ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾಗಿರುವ ವೊಲ್ವೊ ಭಾರತದಲ್ಲಿ ತನ್ನ ಹೊಚ್ಚ ಹೊಸ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಸ್ಟ್ಯಾಂಡರ್ಡ್ ವೊಲ್ವೊ ಎಕ್ಸ್‌ಸಿ40 ಎಸ್‍ಯುವಿಯನ್ನು ಆಧರಿಸಿದ ವಾಹನವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ಮುಂಬರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಅನ್ನು ಭಾರತಕ್ಕೆ ಸಂಪೂರ್ಣವಾಗಿ ನಿರ್ಮಿಸಿದ ಯುನಿಟ್ (ಸಿಬಿಯು) ಆಗಿ ತರಲಾಗುವುದು ಮತ್ತು ಇದು ಶೀಘ್ರದಲ್ಲೇ CKD (ಸಂಪೂರ್ಣವಾಗಿ ನಾಕ್ಡ್ ಡೌನ್) ಯುನಿಟ್ ಆಗಿ ಲಭ್ಯವಿರುವುದಿಲ್ಲ. ಹೊಸ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಸಿಬಿಯು ಮಾಡೆಲ್ ಆಗಿರುವುದರಿಂದ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಸ್ವಲ್ಪ ಹೆಚ್ಚು ಬೆಲೆಯನ್ನು ಹೊಂದಿರುತ್ತದೆ. ಭಾರತದಲ್ಲಿ ಸ್ಟ್ಯಾಂಡರ್ಡ್ ವೊಲ್ವೊ ಎಕ್ಸ್‌ಸಿ40 ಎಸ್‍ಯುವಿಯ ಬೆಲೆಯು ರೂ.75 ಲಕ್ಷವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ವೊಲ್ವೊ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಬರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‍ಯುವಿಯ ಕುರಿತು ಕೆಲವು ವಿವರಗಳನ್ನು ಬಿಡುಗಡೆ ಮಾಡಿದೆ ಮತ್ತು ಚೀನೀ-ಮಾಲೀಕತ್ವದ ಸ್ವೀಡಿಷ್ ವಾಹನ ತಯಾರಕರು ಶೀಘ್ರದಲ್ಲೇ ಎಲೆಕ್ಟ್ರಿಕ್ ಎಸ್‍ಯುವಿಗಾಗಿ ಬುಕ್ಕಿಂಗ್ ಅನ್ನು ತೆರೆಯುತ್ತಾರೆ ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ವೊಲ್ವೊದ ಅಧಿಕೃತ ವೆಬ್‌ಸೈಟ್ ಪ್ರಕಾರ, ಮುಂಬರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಒಂದಲ್ಲ ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಬರುತ್ತದೆ, ಪ್ರತಿಯೊಂದೂ ಆಯಾ ಆಕ್ಸಲ್‌ಗಳಿಗೆ ಪವ್ರ್ ಅನ್ನು ನೀಡುತ್ತದೆ. ಇದರರ್ಥ ಮುಂಬರುವ ವೊಲ್ವೊ ಎಕ್ಸ್‌ಸಿ40 ರೀಚಾರ್ಜ್ ಆಲ್-ವೀಲ್-ಡ್ರೈವ್ ಮಾಡೆಲ್ ಆಗಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ವಿಶೇಷಣಗಳ ಪ್ರಕಾರ, ಮುಂಬರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ 75kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ ಮತ್ತು ಈ ಸಂಗ್ರಹಿಸಲಾದ ಹೆಚ್ಚಿನ ಪವರ್ ಮೇಲೆ ತಿಳಿಸಿದ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು ಬಳಸುತ್ತವೆ. ಈ ಎಲೆಕ್ಟ್ರಿಕ್ ಮೋಟಾರ್‌ಗಳು ಒಟ್ಟಾಗಿ 408 ಬಿಹೆಚ್‍ಪಿ ಪವರ್ ಮತ್ತು 660 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಪ್ರಬಲವಾದ ಪವರ್‌ಟ್ರೇನ್ ಸೆಟಪ್ ನಿಂದ ಕಾರ್ಯಕ್ಷಮತೆಯು ಚುರುಕಾಗಿದೆ ಮತ್ತು ಕೇವಲ 4.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯು 180 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ಇದಲ್ಲದೆ, ಈ ಪವರ್‌ಟ್ರೇನ್ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಅನ್ನು ಒಂದೇ ಚಾರ್ಜ್‌ನಲ್ಲಿ 418 ಕಿಮೀಗಳನ್ನು ಕ್ರಮಿಸಲು ಮತ್ತು ಸೂಕ್ತವಾದ ವೇಗದ ಚಾರ್ಜರ್ ಅನ್ನು ಬಳಸಿಕೊಂಡು ಸರಿಸುಮಾರು 40 ನಿಮಿಷಗಳಲ್ಲಿ 80 ಪ್ರತಿಶತದವರೆಗೆ ಚಾರ್ಜ್ ಮಾಡಲು ಸಕ್ರಿಯಗೊಳಿಸುತ್ತದೆ ಎಂದು ವೊಲ್ವೊ ಹೇಳಿಕೊಂಡಿದೆ. ಪ್ರಾಯೋಗಿಕತೆಯ ದೃಷ್ಟಿಯಿಂದ, ದೊಡ್ಡ ಬ್ಯಾಟರಿ ಪ್ಯಾಕ್ ಹೊರತಾಗಿಯೂ, ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ತನ್ನ ಬೂಟ್‌ನಲ್ಲಿ 414-ಲೀಟರ್ ಸ್ಪೇಸ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ವಿನ್ಯಾಸದ ವಿಷಯದಲ್ಲಿ, ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‍ಯುವಿಯು ಸಿಲೂಯೆಟ್ ಸ್ಟ್ಯಾಂಡರ್ಡ್ ಮಾದರಿಯಂತೆಯೇ ಉಳಿದಿದೆ, ಈ ಹೊಸ ಎಲೆಕ್ಟ್ರಿಕ್ ಮುಂಭಾಗದ ಗ್ರಿಲ್, ಕೆಲವು 'ರೀಚಾರ್ಜ್' ಬ್ಯಾಡ್ಜ್‌ಗಳು, ಒಂದು ಸೆಟ್‌ನಂತಹ ಎಲೆಕ್ಟ್ರಿಕ್ ಮಾದರಿಯು ಎದ್ದು ಕಾಣಲು ಸಹಾಯ ಮಾಡುವ ಕೆಲವು ಅಂಶಗಳಿವೆ. ಇನ್ನು ಹೊಸ 19-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಸ್‍ಯುವಿಯಲ್ಲಿ ಎಲ್-ಆಕಾರದ ಟೈಲ್‌ಲ್ಯಾಂಪ್‌ಗಳು, ಬಾಡಿಯ ಕ್ರೀಸ್‌ಗಳಂತಹ ವಿನ್ಯಾಸದ ಉಳಿದ ಅಂಶಗಳು. ಥಾರ್-ಹ್ಯಾಮರ್ ಎಲ್ಇಡಿ ಡಿಆರ್ಎಲ್ ಗಳು, ಹೈಡ್ ಲೈಟ್ ಸ್ಟ್ಯಾಂಡರ್ಡ್ ಮಾದರಿ ವೊಲ್ವೊ ಎಕ್ಸ್‌ಸಿ40 ಎಸ್‍ಯುವಿಗೆ ಹೋಲುತ್ತವೆ. ಒಳಭಾಗದಲ್ಲಿ, ಉನ್ನತ ಗುಣಮಟ್ಟದ ಆಂತರಿಕ ವಸ್ತುಗಳೊಂದಿಗೆ ಬರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ಮೊದಲ ಥೀಮ್ ವಿನೈಲ್‌ನೊಂದಿಗೆ ನಪ್ಪಾ ಲೆದರ್ ಮತ್ತು ನುಬಕ್ ಟೆಕ್ಸ್‌ಟೈಲ್ ಅನ್ನು ಬಳಸುತ್ತದೆ, ಆದರೆ ಎರಡನೇ ಥೀಮ್ ತುಂಬಾ ಡಾರ್ಕ್ ಥೀಮ್‌ಗಾಗಿ ಚಾರ್ಕೋಲ್ ಲೆದರ್ ಅನ್ನು ಬಳಸುತ್ತದೆ. ಇವುಗಳಲ್ಲದೆ, ಈ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಸ್‍ಯುವಿಯಲ್ಲಿ ಓವರ್-ದಿ-ಏರ್ (OTA) ಅಪ್‌ಡೇಟ್‌ಗಳು, Apple CarPlay ಮತ್ತು Android Auto ಜೊತೆಗೆ 9-ಇಂಚಿನ ಪೋಟ್ರೇಟ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ ಮತ್ತು ಮಲ್ಟಿಪಲ್ ಏರ್‌ಬ್ಯಾಗ್‌ಗಳು ಹೊಂದಿದೆ. ಇದರೊಂದಿಗೆ ಬ್ರೇಕಿಂಗ್ ಅಸಿಸ್ಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಲೇನ್ ಅಸಿಸ್ಟ್ ಸಿಸ್ಟಮ್ ಮತ್ತು ಇನ್ನೂ ಅನೇಕ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ಸ್ವಿಡಿಷ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ವೊಲ್ವೊ ಭಾರತದಲ್ಲಿ ತನ್ನ ಪ್ರಮುಖ ಕಾರು ಮಾದರಿಗಳ ಮಾರಾಟದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿತು.. ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಎಕ್ಸ್‌ಸಿ90 ಮಾದರಿಯನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಐಷಾರಾಮಿ ಕಾರು ಮಾರಾಟ ಉತ್ತಮ ಬೇಡಿಕೆ ಹೊಂದಿರುವ ಎಸ್ 90 ಮತ್ತು ಎಕ್ಸ್‌ಸಿ90 ಕಾರು ಮಾದರಿಗಳನ್ನು ಹೊಸ ಬದಲಾವಣೆಗಳನ್ನು ಬಿಡುಗಡೆಗೊಳಿಸಲಾಗಿದೆ. ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಡೀಸೆಲ್ ಕಾರುಗಳ ಮಾರಾಟವನ್ನು ಹಂತ-ಹಂತವಾಗಿ ಕಡಿತಗೊಳಿಸುತ್ತಿರುವ ವೊಲ್ವೊ ಕಂಪನಿಯು ಪ್ರಮುಖ ಕಾರುಗಳನ್ನು ಹೊಸ ಪೆಟ್ರೋಲ್ ಹೈಬ್ರಿಡ್ ಎಂಜಿನ್‌ಗೆ ಉನ್ನತೀಕರಿಸುತ್ತಿದೆ ಎಕ್ಸ್‌ಸಿ90 ಕಾರು ಮಾದರಿಯಲ್ಲೂ ಕೂಡಾ ಕಂಪನಿಯು ಕೇವಲ 2.0 ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮಾತ್ರ ನೀಡಿತು.

ಭಾರತದಲ್ಲಿ ಬಿಡುಗಡೆಯಾಗಲಿರುವ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟ್ರಿಕ್ ಎಸ್‌ಯುವಿ ಮಾಹಿತಿ ಬಹಿರಂಗ

ವೊಲ್ವೊ ಪ್ರಕಾರ, ಹೊಸ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಸ್‍ಯುವಿಯು ಡೆನಿಮ್ ಬ್ಲೂ, ಫ್ಯೂಷನ್ ರೆಡ್, ಗ್ಲೇಸಿಯರ್ ಸಿಲ್ವರ್, ಕ್ರಿಸ್ಟಲ್ ವೈಟ್ ಮತ್ತು ಬ್ಲ್ಯಾಕ್ ಸ್ಟೋನ್ ಎಂಬ ಐದು ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಸ್ವೀಡಿಷ್ ವಾಹನ ತಯಾರಕರು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವಾಗಿ ವೊಲ್ವೊ ಎಕ್ಸ್‌ಸಿ40 ರಿಚಾರ್ಜ್ ಎಸ್‍ಯುವಿಯನ್ನು ಬಿಡುಗಡೆ ಮಾಡಲಿದ್ದಾರೆ.

Most Read Articles

Kannada
Read more on ವೊಲ್ವೊ volvo
English summary
New volvo xc40 recharge electric suv to be launch soon details leaked via official website
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X