ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ದೇಶಾದ್ಯಂತ ತೈಲ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಎಲೆಕ್ಟ್ರಿಕ್ ವಾಹನಗಳ ಬಳಕೆ ಆಸಕ್ತಿ ಇದ್ದರೂ ಕೂಡಾ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಇವಿ ವಾಹನಗಳ ಬ್ಯಾಟರಿ ರೇಂಜ್ ಸಾಮಾರ್ಥ್ಯವು ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದ್ದು, ಇವಿ ವಾಹನಗಳ ಬಳಕೆಯನ್ನು ಕೊನೆಯ ಮೈಲಿ ತನಕವೂ ವಿಸ್ತರಿಸಲು ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಚಾರ್ಜಿಂಗ್ ಸೌಲಭ್ಯ ಒದಗಿಸಲು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಮಾಡುತ್ತಿವೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಬ್ಯಾಟರಿ ವಿನಿಯಮ ಕೇಂದ್ರಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಬ್ಯಾಟರಿ ಸೌಲಭ್ಯಗಳನ್ನು ಒದಗಿಸಬಹುದಾಗಿದ್ದು, ಬ್ಯಾಟರಿ ರೇಂಜ್ ಆಧಾರದ ಮೇಲೆ ಇಂತಿಷ್ಟು ಪ್ರಮಾಣದ ದರ ಪಾವತಿಸಿಬೇಕಾಗುತ್ತದೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಬ್ಯಾಟರಿ ವಿನಿಮಯದ ವೇಳೆ ಗ್ರಾಹಕರು ತಮ್ಮ ಬಳಿಯಿರುವ ಚಾರ್ಜ್ ಖಾಲಿಯಾದ ಬ್ಯಾಟರಿಯನ್ನು ವಿನಿಮಯ ಕೇಂದ್ರಗಳಿಗೆ ಹಿಂದಿರುಗಿಸುವ ಮೂಲಕ ಚಾರ್ಜ್ ಮಾಡಲಾದ ಬ್ಯಾಟರಿ ಪಡೆದುಕೊಳ್ಳುವ ವ್ಯವಸ್ಥೆ ಇದಾಗಿದ್ದು, ಹೊಸ ಸೌಲಭ್ಯವು ಚಾರ್ಜಿಂಗ್ ಸಮಯವನ್ನು ಉಳಿಸುವ ಮೂಲಕ ಬ್ಯಾಟರಿ ಖಾಲಿಯಾದ ತಕ್ಷಣವೇ ಮತ್ತೊಂದು ಬ್ಯಾಟರಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಸದ್ಯ ಬೆಂಗಳೂರು, ಮುಂಬೈ, ದೆಹಲಿ ಮತ್ತು ಅಹಮದಾಬಾದ್ ನಗರಗಳಲ್ಲಿ ಹೊಸ ಬ್ಯಾಟರಿ ವಿನಿಮಯ ಕೇಂದ್ರಗಳಿಗೆ ಚಾಲನೆ ನೀಡಲಾಗಿದ್ದು, ಹೊಯ ಯೋಜನೆಯು ಭವಿಷ್ಯದಲ್ಲಿ ಹೆಚ್ಚು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿರುವ ಪ್ರಮುಖ ಇವಿ ಉತ್ಪಾದನಾ ಕಂಪನಿಗಳು ಬ್ಯಾಟರಿ ವಿನಿಮಯ ಕೇಂದ್ರಗಳ ಜೊತೆ ಪಾಲುದಾರಿಕೆ ಪ್ರಕಟಿಸುತ್ತಿವೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಸನ್ ಮೊಲಿಬಿಟಿ ಕಂಪನಿಗಳು ದೇಶಾದ್ಯಂತ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ತೆರೆಯುತ್ತಿದ್ದು, ಇವಿ ವಾಣಿಜ್ಯ ವಾಹನಗಳ ತಡೆರಹಿತ ಕಾರ್ಯಾಚರಣೆಗಾಗಿ ಒಮೆಗಾ ಸೈಕಿ ಕಂಪನಿಯು ಕೂಡಾ ಹೊಸ ಪಾಲುದಾರಿಕೆ ಪ್ರಕಟಿಸಿದೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಹೊಸ ಪಾಲುದಾರಿಕೆ ಅಡಿಯಲ್ಲಿ ಒಮೆಗಾ ಸೈಕಿ ನಿರ್ಮಾಣದ 10 ಸಾವಿರ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ಸನ್ ಮೊಬಿಲಿಟಿ ಕಂಪನಿಯು ಸ್ಮಾರ್ಟ್ ಮತ್ತು ಸ್ವ್ಯಾಪ್ ಮಾಡಬಹುದಾದ ಬ್ಯಾಟರಿಗಳನ್ನು ಪರಿಚಯಿಸಲಿದ್ದು, ಕ್ವಿಕ್ ಇಂಟರ್‌ಚೇಂಜ್ ಸ್ಟೇಷನ್ (QIS) ಜೊತೆಗೆ ಸನ್ ಮೊಬಿಲಿಟಿಯ ರಾಷ್ಟ್ರವ್ಯಾಪಿ ಸ್ವಾಪ್‌ಪಾಯಿಂಟ್ ನೆಟ್‌ವರ್ಕ್‌ಗೆ ಪ್ರವೇಶವನ್ನು ಒದಗಿಸುತ್ತದೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಜೊತೆಗೆ ಅತ್ಯಾಧುನಿಕ IoT-ಆಧಾರಿತ ಎಂಡ್-ಟು-ಎಂಡ್ ಮೂಲಕ ಮೂಲಸೌಕರ್ಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದ್ದು, ಇವಿ ಉತ್ಪನ್ನ ಪೋರ್ಟ್‌ಫೋಲಿಯೊಗೆ ಹೊಸ ಮೌಲ್ಯವನ್ನು ಸೇರಿಸಲು ಈ ಮೈತ್ರಿಯೂ ಸಾಕಷ್ಟು ಸಹಕಾರಿಯಾಗಲೆಂದು ಒಮೆಗಾ ಸೈಕಿ ಸಂಸ್ಥಾಪಕ ಮತ್ತು ಅಧ್ಯಕ್ಷ ಉದಯ್ ನಾರಂಗ್ ಮಾಹಿತಿ ನೀಡಿದ್ದಾರೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಇನ್ನು ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲೂ ವಿವಿಧ ರಾಜ್ಯ ಸರ್ಕಾರಗಳು ಸಹ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ಕೇಂದ್ರದ ಫೇಮ್ 2 ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಕೂಡಾ ಹೊಸ ಇವಿ ನೀತಿ ಘೋಷಣೆ ಮಾಡುತ್ತಿವೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಹಾಗೆಯೇ ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಯೋಜನೆ ಜಾರಿಗೆ ತರಲಾಗಿದೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಇದಲ್ಲದೇ ಓಮೆಗಾ ಸೈಕಿ ಕಂಪನಿಯೊಂದಿಗೆ ಪಾಲುದಾರಿಕೆ ಘೋಷಣೆ ಮಾಡಿರುವ ಚಾರ್ಜರ್ ಕಂಪನಿಯು ಸಹಾ ವಿಶೇಷವಾಗಿ ವಾಣಿಜ್ಯ ವಾಹನಗಳಿಗಾಗಿಯೇ ಪ್ರತ್ಯೇಕ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಹೆಚ್ಚಿನ ಮಟ್ಟದ ವಾಣಿಜ್ಯ ಚಟುವಟಿಕೆ ಕಂಡುಬರುವ ಮಾರುಕಟ್ಟೆಗಳ ಪಾರ್ಕಿಂಗ್ ನಿಲ್ದಾಣಗಳಲ್ಲಿ, ಉಗ್ರಾಣಗಳ ವಾಹನ ನಿಲುಗಡೆ ಪ್ರದೇಶಗಳಲ್ಲಿ ಮತ್ತು ಸೂಪರ್ ಮಾರ್ಕೆಟ್‌ಗಳ ಆವರಣಗಳಲ್ಲಿ ಚಾರ್ಜರ್ ಕಂಪನಿಯು ಓಮೆಗಾ ಸೈಕಿ ಇವಿ ವಾಣಿಜ್ಯ ವಾಹನಗಳಿಗಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.

 ಇವಿ ಬ್ಯಾಟರಿ ವಿನಿಮಯಕ್ಕಾಗಿ ಹೊಸ ಪಾಲುದಾರಿಕೆ ಘೋಷಿಸಿದ ಓಮೆಗಾ ಸೈಕ್ ಮತ್ತು ಸನ್ ಮೊಬಿಲಿಟಿ

ಚಾರ್ಜರ್ ಕಂಪನಿಯು ಗ್ರಾಹಕರ ಬೇಡಿಕೆ ಆಧಾರದ ಮೇಲೆ 3.3kW ಸಾಮರ್ಥ್ಯದ ಚಾರ್ಜರ್ ಲೈಟ್ ಮತ್ತು 22kW ಸಾಮರ್ಥ್ಯದ ಚಾರ್ಜರ್ ಟೆರಾ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದ್ದು, ಇದರಲ್ಲಿ ಚಾರ್ಜರ್ ಲೈಟ್ ಚಾರ್ಜಿಂಗ್ ಸೌಲಭ್ಯವನ್ನು ಇವಿ ವಾಹನ ಮಾಲೀಕರು ವ್ಯಯಕ್ತಿಕ ಬಳಕೆಗಾಗಿ ಅಳವಡಿಸಿಕೊಳ್ಳಬಹುದಾಗಿದೆ.

Most Read Articles

Kannada
English summary
Omega seiki mobility made partnership sun mobility details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X