ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ಪೋಲಾರಿಸ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಎಟಿವಿ(ಆಲ್ ಟೆರೆನ್ ವೆಹಿಕಲ್) ಬಿಡುಗಡೆ ಮಾಡಿದ್ದು, ಹೊಸ ವಾಹನವು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 59 ಲಕ್ಷ ಬೆಲೆ ಹೊಂದಿದೆ.

ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ಅಮೆರಿಕದ ಮುಂಚೂಣಿ ಆಫ್ ರೋಡ್ ವಾಹನಗಳ ತಯಾರಿಕಾ ಕಂಪನಿಯಾಗಿರುವ ಪೋಲಾರಿಸ್‌ ಇಂಡಸ್ಟ್ರೀಸ್ ಈಗಾಗಲೇ ಹಲವಾರು ಹಲವಾರು ಆಲ್ ಟೆರೆನ್ ವಾಹನಗಳನ್ನು ಭಾರತದಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿದ್ದು, ಕಂಪನಿಯು ಇದೀಗ ಬಹು ಉಪಯೋಗಿ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಎಟಿವಿ ಬಿಡುಗಡೆ ಮಾಡಿದೆ.

ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ಆಲ್-ಟೆರೆನ್ ವಾಹನವನ್ನು ವಿಶೇಷವಾಗಿ ಆಫ್-ರೋಡಿಂಗ್ ಡ್ರೈವ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ವಿಜಯವಾಡದ ಪೋಲಾರಿಸ್ ಶೋರೂಂನಲ್ಲಿ ಮೊದಲ ಯುನಿಟ್ ಅನ್ನು ಮಾಲೀಕರಿಗೆ ಹಸ್ತಾಂತರಿಸಲಾಯ್ತು.

ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ವಿಶೇಷ ವಿನ್ಯಾಸ, ಬಲಿಷ್ಠ ಎಂಜಿನ್ ಆಯ್ಕೆ, ಆಫ್ ರೋಡಿಂಗ್ ಕೌಶಲ್ಯತೆ ಹೊಂದಿರುವ ಹೊಸ ವಾಹನಕ್ಕೆ ಸಾಮಾನ್ಯ ರಸ್ತೆಗಳಿಲ್ಲಿ ಚಾಲನೆಗೆ ಅವಕಾಶವಿಲ್ಲವಾದರೂ ಭೌಗೋಳಿಕ ಸನ್ನಿವೇಶ ಮತ್ತು ತುರ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಎಟಿವಿ ವಾಹನಗಳನ್ನು ಸೀಮಿತ ಸಂಖ್ಯೆಯಲ್ಲಿ ಬಳಕೆ ಮಾಡಲಾಗುತ್ತಿದೆ.

ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ಕರಾವಳಿ ಪ್ರದೇಶಗಳ ಮೇಲೆ ನಿಗಾ ಇಡಲು ಗುಜರಾತ್ ಪೊಲೀಸರು 2013ರಿಂದಲೇ ಪೋಲಾರಿಸ್ ಆಲ್-ಟೆರೆನ್ ವಾಹನಗಳನ್ನು ಬಳಸುತ್ತಿದ್ದು, ಗುಜರಾತ್ ಪೊಲೀಸರು ಸದ್ಯ ಪೋಲಾರಿಸ್ ಆರ್‌ಜೆಡ್ಆರ್ ಎಸ್ 800 ಎಟಿವಿ ಅನ್ನು ಗಸ್ತು ತಿರುಗಲು ಬಳಸುತ್ತಿದ್ದಾರೆ.

ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ವಿಶ್ವಾದ್ಯಂತ ಹಲವಾರು ದೇಶಗಳು ತಮ್ಮ ಭದ್ರತಾ ಪಡೆಗಳಲ್ಲಿ ಗಸ್ತು ನಿರ್ವಹಣೆಗಾಗಿ ಆಲ್ ಟೆರೆನ್ ವೆಹಿಕಲ್ ಬಳಕೆ ಮಾಡುತ್ತಿದ್ದು, ಇದೀಗ ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಮಾದರಿಯನ್ನು ಜಂಗಲ್ ರೇಸಾರ್ಟ್‌ಗಳು ಮತ್ತು ಅಡ್ವೆಂಚರ್ ಸ್ಪೋರ್ಟ್ ಆಯೋಜನೆ ಮಾಡುವ ಕಂಪನಿಗಳು ಹೆಚ್ಚಿನ ಬೇಡಿಕೆ ಸಲ್ಲಿಸುತ್ತಿದ್ದು, ಹೊಸ ವಾಹನವು ಶೀಘ್ರದಲ್ಲಿಯೇ ಮತ್ತಷ್ಟು ಬೇಡಿಕೆ ಪಡೆದುಕೊಳ್ಳಲಿವೆ.

ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ಹೊಸ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಮಾದರಿಯು 1,880-ಎಂಎಂ ಉದ್ದ ಮತ್ತು 406-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಫೋರ್-ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿದ್ದು, ಇದು ಕಡಿದಾದ ಭೂ ಪ್ರದೇಶಗಳನ್ನು ಯಾವುದೇ ತೊಂದರೆಯಿಲ್ಲದೆ ಸರಾಗವಾಗಿ ನುಗ್ಗಬಲ್ಲ ಸಾಮರ್ಥ್ಯ ಹೊಂದಿವೆ.

ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಮಾದರಿಯಲ್ಲಿ ಪೋಲಾರಿಸ್ ಕಂಪನಿಯು 2.0-ಲೀಟರ್, 4 ಸಿಲಿಂಡರ್ ಹೊಂದಿರುವ ಪೆಟ್ರೋಲ್ ಎಂಜಿನ್ ನೀಡಿದ್ದು, ಇದು ವಿವಿಧ ಡ್ರೈವ್ ಮೋಡ್‌ಗಳ ಮೂಲಕ 222-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ಆಫ್ ರೋಡ್ ಕೌಶಲ್ಯಕ್ಕಾಗಿ ಟೂ-ವೀಲ್ಹ್ ಡ್ರೈವ್, ಫೋರ್-ವೀಲ್ಹ್ ಡ್ರೈವ್ ಮತ್ತು ಫೋರ್-ವೀಲ್ಹ್ ಡ್ರೈವ್ ಲಾಕ್‌ನಂತಹ ಮೂರು ಡ್ರೈವ್ ಮೋಡ್‌ಗಳನ್ನು ನೀಡಲಾಗಿದ್ದು, ಈ ಮೂಲಕ ವಿಶ್ವ ದರ್ಜೆಯ ಆಫ್-ರೋಡ್ ಕಾರ್ಯಕ್ಷಮತೆಯ ಖಚಿತಪಡಿಸುತ್ತದೆ.

ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ಹೊಸ ಆಫ್ ರೋಡ್ ವಾಹನದಲ್ಲಿ ಕಂಪನಿಯು 2-ಇಂಚಿನ ಎಲ್‌ಸಿಡಿ ರೈಡರ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಪೀಡೋಮೀಟರ್, ಟ್ಯಾಕೋಮೀಟರ್, ಓಡೋಮೀಟರ್, ಟ್ರಿಪ್‌ ಮೀಟರ್, ಗೇರ್ ಇಂಡಿಕೇಟರ್, ಫ್ಯೂಲ್ ಗೇಜ್, ಸೀಟ್‌ಬೆಲ್ಟ್ ರಿಮೈಂಡರ್ ಲೈಟ್ ಮತ್ತು ಒಂದೇ ಅನಲಾಗ್ ಡಯಲ್ ವೈಶಿಷ್ಟ್ಯತೆ ಹೊಂದಿದೆ.

ಹೊಸ ಆಫ್-ರೋಡರ್ ಆರ್‌ಜೆಡ್ಆರ್ ಪ್ರೊ ಆರ್ ಸ್ಪೋರ್ಟ್ ಬಿಡುಗಡೆ ಮಾಡಿದ ಪೋಲಾರಿಸ್ ಇಂಡಿಯಾ

ಕಸ್ಟಮ್ ಪ್ಯಾಕೇಜ್‌ನಲ್ಲಿ ಗ್ರಾಹಕರು ವ್ಹೀಲ್, ಟೈರ್, ಪೂರ್ತಿಯಾಗಿ ಹೊದಿಕೆ ಹೊಂದಿರುವ ಅಲ್ಯುಮಿನಿಯಂ ಡೋರ್, ಸ್ಟೀಲ್ ರಾಕ್ ಸ್ಲೈಡರ್, ಸೈಡ್ ಮಿರರ್ ಪಡೆದುಕೊಳ್ಳಬಹುದಾಗಿದ್ದು, ಅಡ್ವೆಂಚರ್ ಇಷ್ಟಪಡುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

Most Read Articles

Kannada
English summary
Polaris rzr pro sport launched in india details
Story first published: Monday, August 8, 2022, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X