ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಜರ್ಮನ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಪೋರ್ಷೆ ತನ್ನ ಜನಪ್ರಿಯ ಮಧ್ಯಮ ಕ್ರಮಾಂಕದ ಐಷಾರಾಮಿ ಸ್ಪೋರ್ಟ್ ಕಾರು ಮಾದರಿಗಳಾದ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಮಾದರಿಗಳನ್ನು ಭಾರತದಲ್ಲಿ ಸಂಕ್ರಾಂತಿ ವಿಶೇಷವಾಗಿ ಬಿಡುಗಡೆ ಮಾಡಿದ್ದು, ಹೊಸ ಕಾರು ಈ ಬಾರಿ ಸುಧಾರಿತ ಎಂಜಿನ್ ಮತ್ತು ನವೀಕೃತ ಸ್ಪೋರ್ಟಿ ವಿನ್ಯಾಸದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಮಾದರಿಗಳು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1,46,50,000 ಮತ್ತು ಟಾಪ್ ಎಂಡ್ ಮಾದರಿಯು ರೂ. 1,49,78,000 ಬೆಲೆ ಹೊಂದಿವೆ.

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಪೋರ್ಷೆ 718 ಕೆಮನ್ ಕಾರು ಮಾದರಿಯು ಟು ಡೋರ್ ಕೂಪೆ ಮಾದರಿಯಾಗಿದ್ದರೆ ಪೋರ್ಷೆ 718 ಬಾಕ್ಸ್‌ಸ್ಟರ್ ಮಾದರಿಯು ಸಹ ಟು ಡೋರ್ ಕ್ಯಾಬ್ರಿಯೊಲೆಟ್‌ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಸ್ಪೋರ್ಟ್ಸ್ ಕಾರುಗಳು ಹೊಸ ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಹೊಂದಿವೆ.

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಹೊಸ ಕಾರುಗಳು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಮುಂಭಾಗದಲ್ಲಿ ಜಿಟಿಎಸ್ ಏಪ್ರನ್, 20-ಇಂಚಿನ ಸ್ಯಾಟಿನ್ ಕಪ್ಪು ಮಿಶ್ರಲೋಹದ ಚಕ್ರಗಳು, ಕಪ್ಪು ಬಣ್ಣದ ಬಾಹ್ಯ ಏರ್‌ಬ್ಲೇಡ್‌ಗಳು, ದೊಡ್ಡ ಏರ್ ಇನ್‌ಟೇಕ್‌ಗಳು ಮತ್ತು ಕಪ್ಪು ಬಣ್ಣದ ಸ್ಪಾಯ್ಲರ್ ಜೋಡಿಸಲಾಗಿದೆ.

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಎರಡೂ ಮಾದರಿಗಳು ಕಂಪನಿಯ ಸುಧಾರಿತ 7-ಸ್ಪೀಡ್ ಪಿಡಿಕೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌‌ನೊಂದಿಗೆ 4.0-ಲೀಟರ್(4 ಸಾವಿರ ಸಿಸಿ) ಆರು-ಸಿಲಿಂಡರ್ ಫ್ಲಾಟ್ ಎಂಜಿನ್‌ನಿಂದ ಚಾಲನೆಗೊಳ್ಳಲಿವೆ.

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಹೊಸ ಕಾರುಗಳ 4.0-ಲೀಟರ್ ಎಂಜಿನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಗರಿಷ್ಠ 395 ಬಿಎಚ್‌ಪಿ ಮತ್ತು 430 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಹೊಸ ಕಾರುಗಳನ್ನು ಗರಿಷ್ಠ ಪವರ್ ಬ್ಯಾಕ್ ಅಪ್ ನೀಡುವಂತೆ ಏರೋಡೈನಾಮಿಕ್ ವಿನ್ಯಾಸ ನೀಡಲಾಗಿದೆ.

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಹೊಸ ಕಾರುಗಳು ಗರಿಷ್ಠ ವೇಗ ಗಂಟೆಗೆ 292 ಕಿಮೀ ಹೊಂದಿದ್ದು, ಗರಿಷ್ಠ ವೇಗದಲ್ಲೂ ಕಾರಿಗೆ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಬ್ರೇಕಿಂಗ್ ಸೌಲಭ್ಯ ನೀಡಲಾಗಿದೆ. ಬ್ರೇಕಿಂಗ್ ಸೌಲಭ್ಯಕ್ಕಾಗಿ ಅಲ್ಯೂಮಿನಿಯಂ ರೋಟರ್‌ಗಳು ಮತ್ತು ಮೊನೊಬ್ಲಾಕ್ ಬ್ರೇಕ್ ಕ್ಯಾಲಿಪರ್‌ಗಳನ್ನು ಹೊಂದಿದ್ದು, ಹೊಸ ಶ್ರೇಣೆಗಳ ಮುಂಭಾಗದಲ್ಲಿ 350 ಎಂಎಂ ಮತ್ತು ಹಿಂಭಾಗದಲ್ಲಿ 330 ಎಂಎಂ ರೋಟರ್‌ಗಳನ್ನು ಒಳಗೊಂಡಿದೆ.

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಹೊಸ ಕಾರುಗಳನ್ನು ಕಂಪನಿಯು ವಿಶೇಷ ಆವೃತ್ತಿಗಳಾದ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಮಾದರಿಗಳನ್ನು ಕೇವಲ 1,250 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಪೋರ್ಷೆ ಕಂಪನಿಯು ಬಾಕ್ಸ್‌ಸ್ಟರ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿ 25ನೇ ವರ್ಷದ ಸಂಭ್ರಮಕ್ಕಾಗಿ ಹೊಸ ಆವೃತ್ತಿಗಳನ್ನು ಉನ್ನತೀಕರಿಸಿದೆ.

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಪೋರ್ಷೆ ಕಂಪನಿಯು ಎರಡೂ ಹೊಸ ಮಾದರಿಗಳಲ್ಲೂ ಅಂತರಾಷ್ಟ್ರೀಯ ಮಟ್ಟದ ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಸುರಕ್ಷತೆ ಹೆಚ್ಚಿಸಲಾಗಿದ್ದು, ಹೊಸ ಕಾರುಗಳು ಸ್ಟ್ಯಾಬಿಲಿಟಿ ಮ್ಯಾನೇಜ್‌ಮೆಂಟ್ ಕಂಟ್ರೋಲ್, ಟಾರ್ಕ್ ವೆಕ್ಟರಿಂಗ್, ಎಲೆಕ್ಟ್ರೋ ಮೆಕ್ಯಾನಿಕಲ್ ಪವರ್ ಸ್ಟೀರಿಂಗ್, ಲಾಂಚ್ ಕಂಟ್ರೋಲ್ ಮತ್ತು ಸ್ಪೋರ್ಟ್ ಕ್ರೊನೊ ಪ್ಯಾಕೇಜ್‌ನಂತಹ ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ವೈಶಿಷ್ಟ್ಯಗಳೊಂದಿಗೆ ಅಭಿವೃದ್ದಿಗೊಂಡಿವೆ.

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಇದರ ಜೊತೆಗೆ ಹೊಸ ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಕಾರುಗಳು ಬಿಗಿಹಿಡಿತ ಹೊಂದಿರುವ ಸ್ಪ್ರಿಂಗ್‌ಗಳು, ಗುಣಮಟ್ಟದ ಆಂಟಿ-ರೋಲ್ ಬಾರ್‌ಗಳೊಂದಿಗೆ ಪೋರ್ಷೆ ಸ್ವಾಯತ್ತ ವಿಶೇಷ ತಂತ್ರಜ್ಞಾನವಾದ ಆಕ್ಟಿವ್ ಸಸ್ಪೆನ್ಷನ್ ಮ್ಯಾನೇಜ್‌ಮೆಂಟ್ ಸಿಸ್ಟಂ ಹೊಂದಿವೆ.

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಜೊತೆಗೆ ಪೋರ್ಷೆ ಕಂಪನಿಯು ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಕಾರುಗಳಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ಖಚಿತಪಡಿಸಲು ಸ್ಪೋರ್ಟ್ಸ್ ಸಸ್ಪೆಷನ್ ಅನ್ನು ಸಹ ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ.

ಪೋರ್ಷೆ ಹೊಸ 718 ಕೆಮನ್ ಜಿಟಿಎಸ್ 4.0 ಮತ್ತು 718 ಬಾಕ್ಸ್‌ಸ್ಟರ್ ಜಿಟಿಎಸ್ 4.0 ಬಿಡುಗಡೆ

ಇನ್ನು ಹೊಸ ಕಾರುಗಳಲ್ಲಿರುವ ತಾಂತ್ರಿಕ ವೈಶಿಷ್ಟ್ಯತೆಗಳಿಗೆ ಸಂಬಂಧಿಸಿದಂತೆ ಎರಡೂ ಹೊಸ ಪೋರ್ಷೆ ಮಾದರಿಗಳಲ್ಲೂ ಕಂಪನಿಯು ಪೋರ್ಷೆ ಕಮ್ಯುನಿಕೇಷನ್ ಮ್ಯಾನೇಜ್ಮೆಂಟ್ (PCM) ಜೊತೆ ಏಳು ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ನೀಡುತ್ತದೆ. ಇದಲ್ಲದೆ 4.6-ಇಂಚಿನ ಕಲರ್ ಸ್ಕ್ರೀನ್, ಸ್ವಯಂಚಾಲಿತ ಎಸಿ, ಸ್ಟೀರಿಂಗ್ ಮೌಂಟೆಡ್ ನಿಯಂತ್ರಣಗಳೊಂದಿಗೆ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಜೋಡಿಸಿದೆ.

Most Read Articles

Kannada
English summary
Porsche 718 cayman gts 4 0 718 boxster gts 4 0 cars launched in india details
Story first published: Thursday, January 6, 2022, 21:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X