ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಭವಿಷ್ಯ ವಾಹನ ಮಾದರಿಗಳಾದ ಎಲೆಕ್ಟ್ರಿಕ್ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಕಂಪನಿಯು ವಿಶ್ವ ಎಲೆಕ್ಟ್ರಿಕ್ ವಾಹನಗಳ ದಿನಾಚರಣೆಯೆಂದು ಹೊಸ ಇವಿ ಕಾರಿನ ಟೀಸರ್ ಬಿಡುಗಡೆ ಮಾಡಿ ಕುತೂಹಲ ಹುಟ್ಟುಹಾಕಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಕಂಪನಿಯು ಇವಿ ಸ್ಕೂಟರ್‌ಗಳ ಬಿಡುಗಡೆ ಯಶಸ್ವಿ ನಂತರ ಎಲೆಕ್ಟ್ರಿಕ್ ಕಾರು ಮಾದರಿಯ ಬಿಡುಗಡೆಗೆ ಸಿದ್ದವಾಗುತ್ತಿರುವ ಓಲಾ ಕಂಪನಿಯು ಟೀಸರ್‌ಗಳ ಮೂಲಕ ಹೊಸ ಇವಿ ಕಾರಿನ ಕುರಿತಾಗಿ ಹಲವಾರು ಹೊಸ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ವಿಶ್ವ ಎಲೆಕ್ಟ್ರಿಕ್ ವಾಹನ ದಿನದ ವಿಶೇಷವಾಗಿ ಹೊಸ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ಆವೃತ್ತಿಯನ್ನು ಅಭಿವೃದ್ದಿಪಡಿಸುತ್ತಿರುವ ಪ್ರಕ್ರಿಯೆ ಕುರಿತಾದ ಟೀಸರ್ ಹಂಚಿಕೊಂಡಿದ್ದು, ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿ ಉತ್ಪಾದನೆಗೊಳ್ಳುತ್ತಿರುವ ವಿಶೇಷ ಮಾದರಿಯಾಗಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಹೊಸ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಮತ್ತು ಪ್ರಮುಖ ತಾಂತ್ರಿಕ ಸೌಲಭ್ಯಗಳ ಮಾಹಿತಿಗಳನ್ನು ಇನ್ನು ಬಹಿರಂಗಪಡಿಸದ ಓಲಾ ಎಲೆಕ್ಟ್ರಿಕ್ ಕಂಪನಿಯು ಟೀಸರ್ ಚಿತ್ರದ ಮೂಲಕ ಕಾರಿನ ಬ್ಯಾಟರಿ ರೇಂಜ್ ಮತ್ತು ಕೆಲವು ಪ್ರಮುಖ ಮಾಹಿತಿಗಳನ್ನು ಮಾತ್ರ ಹಂಚಿಕೊಂಡಿದ್ದು, ಹೊಸ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮುಂಬರುವ 2024ರ ವೇಳೆಗೆ ರಸ್ತೆಗಿಳಿಸುವ ಯೋಜನೆಯಲ್ಲಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಭಾರತೀಯ ಗ್ರಾಹಕರ ಅಭಿರುಚಿಗಳಿಗೆ ತಕ್ಕಂತೆ ಯುರೋಪಿನ್ ಕಾರುಗಳ ವಿನ್ಯಾಸದಲ್ಲಿ ಹೊಸ ಇವಿ ಕಾರನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 500 ಕಿ.ಮೀ ಮೈಲೇಜ್ ಹಿಂದಿರುಗಿಸುವ ಭರವಸೆ ನೀಡಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಜೊತೆಗೆ ಹೊಸ ಕಾರು ಕೇವಲ 4 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವುದರ ಮೂಲಕ ಸ್ಪೋರ್ಟ್ ಕಾರುಗಳಿಗೆ ಸಮನಾದ ಕಾರ್ಯಕ್ಷಮತೆ ಹೊಂದಿದ್ದು, ಹೊಸ ಕಾರು ಮಾದರಿಗಾಗಿ ಕಂಪನಿಯು ತನ್ನದ ಇನ್ ಹೌಸ್ ಬ್ಯಾಟರಿ ಸೌಲಭ್ಯವನ್ನು ಸಿದ್ದಪಡಿಸುತ್ತಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಇನ್ ಹೌಸ್ ಬ್ಯಾಟರಿ ಸೌಲಭ್ಯದಿಂದ ಇವಿ ಕಾರಿನ ಬೆಲೆಯು ಗಣನೀಯವಾಗಿ ಇಳಿಕೆಯಾಗಲಿದ್ದು, ಬೆಲೆ, ವಿನ್ಯಾಸ, ಫೀಚರ್ಸ್ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲು ಇದು ಸಹಕಾರಿಯಾಗಲಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಹೊಸ ಕಾರಿನಲ್ಲಿ ಹೆಚ್ಚಿನ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಮಾತ್ರವಲ್ಲದೆ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಸಂಪೂರ್ಣವಾಗಿ ಆವರಿಸಿರುವ ಗ್ಲಾಸ್ ರೂಫ್, ಸ್ಪೋರ್ಟಿ ಡಿಸೈನ್ ಮತ್ತು ಡ್ರ್ಯಾಗ್ ಏರೋಡೈನಾಮಿಕ್‌ನಲ್ಲಿ 0.21 ಗುಣಾಂಕವನ್ನು ಹೊಂದಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಏರೋಡೈನಾಮಿಕ್ ಗುಣಾಂಕವು ಕಿಯಾ ಇವಿ6 ಮಾದರಿಗಿಂತಲೂ ಹೆಚ್ಚಳವಾಗಿರಲಿದ್ದು, ಇದು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎನ್ನಬಹುದು.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಪ್ರಸ್ತುತ ಮಾರುಕಟ್ಟೆಯಲ್ಲಿ ಇವಿ ವಾಹನಗಳ ಮಾರಾಟವು ಸಾಕಷ್ಟು ಏರಿಕೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ವಾಹನಗಳು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದ್ದು, ಓಲಾ ಎಲೆಕ್ಟ್ರಿಕ್ ಕಂಪನಿಯು ಸಹ ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಹೊಸ ಇವಿ ಕಾರನ್ನು ಸಿದ್ದಪಡಿಸುತ್ತಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

2030ರ ವೇಳೆಗೆ ದೇಶಾದ್ಯಂತ ಶೇ.50ಕ್ಕಿಂತಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮಾರಾಟ ಗುರಿ ಹೊಂದಲಾಗಿದ್ದು, ಕೇಂದ್ರ ಸರ್ಕಾರದ ನಿರ್ಣಯದಂತೆ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಇವಿ ವಾಹನಗಳ ಉತ್ಪಾದನೆಯತ್ತ ವಿಶೇಷ ಗಮನಹರಿಸುತ್ತಿವೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಮಾರುಕಟ್ಟೆಗೆ ಈಗಾಗಲೇ ಹಲವು ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸಿದ್ದು, ಓಲಾ ಕಂಪನಿಯು ತನ್ನ ಸಹ ಹೊಸ ಎಸ್ ಸರಣಿಯ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಇನ್ನು ಕಂಪನಿಯು ವಿದ್ಯುತ್ ವಾಹನಗಳಿಗಾಗಿ ದೇಶದ ಅತಿದೊಡ್ಡ ಸೆಲ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದ್ದು, ಓಲಾ ಬ್ಯಾಟರಿ ಇನೋವೆಷನ್ ಸೆಂಟರ್ ಮೂಲಕ ಲೀಥಿಯಂ-ಐಯಾನ್ ಬ್ಯಾಟರಿ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿಸುವ ನೀರಿಕ್ಷೆ ಹೊಂದಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ವಿದ್ಯುದ್ದೀಕರಣದ ವಿಶ್ವ ಭೂಪಟದಲ್ಲಿ ಭಾರತವನ್ನು ಸೇರಿಸುವುದು ಮತ್ತು ತನ್ನನ್ನು ವಿಶ್ವದರ್ಜೆಯ ಕಂಪನಿಯನ್ನಾಗಿ ಮಾಡುವುದು ಕಂಪನಿಯ ಉದ್ದೇಶವಾಗಿದೆ ಎಂದು ಹೇಳಿಕೊಂಡಿರುವ ಓಲಾ ಸಂಸ್ಥಾಪಕ ಅಧ್ಯಕ್ಷ ಭಾವಿಶ್ ಅಗರ್‌ವಾಲ್ ಅವರು ಹೊಸ ಕಾರುಗಳನ್ನು ವಾಣಿಜ್ಯ ಬಳಕೆಗಾಗಿ ಮತ್ತು ವ್ಯಯಕ್ತಿಕ ಬಳಕೆ ಮಾದರಿಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯಲಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಹೊಸದಾಗಿ ನಿರ್ಮಾಣವಾಗುತ್ತಿರುವ ಓಲಾ ಬ್ಯಾಟರಿ ಇನೋವೆಷನ್ ಸೆಂಟರ್ ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳೊಂದಿಗೆ ಬ್ಯಾಟರಿ ಸೆಲ್ ಉತ್ಪಾದನೆ ಆರಂಭಿಸುತ್ತಿದ್ದು, ಸದ್ಯ ದ್ವಿಚಕ್ರ ವಾಹನಗಳ ಬ್ಯಾಟರಿ ಸೆಲ್ ಅಭಿವೃದ್ದಿಪಡಿಸುತ್ತಿರುವ ಕಂಪನಿಯು ಶೀಘ್ರದಲ್ಲಿಯೇ ಕಾರುಗಳ ಬ್ಯಾಟರಿ ಸೆಲ್ಸ್ ಉತ್ಪಾದನೆ ಆರಂಭಿಸಲಿದೆ.

ವಿಶ್ವ ಎಲೆಕ್ಟ್ರಿಕ್ ವಾಹನ ದಿನದಂದು ಹೊಸ ಇವಿ ಕಾರಿನ ಟೀಸರ್ ಪ್ರಕಟಿಸಿದ ಓಲಾ ಎಲೆಕ್ಟ್ರಿಕ್

ಬಜೆಟ್ ಬೆಲೆಯಲ್ಲಿಯೇ ಅತ್ಯುತ್ತಮ ಡಿಸೈನ್ ಪ್ರೇರಿತ, ಧೀರ್ಘಕಾಲಿಕ ಬ್ಯಾಟರಿ ರೇಂಜ್ ಹೊಂದಿರುವ ಸ್ಕೂಟರ್ ಬಿಡುಗಡೆ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಓಲಾ ಕಂಪನಿಯು ಭವಿಷ್ಯದಲ್ಲಿ ಮತ್ತಷ್ಟು ಬೃಹತ್ ಯೋಜನೆಗಳೊಂದಿಗೆ ಆಟೋ ಉತ್ಪಾದನಾ ವಲಯದಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Ola electric car teaser on ev world day details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X