ಮತ್ತು ಪ್ರಕೃತಿಯ ಮಿಶ್ರಣ ನಂದಿ ಬೆಟ್ಟಗಳು
ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಟೊಯೊಟಾ ಹೈರೈಡರ್ ಎಸ್ಯುವಿ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಹೊಸ ಎಸ್ಯುವಿಯನ್ನು ಅನಾವರಣಗೊಳಿಸುವುದಾಗಿ ಘೋಷಿಸಿದೆ. ಅನಾವರಣವಾಗುವ ಮುಂಚಿತವಾಗಿ ಮುಂಭಾಗದ ವಿನ್ಯಾಸ ಬಹಿರಂಗಪಡಿಸುವ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಇತ್ತೀಚಿನ ಟೀಸರ್ ಚಿತ್ರಗಳನ್ನು ನೋಡುವಾಗ, ಟೊಯೊಟಾ ಹೈರೈಡರ್ ವಿನ್ಯಾಸವು ಟೊಯೊಟಾದ ಅತ್ಯಂತ ಯಶಸ್ವಿ RAV4 ಕ್ರಾಸ್ಒವರ್ ಎಸ್ಯುವಿಯಿಂದ ಅದರ ದೊಡ್ಡ ಜ್ಯಾಮಿತೀಯ ಏರ್ ಡ್ಯಾಮ್ ಮತ್ತು ಕೋನೀಯ ಎಲ್ಇಡಿ DRL ಗಳಿಂದ ಸ್ಫೂರ್ತಿ ಪಡೆದಿದೆ. ಟೊಯೊಟಾ ಹೈರೈಡರ್ ಎಸ್ಯುವಿ ಬಿಡುಗಡೆಯೊಂದಿಗೆ, ಜಪಾನಿನ ಆಟೋಮೊಬೈಲ್ ದೈತ್ಯ ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಅತ್ಯಂತ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಒಂದನ್ನು ಪ್ರವೇಶಿಸಲಿದೆ. 2022ರ ಜುಲೈ 1 ರಿಂದ ಟೊಯೊಟಾ ಎಸ್ಯುವಿಯನ್ನು ಅನಾವರಣಗೊಳಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಟೊಯೊಟಾ ಹೈರೈಡರ್ ಎಸ್ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ವೋಕ್ಸ್ವ್ಯಾಗನ್ ಟೈಗನ್ ಮತ್ತು ಇನ್ನೂ ಕೆಲವು ಎಸ್ಯುವಿಗಳಂತಹ ಇತರ ಎಸ್ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಈ ಹೊಸ ಎಸ್ಯುವಿಗೆ ಟೊಯೊಟಾ ಹೈರೈಡರ್ ಎಂಬ ಹೆಸರನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಮೈಲ್ಡ್ ಹೈಬ್ರಿಡ್ ಮತ್ತು ಬಲವಾದ ಹೈಬ್ರಿಡ್ ಪವರ್ಟ್ರೇನ್ಗಳೊಂದಿಗೆ ಬರಲಿದೆ. ಈ ಹೊಸ ಎಸ್ಯುವಿಯ ಉತ್ಪಾದನೆಯು ಜುಲೈ 1 ರಿಂದ ಆರಂಭವಾಗಲಿದೆ.

ಈ ಹೊಸ ಎಸ್ಯುವಿಯ ಉತ್ಪಾದನೆಯು ಕರ್ನಾಟಕದ ಬಿಡದಿಯಲ್ಲಿರುವ ಟೊಯೊಟಾ ಉತ್ಪಾದನೆ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಹೊಸ ಟೊಯೊಟಾ ಎಸ್ಯುವಿ ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಮಾರುಕಟ್ಟೆ ಬಿಡುಗಡೆಗಯಾಗುವ ಸಾಧ್ಯತೆಗಳಿದೆ.

ಈ ಎಸ್ಯುವಿಯ ಒಳಬಾಗದಲ್ಲಿ ಡ್ಯುಯಲ್-ಟೋನ್ ಡ್ಯಾಶ್ಬೋರ್ಡ್ ಅನ್ನು ಮೃದುವಾದ ಕಂದು ಮತ್ತು ಕಪ್ಪು ಬಣ್ಣಗಳ ಲೆದರ್ ಸಿಲ್ವರ್ ಅಸ್ಸೆಂಟ್ ಗಳೊಂದಿಗೆ ಮತ್ತು ಫ್ರೀ-ಸ್ಟ್ಯಾಂಡಿಂಗ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಬಹಿರಂಗಪಡಿಸುತ್ತದೆ.

ಇದರೊಂದಿಗೆ ಆಟೋಮ್ಯಾಟಿಕ್ ಬಟನ್ಗಳೊಂದಿಗೆ ಎಸಿ ಕಂಟ್ರೋಲ್ ಗಳನ್ನು ಹೊಂದಿವೆ. ಇನ್ಫೋಟೈನ್ಮೆಂಟ್ ಯುನಿಟ್ ಟಾಪ್-ಸ್ಪೆಕ್ ಬಲೆನೊ ಹ್ಯಾಚ್ಬ್ಯಾಕ್ನಲ್ಲಿ ನೀಡಲಾದ ಒಂದಕ್ಕೆ ಹೋಲುತ್ತದೆ ಮತ್ತು ಶೀಘ್ರದಲ್ಲೇ ಹೊಸ ಮಾರುತಿ ಬ್ರೆಜ್ಜಾದಲ್ಲಿ ಪರಿಚಯಿಸಲಾಗುವುದು. ಹೊಸ ಟೊಯೋಟಾ ಹೈರೈಡರ್ ಸಂಪರ್ಕಿತ ಕಾರ್ ತಂತ್ರಜ್ಞಾನದೊಂದಿಗೆ ಬರಲಿದೆ.

ಈ ಟೊಯೊಟಾ ಹೈರೈಡರ್ ಎಸ್ಯುವಿಯಲ್ಲಿ ಕ್ರೂಸ್ ಕಂಟ್ರೋಲ್, ಪನೋರಮಿಕ್ ಸನ್ರೂಫ್, 360 ಡಿಗ್ರಿ ಕ್ಯಾಮೆರಾ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಹೆಡ್ಸ್-ಅಪ್ ಡಿಸ್ಪ್ಲೇ, ವೈರ್ಲೆಸ್ ಫೋನ್ ಚಾರ್ಜಿಂಗ್, ಆಟೋಮ್ಯಾಟಿಕ್ ಎಸಿ ಮುಂತಾದ ಹಲವಾರು ಉನ್ನತ ವೈಶಿಷ್ಟ್ಯಗಳೊಂದಿಗೆ ಹೊಸ ಟೊಯೋಟಾ ಹೈರೈಡರ್ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಎಸ್ಯುವಿಯ ಹಿಂಭಾಗದ ಎಸಿ ವೆಂಟ್ಗಳ ಜೊತೆಗೆ ಮತ್ತು ಇನ್ನೂ ಅನೇಕ ಫೀಚರ್ಸ್ ಗಳಿರಲಿದೆ. ಕಳೆದ ಟೀಸರ್ ನಲ್ಲಿ ಸ್ಪೋರ್ಟಿ ಬ್ಲ್ಯಾಕ್ ಮಾದರಿಯೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್, ಎಲ್ಇಡಿ DRL ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು, ಬ್ಲ್ಯಾಕ್ ORVM ಗಳು, ಬಾಡಿ ಬಣ್ಣದಲ್ಲಿರುವ ಡೋರ್ ಹ್ಯಾಂಡಲ್ಗಳು, ಸ್ಪೋರ್ಟಿ ರಿಯರ್ ಸ್ಪೋಲಿಯರ್ ಮತ್ತು ನಯವಾದ ಎಲ್ಇಡಿ ಟೈಲ್ಲ್ಯಾಂಪ್ಗಳನ್ನು ತೋರಿಸಲಾಗಿದೆ.

ಹೊಸ ಟೊಯೊಟಾ ಎಸ್ಯುವಿಯ ಮುಂಭಾಗದ ಗ್ರಿಲ್ನ ಮೇಲ್ಭಾಗದಲ್ಲಿ ಮತ್ತು ಎಸ್ಯುವಿಯ ಮುಂಭಾಗದ ಮಧ್ಯದಲ್ಲಿ ಸಿಗ್ನೇಚರ್ ಬ್ಯಾಡ್ಜ್ ಅನ್ನು ಒಳಗೊಂಡಿರುವ ಸ್ಪ್ಲಿಟ್ ಕ್ರೋಮ್ ಬಾರ್ಗಳೊಂದಿಗೆ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ವರದಿಗಳ ಪ್ರಕಾರ, ಮಾರುತಿ ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಗ್ಲೋಬಲ್-ಸ್ಪೆಕ್ ವಿಟಾರಾ ಎಸ್ಯುವಿಯನ್ನು ಸಹ ಆಧಾರವಾಗಿರುವ ಸುಜುಕಿಯ ಗ್ಲೋಬಲ್-ಸಿ ಪ್ಲಾಟ್ಫಾರ್ಮ್ನಲ್ಲಿ ಹೊಸ ಟೊಯೋಟಾ ಹೈರೈಡರ್ ಎಸ್ಯುವಿ ವಿನ್ಯಾಸಗೊಳಿಸಿರಬಹುದು.

ಮುಂಬರುವ ಹೊಸ ಮಿಡ್ ಸೈಜ್ ಎಸ್ಯುವಿ ಹೈಬ್ರಿಡ್ ಪವರ್ಟ್ರೇನ್ನೊಂದಿಗೆ ಬರಲಿದೆ ಎಂದು ವಾಹನ ತಯಾರಕರು ದೃಢಪಡಿಸಿದ್ದಾರೆ. ಈ ಎಸ್ಯುವಿಯಲ್ಲಿ 1.5 ಲೀಟರ್ K15C ಡ್ಯುಯಲ್ ಜೆಟ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಇದು ಮೈಲ್ಡ್ ಮತ್ತು ಬಲವಾದ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುತ್ತದೆ. ಈ ಎಸ್ಯುವಿಯ ಮೈಲ್ಡ್ ಹೈಬ್ರಿಡ್ ಆವೃತ್ತಿಯು 103 ಬಿಹೆಚ್ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡನೆಯದು 115 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇನ್ನು ಎಸ್ಯುವಿಯ ಗೇರ್ ಬಾಕ್ಸ್ ವಿಷಯದಲ್ಲಿ, ಟೊಯೊಟಾ ಹೈರೈಡರ್ ನಲ್ಲಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಮತ್ತು ಇ-ಸಿವಿಟಿ ಗೇರ್ಬಾಕ್ಸ್ ಅನ್ನು ಹೊಂದಿರುತ್ತದೆ. ಮೈಲ್ದ್ ಹೈಬ್ರಿಡ್ ರೂಪಾಂತರಗಳು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಬರುತ್ತವೆ, ಇನ್ನು ಬಲವಾದ ಹೈಬ್ರಿಡ್ ಆವೃತ್ತಿಯು ಇ-ಸಿವಿಟಿ ಗೇರ್ಬಾಕ್ಸ್ನೊಂದಿಗೆ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಫ್ಹೋರ್ ವ್ಹೀಲ್ ಡ್ರೈವ್ ಮತ್ತು ಆಲ್ ವ್ಹೀಲ್ ಡ್ರೈವ್ ಎರಡು ಡ್ರೈವ್ಟ್ರೇನ್ ಸಿಸ್ಟಂಗಳು ಇರುತ್ತದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಹೊಸ ಟೊಯೊಟಾ ಹೈರೈಡರ್ ಎಸ್ಯುವಿಯು ಬಿಡುಗಡೆಯ ಬಳಿಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವುದಲ್ಲದೆ, ಇದು ಬ್ರ್ಯಾಂಡ್ ಇಮೇಜ್ ಸುಧಾರಿಸುತ್ತದೆ. ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ಗ್ರಾಹಕರು ಹೈಬ್ರಿಡ್ ವಾಹನಗಳನ್ನು ಖರೀದಿಸುತ್ತಿದ್ದಾರೆ. ಹೊಸ ಟೊಯೊಟಾ ಹೈರೈಡರ್ ಎಸ್ಯುವಿ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇದು ತನ್ನ ಪ್ರತಿಸ್ಪರ್ಧಿಗಳಿಗೆ ಪೈಪೋಟಿಯನ್ನು ನೀಡುತ್ತದೆ.