ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ವೊಲ್ವೊ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬಹುನೀರಿಕ್ಷಿತ 2023ರ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಸರಣಿ ಎಸ್‌ಯುವಿ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಎಸ್‌ಯುವಿ ಮಾದರಿಗಳು ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

2023ರ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಎಸ್‌ಯುವಿ ಮಾದರಿಯು ಹೈಬ್ರಿಡ್ ತಂತ್ರಜ್ಞಾನ ಸೇರಿದಂತೆ ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬದಲಾವಣೆ ಹೊಂದಿಲ್ಲವಾದರೂ ಗ್ರಾಹಕರ ಬೇಡಿಕೆ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ನೀಡಲಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ಹೊಸ ಫೀಚರ್ಸ್ ಹೊಂದಿರುವ ಎಕ್ಸ್‌ಸಿ40 ಎಸ್‌ಯುವಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 45.90 ಲಕ್ಷ ಬೆಲೆ ಹೊಂದಿದ್ದರೆ ಎಕ್ಸ್‌ಸಿ90 ಎಸ್‌ಯುವಿ ಮಾದರಿಯು ರೂ. 94.90 ಲಕ್ಷ ಬೆಲೆ ಹೊಂದಿದೆ.

ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ವೊಲ್ವೊ ಕಂಪನಿಯು ಎಕ್ಸ್‌ಸಿ40 ಹೊಸ ಮಾದರಿಯ ಖರೀದಿಗಾಗಿ ಗ್ರಾಹಕರಿಗೆ ಆಫರ್ ಸಹ ನೀಡಿದ್ದು, ಮುಂಬರುವ ದಸರಾ ಮತ್ತು ದೀಪಾವಳಿಯ ತನಕ ಹೊಸ ಕಾರು ಖರೀದಿದಾರರಿಗೆ ರೂ. 43.20 ಲಕ್ಷ ಬೆಲೆಯಲ್ಲಿ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದೆ.

ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ಸೀಮಿತ ಅವಧಿ ನಂತರ ಎಕ್ಸ್‌ಸಿ40 ಹೊಸ ಮಾದರಿಯ ಬೆಲೆಯೂ ಮೂಲ ದರ ರೂ. 45.90 ಲಕ್ಷ ಅನ್ವಯಿಸಿದ್ದು, ಹೊಸ ಎಕ್ಸ್‌ಸಿ90 ಎಸ್‌ಯುವಿ ಮಾದರಿಯ ಮೇಲೆ ಯಾವುದೇ ಆಫರ್ ನೀಡಲಾಗಿಲ್ಲ.

ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ಎಕ್ಸ್‌ಸಿ40 ಹೊಸ ಆವೃತ್ತಿಯು ಬಿ4 ಅಲ್ಟಿಮೆಟ್ ಎನ್ನುವ ಒಂದೇ ವೆರಿಯೆಂಟ್‌ನಲ್ಲಿ ಮಾರಾಟಗೊಳ್ಳಲಿದ್ದು, ಹೊಸ ಮಾದರಿಯು ಇದೀಗ ದೊಡ್ಡ ಬದಲಾಣೆಯಾಗಿ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ.

ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ಹೊಸ ಎಕ್ಸ್‌ಸಿ40 ಮಾದರಿಯು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 48 ವೊಲ್ಟ್ ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಹೊಂದಿದ್ದು, ಇದು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 197 ಬಿಎಚ್‌ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ಮುಂಭಾಗದ ಚಕ್ರಗಳಿಗೆ ಹೈಬ್ರಿಡ್ ಎಂಜಿನ್ ಶಕ್ತಿ ಪೂರೈಕೆಯೊಂದಿಗೆ ಹೊಸ ಎಕ್ಸ್‌ಸಿ40 ಮಾದರಿಯು ಉತ್ತಮ ಇಂಧನ ದಕ್ಷತೆ ಹೊಂದಿರಲಿದ್ದು, ಹೊಸ ಕಾರಿನ ಹೈಬ್ರಿಡ್ ಎಂಜಿನ್ ಹೊರತಾಗಿ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ.

ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ಇನ್ನು ಎಕ್ಸ್‌ಸಿ90 ಎಸ್‌ಯುವಿ ಮಾದರಿಯು ಸಹ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 48 ವೊಲ್ಟ್ ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಹೊಂದಿದ್ದು, ಇದು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 300 ಬಿಎಚ್‌ಪಿ ಮತ್ತು 420 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ಇದರೊಂದಿಗೆ ಹೊಸ ಎಕ್ಸ್‌ಸಿ90 ಮಾದರಿಯು ಒಳಾಂಗಣದಲ್ಲೂ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ 12.3-ಇಂಚಿನ ಡ್ರೈವರ್ ಡಿಸ್ಪ್ಲೇ ಮತ್ತು ಹೊಸ ಎಡಿಎಎಸ್ ವೈಶಿಷ್ಟ್ಯತೆಯನ್ನು ನೀಡಲಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ಎಡಿಎಎಸ್ ಪ್ಯಾಕೇಜ್‌ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಪೈಲಟ್ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್, ಕ್ರಾಸ್ ಟ್ರಾಫಿಕ್ ಅಲರ್ಟ್, ಬ್ಲೈಂಡ್ ಸ್ಪಾಟ್ ಇನ್‌ಫಾರ್ಮೆಷನ್ ಸಿಸ್ಟಂ ಸೇರಿದಂತೆ ಪಾರ್ಕಿಂಗ್ ಅಸಿಸ್ಟ್ ಸೌಲಭ್ಯಗಳಿವೆ.

ಹೊಸ ತಂತ್ರಜ್ಞಾನ ಪ್ರೇರಿತ 2023ರ ವೊಲ್ವೊ ಎಕ್ಸ್‌ಸಿ40 ಮತ್ತು ಎಕ್ಸ್‌ಸಿ90 ಹೈಬ್ರಿಡ್ ಎಸ್‌ಯುವಿ ಬಿಡುಗಡೆ

ಎಕ್ಸ್‌ಸಿ90 ಮಾದರಿಯು ಹೊಸ ಫೀಚರ್ಸ್ ಹೊರತಾಗಿ ತಾಂತ್ರಿಕವಾಗಿ ಈ ಹಿಂದಿನ ಮಾದರಿಯಲ್ಲಿರುವಂತೆ ಪ್ರಮುಖ ಸೌಲಭ್ಯಗಳನ್ನು ಹೊಂದಿದ್ದು, ಅತಿದೊಡ್ಡ ನವೀಕರಣವೆಂದರೆ ಹೊಸ ಆಂಡ್ರಾಯ್ಡ್ ಆಧಾರಿತ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ರೂಪದಲ್ಲಿ ಬರಲಿದ್ದು, ಇದು ಗೂಗಲ್ ಮ್ಯಾಪ್, ಅಸಿಸ್ಟಂಟ್ ಮತ್ತು ಪ್ಲೇ ಸ್ಟೋರ್ ಸೇರಿದಂತೆ ಆ್ಯಪಲ್ ಕಾರ್ ಪ್ಲೇ‌ಗೆ ಸಮ್ಮತಿಸುತ್ತದೆ.

Most Read Articles

Kannada
Read more on ವೊಲ್ವೊ volvo
English summary
New volvo xc40 xc90 launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X