ಬಳಸಿದ ಇನ್ನೋವಾ ಕ್ರಿಸ್ಟಾ ಖರೀದಿಸಲು ಯೋಜಿಸುತ್ತಿದ್ದೀರಾ?: ಖಂಡಿತ ಈ ವಿಷಯಗಳು ನೆನಪಿರಲಿ...

ಭಾರತದಲ್ಲಿ MPV(ಮಲ್ಟಿ ಪರ್ಪಸ್ ವೆಹಿಕಲ್)ಗಳ ರಾಜ ಎಂದೇ ಕರೆಯಲ್ಪಡುವ ಟೊಯೊಟಾ ಇನ್ನೋವಾ ಕ್ರಿಸ್ಟಾ, ಇತ್ತೀಚೆಗೆ ದೇಶದಲ್ಲಿ 10 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಇನ್ನೋವಾ ಕಾರುಗಳಿಗೆ ಎಷ್ಟು ಬೇಡಿಕೆಯಿದೆಯೆಂದರೆ ಕೇವಲ ಹೊಸ ವಾಹನಗಳು ಮಾತ್ರವಲ್ಲ ಬಳಿಸದ ವಾಹನಗಳನ್ನು ಖರೀದಸಲು ಕೂಡ ಜನ ಮುಗಿಬೀಳುತ್ತಾರೆ.

ಬಳಸಿದ ಇನ್ನೋವಾ ಕ್ರಿಸ್ಟಾ ಖರೀದಿಸಲು ಯೋಜಿಸುತ್ತಿದ್ದೀರಾ?: ಖಂಡಿತ ಈ ವಿಷಯಗಳು ನೆನಪಿರಲಿ...

ಟೊಯೊಟಾ ಇನ್ನೋವಾ ಇಂದು ಭಾರತದಲ್ಲಿ ಬಳಸಿದ ಕಾರು ಮಾರುಕಟ್ಟೆಯಲ್ಲಿ ಲಭ್ಯವಿರುವ ಕೈಗೆಟುಕುವ ಮಾದರಿಗಳಲ್ಲಿ ಒಂದಾಗಿದೆ. ಜನಪ್ರಿಯ ಬಹುಪಯೋಗಿ ಯುಟಿಲಿಟಿ ವಾಹನ ಎಂದು ನಿಸ್ಸಂದೇಹವಾಗಿ ಹೇಳಲು ಈ ಒಂದು ಕಾರಣ ಸಾಕಾಗುವುದಿಲ್ಲವೇ, ಮೊದಲು ಟೊಯೋಟಾದ ಹಾಟ್ ಮಾಡೆಲ್ ಆಗಿದ್ದ ಕ್ವಾಲಿಸ್ ಮೂಲಕ ಜನಮನ ಗೆದ್ದಿರುವ ಈ ಜಪಾನಿ ಬ್ರಾಂಡ್, ಕ್ವಾಲಿಸ್ ಬದಲಾಗಿ ಇನ್ನೋವಾವನ್ನು ಪರಿಚಯಿಸಿತು.

ಬಳಸಿದ ಇನ್ನೋವಾ ಕ್ರಿಸ್ಟಾ ಖರೀದಿಸಲು ಯೋಜಿಸುತ್ತಿದ್ದೀರಾ?: ಖಂಡಿತ ಈ ವಿಷಯಗಳು ನೆನಪಿರಲಿ...

ಟೊಯೊಟಾ ಕ್ವಾಲಿಸ್‌ಗೆ ಬದಲಿಯಾಗಿ ಇನ್ನೋವಾವನ್ನು ಮೊದಲ ಬಾರಿಗೆ 2004 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. ಬಳಿಕ ಒಂದು ದಶಕದ ನಂತರ 2015 ರಲ್ಲಿ, ಟೊಯೋಟಾ ತನ್ನ ಎರಡನೇ ತಲೆಮಾರಿನ ಪುನರಾವರ್ತನೆಯನ್ನು ಇನ್ನೋವಾ ಕ್ರಿಸ್ಟಾದೊಂದಿಗೆ ಪ್ರಾರಂಭಿಸಿತು. ಅಂದಿನಿಂದ ಕ್ರಿಸ್ಟಾ ಎಂಬ ಹೆಸರೊಂದಿಗೆ ಇನ್ನೋವಾ ಮಾರುಕಟ್ಟೆಯಲ್ಲಿ ಮುಂದುವರಿಯುತ್ತಿದೆ.

ಬಳಸಿದ ಇನ್ನೋವಾ ಕ್ರಿಸ್ಟಾ ಖರೀದಿಸಲು ಯೋಜಿಸುತ್ತಿದ್ದೀರಾ?: ಖಂಡಿತ ಈ ವಿಷಯಗಳು ನೆನಪಿರಲಿ...

ಈ MPV ಈಗಾಗಲೇ ಮಾರುಕಟ್ಟೆಯಲ್ಲಿ ಕ್ರಿಸ್ಟಾ ಆಗಿ ಏಳು ವರ್ಷಗಳನ್ನು ಕಳೆದಿದೆ. ಹಾಗಾಗಿ ನಿಮಗೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಇನ್ನೋವಾ ಕ್ರಿಸ್ಟಾಗಳು ಬೇಕಾದಷ್ಟು ಸಿಗುತ್ತವೆ. ಒಂದು ವೇಳೆ ಬಳಸಿದ ಕ್ರಿಸ್ಟಾವನ್ನು ನೀವು ಖರೀದಿಸಲು ಯೋಜಿಸುತ್ತಿದ್ದರೆ, ವಾಹನದ ಕೆಲವು ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಅವು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಬಳಸಿದ ಇನ್ನೋವಾ ಕ್ರಿಸ್ಟಾ ಖರೀದಿಸಲು ಯೋಜಿಸುತ್ತಿದ್ದೀರಾ?: ಖಂಡಿತ ಈ ವಿಷಯಗಳು ನೆನಪಿರಲಿ...

ನಿರ್ಮಾಣ ಗುಣಮಟ್ಟ

ಈ ಬಗ್ಗೆ ತಿಳಿದುಕೊಳ್ಳಬೇಕಾದ ಮೊದಲ ವಿಷಯವೆಂದರೆ ಇನ್ನೋವಾ ಕ್ರಿಸ್ಟಾದ ನಿರ್ಮಾಣ ಗುಣಮಟ್ಟ. ಕ್ರಿಸ್ಟಾ ಅಸಾಧಾರಣ ರೀತಿಯಲ್ಲಿ ಟೊಯೊಟಾ ತಯಾರಿಸಿದ ಕಾರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಫಿಟ್ ಮತ್ತು ಫಿನಿಶ್ ಎಲ್ಲವೂ ತುಂಬಾ ಉತ್ತಮವಾಗಿದೆ. ಆದರೆ ಮೊದಲ ಮಾಲೀಕನಿಂದ ಉತ್ತಮ ನಿರ್ವಹಣೆಯಲ್ಲಿದ್ದರೇ ಯಾವುದೇ ಚಿಂತೆಯಿಲ್ಲದೇ ಖರೀದಿಸಿ ಹಲವು ವರ್ಷಗಳು ಓಡಿಸಬಹುದು.

ಬಳಸಿದ ಇನ್ನೋವಾ ಕ್ರಿಸ್ಟಾ ಖರೀದಿಸಲು ಯೋಜಿಸುತ್ತಿದ್ದೀರಾ?: ಖಂಡಿತ ಈ ವಿಷಯಗಳು ನೆನಪಿರಲಿ...

ಇನ್ನು ಟೊಯೊಟಾ ಇನ್ನೋವಾ ಕ್ರಿಸ್ಟಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇವೆರಡೂ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಬಂದಿರುವುದು ಸ್ವಾಗತಾರ್ಹ. ಎರಡೂ ಪರ್ಫಾಮೆನ್ಸ್‌ನಲ್ಲಿ ಬಲವಾದ ಅಂಕಿಅಂಶಗಳನ್ನು ಒದಗಿಸುತ್ತವೆ. ಆದರೂ ಡೀಸೆಲ್ ಆವೃತ್ತಿಯನ್ನು ಹೆಚ್ಚು ಶಿಫಾರಸು ಮಾಡಲಾಗತ್ತದೆ.

ಬಳಸಿದ ಇನ್ನೋವಾ ಕ್ರಿಸ್ಟಾ ಖರೀದಿಸಲು ಯೋಜಿಸುತ್ತಿದ್ದೀರಾ?: ಖಂಡಿತ ಈ ವಿಷಯಗಳು ನೆನಪಿರಲಿ...

Innova Crysta ವಿಶಾಲವಾದ ಒಳಾಂಗಣ ಮತ್ತು ಹಲವು ವೈಶಿಷ್ಟ್ಯಗಳಿಂದ ಸಜ್ಜುಗೊಂಡಿದೆ. ಈ ಬಹುಪಯೋಗಿ ವಾಹನದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್, ಶಕ್ತಿಶಾಲಿ ಎಸಿ ಮತ್ತು ಐಚ್ಛಿಕ ಎರಡನೇ ಸಾಲಿನ ಕ್ಯಾಪ್ಟನ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಸೇರಿಸುವಲ್ಲಿ ಜಪಾನೀಸ್ ಬ್ರ್ಯಾಂಡ್ ವಿಶೇಷ ಕಾಳಜಿಯನ್ನು ತೆಗೆದುಕೊಂಡಿದೆ.

ಬಳಸಿದ ಇನ್ನೋವಾ ಕ್ರಿಸ್ಟಾ ಖರೀದಿಸಲು ಯೋಜಿಸುತ್ತಿದ್ದೀರಾ?: ಖಂಡಿತ ಈ ವಿಷಯಗಳು ನೆನಪಿರಲಿ...

ಇದರಲ್ಲಿ ಮೊದಲಿನಿಂದಲೂ ಏಳು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC) ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿದೆ. ಹಾಗಾಗಿ ಮೇಲೆ ತಿಳಿಸಲಾದ ವೈಶಿಷ್ಟ್ಯಗಳನ್ನು ಜಾಗರೂಕತೆಯಿಂದ ಪರಿಶೀಲಿಸುವುದನ್ನು ಮರಿಯದಿರಿ.

ಬಳಸಿದ ಇನ್ನೋವಾ ಕ್ರಿಸ್ಟಾ ಖರೀದಿಸಲು ಯೋಜಿಸುತ್ತಿದ್ದೀರಾ?: ಖಂಡಿತ ಈ ವಿಷಯಗಳು ನೆನಪಿರಲಿ...

ಈ ವಿಷಯಗಳ ಅರಿವಿದ್ದರೆ ನಿರಾಸೆಗೊಳ್ಳುವುದಿಲ್ಲ

ಟೊಯೊಟಾ ಇನ್ನೋವಾ ಕ್ರಿಸ್ಟಾ ಇಂದಿನ ಆಧುನಿಕ ಪ್ರತಿಸ್ಪರ್ಧಿಗಳ ವಿರುದ್ಧ ತನ್ನದೇ ಆದ ಹಿಡಿತ ಸಾಧಿಸಲು ಸಾಧ್ಯವಾದರೆ, ಅದಕ್ಕಿಂತ ಇನ್ನೇನು ಬೇಕು? ಆದರೆ ಇಲ್ಲಿ ಮುಖ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಬೆಲೆ. ಇಂದಿಗೂ ಉತ್ತಮವಾಗಿ ನಿರ್ವಹಣೆಯಲ್ಲಿರುವ ಸೆಕೆಂಡ್ ಹ್ಯಾಂಡ್ ವಾಹನ ಹೊಂದಬಹುದು, ಆದರೆ ಬೆಲೆ ತುಸು ಹೆಚ್ಚಾಗುತ್ತದೆ.

ಬಳಸಿದ ಇನ್ನೋವಾ ಕ್ರಿಸ್ಟಾ ಖರೀದಿಸಲು ಯೋಜಿಸುತ್ತಿದ್ದೀರಾ?: ಖಂಡಿತ ಈ ವಿಷಯಗಳು ನೆನಪಿರಲಿ...

ವಾಸ್ತವವೆಂದರೆ ಸ್ಥಿತಿಯ ಆಧಾರದ ಮೇಲೆ, ನೀವು 12 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಉತ್ತಮವಾಗಿರುವ ಇನ್ನೋವಾ ಕ್ರಿಸ್ಟಾವನ್ನು ಪಡೆಯದಿರಬಹುದು. ಸೆಕೆಂಡ್ ಹ್ಯಾಂಡ್ ಇನ್ನೋವಾ ಕ್ರಿಸ್ಟಾ ಸನ್‌ರೂಫ್, ವೈರ್‌ಲೆಸ್ ಚಾರ್ಜರ್ ಅಥವಾ ಆಧುನಿಕ ಎಸ್‌ಯುವಿಗಳಂತಹ ಏರ್ ಪ್ಯೂರಿಫೈಯರ್‌ನಂತಹ ವೈಶಿಷ್ಟ್ಯಗಳನ್ನು ಪಡೆಯದಿರಬಹುದು.

ಬಳಸಿದ ಇನ್ನೋವಾ ಕ್ರಿಸ್ಟಾ ಖರೀದಿಸಲು ಯೋಜಿಸುತ್ತಿದ್ದೀರಾ?: ಖಂಡಿತ ಈ ವಿಷಯಗಳು ನೆನಪಿರಲಿ...

ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಶೇಷ ಆವೃತ್ತಿಯಲ್ಲಿ ವೈರ್‌ಲೆಸ್ ಚಾರ್ಜರ್ ಅನ್ನು ಉಡುಗೊರೆಯಾಗಿ ನೀಡಿದೆ. ಇನ್ನೋವಾ ಕ್ರಿಸ್ಟಾದ ಕ್ಯಾಬಿನ್ ಸುಸಜ್ಜಿತವಾಗಿದ್ದರೂ, ಒಳಗೆ ಬಳಸಲಾದ ಪ್ಲಾಸ್ಟಿಕ್‌ಗಳ ಗುಣಮಟ್ಟವು ಟೀಕೆಗೆ ಗುರಿಯಾಗಿದೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನೀವು ಸೆಕೆಂಡ್ ಹ್ಯಾಂಡ್ ಇನ್ನೋವಾ ಕ್ರಿಸ್ಟಾ ಖರೀದಿಸಿದರೆ ನಿರಾಶೆಗೊಳ್ಳುವುದಿಲ್ಲ.

Most Read Articles

Kannada
Read more on ಟೊಯೊಟಾ toyota
English summary
Planning to buy a used Innova Crysta So definitely remember these things
Story first published: Wednesday, August 10, 2022, 18:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X